Nirmala Sitharaman
ನಿರ್ಮಲಾ ಸೀತಾರಾಮನ್ ತಮಿಳುನಾಡು ಮೂಲದವರು. ಹುಟ್ಟೂರು ತಮಿಳುನಾಡಿನ ಮದುರೈ. ಅಯ್ಯಂಗಾರಿ ಕುಟುಂಬಕ್ಕೆ ಸೆರಿದವರು. ವಿಲಿಪ್ಪುರಂ, ತಿರುಚ್ಚಿಯಲ್ಲಿ ಇವರು ಬಿಎವರೆಗೆ ಓದಿ ಬಳಿಕ ದೆಹಲಿಯ ಜೆಎನ್ಯುನಲ್ಲಿ ಎಂಎ ಮಾಡಿದರು. ಬಳಿಕ ಲಂಡನ್ನಲ್ಲಿ ಉನ್ನತ ವ್ಯಾಸಂಗ ಮಾಡಿದರು. ರಾಜಕೀಯಕ್ಕೆ ಬಹಳ ತಡವಾಗಿ ಬಂದವರಾದರೂ ಉನ್ನತ ಹುದ್ದೆಗಳನ್ನು ಬಹಳ ಬೇಗ ಗಳಿಸಿ ತಮ್ಮ ಕ್ಷಮತೆಯನ್ನೂ ನಿರೂಪಿಸಿದವರು. ರಕ್ಷಣಾ ಖಾತೆ, ಹಣಕಾಸು ಖಾತೆ, ಕಾರ್ಪೊರೇಟ್ ವ್ಯವಹಾರಗಳ ಖಾತೆ, ವಾಣಿಜ್ಯ ಮತ್ತು ಉದ್ಯಮ ಖಾತೆಗಳನ್ನು ಅವರು ನಿಭಾಯಿಸಿದ್ದಾರೆ. ಇಂದಿರಾ ಗಾಂಧಿ ನಂತರ ರಕ್ಷಣಾ ಖಾತೆ ನಿಭಾಯಿಸಿದ ಮೊದಲ ಮಹಿಳೆ ನಿರ್ಮಲಾ ಸೀತಾರಾಮನ್. 2008ರಲ್ಲಿ ಬಿಜೆಪಿ ಸೇರಿದ ಅವರು 2014ರವರೆಗೂ ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿದ್ದರು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ ಇವರು ಕಿರಿಯ ಸಚಿವೆಯಾದರು. ಮೋದಿ 2.0 ಸರ್ಕಾರದಲ್ಲಿ ಹಣಕಾಸು ಖಾತೆ ಪಡೆದು ಸತತ ಆರು ಬಾರಿ ಬಜೆಟ್ ಮಂಡನೆ ಮಾಡಿ ಮೊರಾರ್ಜಿ ದೇಸಾಯಿ ದಾಖಲೆ ಸರಿಗಟ್ಟಿದ್ದಾರೆ.