ತತ್ಕ್ಷಣದ ಪರಿಹಾರ ಮತ್ತು ಭವಿಷ್ಯದ ಪ್ರಗತಿ ಮಧ್ಯೆ ನೀತಿ ಸೇತುವಾಗಿರುವ ಬಜೆಟ್ 2026
Budget 2026: A Policy Bridge from Immediate Relief to Future Growth: ಕೇಂದ್ರ ಬಜೆಟ್ 2026, 'ನೀತಿ ಸೇತು'ವಾಗಿ ಹಿಂದಿನ ಸಾಧನೆಗಳು ಮತ್ತು ಭವಿಷ್ಯದ ಆಶಯಗಳನ್ನು ಜೋಡಿಸುತ್ತದೆ. ಮ್ಯಾನುಫ್ಯಾಕ್ಚರಿಂಗ್, AI ಮತ್ತು ವಿತ್ತೀಯ ಶಿಸ್ತಿಗೆ ಒತ್ತು ನೀಡುವ ಈ ಬಜೆಟ್ ಭಾರತವನ್ನು ವಿಶ್ವದ ಅತಿವೇಗದ ಆರ್ಥಿಕತೆಯಾಗಿ ಉಳಿಸಿದೆ. ಮೂಲಸೌಕರ್ಯ, MSME ಹಾಗೂ ಹೊಸ ತಂತ್ರಜ್ಞಾನಕ್ಕೆ ಬಲ ನೀಡುವ ಜೊತೆಗೆ, ಕುಟುಂಬಗಳಿಗೆ ತೆರಿಗೆ ವಿನಾಯಿತಿ, ಆರೋಗ್ಯ ಸುಧಾರಣೆ ಮೂಲಕ ಸರ್ವತೋಮುಖ ಪ್ರಗತಿಗೆ ಅನುವು ಮಾಡಿಕೊಡುತ್ತದೆ.

ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತಪಡಿಸಿದ ಕೇಂದ್ರ ಬಜೆಟ್ 2026 (Union Budget) ಅನ್ನು ಭಾರತದ ಹಿಂದಿನ ಸಾಧನೆಗಳು ಹಾಗೂ ಭವಿಷ್ಯದ ಆಶೋತ್ತರಗಳ ನಡುವೆ ಕೊಂಡಿಯಾಗುವ ‘ನೀತಿ ಸೇತು’ (Policy Bridge) ಎಂದು ಬಣ್ಣಿಸಲಾಗುತ್ತಿದೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಎಐ ಸನ್ನದ್ಧತೆ (AI preparedness) ಮೇಲೆ ಗಮನ ಹರಿಸುತ್ತಾ ಪ್ರಗತಿಗೆ ಪುಷ್ಟಿ ಕೊಡುವ ಈ ಬಜೆಟ್, ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುವ ಆರ್ಥಿಕತೆ ಎನ್ನುವ ಸ್ಥಾನ ಭಾರತಕ್ಕೆ ಮುಂದುವರಿಯುವಂತೆ ಮಾಡುತ್ತದೆ. ಈ ಬಜೆಟ್ನಲ್ಲಿ ನೀತಿ ಮುಂದುವರಿಕೆ (ಶೇ. 60-70) ಹೆಚ್ಚಿದೆ. ಜಾಗತಿಕವಾಗಿ ಹೆಚ್ಚುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳಲು ವಿನೂತನವೆನಿಸುವ ನಿರ್ದಿಷ್ಟ ಸ್ಕೀಮ್ಗಳನ್ನು ತರುವ ಮೂಲಕ ಕೋವಿಡ್ ನಂತರದ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲು ಈ ಬಜೆಟ್ ಅನುವು ಮಾಡಿಕೊಡುತ್ತದೆ.
ಸಾಬೀತಾದ ನೀತಿಗಳ ಮುಂದುವರಿಕೆ ಮತ್ತು ಉನ್ನತೀಕರಣ
2026ರ ಬಜೆಟ್ನಲ್ಲಿ ಹೆಚ್ಚಿನ ಭಾಗವು ಹಿಂದಿನ ವರ್ಷಗಳಲ್ಲಿ ಹಾಕಲಾದ ರಚನಾತ್ಮಕ ತಳಹದಿಗಳ ಮೇಲೆ ನಿರ್ಮಿತವಾಗಿದೆ. ವಿತ್ತೀಯ ಶಿಸ್ತು, ಮೂಲಸೌಕರ್ಯ ಮತ್ತು ಸ್ಥಿರತೆ ಮೇಲೆ ಗಮನ ಕೊಡುತ್ತದೆ.
ವಿತ್ತೀಯ ಸ್ಥಿರತೆ: ಕೋವಿಡ್ ನಂತರ 2021ರಲ್ಲಿ ವಿತ್ತೀಯ ಶಿಸ್ತು ತರಲು ಶುರು ಆದ ಪ್ರಕ್ರಿಯೆ ಈ ಬಜೆಟ್ನಲ್ಲೂ ಮುಂದುವರಿದಿದೆ. 2026-27ರಲ್ಲಿ ವಿತ್ತೀಯ ಕೊರತೆಗೆ ಜಿಡಿಪಿಯ ಶೇ. 4.3 ಗುರಿ ಹಾಕಲಾಗಿದೆ. 2030-31ರಲ್ಲಿ ಜಿಡಿಪಿ ಮತ್ತು ಸಾಲದ ಅನುಪಾತ ಶೇ. 50ಕ್ಕೆ ಇಳಿಯಬೇಕೆಂಬ ದೂರಗಾಮಿ ಗುರಿಯೊಂದಿಗೆ ಬಜೆಟ್ ಹೆಜ್ಜೆ ಹಾಕಿದೆ. ಹಾಗೆಯೇ, ತೆರಿಗೆ ನಿಯಮಗಳನ್ನು ಸರಳಗೊಳಿಸಲಾಗಿರುವ 2025ರ ಇನ್ಕಮ್ ಟ್ಯಾಕ್ಸ್ ಕಾಯ್ದೆಯನ್ನು ಜಾರಿಗೆ ತಂದು ತೆರಿಗೆ ಸ್ಥಿರತೆ ಕಾಯ್ದುಕೊಂಡಿದೆ ಈ ಬಜೆಟ್. ಕಾರ್ಪೊರೇಟ್ ಟ್ಯಾಕ್ಸಲ್ಲಾಗಲೀ, ವೈಯಕ್ತಿಕ ಇನ್ಕಮ್ ಟ್ಯಾಕ್ಸಲ್ಲಾಗಲೀ ಬದಲಾವಣೆ ಮಾಡದೆಯೇ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಇನ್ಫ್ರಾಸ್ಟ್ರಕ್ಚರ್ ಶಕ್ತಿ: ಸಾರ್ವಜನಿಕ ಬಂಡವಾಳ ವೆಚ್ಚವನ್ನು ದಾಖಲೆಯ 12.2 ಲಕ್ಷ ಕೋಟಿ ರೂಗೆ (ಜಿಡಿಪಿಯ ಶೇ. 3.1) ಏರಿಸಲಾಗಿದೆ. ಸರಕು ಸಾಗಣೆ ಕಾರಿಡಾರ್ಗಳ ವಿಸ್ತರಣೆ, 20 ಹೊಸ ಜಲಮಾರ್ಗ, ಏಳು ಹೈಸ್ಪೀಡ್ ರೈಲ್ ಕಾರಿಡಾರ್ಗಳು ಈ ಬಂಡವಾಳ ವೆಚ್ಚದಲ್ಲಿ ಒಳಗೊಂಡಿವೆ.
ಟೆಕ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಹೆಚ್ಚಿಸುವುದು: 2021ರಲ್ಲಿ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಚಾಲನೆ ಮಾಡಲಾಯಿತು. ಈ ಬಜೆಟ್ನಲ್ಲಿ ಸೆಮಿಕಂಡಕ್ಟರ್ ಮಿಷನ್ 2.0 ಘೋಷಣೆಯಾಗಿದೆ. ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್ಗಳ ಉತ್ಪಾದನೆಯ ಸ್ಕೀಮ್ಗೆ ಬಜೆಟ್ ಅಲೋಕೇಶನ್ 40,000 ಕೋಟಿ ರೂಗೆ ಏರಿಸಲಾಗಿದೆ.
ಎಂಎಸ್ಎಂಇ ಮತ್ತು ಗ್ರಾಮೀಣ ನೆರವು: 2015ರ ಸ್ಕಿಲ್ ಇಂಡಿಯಾ ಮಿಷನ್ ಮತ್ತು 2023ರ ಕ್ರೆಡಿಟ್ ಗ್ಯಾರಂಟೀ ಸ್ಕೀಮ್ಗಳ ನೆರವಿನೊಂದಿಗೆ ದೇಶದ ವಿವಿಧೆಡೆ 200 ಕೈಗಾರಿಕಾ ಕ್ಲಸ್ಟರ್ಗಳ ಮರುಚೇತರಿಕೆಗೆ ಬಜೆಟ್ನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಎರಡನೇ ಮತ್ತು ಮೂರನೇ ಸ್ತರದ ಪಟ್ಟಣಗಳಲ್ಲಿ ಬ್ಯುಸಿನೆಸ್ ನಿಯಮಗಳನ್ನು ಸರಳಗೊಳಿಸಲು ‘ಕಾರ್ಪೊರೇಟ್ ಮಿತ್ರಾಸ್’ ಯೋಜನೆ ತರಲಾಗಿದೆ. ಅಧಿಕ ಮೌಲ್ಯದ ಬೆಳೆಗಳಿಗೆ ಒತತು ಕೊಡುವ ಮೂಲಕ ಮತ್ತು ನ್ಯಾಷನಲ್ ಫೈಬರ್ ಸ್ಕೀಮ್ ಮೂಲಕ ರೈತರ ಕಲ್ಯಾಣಕ್ಕೆ ನೆರವಾಗುತ್ತಿದೆ.
ಇದನ್ನೂ ಓದಿ: ಭಾರತದ ಬಗ್ಗೆ ಇಲಾನ್ ಮಸ್ಕ್ ಟ್ವೀಟ್; ರಾಹುಲ್ ಮತ್ತು ವಿಪಕ್ಷಗಳನ್ನು ಝಾಡಿಸಿದ ಕೇಂದ್ರ ಸಚಿವರು
ಮುಂದಿ ದಶಕಕ್ಕೆ ಸಜ್ಜಾಗಲು ಬೇಕಾದ ನಾವೀನ್ಯತೆ
ಜಾಗತಿಕ ಪೂರೈಕೆ ಸರಪಳಿ ಮತ್ತು ಹೈಟೆಕ್ ಸೆಕ್ಟರ್ಗಳಲ್ಲಿ ಭಾರತದ ಸ್ಥಾನ ಭದ್ರಪಡಿಸುವಂತಹ ಹೊಸ ಉಪಕ್ರಮಗಳನ್ನು ಈ ಬಜೆಟ್ನಲ್ಲಿ ಜಾರಿ ಮಾಡಲಾಗಿದೆ:
ಸಂಪನ್ಮೂಲ ಭದ್ರತೆ: ಒಡಿಶಾ, ಕೇರಳ, ಆಂಧ್ರ ಮತ್ತು ತಮಿಳುನಾಡು ರಾಜ್ಯಗಳನ್ನು ಒಳಗೊಂಡ ರೇರ್ ಅರ್ಥ್ ಕಾರಿಡಾರ್ಗಳನ್ನು ಸ್ಥಾಪಿಸಲಾಗುತ್ತಿದೆ. ಮೈನಿಂಗ್ ಮತ್ತು ಸಂಶೋಧನೆಯಲ್ಲಿ ಪೂರೈಕೆ ಸರಪಳಿಯನ್ನು ಬಲಪಡಿಸಲು ಇದು ನೆರವಾಗುತ್ತದೆ.
ವಿಜ್ಞಾನದಲ್ಲಿ ಹೊಸ ಸಾಹಸ: ಬಯೋಫಾರ್ಮಾ ನಾವೀನ್ಯತೆ ಮತ್ತು ಕ್ಲಿನಿಕಲ್ ಟ್ರಯಲ್ಗಳಿಗೆ ಭಾರತವು ಜಾಗತಿಕ ಅಡ್ಡೆಯಾಗಿಸುವಂತಹ ಗುರಿಯೊಂದಿಗೆ 10,000 ಕೋಟಿ ರೂ ಅನುದಾನದಲ್ಲಿ ಬಯೋಫಾರ್ಮಾ ಶಕ್ತಿ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ.
ಹಣಕಾಸು ಪರಿವರ್ತನೆ: ಹೂಡಿಕೆಗಳಿಗೆ ರಿಸ್ಕ್ ಕಡಿಮೆ ಮಾಡಲು ಹೊಸ ಇನ್ಫ್ರಾಸ್ಟ್ರಕ್ಚರ್ ರಿಸ್ಕ್ ಗ್ಯಾರಂಟಿ ಫಂಡ್ ರಚಿಸಲಾಗಿದೆ. ಹಾಗೆಯೇ, ವಿಕಸಿತ ಭಾರತದ ನಿರ್ಮಾಣಕ್ಕೆ ನೆರವಾಗುವ ಬ್ಯಾಂಕಿಂಗ್ ಅನ್ನು ಪರಾಮರ್ಶಿಸಲು ಉನ್ನತ ಮಟ್ಟದ ಸಮಿತಿಯನ್ನೂ ರಚಿಸಲಾಗಿದೆ. ಎಸ್ಎಂಇ ಗ್ರೋತ್ ಫಂಡ್ನಿಂದ ಎಂಎಸ್ಎಂಇಗಳಿಗೆ ಲಾಭವಾಗಲಿದೆ. TReDS ಸೆಕ್ಯೂರಿಟೈಸೇಶನ್ ಮೂಲಕ ಇನ್ವಾಯ್ಸ್ಗಳಿಗೆ ಸೆಕೆಂಡರಿ ಮಾರ್ಕೆಟ್ ನಿರ್ಮಿತವಾಗಿದ್ದು, ಇದರಿಂದಲೂ ಎಂಎಸ್ಎಂಇಗಳಿಗೆ ಲಾಭವಾಗಲಿದೆ.
ಇದನ್ನೂ ಓದಿ: ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ರೂ.; ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ
ತತ್ಕ್ಷಣದ ಲಾಭಗಳು: ಇವತ್ತಿನ ಆರ್ಥಿಕ ಹೊರೆ ಇಳಿಸುವುದು
ಬಜೆಟ್ನಲ್ಲಿ ಭವಿಷ್ಯದ ದೃಷ್ಟಿ ಜೊತೆ ಜೊತೆಗೆ ಉದ್ದಿಮೆಗಳು ಮತ್ತು ಜನಸಾಮಾನ್ಯರಿಗೆ ತತ್ಕ್ಷಣಕ್ಕೆ ಖುಷಿ ಕೊಡುವ ಸಂಗತಿಗಳೂ ಇವೆ:
ಕುಟುಂಬಗಳಿಗೆ ನೇರ ಪರಿಹಾರ: ವಿದೇಶಗಳಲ್ಲಿ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮತ್ತು ಪ್ರವಾಸ ಪ್ಯಾಕೇಜ್ಗಳಿಗೆ ಮಾಡುವ ವೆಚ್ಚಕ್ಕೆ ವಿಧಿಸುವ ಟಿಸಿಎಸ್ ತೆರಿಗೆಯನ್ನು ಶೇ. 5ರಿಂದ ಶೇ. 2ಕ್ಕೆ ಇಳಿಸಲಾಗಿರುವುದು ಗಮನಾರ್ಹ. ಇದರಿಂದ ಭಾರತೀಯ ಕುಟುಂಬಗಳಿಗೆ ಹಣದ ಹೊರೆ ಕಡಿಮೆ ಆಗುತ್ತದೆ. ಅಂತಾರಾಷ್ಟ್ರೀಯ ಶಿಕ್ಷಣ ವೆಚ್ಚ ಸ್ವಲ್ಪ ಕಡಿಮೆ ಆಗಲು ಸಾಧ್ಯವಾಗುತ್ತದೆ.
ಆರೋಗ್ಯಪಾಲನೆ ಮತ್ತು ಅನುಭೋಗ ವೆಚ್ಚ ಕಡಿಮೆ: 17 ಪ್ರಮುಖ ಔಷಧಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ. ವೈಯಕ್ತಿಕ ಆಮದು ಸುಂಕಗಳನ್ನು ಶೇ. 20ರಿಂದ ಶೇ. 10ಕ್ಕೆ ಇಳಿಸಲಾಗಿದೆ.
ನಿಯಮ ಬದ್ಧತೆ: ಸಣ್ಣ ತಪ್ಪುಗಳನ್ನು ಅಪರಾಧೀಕರಣ ಮಾಡುವುದನ್ನು ತಪ್ಪಿಸಲಾಗುತ್ತದೆ. ಪೆನಾಲ್ಟಿ ಕ್ರಮಗಳನ್ನು ಮಿಳಿತಗೊಳಿಸಲಾಗುತ್ತದೆ. ಇದರಿಂದ ತೆರಿಗೆ ಪಾವತಿದಾರರಲ್ಲಿ ಇರುವ ಆತಂಕವನ್ನು ಈ ಬಜೆಟ್ ಕಡಿಮೆ ಮಾಡುತ್ತದೆ. ಐಟಿಆರ್ ಪರಿಷ್ಕರಣೆ ಮತ್ತು ನಾನ್-ಆಡಿಟ್ ಬ್ಯುಸಿನೆಸ್ ಫೈಲಿಂಗ್ಗಳಿಗೆ ಡೆಡ್ಲೈನ್ ಅನ್ನು ವಿಸ್ತರಿಸಲಾಗಿದೆ.
ಕಾರ್ಮಿಕ ವರ್ಗಕ್ಕೆ ಶಕ್ತಿ: ಮಹಿಳಾ ನೇತೃತ್ವದ ಉದ್ದಿಮೆಗಳಿಗೆ ಒತ್ತು ಕೊಡಲಾಗಿದ್ದು, ಜೆಂಡರ್ ಬಜೆಟ್ಗೆ ಅನುದಾನವನ್ನು 5 ಲಕ್ಷ ಕೋಟಿ ರೂಗೆ ಏರಿಸಲಾಗಿದೆ.
ತತ್ಕ್ಷಣದ ಕ್ರಮಗಳ ಬದಲು ದೀರ್ಘಾವಧಿ ಪರಿಹಾರಗಳಿಗೆ ಬಜೆಟ್ನಲ್ಲಿ ಒತ್ತುಕೊಡಲಾಗಿದೆ. ದೇಶೀಯ ಮೌಲ್ಯ ಸರಪಳಿಯನ್ನು ಬಲಪಡಿಸಲು ಮತ್ತು ದೊಡ್ಡ ಪ್ರಮಾಣದಲ್ಲಿ ಬಹುಕೌಶಲ್ಯ ಉದ್ಯೋಗ ಸೃಷ್ಟಿಸಲು, ಹಾಗೂ ಕಂಪನಿಗಳಿಗೆ ಕಾರ್ಯಾಚರಣೆ ಸಂಘರ್ಷ ಕಡಿಮೆಗೊಳಿಸಲು ಈ ಬಜೆಟ್ನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಭಾರತದ ಪ್ರಗತಿಗೆ ಪೂರಕವಾಗಿದೆ ಈ ಬಜೆಟ್: ಅಪೋಲೋ ಹಾಸ್ಪಿಟಲ್ಸ್ ಮುಖ್ಯಸ್ಥ ಡಾ. ಪ್ರತಾಪ್ ಸಿ. ರೆಡ್ಡಿ
ಬಜೆಟ್ 2026: ಪ್ರಮುಖ ಘೋಷಣೆಗಳು
| ಕೆಟಗರಿ | ಯೋಜನೆ | ಪ್ರಮುಖ ವಿವರ | ನೀತಿ |
| ವಿತ್ತೀಯ ನೀತಿ | ವಿತ್ತೀಯ ಕೊರತೆ ಗುರಿ | 2026-27ಕ್ಕೆ ಜಿಡಿಪಿಯ ಶೇ. 4.3 ವಿತ್ತೀಯ ಕೊರತೆ ಗುರಿ; ಜಿಡಿಪಿ ಮತ್ತು ಸಾಲದ ಅನುಪಾತ 2030-31ಕ್ಕೆ ಶೇ. 50ಕ್ಕೆ ಇಳಿಸುವ ಗುರಿ | ಮುಂದುವರಿಕೆ |
| ಇನ್ಫ್ರಾಸ್ಟ್ರಕ್ಚರ್ | ಬಂಡವಾಳ ವೆಚ್ಚ | 12.2 ಲಕ್ಷ ಕೋಟಿ ರೂ (ಜಿಡಿಪಿಯ ಶೇ. 3.1); ರೈಲ್, ವಾಟರ್ವೇ, ಲಾಜಿಸ್ಟಿಕ್ಸ್ | ಮುಂದುವರಿಕೆ |
| ತೆರಿಗೆ | ಆದಾಯ ತೆರಿಗೆ ಕಾಯ್ದೆ 2025 | 2026ರ ಏಪ್ರಿಲ್ನಿಂದ ಸರಳೀಕೃತ ತೆರಿಗೆ ಕಾನೂನು; ಯಾವ ದರ ಬದಲಾವಣೆ ಇಲ್ಲ | ಮುಂದುವರಿಕೆ |
| ಮ್ಯಾನುಫ್ಯಾಕ್ಚರಿಂಗ್ | ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಸ್ | ಸೆಮಿಕಂಡಕ್ಟರ್ ಮಿಷನ್ನ ವಿಸ್ತರಣೆ; 40,000 ಕೋಟಿ ರೂ ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್ ಸ್ಕೀಮ್ | ಮುಂದುವರಿಕೆ |
| ಎಂಎಸ್ಎಂಇ ಮತ್ತು ಉದ್ಯೋಗ | ಕ್ಲಸ್ಟರ್ಗಳು ಮತ್ತು ಕೌಶಲ್ಯಪೂರಣ | 200 ಕ್ಲಸ್ಟರ್ಗಳ ಪುನರ್ನಿರ್ಮಾಣ; ಪ್ರವಾಸ ಮಾರ್ಗಸೂಚಿ, ಎವಿಜಿಸಿ ಲ್ಯಾಬ್ಗಳು | ಮುಂದುವರಿಕೆ |
| ಕೃಷಿ | ಅಧಿಕ ಮೌಲ್ಯದ ಬೆಳೆಗಳು ಮತ್ತು ಫೈಬರ್ | ರಫ್ತು ಆದ್ಯತೆ; ನ್ಯಾಷನಲ್ ಫೈಬರ್ ಸ್ಕೀಮ್ | ಮುಂದುವರಿಕೆ |
| ಹೆಲ್ತ್ಕೇರ್ ಮತ್ತು ಟೆಕ್ | ಬಯೋಫಾರ್ಮಾ ಶಕ್ತಿ | ಐದು ವರ್ಷಗಳಲ್ಲಿ 10,000 ಕೋಟಿ ರೂ; 1,000 ಟ್ರಯಲ್ ಲ್ಯಾಬ್ಗಳು | ಹೊಸದು |
| ಕ್ರಿಟಿಕಲ್ ಮಿನರಲ್ಸ್ | ರೇರ್ ಅರ್ಥ್ ಕಾರಿಡಾರ್ಗಳು | ಒಡಿಶಾ, ಕೇರಳ, ಆಂಧ್ರ ಮತ್ತು ತಮಿಳುನಾಡು | ಹೊಸದು |
| ಎಂಎಸ್ಎಂಇ ಫೈನಾನ್ಸ್ | ಎಸ್ಎಂಇ ಗ್ರೋತ್ ಫಂಡ್ | ಎಂಎಸ್ಎಂಇಗಳ ಪುಷ್ಟಿಗೆ 10,000 ಕೋಟಿ ರೂ ಫಂಡ್ | ಹೊಸದು |
| ಇನ್ಫ್ರಾಸ್ಟ್ರಕ್ಚ್ ಫೈನಾನ್ಸ್ | ರಿಸ್ಕ್ ಗ್ಯಾರಂಟಿ ಫಂಡ್ | ಇನ್ಫ್ರಾ ಪ್ರಾಜೆಕ್ಟ್ಗಳಿಗೆ ಭಾಗಶಃ ಕ್ರೆಡಿಟ್ ಗ್ಯಾರಂಟಿ | ಹೊಸದು |
| ಟ್ರೇಡ್ ಮತ್ತು ಕಸ್ಟಮ್ಸ್ | ಇಂಟಿಗ್ರೇಟೆಡ್ ಕಸ್ಟಮ್ಸ್ ಸಿಸ್ಟಂ | ಎರಡು ವರ್ಷದಲ್ಲಿ ಸಿಂಗಲ್ ಡಿಜಿಟಲ್ ಪ್ಲಾಟ್ಫಾರ್ಮ್ | ಹೊಸದು |
| ರಫ್ತು | ಕೊರಿಯರ್ ರಫ್ತು ಮಿತಿ | 10 ಲಕ್ಷ ರೂ ಮೌಲ್ಯದ ಮಿತಿ ತೆಗೆಯಲಾಗಿರುವುದು | ಹೊಸದು |
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




