AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿದ್ದರಾಮಯ್ಯ

ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿದ್ದರಾಮಯ್ಯ

ರಮೇಶ್ ಬಿ. ಜವಳಗೇರಾ
|

Updated on:Feb 01, 2026 | 6:45 PM

Share

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  (Nirmala Sitharaman) ಅವರು ಇಂದು (ಫೆಬ್ರವರಿ 01) 2026-27ನೇ ಸಾಲಿನ ಬಜೆಟ್ (Union Budget 2026) ಮಂಡಿಸಿದ್ದಾರೆ. 53.47 ಲಕ್ಷ ಕೋಟಿ ರೂಪಾಯಿ ಮೌಲ್ಯದ ಈ ಬಜೆಟ್‌ ಮಂಡಿಸಿದ್ದಾರೆ. ಇನ್ನು ಈ ಬಗ್ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದು, ಕರ್ನಾಟಕಕ್ಕೆ ಬಜೆಟ್​ನಲ್ಲಿ ಏನೂ ಕೊಟ್ಟಿಲ್ಲ. ಕರ್ನಾಟಕ್ಕೆ ಕೇಂದ್ರ ಸರ್ಕಾರ ಚೊಂಬು ಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.

ಕಲಬುರಗಿ, (ಫೆಬ್ರವರಿ 01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  (Nirmala Sitharaman) ಅವರು ಇಂದು (ಫೆಬ್ರವರಿ 01) 2026-27ನೇ ಸಾಲಿನ ಬಜೆಟ್ (Union Budget 2026) ಮಂಡಿಸಿದ್ದಾರೆ. 53.47 ಲಕ್ಷ ಕೋಟಿ ರೂಪಾಯಿ ಮೌಲ್ಯದ ಈ ಬಜೆಟ್‌ ಮಂಡಿಸಿದ್ದಾರೆ. ಇನ್ನು ಈ ಬಗ್ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದು, ಕರ್ನಾಟಕಕ್ಕೆ ಬಜೆಟ್​ನಲ್ಲಿ ಏನೂ ಕೊಟ್ಟಿಲ್ಲ. ಕರ್ನಾಟಕ್ಕೆ ಕೇಂದ್ರ ಸರ್ಕಾರ ಚೊಂಬು ಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.

ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರದ ಬಜೆಟ್ ನಿರಾಶಾದಾಯಕವಾಗಿದೆ. ಯಾವುದೇ ದೂರದೃಷ್ಟಿಯಿಲ್ಲದ ಬಜೆಟ್ ಇದು.ಇಂದು ಮಂಡಿಸಿರುವ ಬಜೆಟ್​ ಬರೀ ಹೇಳಿಕೆಗಳಿಂದ ಕೂಡಿದೆ.ಪರಿಷ್ಕೃತ ಅಂದಾಜು ಗಾತ್ರ 49 ಲಕ್ಷ 64 ಸಾವಿರ ಕೋಟಿ. ಒಂದು ಲಕ್ಷ ಕೋಟಿಯಷ್ಟು ಪರಿಷ್ಕೃತ ಅಂದಾಜು ಕಡಿಮೆ. ಬೆಂಗಳೂರು-ಹೈದರಾಬಾದ್​​ ಹೈಸ್ಪೀಡ್​​ ರೈಲು ಘೋಷಣೆ ಮಾಡಿದ್ದಾರೆ. ಇದರಿಂದ ಕರ್ನಾಟಕಕ್ಕೆ ಏನು ಅನುಕೂಲ. ಮುಂದಿನ 5 ವರ್ಷಗಳಿಂದ ಯೋಜನೆ ಎಂದು ಹೇಳಿದ್ದಾರೆ ಅಷ್ಟೇ. ನಮಗೆ ಬೇಕಿರುವುದು ಬೆಂಗಳೂರು-ಮುಂಬೈ ಹೈಸ್ಪೀಡ್​ ರೈಲು. ಬೆಂಗಳೂರು-ಮಂಗಳೂರಿಗೆ ಹೈಸ್ಪೀಡ್​ ಬೇಕು. ಕೇಂದ್ರದವರು ವಿಕಸಿತ ಭಾರತ ಬಗ್ಗೆ ಬಹಳ ಮಾತನಾಡಿದ್ರು. ಆದರೆ ಅದು ಬರೀ ಮಾತಿನಲ್ಲಿದೆ, ಕೃತಿಯಾಗಿ ಅವರು ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

Published on: Feb 01, 2026 06:44 PM

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More