ಹೂಡಿಕೆ ಮಾಡುವ ಮುನ್ನ ಆ್ಯಕ್ಟಿವ್ ಮತ್ತು ಪಾಸಿವ್ ಫಂಡ್ಗಳೇನು, ಅವುಗಳ ವೆಚ್ಚವೆಷ್ಟು ಈ ವ್ಯತ್ಯಾಸ ತಿಳಿದಿರಿ…
Active Mutual Fund vs Passive Mutual Funds: ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ಸುಲಭ. ನಮ್ಮ ಪರವಾಗಿ ಫಂಡ್ಗಳು ಷೇರು ಮತ್ತು ಡೆಟ್ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಮ್ಯೂಚುವಲ್ ಫಂಡ್ಗಳಲ್ಲಿ ಹಲವು ವಿಧಗಳಿವೆ. ಪ್ರಮುಖವಾಗಿ ಆ್ಯಕ್ಟಿವ್ ಫಂಡ್ ಮತ್ತು ಪಾಸಿವ್ ಫಂಡ್ಗಳಿರುತ್ತವೆ. ಆ್ಯಕ್ಟಿವ್ ಫಂಡ್ಗೆ ಎಕ್ಸ್ಪೆನ್ಸ್ ರೇಶಿಯೋ ಹೆಚ್ಚಿರುತ್ತದೆ. ಪಾಸಿವ್ ಫಂಡ್ಗೆ ಇದು ಕಡಿಮೆ.

ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವುದು ಹೆಚ್ಚು ತಲೆನೋವು ಇರದ ಸುಲಭ ಕಾರ್ಯ. ಎಸ್ಐಪಿಯಿಂದಾಗಿ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು, ಆದರೆ ಯಾವ ಷೇರು ಖರೀದಿಸಬೇಕು ಎನ್ನುವ ಗೊಂದಲದಲ್ಲಿರುವವರಿಗೆ ಇಟಿಎಫ್, ಮ್ಯೂಚುವಲ್ ಫಂಡ್ಗಳು ಉತ್ತಮ ಮಾರ್ಗಗಳಾಗಿವೆ. ಆದರೆ, ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ರಿಸ್ಕ್ ಫ್ರೀ ಎಂತೇನೂ ಇಲ್ಲ. ಅಲ್ಲಿಯೂ ರಿಸ್ಕ್ ಇದೆ. ಅದರ ಸಾಧಕ, ಬಾಧಕಗಳೇನು ಎಂಬುದನ್ನು ತಿಳಿದಿರುವುದು ಉತ್ತಮ.
ಮ್ಯೂಚುವಲ್ ಫಂಡ್ಗಳು ಹೂಡಿಕೆದಾರರ ಪರವಾಗಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಷೇರು, ಅಥವಾ ಇನ್ನಿತರ ಹಣಕಾಸು ಯಂತ್ರಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಷೇರು, ಡೆಟ್, ಗೋಲ್ಡ್, ಇತ್ಯಾದಿಯಲ್ಲಿ ಈ ಫಂಡ್ಗಳು ಹೂಡಿಕೆ ಮಾಡಬಹುದು. ಯಾವುದರಲ್ಲಿ ಹೆಚ್ಚು ಹೂಡಿಕೆ ಮಾಡಲಾಗುತ್ತದೋ ಆ ರೀತಿಯಲ್ಲಿ ಫಂಡ್ನ ವರ್ಗೀಕರಣ ಇರುತ್ತದೆ.
ಈಕ್ವಿಟಿ ಫಂಡ್ಗಳು ಡೆಟ್ಗಳಲ್ಲೂ ಹೂಡಿಕೆ ಮಾಡುತ್ತವಾದರೂ, ಷೇರುಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತವೆ. ಬಾಂಡ್ ಇತ್ಯಾದಿ ಡೆಟ್ ಯಂತ್ರಗಳಲ್ಲಿ ಹೆಚ್ಚು ಹೂಡಿಕೆ ಮಾಡಿದರೆ ಅದು ಡೆಟ್ ಫಂಡ್ ಎನಿಸುತ್ತದೆ.
ಇದನ್ನೂ ಓದಿ: ನಿಶ್ಚಿಂತೆಯ ನಿವೃತ್ತ ಜೀವನಕ್ಕೆ ಎಲ್ಐಸಿಯಿಂದ ಹೊಸ ಸ್ಮಾರ್ಟ್ ಪೆನ್ಷನ್ ಪ್ಲಾನ್
ಆ್ಯಕ್ಟಿವ್ ಮತ್ತು ಪಾಸಿವ್ ಮ್ಯೂಚುವಲ್ ಫಂಡ್
ಮ್ಯೂಚುವಲ್ ಫಂಡ್ಗಳಲ್ಲಿ ಬೇರೆ ಎರಡು ರೀತಿಯ ವರ್ಗೀಕರಣ ಮಾಡಬಹುದು. ಒಂದು ಆ್ಯಕ್ಟಿವ್ ಮ್ಯೂಚುವಲ್ ಫಂಡ್, ಮತ್ತೊಂದು ಪಾಸಿವ್ ಮ್ಯೂಚುವಲ್ ಫಂಡ್. ಆ್ಯಕ್ಟಿವ್ ಮ್ಯೂಚುವಲ್ ಫಂಡ್ನಲ್ಲಿ ಫಂಡ್ ಮ್ಯಾನೇಜರ್ಸ್ ಹಾಗೂ ತಂಡಗಳಿರುತ್ತವೆ. ಇವು ಯಾವ ಷೇರುಗಳಲ್ಲಿ ಹೂಡಿಕೆ ಮಾಡಬೇಕು ಎಂದು ಸಮಯ ಸಂದರ್ಭಕ್ಕನುಗುಣವಾಗಿ ನಿರ್ಧಾರ ಮಾಡುತ್ತಾರೆ. ಸೆನ್ಸೆಕ್ಸ್ ಅಥವಾ ನಿಫ್ಟಿ ಸೂಚ್ಯಂಕಗಳಿಗಿಂತ ಹೆಚ್ಚು ರಿಟರ್ನ್ ತರುವುದು ಈ ರೀತಿಯ ಆ್ಯಕ್ಟಿವ್ ಫಂಡ್ಗಳ ಗುರಿ.
ಇನ್ನು, ಪಾಸಿವ್ ಫಂಡ್ಗಳು ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸಲಾಗಿರುತ್ತದೆ. ಇದು ಒಂದು ನಿರ್ದಿಷ್ಟ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತದೆ. ಉದಾಹರಣೆಗೆ, ನಿಫ್ಟಿ50 ಇಂಡೆಕ್ಸ್ ಅನ್ನು ಒಂದು ಫಂಡ್ ಟ್ರ್ಯಾಕ್ ಮಾಡುತ್ತದೆ ಎಂದರೆ, ಆ ಇಂಡೆಕ್ಸ್ನ 50 ಷೇರುಗಳಲ್ಲಿ ಅದರ ಹೂಡಿಕೆ ಹರಡಿರುತ್ತದೆ. ಹೀಗಾಗಿ, ಇದನ್ನು ನಿರ್ವಹಿಸಲು ಫಂಡ್ ಮ್ಯಾನೇಜರ್ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯ ಸಿಬ್ಬಂದಿಯೇ ಈ ಕೆಲಸ ಮಾಡುತ್ತಾರೆ.
ಇದನ್ನೂ ಓದಿ: ಭಾರತೀಯರ ಆದಾಯದ ಹೆಚ್ಚಿನ ಭಾಗ ಸಾಲಕ್ಕೆ ಚುಕ್ತಾ; ಬೇರೆ ಯಾವ್ಯಾವುದಕ್ಕೆಷ್ಟು ಖರ್ಚು? ಇಲ್ಲಿದೆ ಪಿಡಬ್ಲ್ಯುಸಿ ವರದಿ
ಮ್ಯೂಚುವಲ್ ಫಂಡ್ಗಳಲ್ಲಿ ಎಕ್ಸ್ಪೆನ್ಸ್ ರೇಶಿಯೋ
ಮ್ಯೂಚುವಲ್ ಫಂಡ್ಗಳಲ್ಲಿ ಎಕ್ಸ್ಪೆನ್ಸ್ ರೇಶಿಯೋ ಇರುತ್ತದೆ. ಇದು ಅ ಫಂಡ್ನಲ್ಲಿ ಹೂಡಿಕೆ ಮಾಡಲು ಇರುವ ನಿಗದಿತ ಶುಲ್ಕ. ಫಂಡ್ ಮ್ಯಾನೇಜರ್ ಅವಶ್ಯಕತೆ ಇರುವ ಆ್ಯಕ್ಟಿವ್ ಫಂಡ್ಗಳಲ್ಲಿ ಹೆಚ್ಚಿನ ಎಕ್ಸ್ಪೆನ್ಸ್ ರೇಶಿಯೋ ಇರುತ್ತದೆ. ಪಾಸಿವ್ ಫಂಡ್ಗಳಲ್ಲಿ ಈ ಶುಲ್ಕ ದರ ಕಡಿಮೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ