AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ ಒತ್ತೆ ಇಟ್ಟು ಸಾಲ ಪಡೆಯುವುದು ಕಷ್ಟವಾಗುತ್ತಾ? ನಿಯಮ ಬಿಗಿಗೊಳಿಸಲು ಬ್ಯಾಂಕುಗಳಿಗೆ ಆರ್​ಬಿಐ ಸೂಚಿಸುವ ಸಾಧ್ಯತೆ

Gold loan updates: ಬಹಳ ಸುಲಭಕ್ಕೆ ಸಿಗುವ ಗೋಲ್ಡ್ ಲೋನ್ ಇನ್ಮುಂದೆ ತುಸು ಕಷ್ಟವಾಗಬಹುದು. ಇತ್ತೀಚಿನ ಕೆಲ ತಿಂಗಳಿಂದ ಚಿನ್ನದ ಸಾಲ ಸಿಕ್ಕಾಪಟ್ಟೆ ಏರಿರುವುದು ಆರ್​​ಬಿಐನ ದೃಷ್ಟಿ ನೆಡುವಂತೆ ಮಾಡಿದೆ. ಬ್ಯಾಂಕುಗಳು ಸರಿಯಾಗಿ ನಿಯಮ ಪಾಲನೆ ಮಾಡದೇ ಸಾಲ ನೀಡುತ್ತಿರುವುದು ತನಗೆ ಗೊತ್ತಾಗಿದೆ ಎಂದು ಆರ್​ಬಿಐ ಹೇಳಿದೆ. ಸಾಲ ನೀಡುವ ಮುನ್ನ ಗ್ರಾಹಕರ ಹಿನ್ನೆಲೆ, ಚಿನ್ನದ ಮಾಲಕತ್ವ ಇತ್ಯಾದಿಯನ್ನು ಪರಿಶೀಲಿಸಬೇಕೆಂದು ಬ್ಯಾಂಕುಗಳಿಗೆ ಆರ್​​ಬಿಐ ಸೂಚಿಸಬಹುದು.

ಚಿನ್ನ ಒತ್ತೆ ಇಟ್ಟು ಸಾಲ ಪಡೆಯುವುದು ಕಷ್ಟವಾಗುತ್ತಾ? ನಿಯಮ ಬಿಗಿಗೊಳಿಸಲು ಬ್ಯಾಂಕುಗಳಿಗೆ ಆರ್​ಬಿಐ ಸೂಚಿಸುವ ಸಾಧ್ಯತೆ
ಚಿನ್ನದ ಸಾಲ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 06, 2025 | 6:11 PM

Share

ನವದೆಹಲಿ, ಮಾರ್ಚ್ 6: ಮನೆಯಲ್ಲಿದ್ದ ಚಿನ್ನ ತೆಗೆದುಕೊಂಡು ಹೋಗಿ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟರೆ ಸುಲಭವಾಗಿ ಸಾಲ (gold loan) ಸಿಗುತ್ತದೆ. ಮುಂದಿನ ದಿನಗಳಲ್ಲಿ ಇದು ತುಸು ಕಷ್ಟವಾಗಬಹುದು. ದೇಶಾದ್ಯಂತ ಚಿನ್ನದ ಸಾಲ ಪ್ರಮಾಣ ತೀರಾ ಹೆಚ್ಚಾಗಿರುವುದು ಆರ್​​ಬಿಐ ತಿರುಗಿ ನೋಡುವಂತೆ ಮಾಡಿದೆ. ಗೋಲ್ಡ್ ಲೋನ್ ನೀಡುವಾಗ ಬ್ಯಾಂಕುಗಳು ಸರಿಯಾದ ವಿಧಾನಗಳನ್ನು ಅನುಸರಿಸುತ್ತಿವೆಯಾ ಎಂದು ಪರಿಶೀಲಿಸಿದ ಬಳಿಕ ಆರ್​ಬಿಐ ಕೆಲ ನಿಬಂಧನೆಗಳನ್ನು ವಿಧಿಸಲು ಯೋಜಿಸಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ಚಿನ್ನದ ಮಾಲಿಕತ್ವಕ್ಕೆ ಸರಿಯಾದ ಸಾಕ್ಷ್ಯಾಧಾರ ಸಂಗ್ರಹಿಸುವುದು ಇವೇ ಮುಂತಾದ ನಿಯಮಗಳನ್ನು ಪಾಲಿಸುವಂತೆ ಬ್ಯಾಂಕುಗಳಿಗೆ ಸೂಚಿಸುವ ಸಾಧ್ಯತೆ ಇದೆ.

ಒಡವೆ ಸಾಲಗಳು ಕೈ ಮೀರಿ ಹೋಗುವಷ್ಟು ಬೆಳೆಯದಂತೆ ನಿಗಾ ವಹಿಸುವ ಇರಾದೆ ಆರ್​ಬಿಐನದ್ದಾಗಿದೆ. ಚಿನ್ನವನ್ನು ಒತ್ತೆ ಇಟ್ಟುಕೊಂಡು ಸಾಲ ನಿಡುವ ಮುನ್ನ ಗ್ರಾಹಕರ ಹಿನ್ನೆಲೆ ಪರಿಶೀಲಿಸಬೇಕು. ಅವರದ್ದೇ ಚಿನ್ನವಾ ಎಂದು ದೃಢೀಕರಿಸುವಂತಹ ದಾಖಲೆಗಳನ್ನು ಪಡೆಯಬೇಕು. ಸಾಲ ನೀಡುವಾಗ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸಲಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂಬಿತ್ಯಾದಿ ಅಂಶಗಳಿರುವ ನಿಯಮಾವಳಿಗಳನ್ನು ಬ್ಯಾಂಕುಗಳಿಗೆ ಆರ್​​ಬಿಐ ಕಳುಹಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ: ಹೂಡಿಕೆದಾರರಿಗೆ ‘ಚಿನ್ನ’ದ ಮೊಟ್ಟೆಯ ಗುಟ್ಟು ಬಿಚ್ಚಿಟ್ಟ ಮುಖ್ಯ ಆರ್ಥಿಕ ಸಲಹೆಗಾರ ಅನಂತನಾಗೇಶ್ವರನ್

2024ರ ಸೆಪ್ಟೆಂಬರ್ ಬಳಿಕ ಬ್ಯಾಂಕುಗಳಲ್ಲಿ ತೆಗೆದುಕೊಳ್ಳಲಾಗುತ್ತಿರುವ ಚಿನ್ನದ ಸಾಲಗಳ ಪ್ರಮಾಣ ಶೇ. 50ರಷ್ಟು ಹೆಚ್ಚಾಗಿದೆ. ಪರ್ಸನಲ್ ಲೋನ್ ಇತ್ಯಾದಿ ಅಸುರಕ್ಷಿತ ಸಾಲಗಳ ವಿಚಾರದಲ್ಲಿ ಆರ್​​ಬಿಐ ನಿರ್ಬಂಧಗಳನ್ನು ಹೇರಿದ ಹಿನ್ನೆಲೆಯಲ್ಲಿ ಗೋಲ್ಡ್ ಲೋನ್ ಪ್ರಮಾಣ ಗಣನೀಯವಾಗಿ ಏರಿರಬಹುದು.

ಗೋಲ್ಡ್ ಲೋನ್ ಉದ್ಯಮದಲ್ಲಿ ಸಾಕಷ್ಟು ನಿಯಮ ಲೋಪಗಳಾಗುತ್ತಿರುವುದು ತನಗೆ ಗೊತ್ತಾಯಿತು. ಸಾಲ ನೀಡುವ ಕ್ರಮದಲ್ಲಿ ಎಲ್ಲಿ ಲೋಪವಾಗಿದೆ ಎಂದು ಗುರುತಿಸಿ, ವ್ಯವಸ್ಥೆ ಸರಿಪಡಿಸುವಂತೆ ಬ್ಯಾಂಕುಗಳಿಗೆ ಆರ್​ಬಿಐ ಇತ್ತೀಚೆಗೆ ಸೂಚಿಸಿತ್ತು.

ಇದನ್ನೂ ಓದಿ: ಮಾರುಕಟ್ಟೆ ಅಸ್ಥಿರತೆ ತಾತ್ಕಾಲಿಕ, ಮುಂದುವರಿಸಿ ನಿಮ್ಮ ಎಸ್​ಐಪಿ ಕಾಯಕ: ತಜ್ಞರ ಅನಿಸಿಕೆ

ಚಿನ್ನದ ಮೌಲ್ಯಮಾಪನದಲ್ಲಿ ಲೋಪ…

ಚಿನ್ನದ ಸಾಲ ನೀಡುವಾಗ, ಚಿನ್ನದ ತೂಕ, ಶುದ್ಧತೆಯನ್ನು ಪರಿಶೀಲಿಸಿ ಅದರ ಮೌಲ್ಯ ನಿರ್ಧರಿಸಬೇಕು. ಒಂದು ಗ್ರಾಮ್​​ಗೆ ನಿರ್ದಿಷ್ಟ ಮೊತ್ತದಂತೆ ಸಾಲ ನೀಡಬೇಕು. ಸಾಮಾನ್ಯವಾಗಿ ಒಂದು ಗ್ರಾಮ್ ಚಿನ್ನಕ್ಕೆ ಅದರ ಮಾರುಕಟ್ಟೆ ಮೌಲ್ಯದ ಶೇ. 60ರಿಂದ 80ರವರೆಗೆ ಸಾಲ ನೀಡಲಾಗುತ್ತದೆ. ಕೆಲ ಹಣಕಾಸು ಸಂಸ್ಥೆಗಳು ಕಡಿಮೆ ತೂಕದ ಚಿನ್ನ ಇಟ್ಟುಕೊಂಡು ಹೆಚ್ಚಿನ ಸಾಲ ನೀಡುತ್ತಿರುವುದು ಆರ್​ಬಿಐ ಕಣ್ಣಿಗೆ ಬೀಳುವಂತೆ ಮಾಡಿದೆ. ಹೀಗಾಗಿ, ರಿಸರ್ವ್ ಬ್ಯಾಂಕ್ ಈಗ ಗೋಲ್ಡ್ ಲೋನ್ ವಿಚಾರದಲ್ಲಿ ಮತ್ತೆ ಮಧ್ಯಪ್ರವೇಶಿಸುತ್ತಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Thu, 6 March 25