Akshaya Tritiya
ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಂದರೆ ಈ ವರ್ಷ ಮೇ.10 ಶುಕ್ರವಾರದಂದು ಅಕ್ಷಯ ತೃತೀಯ ಆಚರಣೆ ಮಾಡಲಾಗುತ್ತದೆ. ಧಾರ್ಮಿಕ ಮತ್ತು ಪೌರಾಣಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು, ಮದುವೆ, ನಿಶ್ಚಿತಾರ್ಥ, ಗೃಹಪ್ರವೇಶ ಸೇರಿದಂತೆ ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಯಾವುದೇ ಶುಭ ಸಮಯವಿಲ್ಲದೆ ಮಾಡಬಹುದು. ಸತ್ಯಯುಗ ಮತ್ತು ತ್ರೇತಾಯುಗವು ಅಕ್ಷಯ ತೃತೀಯದಿಂದ ಪ್ರಾರಂಭವಾಯಿತು ಎಂದು ನಂಬಲಾಗಿದೆ. ದ್ವಾಪರಯುಗವು ಈ ದಿನದಂದು ಕೊನೆಗೊಂಡಿತು, ಅದರ ನಂತರ ಕಲಿಯುಗವು ಅಕ್ಷಯ ತೃತೀಯದಿಂದ ಪ್ರಾರಂಭವಾಯಿತು ಎಂಬ ನಂಬಿಕೆ ಇದೆ. ಹಾಗಾಗಿ ಅಕ್ಷಯ ತೃತೀಯ ಬಗ್ಗೆ ವಿಶೇಷತೆಗಳೇನು, ಇದರ ಹಿಂದೆ ಇರುವ ಇತಿಹಾಸ ಏನು ಎಂಬ ಸ್ಟೋರಿಗಳು ಇಲ್ಲಿದೆ.