AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold: 24 ಕ್ಯಾರಟ್ ಚಿನ್ನಗಳಲ್ಲೇ ಬೆಲೆಗಳಲ್ಲಿ ಹೇಗೆ ವ್ಯತ್ಯಾಸ? ಜಿಎಸ್​​ಟಿ ಸೇರಿ ವಿವಿಧ ಹೆಚ್ಚುವರಿ ಬೆಲೆ ಬಗ್ಗೆ ತಿಳಿದಿರಿ

Akshaya Tritiya gold details you should know: ಶುದ್ಧ ಚಿನ್ನ 24 ಕ್ಯಾರಟ್​​ನದ್ದಾಗಿರುತ್ತದೆ. ಇದರಲ್ಲಿ ಶೇ. 99.99 ಅಥವಾ ಶೇ. 99.5ರಷ್ಟು ಶುದ್ಧತೆ ಇರುತ್ತದೆ. ಆಭರಣ ಚಿನ್ನಗಳು 22 ಕ್ಯಾರಟ್, 18 ಕ್ಯಾರಟ್, 14 ಕ್ಯಾರಟ್, 10 ಕ್ಯಾರಟ್ ಹೀಗೆ ಇರುತ್ತವೆ. ಕ್ಯಾರಟ್ ಕಡಿಮೆ ಆದಷ್ಟೂ ಶುದ್ಧತೆ ಕಡಿಮೆ ಇರುತ್ತದೆ. ಚಿನ್ನಕ್ಕೆ ಜಿಎಸ್​​ಟಿ, ಮೇಕಿಂಗ್ ಚಾರ್ಜ್, ವೇಸ್ಟೇಜ್ ಚಾರ್ಜ್ ಇತ್ಯಾದಿ ಎಷ್ಟಿರುತ್ತದೆ ಎನ್ನುವ ವಿವರ ಇಲ್ಲಿದೆ.

Gold: 24 ಕ್ಯಾರಟ್ ಚಿನ್ನಗಳಲ್ಲೇ ಬೆಲೆಗಳಲ್ಲಿ ಹೇಗೆ ವ್ಯತ್ಯಾಸ? ಜಿಎಸ್​​ಟಿ ಸೇರಿ ವಿವಿಧ ಹೆಚ್ಚುವರಿ ಬೆಲೆ ಬಗ್ಗೆ ತಿಳಿದಿರಿ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 27, 2025 | 4:33 PM

Share

ಅಕ್ಷಯ ತೃತೀಯ ದಿನ (Akshaya Tritiya) ಈ ವರ್ಷ ಏಪ್ರಿಲ್ 30ರಂದು ಇದೆ. ಅಂದು ಚಿನ್ನ ಹಾಗೂ ಅದರ ಆಭರಣಗಳನ್ನು ಖರೀದಿಸಿದರೆ ಸಮೃದ್ಧತೆ ಬರುತ್ತದೆ ಎಂಬ ನಂಬಿಕೆ ಕೆಲವರದ್ದು. ಅದೇನೇ ಇರಲಿ, ಚಿನ್ನವನ್ನು ಯಾವತ್ತೇ ಖರೀದಿಸಿದರೂ ಅದು ನಷ್ಟ ತರುವ ವಸ್ತು ಆಗಿರಲ್ಲ. ನೀವು ಚಿನ್ನವನ್ನು (gold buying) ಎರಡು ಉದ್ದೇಶಗಳಿಗೆ ಖರೀದಿಸಬಹುದು. ಒಂದು, ಹೂಡಿಕೆ ಉದ್ದೇಶಕ್ಕೆ. ಮತ್ತೊಂದು, ಆಭರಣಗಳಿಗಾಗಿ ಖರೀದಿಸಬಹುದು. ಆದರೆ, ಚಿನ್ನ ಖರೀದಿಸಿದಾಗ ಜಿಎಸ್​​ಟಿ ತೆರಿಗೆ, ಮೇಕಿಂಗ್ ಚಾರ್ಜ್, ವೇಸ್ಟೇಜ್ ಚಾರ್ಜ್ ಇತ್ಯಾದಿ ಇರುತ್ತದೆ.

24 ಕ್ಯಾರಟ್ ಚಿನ್ನದ ಬಗ್ಗೆ ಒಂದಷ್ಟು ಮಾಹಿತಿ…

24 ಕ್ಯಾರಟ್ ಚಿನ್ನ ಎಂದರೆ ಅದು ಶುದ್ಧ ಚಿನ್ನ. ಬಹುತೇಕ ನೂರಕ್ಕೆ ನೂರು ಶುದ್ಧ ಚಿನ್ನ. 24 ಕ್ಯಾರಟ್ ಚಿನ್ನದಲ್ಲೇ ಕೆಲವೊಮ್ಮೆ ದರ ವ್ಯತ್ಯಾಸ ಇರುವುದನ್ನು ಕಂಡಿರಬಹುದು. ಅದಕ್ಕೆ ಕಾರಣವು ಚಿನ್ನದ ಶುದ್ಧತೆಯ ಪ್ರಮಾಣದಲ್ಲಿ ಇರುವ ಅಲ್ಪ ವ್ಯತ್ಯಾಸ.

24 ಕ್ಯಾರಟ್ ಚಿನ್ನದಲ್ಲಿ ಎರಡು ವಿಧ ಇರುತ್ತದೆ. ಒಂದು, ಅದು 999 ಶುದ್ಧತೆ. ಮತ್ತೊಂದು 995 ಶುದ್ಧತೆ. 999 ಎಂಬುದು ಶೇ. 99.99 ಪ್ಯೂರಿಟಿ ಇರುವ ಚಿನ್ನ. 995 ಎಂಬುದ ಶೇ. 99.5 ಶುದ್ಧತೆ ಇರುವ ಚಿನ್ನ. 999 ಪ್ಯೂರಿಟಿಯ ಚಿನ್ನಕ್ಕೆ ತುಸು ಹೆಚ್ಚು ಬೆಲೆ ಇರುತ್ತದೆ. ಹೀಗಾಗಿ, ಪೇಟಿಎಂನಲ್ಲಿ ಚಿನ್ನದ ದರಕ್ಕೂ ಫೋನ್ ಪೇನಲ್ಲಿ ಚಿನ್ನದ ದರಕ್ಕೂ ಅಥವಾ ಬೇರೆ ಕೆಲ ಡಿಜಿಟಲ್ ಪ್ಲಾಟ್​​ಫಾರ್ಮ್​​ಗಳಲ್ಲಿನ ಚಿನ್ನದ ದರಕ್ಕೂ ಅಲ್ಪ ವ್ಯತ್ಯಾಸ ಇರುವುದು ಇದೇ ಕಾರಣಕ್ಕೆ.

ಇದನ್ನೂ ಓದಿ
Image
ಅಕ್ಷಯ ತೃತೀಯಕ್ಕೆ ಚಿನ್ನದ ಮೇಲೆ ಭರ್ಜರಿ ಆಫರ್ಸ್
Image
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ
Image
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
Image
ಚಿನ್ನದ ಬೆಲೆ ಇಳಿಕೆ ಯಾವಾಗ?

ಇದನ್ನೂ ಓದಿ: ಅಕ್ಷಯ ತೃತೀಯಕ್ಕೆ ಕೌಂಟ್ ಡೌನ್ ಶುರು: ಮಾರುಕಟ್ಟೆಗೆ ಬಂತು ಅರ್ಧ ಗ್ರಾಂ ಚಿನ್ನದ ನಾಣ್ಯ

ವಿವಿಧ ಕ್ಯಾರಟ್ ಚಿನ್ನಗಳ ಶುದ್ಧತೆ…

ಚಿನ್ನದ ಶುದ್ಧತೆಯನ್ನು ಕ್ಯಾರಟ್ ಲೆಕ್ಕದಲ್ಲಿ ತಿಳಿಸಲಾಗುತ್ತದೆ. ಆಗಲೇ ಹೇಳಿದಂತೆ 24 ಕ್ಯಾರಟ್ ಎಂದರೆ ಶೇ. 99.99 ಅಥವಾ ಶೇ. 99.5 ಶುದ್ಧತೆಯ ಚಿನ್ನ ಇರುತ್ತದೆ. ಅಂದರೆ ಅಷ್ಟು ಪ್ರಮಾಣದಲ್ಲಿ ಚಿನ್ನ ಇರುತ್ತದೆ. ಶುದ್ಧ ಚಿನ್ನ ಮೃದುವಾಗಿರುತ್ತವೆ. ಒಡವೆಗಳು 24 ಕ್ಯಾರಟ್ ಇರುವುದಿಲ್ಲ. ಇವುಗಳ ಶುದ್ಧತೆಯನ್ನು ಕಡಿಮೆ ಮಾಡಲಾಗುತ್ತದೆ. 22 ಕ್ಯಾರಟ್ ಚಿನ್ನವು ಒಡವೆಗಳಿಗೆ ಸಾಮಾನ್ಯವಾಗಿ ಬಳಕೆಯಾಗುತ್ತದೆ. ಇದು ಶೇ. 91.67 ಚಿನ್ನವನ್ನು ಹೊಂದಿರುತ್ತದೆ. ಉಳಿದ ಪ್ರಮಾಣವನ್ನು ತಾಮ್ರ, ಬೆಳ್ಳಿ ಇತ್ಯಾದಿ ಲೋಹಗಳಿಂದ ಬೆರೆಸಲಾಗಿರುತ್ತದೆ.

ಹಾಗೆಯೇ, 18 ಕ್ಯಾರಟ್​​ನಲ್ಲಿ ಶೇ. 75 ಚಿನ್ನ, 14 ಕ್ಯಾರಟ್​​ನಲ್ಲಿ ಶೇ. 58.3 ಚಿನ್ನ ಇರುತ್ತದೆ. ಕಡಿಮೆ ಕ್ಯಾರಟ್ ಇದ್ದಷ್ಟೂ ಒಡವೆಗಳು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಆದರೆ, ಹೆಚ್ಚು ಕ್ಯಾರಟ್​ನ ಚಿನ್ನ ಹೊಂದಿರುವಷ್ಟು ಪ್ರಕಾಶಮಾನ ಹಳದಿ ಬಣ್ಣವು 14 ಕ್ಯಾರಟ್ ಚಿನ್ನದಲ್ಲಿ ಇರುವುದಿಲ್ಲ.

ಚಿನ್ನಕ್ಕೆ ಜಿಎಸ್​​ಟಿ ತೆರಿಗೆ

ನೀವು ಯಾವುದೇ ಚಿನ್ನ ಖರೀದಿಸಿದರೂ ಶೇ. 3 ಜಿಎಸ್​​ಟಿ ಅನ್ವಯ ಆಗುತ್ತದೆ. ಚಿನ್ನವನ್ನು ಮಾರುವಾಗಲೂ ಶೇ. 3 ಜಿಎಸ್​​ಟಿ ಇರುತ್ತದೆ. ಹೀಗಾಗಿ, ಹೂಡಿಕೆಗಾಗಿ ನೀವು ಶುದ್ಧ ಚಿನ್ನ ಖರೀದಿಸುತ್ತಿದ್ದರೆ, ಅದು ದೀರ್ಘಾವಧಿ, ಅಂದರೆ ಕನಿಷ್ಠ ಮೂರು ವರ್ಷವಾದರೂ ಹೂಡಿಕೆ ಅವಧಿ ಇದ್ದರೆ ಆಗ ಉತ್ತಮ ಎನಿಸುವ ರಿಟರ್ನ್ಸ್ ಅನ್ನು ನಿರೀಕ್ಷಿಸಬಹುದು.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ನೀವು ಡಿಜಿಟಲ್ ಗೋಲ್ಡ್​​ನಲ್ಲಿ ಹೂಡಿಕೆ ಮಾಡಿದಾಗ, ಅದನ್ನು ಭೌತಿಕ ಚಿನ್ನವಾಗಿ ಪರಿವರ್ತಿಸಿಕೊಳ್ಳಬಹುದು. ಅಥವಾ ಮಾರಾಟ ಮಾಡಿ ಲಾಭ ಪಡೆಯಬಹುದು. ನೀವು ಗೋಲ್ಡ್ ಕಾಯಿನ್ ಅಥವಾ ಗೋಲ್ಡ್ ಬಿಸ್ಕತ್ ರೂಪದಲ್ಲಿ ಚಿನ್ನವನ್ನು ಪಡೆದರೂ ಅದಕ್ಕೆ ಒಂದಷ್ಟು ಮೇಕಿಂಗ್ ಚಾರ್ಜಸ್ ಇರುತ್ತದೆ. ಒಡವೆಯಷ್ಟು ಇಲ್ಲದಿದ್ದರೂ ಸ್ವಲ್ಪ ಪ್ರಮಾಣದಲ್ಲಿ ಮೇಕಿಂಗ್ ಚಾರ್ಜಸ್ ಅನ್ನು ವಿಧಿಸಲಾಗುತ್ತದೆ. ಕಾಯಿನ್ ರೂಪಕ್ಕೆ ಚಿನ್ನವನ್ನು ತರುವಾಗ ಆಗುವ ವೆಚ್ಚವನ್ನು ಭರಿಸಲು ಈ ಶುಲ್ಕ ಇರುತ್ತದೆ.

ಇದನ್ನೂ ಓದಿ: ಚಿನ್ನ ದುಬಾರಿಯಾದರೂ ಅಕ್ಷಯ ತೃತೀಯಕ್ಕೆ ಭರ್ಜರಿ ಡಿಸ್ಕೌಂಟ್ ಆಫರ್ಸ್

ಆಭರಣ ಚಿನ್ನಕ್ಕೆ ಹೆಚ್ಚು ಮೇಕಿಂಗ್ ಚಾರ್ಜಸ್

ನೀವು ಆಭರಣ ಚಿನ್ನವನ್ನು ಖರೀದಿಸಿದಾಗ ಜಿಎಸ್​​ಟಿ ಜೊತೆಗೆ ಮೇಕಿಂಗ್ ಚಾರ್ಜಸ್ ಮತ್ತು ವೇಸ್ಟೇಜ್ ಚಾರ್ಜಸ್ ಇರುತ್ತದೆ. ಮೇಕಿಂಗ್ ಚಾರ್ಜಸ್ ಮೇಲೂ ಜಿಎಸ್​​ಟಿ ಇರುತ್ತದೆ. ಸಾಮಾನ್ಯವಾಗಿ ಮೇಕಿಂಗ್ ಚಾರ್ಜಸ್ ಶೇ. 3ರಿಂದ ಆರಂಭವಾಗಿ ಶೇ. 25ರವರೆಗೂ ಇರಬಹುದು. ಆಭರಣದ ವಿನ್ಯಾಸ ಸರಳವಾಗಿದ್ದರೆ ಕಡಿಮೆ ಚಾರ್ಜಸ್ ಇರುತ್ತದೆ. ವಿನ್ಯಾಸ ಸಂಕೀರ್ಣವಾದಷ್ಟೂ ಮೇಕಿಂಗ್ ಚಾರ್ಜ್ ಅಧಿಕ ಆಗುತ್ತಿರುತ್ತದೆ.

ಇನ್ನು, ಚಿನ್ನವನ್ನು ಕರಗಿಸಿ ಅದನ್ನು ಆಭರಣ ರೂಪಕ್ಕೆ ತರುವಾಗ ಒಂದಷ್ಟು ಚಿನ್ನ ಪೋಲಾಗುತ್ತದೆ. ಇದನ್ನು ಭರಿಸಲು ಆಭರಣಕಾರರು ವೇಸ್ಟೇಜ್ ಚಾರ್ಜ್ ವಿಧಿಸುತ್ತಾರೆ. ಇದೂ ಕೂಡ ಶೇ. 5ರಿಂದ 7ರಷ್ಟು ಇರುತ್ತದೆ. ಒಂದು ಒಡವೆಗೆ ಶೇ. 40ರವರೆಗೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಬೀಳಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Sun, 27 April 25

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್