ಗಮನಿಸಿ, ನೀವು ಒಡವೆ ಇಟ್ಟರೆ ಶೇ. 90 ಅಲ್ಲ, ಶೇ. 75 ಸಾಲ ಸಿಗುವುದೂ ಕಷ್ಟವಾಗಬಹುದು
Reserve Bank of India gold loan regulations: ಗೋಲ್ಡ್ ಲೋನ್ ವಿಚಾರಲ್ಲಿ ಆರ್ಬಿಐ ತುಸು ನಿರ್ಬಂಧಗಳನ್ನು ಹೇರಲು ಯೋಜಿಸಿದೆ. ಗೋಲ್ಡ್ ಲೋನ್ನ ಎಲ್ಟಿವಿ ಶೇ. 75ರ ಮಿತಿಯೊಳಗೆ ಇರಬೇಕು ಎನ್ನುವ ನಿಯಮ ಹಾಕಬಹುದು. ಲೋನ್ ಅವಧಿಯಲ್ಲಿ ಯಾವ ಸಂದರ್ಭದಲ್ಲೂ ಬಾಕಿ ಇರುವ ಸಾಲವು ಶೇ. 75ರ ಎಲ್ಟಿವಿ ಮಿತಿ ದಾಟಿ ಹೋಗದಂತೆ ನೋಡಿಕೊಳ್ಳಬೇಕಾಗುತ್ತದೆ.

RBI Gold Loan Guidelines: ಆಪತ್ಕಾಲಕ್ಕೆ ಚಿನ್ನ ಬಹಳ ಉಪಯೋಗಕ್ಕೆ ಬರುತ್ತದೆ. ಯಾವುದೇ ಬ್ಯಾಂಕು ಮತ್ತು ಫೈನಾನ್ಸ್ ಕಂಪನಿಗೆ ಒಡವೆ ಒತ್ತೆ ಇಟ್ಟು ಸುಲಭವಾಗಿ ಸಾಲ ಪಡೆಯಬಹುದು. ಬ್ಯಾಂಕುಗಳಿಗೂ ಈ ಗೋಲ್ಡ್ ಲೋನ್ ರಿಸ್ರಹಿತ ಎನಿಸುತ್ತವೆ. ಆದರೆ, ಈಗ ಭಾರತೀಯ ರಿಸರ್ವ್ ಬ್ಯಾಂಕ್ ಗೋಲ್ಡ್ ಲೋನ್ (Gold Loan) ಮೇಲೆ ಕಣ್ಣಿಟ್ಟಿದೆ. ನಿನ್ನೆ ಆರ್ಬಿಐ ಎಂಪಿಸಿ ಸಭೆ ಬಳಿಕ ಗೋಲ್ಡ್ ಲೋನ್ ನಿಯಮಗಳನ್ನು ಪರಿಷ್ಕರಿಸುವುದಾಗಿ ಹೇಳಲಾಗಿದೆ. ಅದರಂತೆ ಡ್ರಾಫ್ಟ್ವೊಂದನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಮಾಡಲಾಗಿರುವ ಪ್ರಸ್ತಾವಗಳಲ್ಲಿ ಪ್ರಮುಖವಾದುದ ಎಲ್ಟಿವಿ, ಅಥವಾ ಲೋನ್ ಟು ವ್ಯಾಲ್ಯು. ಅಂದರೆ, ಚಿನ್ನದ ಮೌಲ್ಯಕ್ಕೆ ಅನುಗುಣವಾದ ಸಾಲ.
ಕೋವಿಡ್ ಸಂದರ್ಭದಲ್ಲಿ ಜನರಿಗೆ ಗೋಲ್ಡ್ ಲೋನ್ ಸುಲಭವಾಗಿ ಸಿಗಲು ಸಾಧ್ಯವಾಗಲಿ ಎಂದು ಎಲ್ಟಿವಿಯನ್ನು ಶೇ. 90ಕ್ಕೆ ಹೆಚ್ಚಿಸಲಾಗಿತ್ತು. ಅಂದರೆ, ಚಿನ್ನದ ಮೌಲ್ಯದ ಶೇ. 90ರಷ್ಟು ಹಣವನ್ನು ಬ್ಯಾಂಕುಗಳು ಸಾಲವಾಗಿ ಕೊಡಲು ಅವಕಾಶ ಕೊಡಲಾಗಿತ್ತು. ಈಗ ಎಲ್ಟಿವಿಯನ್ನು ಶೇ. 75ಕ್ಕೆ ಮಿತಿಗೊಳಿಸಲು ಪ್ರಸ್ತಾಪಿಸಲಾಗಿದೆ.
ಬಡ್ಡಿ ಕಟ್ಟದೇ ಬಾಕಿ ಉಳಿಯುವ ಹಣವೂ ಎಲ್ಟಿವಿ ವ್ಯಾಪ್ತಿಯಲ್ಲಿ…
ಗಮನಿಸಬೇಕಾದ ಸಂಗತಿ ಎಂದರೆ, ಗ್ರಾಹಕರು ಶೇ. 75ರಷ್ಟು ಎಲ್ಟಿವಿಯಲ್ಲಿ ಗೋಲ್ಡ್ ಲೋನ್ ಪಡೆದರೆಂದಿಟ್ಟುಕೊಳ್ಳಿ. ಒಂದು ವರ್ಷ ಅಥವಾ ಕೆಲ ತಿಂಗಳಾದರೂ ಯಾವುದೇ ಬಡ್ಡಿ ಕಟ್ಟದೇ ಹೋದರೆ ಆಗ ಇರುವ ಸಾಲ ಬಾಕಿಯು ಶೇ. 75ರ ಎಲ್ಟಿವಿ ಮಿತಿಯಲ್ಲೇ ಇರಬೇಕು ಎನ್ನುವ ನಿಯಮವನ್ನು ಆರ್ಬಿಐ ತರುತ್ತಿದೆ.
ಇದನ್ನೂ ಓದಿ: ಎಸ್ಜಿಬಿ ಹೂಡಿಕೆದಾರರಿಗೆ ಸರ್ಕಾರ ಕೊಡಬೇಕಾದ ಬಾಕಿ: 12,06,92,00,00,000 ರೂ
ಉದಾಹರಣೆಗೆ, ನೀವು 10 ಗ್ರಾಮ್ ಒಡವೆ ಒತ್ತೆ ಇಟ್ಟರೆ, ಅದರ ಒಂದು ಗ್ರಾಮ್ ಮೌಲ್ಯ 8,500 ರೂ ಇಂದಿಟ್ಟುಕೊಂಡರೆ, ನಿಮಗೆ 63,750 ರೂ ಸಾಲದ (ಶೇ. 75 ಎಲ್ಟಿವಿ) ಅವಕಾಶ ಇರುತ್ತದೆ. ನೀವು ಕೆಲ ಕಾಲ ಬಡ್ಡಿ ಕಟ್ಟದೇ, ಸುಮಾರು 10,000 ರೂ ಬಡ್ಡಿ ಬೆಳೆದು ನಿಮ್ಮ ಸಾಲ ಬಾಕಿ 73,000 ಆಯಿತು ಎಂದಿಟ್ಟುಕೊಳ್ಳಿ. ಅದು ಶೇ. 75ರ ಎಲ್ಟಿವಿ ವ್ಯಾಪ್ತಿಯೊಳಗೇ ಇರಬೇಕು. ಇಲ್ಲದಿದ್ದರೆ ಬ್ಯಾಂಕ್ ದಂಡ ಕಟ್ಟಬೇಕಾಗುತ್ತದೆ.
ಇಲ್ಲಿ ದಂಡ ಎಂದರೆ, ಒಟ್ಟು ಸಾಲದ ಹಣದಲ್ಲಿ ಶೇ. 1ರಷ್ಟನ್ನು ಬ್ಯಾಂಕ್ನವರು ಲೋನ್ಗೆ ಕವರ್ ಆಗಿ ಎತ್ತಿಡಬೇಕು. 30 ದಿನಗಳಿಗಿಂತ ಹೆಚ್ಚು ಅವಧಿ ಶೇ. 75ರ ಎಲ್ಟಿವಿ ಮಿತಿ ಹೆಚ್ಚು ಇದ್ದಾಗ ಈ ಕ್ರಮ ಇರುತ್ತದೆ. ಬ್ಯಾಂಕ್ನವರು ಗ್ರಾಹಕರಿಂದ ಆದಷ್ಟು ಬೇಗ ಬಡ್ಡಿಯನ್ನಾದರೂ ವಸೂಲಿ ಮಾಡಿ ಎಲ್ಟಿವಿಯನ್ನು ಶೇ. 75ರ ಮಿತಿಯೊಳಗೆ ತರಬೇಕಾಗುತ್ತದೆ.
ಬ್ಯಾಂಕಿಗಿಂತ ಎನ್ಬಿಎಫ್ಸಿಗಳಿಗೆ ಹೆಚ್ಚು ನಿರ್ಬಂಧ
ಎಲ್ಟಿವಿ ವಿಚಾರದಲ್ಲಿ ಆರ್ಬಿಐ ಎನ್ಬಿಎಫ್ಸಿಗಳ ಮೇಲೆ ತುಸು ಕಠಿಣವಾಗಿದೆ. ಎರಡು ರೀತಿಯ ಸಾಲಗಳಿರುತ್ತವೆ. ಕನ್ಸಂಪ್ಷನ್ ಲೋನ್ ಅಥವಾ ಅನುಭೋಗ ಸಾಲ. ಮತ್ತೊಂದು ಆದಾಯ ಸೃಷ್ಟಿಸುವ ಸಾಲ. ಕನ್ಸಂಪಕ್ಷನ್ ಲೋನ್ ಎಂಬುದು ಪರ್ಸನಲ್ ಲೋನ್, ವೆಹಿಕಲ್ ಲೋನ್, ಆಸ್ಪತ್ರೆ ಚಿಕಿತ್ಸೆ ಇತ್ಯಾದಿ ದೈನಂದಿನ ಖರ್ಚುವೆಚ್ಚಗಳಿಗೆ ಮಾಡಲಾಗುವ ಸಾಲವಾಗಿರುತ್ತದೆ. ಇನ್ಕಮ್ ಜನರೇಶನ್ ಲೋನ್ ಎಂದರೆ ಬ್ಯುಸಿನೆಸ್ಗಳಿಗೆ ಬಳಸಲಾಗುವ ಲೋನ್ ಆಗಿರುತ್ತದೆ.
ಇದನ್ನೂ ಓದಿ: ಗೋಲ್ಡ್ ಲೋನ್ಗೆ ಸಮಗ್ರ ಮಾರ್ಗಸೂಚಿ ಹೊರಡಿಸಲಿದೆ ಆರ್ಬಿಐ; ನಿಯಮ ಬಿಗಿಗೊಳ್ಳುತ್ತದಾ? ಗವರ್ನರ್ ಸ್ಪಷ್ಟನೆ ಇದು
ಕಮರ್ಷಿಯಲ್ ಬ್ಯಾಂಕುಗಳು ಇನ್ಕಮ್ ಜನರೇಶನ್ಗೆ ನೀವು ಒಡವೆ ಸಾಲಗಳಿಗೆ ಶೇ. 75ರ ಎಲ್ಟಿವಿ ಮಿತಿ ಇರುವುದಿಲ್ಲ. ಅದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಸಾಲವಾಗಿ ನೀಡಬಹುದು. ಆದರೆ, ಎನ್ಬಿಎಫ್ಸಿಗಳು ಕನ್ಷಂಪ್ಷನ್ ಸಾಲವಾಗಲೀ, ಇನ್ಕಮ್ ಜನರೇಶನ್ ಸಾಲವಾಗಲಿ ಶೇ. 75ರ ಎಲ್ಟಿವಿ ಮಿತಿಯನ್ನು ಪಾಲಿಸಬೇಕಾಗುತ್ತದೆ.
ಇದೇ ಕಾರಣಕ್ಕೆ ಎನ್ಬಿಎಫ್ಸಿಗಳ ಷೇರುಬೆಲೆ ಇಳಿಕೆ ಆಗುತ್ತಿರುವುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Thu, 10 April 25