AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sovereign Gold Bond: ಎಸ್​​ಜಿಬಿ ಹೂಡಿಕೆದಾರರಿಗೆ ಸರ್ಕಾರ ಕೊಡಬೇಕಾದ ಬಾಕಿ: 12,06,92,00,00,000 ರೂ

ಚಿನ್ನದ ಬೆಲೆಯ ಮೇಲೆ ಹೂಡಿಕೆ ಮಾಡಲಾಗುವ ಸಾವರೀನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಸರ್ಕಾರ ಇಲ್ಲಿಯವರೆಗೆ 7 ಟ್ರಾಂಚ್​ಗಳನ್ನು ರಿಡೀಮ್ ಮಾಡಿದೆ. ಇನ್ನೂ ಕೂಡ 60 ಟ್ರಾಂಚ್​​ಗಳು ಬಾಕಿ ಇವೆ. ಇದರಲ್ಲಿ 67 ಸಾವಿರ ಕೋಟಿ ರೂ ಹೂಡಿಕೆ ಇದ್ದು, ಇವತ್ತೇ ಎಲ್ಲವನ್ನೂ ರಿಡೀಮ್ ಮಾಡಿದರೆ ಸರ್ಕಾರ 1.2 ಲಕ್ಷ ಕೋಟಿ ರೂ ನೀಡಬೇಕಾಗುತ್ತದೆ.

Sovereign Gold Bond: ಎಸ್​​ಜಿಬಿ ಹೂಡಿಕೆದಾರರಿಗೆ ಸರ್ಕಾರ ಕೊಡಬೇಕಾದ ಬಾಕಿ: 12,06,92,00,00,000 ರೂ
ಸಾವರೀನ್ ಗೋಲ್ಡ್ ಬಾಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 03, 2025 | 3:23 PM

Share

ನವದೆಹಲಿ, ಏಪ್ರಿಲ್ 3: ಬಹಳ ಜನಪ್ರಿಯವಾಗಿರುವ ಮತ್ತು ಹೂಡಿಕೆದಾರರಿಗೆ ಬಹಳ ಹೈ ರಿಟರ್ನ್ ಕೊಡುವ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ (Sovereign Gold Bond scheme) ಅನ್ನು ಸರ್ಕಾರ ಬಹುತೇಕ ನಿಲ್ಲಿಸಿದಂತೆ ತೋರುತ್ತಿದೆ. ಚಿನ್ನದ ಬೆಲೆ ಶೇ. 12ಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಹೆಚ್ಚುತ್ತಿರುವುದರಿಂದ ಸರ್ಕಾರಕ್ಕೆ ಈ ಯೋಜನೆ ದೊಡ್ಡ ಹೊರೆಯಾಗಿರಬಹುದು. 2015ರಲ್ಲಿ ಆರಂಭವಾದ ಈ ಎಸ್​​ಜಿಬಿ ಸ್ಕೀಮ್​​ನಲ್ಲಿ ಇಲ್ಲಿಯವರೆಗೆ 67,322 ಕೋಟಿ ರೂ ಹೂಡಿಕೆ ಆಗಿದೆ. ಹೂಡಿಕೆದಾರರಿಗೆ ಸರ್ಕಾರ ಕೊಡಬೇಕಾದ ರಿಟರ್ನ್ ಬರೋಬ್ಬರಿ 1.2 ಲಕ್ಷ ಕೋಟಿ ರೂ ಎಂದು ಹೇಳಲಾಗುತ್ತಿದೆ.

ಸರ್ಕಾರವೆ ಖುದ್ದಾಗಿ ಸಂಸತ್ತಿಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದೆ. 2015ರಲ್ಲಿ ಆರಂಭವಾದ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​​ನಲ್ಲಿ ಇಲ್ಲಿಯವರೆಗೆ 67 ಟ್ರಾಂಚ್​​ಗಳು ಬಿಡುಗಡೆ ಆಗಿವೆ. ಒಂದು ಹಣಕಾಸು ವರ್ಷದಲ್ಲಿ ಮೂರ್ನಾಲ್ಕು ಬಾರಿ ಎಸ್​​ಜಿಬಿ ಟ್ರಾಂಚ್​​ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈವರೆಗೆ 7 ಟ್ರಾಂಚ್​​ಗಳ ಹೂಡಿಕೆಗಳಿಗೆ ಸರ್ಕಾರ ರಿಟರ್ನ್ ನೀಡಿದೆ. 8ನೇ ಟ್ರಾಂಚ್ ಅನ್ನೂ ಸರ್ಕಾರ ರಿಡೀಮ್ ಮಾಡುತ್ತಿದೆ. ಈಗ ಬಾಕಿ ಉಳಿದಿರುವ ಟ್ರಾಂಚ್​​ಗಳಲ್ಲಿ ಇರುವ ಮೂಲ ಹೂಡಿಕೆ 67,322 ಕೋಟಿ ರೂ. ಒಟ್ಟು 147 ಟನ್ ಚಿನ್ನದ ಮೇಲಿನ ಹೂಡಿಕೆಯಲ್ಲಿ 17 ಟನ್ ಚಿನ್ನಕ್ಕೆ ಸರ್ಕಾರ ರಿಟರ್ನ್ ಕೊಟ್ಟಿದೆ. ಇನ್ನುಳಿದಿರುವುದು 130 ಟನ್ ಚಿನ್ನದ ಮೇಲಿನ ಹೂಡಿಕೆ.

ಇದನ್ನೂ ಓದಿ: ಕಷ್ಟಕಾಲಕ್ಕೆ ಬೇಕು ಚಿನ್ನ; ಜಗತ್ತಿನ ಸೆಂಟ್ರಲ್ ಬ್ಯಾಂಕುಗಳಿಗೂ ನಮ್ಮಜ್ಜಿ ಬುದ್ದಿ..!

ಇದನ್ನೂ ಓದಿ
Image
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
Image
ಚಿನ್ನದ ಬೆಲೆ ಇಳಿಕೆ ಯಾವಾಗ?
Image
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?
Image
ಮುಂಬರುವ ದಿನಗಳಲ್ಲಿ ಚಿನ್ನಕ್ಕೆ ಪ್ರಾಶಸ್ತ್ಯ: ಸಿಇಎ

ಒಂದು ವೇಳೆ, ಇಷ್ಟೂ ಹೂಡಿಕೆಯಲ್ಲಿ ಈಗಲೇ ರಿಡೀಮ್ ಮಾಡುವುದಾದರೆ? ಚಿನ್ನದ ಈಗಿನ (ಏಪ್ರಿಲ್ 1) ಮಾರುಕಟ್ಟೆ ಬೆಲೆ 9,284 ರೂ ಎಂದಿಟ್ಟುಕೊಂಡರೆ, ಆಗ ಸರ್ಕಾರವು ಹೂಡಿಕೆದಾರರಿಗೆ ಕೊಡಬೇಕಾದ ಹಣ 12,06,92,00,00,000 ರೂ ಆಗುತ್ತದೆ. ಅಂದರೆ, 1.2 ಲಕ್ಷ ಕೋಟಿ ರೂ ಆಗುತ್ತದೆ.

ಏನಿದು ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್?

ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​​ನಲ್ಲಿ ಚಿನ್ನದ ಬೆಲೆಯ ಮೇಲೆ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ 1 ಗ್ರಾಮ್​​​ನಿಂದ ಹಿಡಿದು 4 ಕಿಲೋ ಚಿನ್ನದವರೆಗೂ ಹೂಡಿಕೆ ಸಾಧ್ಯ. ಹೂಡಿಕೆ ಮಾಡಿದ ಬಳಿಕ 8 ವರ್ಷಕ್ಕೆ ಅದು ಮೆಚ್ಯೂರ್ ಆಗುತ್ತದೆ. ಆಗ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟಿರುತ್ತದೋ ಅಷ್ಟು ನಿಮಗೆ ರಿಟರ್ನ್ ಸಿಗುತ್ತದೆ. ಜೊತೆಗೆ, ಹೂಡಿಕೆಯ ಮೇಲೆ ವರ್ಷಕ್ಕೆ ಶೇ. 2.5ರಷ್ಟು ಬಡ್ಡಿಯೂ ಸಿಗುತ್ತದೆ.

ಉದಾಹರಣೆಗೆ, ನೀವು ಇವತ್ತು 100 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಇವತ್ತಿನ ಬೆಲೆ (ಏಪ್ರಿಲ್ 3) 9,338 ರೂ ಇದೆ. 100 ಗ್ರಾಮ್ ಎಂದರೆ 9,33,800 ರೂ ಆಗುತ್ತದೆ. ನೀವು ಇಷ್ಟು ಮೊತ್ತವನ್ನು ಹೂಡಿಕೆ ಮಾಡುತ್ತೀರಿ. ಇದಕ್ಕೆ ವರ್ಷಕ್ಕೆ ಶೇ. 2.5, ಅಂದರೆ 23,345 ರೂ ಬಡ್ಡಿ ಹಣ ನಿಮಗೆ ಸಿಗುತ್ತಾ ಹೋಗುತ್ತದೆ.

ಇದನ್ನೂ ಓದಿ: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, 2 ಪ್ಲಾನ್ ನಿಲ್ಲಿಸಿದ ಸರ್ಕಾರ; ಏನಿದು ಚಿನ್ನ ನಗದೀಕರಣ ಯೋಜನೆ?

ಹಾಗೆಯೇ, ಎಂಟು ವರ್ಷದ ಬಳಿಕ (2033) ಚಿನ್ನದ ಬೆಲೆ ಗ್ರಾಮ್​​ಗೆ 20,000 ರೂ ಆಗಿ ಹೋಯಿತು ಎಂದಿಟ್ಟುಕೊಳ್ಳಿ. ಆಗ 100 ಗ್ರಾಮ್ ಚಿನ್ನದ ಮೌಲ್ಯ 15,00,000 ರೂ ಆಗುತ್ತದೆ. 20 ಲಕ್ಷ ರೂ ಇದ್ದ ನಿಮ್ಮ ಹೂಡಿಕೆ ಮೌಲ್ಯ 20 ಲಕ್ಷ ರೂ ಆಗಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ