AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ ತೃತೀಯಕ್ಕೆ ಕೌಂಟ್ ಡೌನ್ ಶುರು: ಮಾರುಕಟ್ಟೆಗೆ ಬಂತು ಅರ್ಧ ಗ್ರಾಂ ಚಿನ್ನದ ನಾಣ್ಯ

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ್ದು, ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಅರ್ಧ ಗ್ರಾಂ ಚಿನ್ನದ ನಾಣ್ಯಗಳನ್ನು ಪರಿಚಯಿಸಲಾಗಿದೆ. ಗ್ರಾಹಕರ ಆತಂಕವನ್ನು ಅರ್ಥಮಾಡಿಕೊಂಡ ಚಿನ್ನದ ವ್ಯಾಪಾರಿಗಳು ಈ ಹೊಸ ಐಡಿಯಾವನ್ನು ಮಾಡಿದ್ದಾರೆ. ಗ್ರಾಂ ಚಿನ್ನದ ಬೆಲೆ 10 ಸಾವಿರ ರೂ ಸಮೀಪಿಸುತ್ತಿದ್ದು, ಅರ್ಧ ಗ್ರಾಂ ನಾಣ್ಯಗಳು ಖರೀದಿಗೆ ಅನುಕೂಲವಾಗಲಿದೆ.

ಅಕ್ಷಯ ತೃತೀಯಕ್ಕೆ ಕೌಂಟ್ ಡೌನ್ ಶುರು: ಮಾರುಕಟ್ಟೆಗೆ ಬಂತು ಅರ್ಧ ಗ್ರಾಂ ಚಿನ್ನದ ನಾಣ್ಯ
ಅರ್ಧ ಗ್ರಾಂ ಚಿನ್ನದ ನಾಣ್ಯ
Kiran Surya
| Updated By: ಗಂಗಾಧರ​ ಬ. ಸಾಬೋಜಿ|

Updated on: Apr 26, 2025 | 11:35 AM

Share

ಬೆಂಗಳೂರು, ಏಪ್ರಿಲ್ 26: ಬಂಗಾರ ಅಂತ ಬಾಯಿ ತುಂಬಾ ಹೇಳುವುದಕ್ಕೂ ಭಯ ಪಡುವ ಕಾಲ ಬಂದಿದೆ. ಐದಾರು ಸಾವಿರ ರೂ ಸಿಗುತ್ತಿದ್ದ ಗ್ರಾಂ ಚಿನ್ನ, ಇದೀಗಾ 10 ಸಾವಿರ ರೂ ಸಮೀಪಿಸಿದೆ. ಅಕ್ಷಯ ತೃತೀಯ (Akshaya Tritiya) ದಿನದಂದು ಬಂಗಾರ ಖರೀದಿ ಮಾಡುತ್ತಿದ್ದ ಜನರು, ಈಗ ಹೇಗಪ್ಪಾ ಬಂಗಾರ ಖರೀದಿಸುವುದು ಅನ್ನೊ ಆತಂಕದಲ್ಲಿದ್ದಾರೆ. ಹೀಗಿರುವಾಗಲೇ ಚಿನ್ನದ ವ್ಯಾಪಾರಿಗಳು ಅದಕ್ಕಾಗಿ ಬೊಂಬಾಟ್ ಐಡಿಯಾ ಕಂಡು ಹಿಡಿದಿದ್ದಾರೆ. ಆ ಮೂಲಕ ಮಾರುಕಟ್ಟೆಗೆ ಅರ್ಧ ಗ್ರಾಂ ಚಿನ್ನದ ನಾಣ್ಯ (gold coin) ಲಗ್ಗೆ ಇಟ್ಟಿದೆ.

ಚಿನ್ನ, ಬಂಗಾರ ಅಂತೆಲ್ಲಾ ಕರೆಯೂಕ್ಕೂ ಕಷ್ಟ ಪಡುವ ಕಾಲ ಬಂದಿದೆ. ಬಂಗಾರ ಬೆಲೆಯಲ್ಲಿ ಇದೇ ಮೊದಲ ಬಾರಿಗೆ ಸರ್ವಕಾಲಿಕ ದಾಖಲೆ ಕಂಡಿದೆ. ಒಂದು ಗ್ರಾಂ ಚಿನ್ನ 10 ಸಾವಿರ ರೂ. ಸಮೀಪ ಬಂದಿದೆ. 10 ಗ್ರಾಂ ಬಂಗಾರ ಖರೀದಿಗೆ ಒಂದು ಲಕ್ಷದ 3 ಸಾವಿರ ರೂ ಕೊಡುವ ಸ್ಥಿತಿ ಬಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಳ ಆಗ್ತಾನೇ ಸಾಗ್ತಿದೆ. ಅಮೆರಿಕಾದ ಟ್ರಂಪ್ ಪ್ರತಿಸುಂಕ ಜಾರಿಮಾಡುವ ಘೋಷಣೆ ಮಾಡಿದ ಬಳಿಕ ಏಪ್ರಿಲ್ 4 ರಿಂದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅಲ್ಲೋಲ ಕಲ್ಲೋಲ ಆಗಿದೆ. ಚೀನಾ ದೇಶದಲ್ಲಿ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತಿದ್ದು, ಗೋಲ್ಡ್ ಬೇಡಿಕೆ ಹೆಚ್ಚಾಗಿದೆ. ಈ ಕಾರಣ ಚಿನ್ನ ದುಬಾರಿಯಾಗಿದ್ದು, ಇದೇ ಮೊದಲ ಬಾರಿಗೆ ಗ್ರಾಹಕರ ದೃಷ್ಟಿಯಿಂದ ಹೊಚ್ಚ ಹೊಸ ಕಾಯಿನ್ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: Akshaya Tritiya: ಚಿನ್ನ ದುಬಾರಿಯಾದರೂ ಅಕ್ಷಯ ತೃತೀಯಕ್ಕೆ ಭರ್ಜರಿ ಡಿಸ್ಕೌಂಟ್ ಆಫರ್ಸ್

ಇದನ್ನೂ ಓದಿ
Image
ಅಕ್ಷಯ ತೃತೀಯದಂದು Tanishqನ ವಿಶೇಷ ಕೊಡುಗೆಗಳು
Image
ಅಕ್ಷಯ ತೃತೀಯಕ್ಕೆ ಚಿನ್ನದ ಮೇಲೆ ಭರ್ಜರಿ ಆಫರ್ಸ್
Image
Gold Rates 25 April: ಶುಕ್ರವಾರದ ಚಿನ್ನ, ಬೆಳ್ಳಿ ಬೆಲೆ ಪಟ್ಟಿ
Image
Gold Rates 24 April: ಚಿನ್ನದ ಬೆಲೆ ಮತ್ತೆ ಇಳಿಕೆ

ಅಕ್ಷಯ ತೃತೀಯಕ್ಕೆ ದಿನಗಣೆನೆ ಶುರುವಾಗಿದೆ. ಇದೇ ಏಪ್ರಿಲ್ 30ರಂದು ಅಕ್ಷಯ ತೃತೀಯ ಇದ್ದು, ಗ್ರಾಹಕರು ಆತಂಕದಲ್ಲಿದ್ದಾರೆ. ಚಿನ್ನದ ಬೆಲೆ ಇಷ್ಟಾದರೆ ಏನು ಖರೀದಿ ಮಾಡೋದು ಅಂತ ಕಂಗಲಾಗಿದ್ದಾರೆ. ಆದರೆ ಗ್ರಾಹಕರ ಮನಸ್ಥಿತಿ ಅರ್ಥೈಸಿಕೊಂಡಿರುವ ಚಿನ್ನದ ಅಂಗಡಿ ಮಾಲೀಕರು, ಇದೇ ಮೊದಲ ಬಾರಿಗೆ ಅರ್ಧ ಗ್ರಾಂ ಚಿನ್ನದ ನಾಣ್ಯ ಬಿಡುಗಡೆಗೊಳಿಸಿದ್ದಾರೆ. ಅಕ್ಷಯ ತೃತೀಯದ ದಿನ ಕನಿಷ್ಠ ಅರ್ಧ ಗ್ರಾಂ ಚಿನ್ನ ಖರೀದಿಸಲಿ ಎಂದು ಈ ಐಡಿಯಾ ಮಾಡಲಾಗಿದೆ. ಇದರಿಂದ ಗ್ರಾಹಕರು ಖುಷಿಗೊಂಡಿದ್ದಾರೆ.

ಇದನ್ನೂ ಓದಿ: ಹಳತು ಕೊಡಿ, ಹೊಸತು ಪಡೆಯಿರಿ; ಈ ಅಕ್ಷಯ ತೃತೀಯದಲ್ಲಿ Tanishqನತ್ತ ಹೆಜ್ಜೆ ಹಾಕಿ ನವಜೀವನ ಆರಂಭಿಸಿ

ಒಟ್ಟಿನಲ್ಲಿ ಅಕ್ಷಯ ತೃತೀಯ ದಿನ ಚಿನ್ನ ಖರೀದಿಸುವ ಸಂಪ್ರದಾಯ ಇದೆ. ಈ ದಿನ ಚಿನ್ನ ಖರೀದಿಸಿದರೆ ಐಶ್ವರ್ಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆದರೆ ಬಂಗಾರದ ಬೆಲೆ ಗಗನಮುಖಿಯಾಗಿದ್ದು, ಇದೀಗ ಒಂದು ಗ್ರಾಂ ಕೊಳ್ಳುತ್ತಿದ್ದ ಜನ, ಅರ್ಧ ಗ್ರಾಂ ಖರೀದಿಗೆ ಮನಸ್ಸು ಮಾಡ್ತಿರೋದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.