Akshaya Tritiya: ಚಿನ್ನ ದುಬಾರಿಯಾದರೂ ಅಕ್ಷಯ ತೃತೀಯಕ್ಕೆ ಭರ್ಜರಿ ಡಿಸ್ಕೌಂಟ್ ಆಫರ್ಸ್
Akshaya Tritiya gold offers 2025: ಏಪ್ರಿಲ್ 30ರಂದು ಇರುವ ಅಕ್ಷಯ ತೃತೀಯ ದಿನಕ್ಕೆ ವಿವಿಧ ಒಡವೆ ಅಂಗಡಿಗಳು, ಡಿಜಿಟಲ್ ಪ್ಲಾಟ್ಫಾರ್ಮ್ಗಳು ಆಕರ್ಷಕ ಆಫರ್ಸ್ ನೀಡುತ್ತಿವೆ. ಪ್ರೈಸ್ ಲಾಕಿಂಗ್, ಬೆಸ್ಟ್ ಗೋಲ್ಡ್ ಪ್ರೊಟೆಕ್ಷನ್ ಮೂಲಕ ಅತ್ಯುತ್ತಮ ಬೆಲೆ ಆಫರ್ ಮಾಡಲಾಗಿದೆ. ಮೇಕಿಂಗ್ ಚಾರ್ಜಸ್ ಮೇಲೆ ಡಿಸ್ಕೌಂಟ್, ಗೋಲ್ಡ್ ಕಾಯಿನ್ ಕೊಡುಗೆ ಇತ್ಯಾದಿ ಮೂಲಕ ಗ್ರಾಹಕರನ್ನು ಆಕರ್ಷಿಸಲಾಗುತ್ತಿದೆ. ಡಿಜಿಟಲ್ ಪ್ಲಾಟ್ಫಾರ್ಮ್ಗಳು ಕ್ಯಾಷ್ ಬ್ಯಾಕ್ ಆಫರ್ ಮಾಡುತ್ತಿವೆ.

ನವದೆಹಲಿ, ಏಪ್ರಿಲ್ 25: ಇದೇ 30ನೇ ತಾರೀಕಿನಂದು ಇರುವ ಅಕ್ಷಯ ತೃತೀಯ ದಿನಕ್ಕೆ (Akshaya Tritiya 2025) ವಿವಿಧ ಆಭರಣ ಮಳಿಗೆಗಳು ಚಿನ್ನಾಭರಣಗಳ (Gold jewelleries) ಖರೀದಿಗೆ ವಿವಿಧ ಆಫರ್ಗಳನ್ನು ಮುಂದಿಟ್ಟು ಗ್ರಾಹಕರನ್ನು ಆಕರ್ಷಿಸಲು ಯತ್ನಿಸುತ್ತಿವೆ. ಚಿನ್ನದ ಬೆಲೆ ಈ ವರ್ಷ ಸಿಕ್ಕಾಪಟ್ಟೆ ಏರಿರುವ ಹಿನ್ನೆಲೆಯಲ್ಲಿ ಒಡವೆ ತೆಗೆದುಕೊಳ್ಳುವುದೋ ಬೇಡವೋ ಎಂದು ಸಂದಿಗ್ಥತೆಯಲ್ಲಿರುವ ಜನರನ್ನು ಸೆಳೆಯಲು ಆಕರ್ಷಕ ಡಿಸ್ಕೌಂಟ್ಗಳನ್ನು ಆಫರ್ ಮಾಡಲಾಗುತ್ತಿದೆ. ಒಡವೆ ಅಂಗಡಿಗಳು ಮಾತ್ರವಲ್ಲ, ಫೋನ್ಪೆ ಇತ್ಯಾದಿ ಪ್ಲಾಟ್ಫಾರ್ಮ್ಗಳಲ್ಲಿ ಡಿಜಿಟಲ್ ಗೋಲ್ಡ್ ಖರೀದಿಗೆ ವಿವಿಧ ರೀತಿಯ ಆಫರ್ ಕೊಡಲಾಗುತ್ತಿದೆ.
ಆಭರಣ ಅಂಗಡಿಗಳಿಂದ ಅಕ್ಷಯ ತೃತೀಯಕ್ಕೆ ಏನೇನು ಆಫರ್?
ಪ್ರೈಸ್ ಲಾಕಿಂಗ್ ಆಯ್ಕೆ, ಎಕ್ಸ್ಚೇಂಜ್ ಸ್ಕೀಮ್, ಮೇಕಿಂಗ್ ಚಾರ್ಜಸ್ ಮೇಲೆ ಡಿಸ್ಕೌಂಟ್, ಗೋಲ್ಡ್ ಕಾಯಿನ್ ಗಿಫ್ಟ್ ಇತ್ಯಾದಿ ಆಫರ್ಗಳನ್ನು ಅಕ್ಷಯ ತೃತೀಯಕ್ಕೆ ಕೊಡಲಾಗುತ್ತಿದೆ. ಚಿನ್ನದ ಮೇಲೆ ನೇರವಾಗಿ ಡಿಸ್ಕೌಂಟ್ ಇಲ್ಲದಿದ್ದರೂ ಮೇಕಿಂಗ್ ಚಾರ್ಜಸ್ ಅನ್ನು ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ಹೊರೆ ತಗ್ಗಿಸುವ ಭರವಸೆ ನೀಡಲಾಗುತ್ತಿದೆ.
ಹಳೆಯ ಒಡವೆಗಳಿಗೆ ಉತ್ತಮ ಎಕ್ಸ್ಚೇಂಜ್…
ಬಹಳಷ್ಟು ಜನರ ಬಳಿ ನಿರುಪಯುಕ್ತವಾಗಿರುವ ಹಳೆಯ ಒಡವೆಗಳಿವೆ. ತಾನಿಷ್ಕ್ ಜ್ಯುವೆಲರ್ಸ್ ಮೊದಲಾದ ಒಡವೆ ಮಾರಾಟಗಾರರು ಹಳೆಯ ಚಿನ್ನವನ್ನು ಪೂರ್ಣ ಮೌಲ್ಯಕ್ಕೆ ಪಡೆದು, ಅದಕ್ಕೆ ಬದಲಾಗಿ ಹೊಸ ಒಡವೆಗಳನ್ನು ನೀಡುತ್ತಿವೆ. ಇದರ ಜೊತೆಗೆ, ಗೋಲ್ಡ್ ರೇಟ್ ಪ್ರೊಟೆಕ್ಷನ್ ಸ್ಕೀಮ್ ಆಫರ್ ಮಾಡಿದೆ.
ಇದನ್ನೂ ಓದಿ: ಭಾರತ, ಸೌತ್ ಕೊರಿಯಾಗಿಂತಲೂ ಶ್ರೀಮಂತವಾಗಿದ್ದ ಪಾಕಿಸ್ತಾನ ಎಡವಿದ್ದು ಎಲ್ಲಿ? ಇಲ್ಲಿವೆ ರೋಚಕ ಅಂಶಗಳು
ಕಲ್ಯಾಣ್ ಜ್ಯುವೆಲರ್ಸ್ ಮೊದಲಾದ ಸಂಸ್ಥೆಗಳು ಮೇಕಿಂಗ್ ಚಾರ್ಜಸ್ ಅನ್ನು ಕಡಿಮೆ ಮಾಡುತ್ತಿವೆ. ಮೇಕಿಂಗ್ ಚಾರ್ಜ್ಗಳಲ್ಲಿ ಶೇ. 50ರವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ.
ಅಕ್ಷಯ ತೃತೀಯಕ್ಕೆ ಗೋಲ್ಡ್ ಕಾಯಿನ್ ಗಿಫ್ಟ್
ಝೆನ್ ಡೈಮಂಡ್ ಹಾಗೂ ಇತರ ಕೆಲ ಒಡವೆ ಅಂಗಡಿಗಳು ನಿರ್ದಿಷ್ಟ ಮೊತ್ತದ ಆಭರಣ ಖರೀದಿಸಿದರೆ ನಿರ್ದಿಷ್ಟ ಗೋಲ್ಡ್ ಕಾಯಿನ್ ಅನ್ನು ಗಿಫ್ಟ್ ಆಗಿ ನೀಡುತ್ತಿವೆ. ಝೆನ್ ಡೈಮಂಡ್ ಸಂಸ್ಥೆ 50,000 ರೂಗಿಂತ ಹೆಚ್ಚು ಮೊತ್ತದ ಖರೀದಿ ಮಾಡಿದರೆ ಒಂದು ಗ್ರಾಮ್ ಗೋಲ್ಡ್ ಕಾಯಿನ್ ನೀಡುತ್ತಿದೆ.
ಅಕ್ಷಯ ತೃತೀಯಕ್ಕೆ ಡಿಜಿಟಲ್ ಗೋಲ್ಡ್ ಖರೀದಿಯಲ್ಲಿ ಕೊಡುಗೆಗಳು
ಫೋನ್ ಪೇ, ಪೇಟಿಎಂ, ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಇತ್ಯಾದಿ ಡಿಜಿಟಲ್ ಪ್ಲಾಟ್ಫಾರ್ಮ್ಗಳೂ ಕೂಡ ಅಕ್ಷಯ ತೃತೀಯಕ್ಕೆ ಚಿನ್ನದ ಖರೀದಿಗೆ ಆಕರ್ಷಕ ಆಫರ್ ನೀಡುತ್ತಿವೆ. ಎರಡು ಸಾವಿರ ರೂಗಿಂತ ಹೆಚ್ಚು ಮೊತ್ತದ ಚಿನ್ನವನ್ನು ಖರೀದಿಸಿದರೆ ಶೇ. 1 ಕ್ಯಾಷ್ಬ್ಯಾಕ್ ನೀಡಲಾಗುತ್ತಿದೆ. ಈ ಆಫರ್ ಏಪ್ರಿಲ್ 30ರವರೆಗೂ ಮಾತ್ರವೇ ಇರುವುದು.
ಇದನ್ನೂ ಓದಿ: 10 ಗ್ರಾಂ ಚಿನ್ನದ ಬೆಲೆ ಕೇವಲ 113 ರೂ., 63 ವರ್ಷಗಳಷ್ಟು ಹಳೆಯದಾದ ಬಿಲ್ ವೈರಲ್
ಒಬ್ಬ ವ್ಯಕ್ತಿ ಏಪ್ರಿಲ್ 30ರೊಳಗೆ ಮಾಡುವ ಒಂದು ಖರೀದಿಗೆ ಮಾತ್ರ ಈ ಕ್ಯಾಷ್ಬ್ಯಾಕ್ ಸಿಗುತ್ತದೆ. ನೀವು 50,000 ರೂ ಬೆಲೆಯ ಚಿನ್ನವನ್ನು ಖರೀದಿಸಿದರೆ 500 ರೂ ಕ್ಯಾಷ್ಬ್ಯಾಕ್ ಸಿಗುತ್ತದೆ.
ಮತ್ತೊಂದು ಸಂಗತಿ ಎಂದರೆ, ನೀವು ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಎಸ್ಐಪಿ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದರೆ ಈ ಆಫರ್ ಸಿಗುವುದಿಲ್ಲ. ಎಸ್ಐಪಿ ಹೊರತುಪಡಿಸಿ ನೀವು ಮಾಡುವ ಲಂಪ್ಸಮ್ ಹೂಡಿಕೆಗೆ ಮಾತ್ರ ಕ್ಯಾಷ್ಬ್ಯಾಕ್ ಬರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Fri, 25 April 25








