AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ ತೃತೀಯಕ್ಕೆ ಜಿಯೋ ಗೋಲ್ಡ್ ಧಮಾಕ; 21 ಸಾವಿರ ರೂವರೆಗೆ ಉಚಿತ ಚಿನ್ನದ ಕೊಡುಗೆ; ಮೇ 5ರವರೆಗೆ ಆಫರ್

Akshaya Tritiya Jio Gold 24K Days campaign: ಜಿಯೋ ಪ್ಲಾಟ್​​ಫಾರ್ಮ್​​ಗಳಲ್ಲಿ ಅಕ್ಷಯ ತೃತೀಯಕ್ಕೆ ಉತ್ತಮ ಗೋಲ್ಡ್ ಆಫರ್ ನೀಡಲಾಗುತ್ತಿದೆ. ಜಿಯೋ ಫೈನಾನ್ಸ್ ಮತ್ತು ಮೈ ಜಿಯೋ ಆ್ಯಪ್​​ಗಳಲ್ಲಿ ಡಿಜಿಟಲ್ ಗೋಲ್ಡ್ ಖರೀದಿಸಿದರೆ ಶೇ. 2ರಷ್ಟು ಉಚಿತ ಚಿನ್ನ ಪಡೆಯಲು ಅವಕಾಶ ಇದೆ. 1,000 ರೂನಿಂದ 9,999 ರೂವರೆಗಿನ ಚಿನ್ನದ ಖರೀದಿಗೆ ಶೇ. 1 ಉಚಿತ ಚಿನ್ನ ಪಡೆಯಬಹುದು. 10,000 ರೂ ಮೇಲ್ಪಟ್ಟ ಮೌಲ್ಯದ ಚಿನ್ನದ ಖರೀದಿಗೆ ಶೇ. 2ರಷ್ಟು ಉಚಿತ ಚಿನ್ನ ಪಡೆಯಬಹುದು. ಈ ಆಫರ್ ಮೇ 5ರವರೆಗೆ ಮಾತ್ರ ಇರುತ್ತದೆ.

ಅಕ್ಷಯ ತೃತೀಯಕ್ಕೆ ಜಿಯೋ ಗೋಲ್ಡ್ ಧಮಾಕ; 21 ಸಾವಿರ ರೂವರೆಗೆ ಉಚಿತ ಚಿನ್ನದ ಕೊಡುಗೆ; ಮೇ 5ರವರೆಗೆ ಆಫರ್
ಡಿಜಿಟಲ್ ಗೋಲ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 29, 2025 | 12:01 PM

Share

ಮುಂಬೈ, ಏಪ್ರಿಲ್ 29: ಇದೇ ಏಪ್ರಿಲ್ 30ನೇ ತಾರೀಕಿನಂದು ಅಕ್ಷಯ ತೃತೀಯ (Akshaya Tritiya) ಇದೆ. ವಿವಿಧ ಆಭರಣ ಮಾರಾಟಗಾರರು ನಾನಾ ರೀತಿಯಲ್ಲಿ ಡಿಸ್ಕೌಂಟ್, ಉಚಿತ ಚಿನ್ನ ಇತ್ಯಾದಿ ಭರ್ಜರಿ ಆಫರ್ ಕೊಡುತ್ತಿವೆ. ಡಿಜಿಟಲ್ ಪ್ಲಾಟ್​​ಫಾರ್ಮ್​​ಗಳೂ ಕೂಡ ಆಫರ್ ಕೊಡೋದ್ರಲ್ಲಿ ಹಿಂದೆ ಬಿದ್ದಿಲ್ಲ. ರಿಲಾಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಉಚಿತ ಚಿನ್ನ ಆಫರ್ ಮಾಡಿದೆ. ಜಿಯೋ ಗೋಲ್ಡ್ 24K Days ಸ್ಕೀಮ್​ನ (JIO Gold 24K Days) ಈ ಆಫರ್ ಇವತ್ತು ಆರಂಭವಾಗಿದ್ದು, ಮೇ 5ರವರೆಗೂ ಆಫರ್ ಇರಲಿದೆ. ಇದರಲ್ಲಿ ಶೇ. 2ರವರೆಗೆ ಚಿನ್ನ ಪಡೆಯಲು ಅವಕಾಶ ಇದೆ. ಗರಿಷ್ಠ 21,000 ರೂ ಮೌಲ್ಯದ ಚಿನ್ನವನ್ನು ಉಚಿತವಾಗಿ ಪಡೆಯಬಹುದು.

ಜಿಯೋಫೈನಾನ್ಸ್ ಮತ್ತು ಮೈ ಜಿಯೋ ಆ್ಯಪ್​​ಗಳಲ್ಲಿ ಆಫರ್ ಲಭ್ಯ

ಜಿಯೋ ಗೋಲ್ಡ್ 24K ಡೇಸ್ ಯೋಜನೆಯಲ್ಲಿ ಪಾಲ್ಗೊಳ್ಳಬೇಕೆಂದರೆ ಜಿಯೋಫೈನಾನ್ಸ್ ಅಥವಾ ಮೈಜಿಯೋ ಆ್ಯಪ್ ಹೊಂದಿರಬೇಕು. ಇವೆರಡು ಆ್ಯಪ್​​ಗಳಲ್ಲಿ ಒಂದನ್ನು ಡೌನ್​ಲೋಡ್ ಮಾಡಿಕೊಂಡು ನೊಂದಾಯಿಸಿ ಈ ಸ್ಕೀಮ್​​ನಲ್ಲಿ ಭಾಗವಹಿಸಬಹುದು.

ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸುವುದು ಬಹಳ ಹಿಂದಿನಿಂದಲೂ ನಡೆದುಬಂದ ಸಂಪ್ರದಾಯವಾಗಿದ್ದು, ಇದು ಶಾಶ್ವತ ಸಮೃದ್ಧಿ ಮತ್ತು ಸಂಪತ್ತನ್ನು ಸಂಕೇತಿಸುತ್ತದೆ. ಈ ಸಂದರ್ಭವನ್ನು ಇನ್ನಷ್ಟು ವಿಶೇಷ ಆಗಿಸುವುದಕ್ಕೆ ಗ್ರಾಹಕರು ಜಿಯೋ ಗೋಲ್ಡ್ 24K Days ನಲ್ಲಿ ಡಿಜಿಟಲ್ ಚಿನ್ನವನ್ನು ಖರೀದಿಸಬಹುದು ಮತ್ತು ಹೆಚ್ಚುವರಿಯಾಗಿ ಉಚಿತ ಚಿನ್ನವನ್ನೂ ಪಡೆಯಬಹುದು.

ಇದನ್ನೂ ಓದಿ
Image
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ
Image
ಅಕ್ಷಯ ತೃತೀಯಕ್ಕೆ ಚಿನ್ನದ ಮೇಲೆ ಭರ್ಜರಿ ಆಫರ್ಸ್
Image
ಅಕ್ಷಯ ತೃತೀಯಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ಹೊರ ಹಾಕಿ
Image
ಚಿನ್ನದ ಬೆಲೆ ಏರುತ್ತಿರೋದ್ಯಾಕೆ? ಮತ್ತೆ ಇಳಿಯುತ್ತಾ?

ಇದನ್ನೂ ಓದಿ: 24 ಕ್ಯಾರಟ್ ಚಿನ್ನಗಳಲ್ಲೇ ಬೆಲೆಗಳಲ್ಲಿ ಹೇಗೆ ವ್ಯತ್ಯಾಸ? ಜಿಎಸ್​​ಟಿ ಸೇರಿ ವಿವಿಧ ಹೆಚ್ಚುವರಿ ಬೆಲೆ ಬಗ್ಗೆ ತಿಳಿದಿರಿ

ಆ್ಯಪ್​​ನಲ್ಲಿ ರೂ. 1,000 ರಿಂದ ರೂ. 9,999 ಮೌಲ್ಯದ ಡಿಜಿಟಲ್ ಚಿನ್ನವನ್ನು ಖರೀದಿಸುವ ಗ್ರಾಹಕರು JIOGOLD1 ಎಂಬ ಆಫರ್ ಕೋಡ್ ಬಳಸಿ ಶೇಕಡಾ 1ರಷ್ಟು ಉಚಿತ ಚಿನ್ನ ಪಡೆಯಬಹುದು.

10,000 ರೂಪಾಯಿಗಿಂತ ಹೆಚ್ಚಿನ ಖರೀದಿಗಳಿಗೆ ಗ್ರಾಹಕರು ಚೆಕ್ಔಟ್ ಸಮಯದಲ್ಲಿ ಪ್ರೋಮೋ ಕೋಡ್ JIOGOLDAT100 ಅನ್ನು ಬಳಸಿಕೊಂಡು ಶೇಕಡಾ 2ರಷ್ಟು ಉಚಿತ ಚಿನ್ನ ಪಡೆಯಬಹುದು.

21,000 ರೂ ಉಚಿತ ಚಿನ್ನ ಪಡೆಯಿರಿ…

ಜಿಯೋದ ಈ ಆ್ಯಪ್​​​ಗಳಲ್ಲಿ ಚಿನ್ನದ ಖರೀದಿಯನ್ನು 10 ರೂನಿಂದ ಆರಂಭಿಸಬಹುದು. ಆದರೆ, ಏಪ್ರಿಲ್ 29ರಿಂದ ಮೇ 5ರವರೆಗೆ ಉಚಿತ ಚಿನ್ನದ ಕೊಡುಗೆ ಪಡೆಯಬೇಕಾದರೆ ಕನಿಷ್ಠ ಖರೀದಿ 1,000 ರೂ ಇರಬೇಕು. ಈ ಸ್ಕೀಮ್ ಅಡಿಯಲ್ಲಿ ಒಬ್ಬ ಗ್ರಾಹಕರು 10 ಬಾರಿ ಮಾತ್ರ ಖರೀದಿ ಮಾಡಬಹುದು. ಆದರೆ, ಗರಿಷ್ಠ ಕೊಡುಗೆ 21,000 ರೂಗೆ ಸೀಮಿತವಾಗಿರುತ್ತದೆ.

ನೀವು ಜಿಯೋಫೈನಾನ್ಸ್ ಅಥವಾ ಮೈ ಜಿಯೋ ಆ್ಯಪ್​​​ಗಳಿಗೆ ಹೋಗಿ ಅಲ್ಲಿ ಕೆವೈಸಿ ದಾಖಲೆ (ಪ್ಯಾನ್) ಅಪ್​ಡೇಟ್ ಮಾಡಿ ನೊಂದಾಯಿಸಿರಬೇಕು. ಆಗಷ್ಟೇ ಸ್ಕೀಮ್ ಅನ್ನು ಪಡೆಯಬಹುದು. ನೀವು ಆ ಆ್ಯಪ್​​ಗಳಲ್ಲಿ ಡಿಜಿಟಲ್ ಗೋಲ್ಡ್ ಖರೀದಿಸಿ 72 ಗಂಟೆಯೊಳಗೆ ಹೆಚ್ಚುವರಿ ಚಿನ್ನ ಸಂದಾಯವಾಗುತ್ತದೆ.

ಇದನ್ನೂ ಓದಿ: ಚಿನ್ನ ದುಬಾರಿಯಾದರೂ ಅಕ್ಷಯ ತೃತೀಯಕ್ಕೆ ಭರ್ಜರಿ ಡಿಸ್ಕೌಂಟ್ ಆಫರ್ಸ್

ಫೋನ್​​ಪೇನಲ್ಲಿ 500 ರೂವರೆಗೆ ಕ್ಯಾಷ್​​ಬ್ಯಾಕ್

ಫೋನ್ ಪೆ ಆ್ಯಪ್​​ನಲ್ಲಿ ನೀವು ಡಿಜಿಟಲ್ ಗೋಲ್ಡ್ ಖರೀದಿಸಿದರೆ 500 ರೂವರೆಗೆ ಕ್ಯಾಷ್​​ಬ್ಯಾಕ್ ಪಡೆಯಲು ಅವಕಾಶ ಇದೆ. ಈ ಆಫರ್ ಇವತ್ತೇ (ಏಪ್ರಿಲ್ 29) ಮುಗಿಯುತ್ತಿದೆ. ಕನಿಷ್ಠ 1,500 ರೂ ಮೌಲ್ಯದ ಚಿನ್ನ ಖರೀದಿಸಿದರೆ ಮಾತ್ರ ಈ ಕ್ಯಾಷ್​​ಬ್ಯಾಕ್ ಆಫರ್ ಚಾಲೂ ಆಗುತ್ತದೆ.

ಡಿಜಿಟಲ್ ಗೋಲ್ಡ್ ನಿಮಗೆ ಉತ್ತಮ ಹೂಡಿಕೆ ಆಯ್ಕೆ

ನೀವು ಚಿನ್ನದ ಮೇಲೆ ಹೂಡಿಕೆ ಮಾಡಲು ಡಿಜಿಟಲ್ ಗೋಲ್ಡ್ ಒಳ್ಳೆಯ ಮಾಧ್ಯಮವಾಗಿದೆ. ಹೂಡಿಕೆ ಬಹಳ ಸುಲಭ ಹಾಗು ಸರಳ. ಕನಿಷ್ಠ ಹೂಡಿಕೆ ಅವಧಿ 3 ವರ್ಷವಾದರೂ ಇರಲಿ. ಖರೀದಿಸುವಾಗ ಶೇ. 3 ಜಿಎಸ್​​ಟಿ, ಮತ್ತು ಮಾರುವಾಗ ಶೇ. 3ರಷ್ಟು ಜಿಎಸ್​ಟಿ, ಹೀಗೆ ಶೇ. 6ರಷ್ಟು ಹಣ ಕಡಿತವಾಗುತ್ತದೆ. ಹೀಗಾಗಿ, ಹೆಚ್ಚು ಅವಧಿಯವರೆಗೆ ಹೂಡಿಕೆ ಹೊಂದಿರುವುದು ಉತ್ತಮ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!