AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ ತೃತೀಯದಂದು ಚಿನ್ನವೇ ಖರೀದಿಸಬೇಕೆಂದಿಲ್ಲ, ಈ ವಸ್ತು ಖರೀದಿಸಿದರೂ ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಬಹುದು

ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಶುಭ ಎಂದು ನಂಬಲಾಗಿದ್ದರೂ, ಬೆಳ್ಳಿ, ಪ್ಲಾಟಿನಂ, ರತ್ನಗಳು (ಹವಳ, ಪಚ್ಚೆ, ನೀಲಮಣಿ), ತಾಮ್ರ/ಹಿತ್ತಾಳೆ ಪಾತ್ರೆಗಳು, ಬಾರ್ಲಿ, ಹಳದಿ ಸಾಸಿವೆ, ದಕ್ಷಿಣಾವರ್ತಿ ಶಂಖ, ಶ್ರೀಯಂತ್ರ, ಕೊತ್ತಂಬರಿ ಬೀಜಗಳು ಮುಂತಾದ ವಸ್ತುಗಳನ್ನು ಖರೀದಿಸುವುದು ಸಹ ಶುಭಕರ. ಈ ವಸ್ತುಗಳು ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತವೆ ಎಂಬ ನಂಬಿಕೆ ಇದೆ.

ಅಕ್ಷಯ ತೃತೀಯದಂದು ಚಿನ್ನವೇ ಖರೀದಿಸಬೇಕೆಂದಿಲ್ಲ, ಈ ವಸ್ತು ಖರೀದಿಸಿದರೂ ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಬಹುದು
Akshaya Tritiya
ಅಕ್ಷತಾ ವರ್ಕಾಡಿ
|

Updated on: Apr 17, 2025 | 8:15 AM

Share

ಅಕ್ಷಯ ತೃತೀಯದಂದು ವಿಷ್ಣುವಿನ ಆರನೇ ಅವತಾರವೆಂದು ಪರಿಗಣಿಸಲಾದ ಭಗವಾನ್ ಪರಶುರಾಮ ಜನಿಸಿದನೆಂದು ಧಾರ್ಮಿಕ ನಂಬಿಕೆ ಇದೆ. ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಈ ದಿನ ಚಿನ್ನ ಖರೀದಿಸುವುದರಿಂದ ಲಕ್ಷ್ಮಿ ದೇವಿಯು ಸಂತೋಷಪಡುತ್ತಾಳೆ ಮತ್ತು ಅವಳು ಮನೆಯಲ್ಲಿ ಶಾಶ್ವತವಾಗಿ ವಾಸಿಸುತ್ತಾಳೆ ಎಂದು ನಂಬಲಾಗಿದೆ. ಆದರೆ ನೀವು ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಚಿನ್ನವನ್ನು ಹೊರತುಪಡಿಸಿ ಬೇರೆ ವಸ್ತುಗಳನ್ನು ಖರೀದಿಸಿ ಮನೆಗೆ ತರಬಹುದು. ಅವು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಅಕ್ಷಯ ತೃತೀಯದಂದು ಚಿನ್ನದ ಬದಲು ಏನು ಖರೀದಿಸಬಹುದು?

ಅಕ್ಷಯ ತೃತೀಯದಂದು ನೀವು ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಅಥವಾ ಚಿನ್ನ ಬೇಡದಿದ್ದರೆ ಈ ದಿನದಂದು ಬೆಳ್ಳಿ, ಪ್ಲಾಟಿನಂ, ಹವಳ, ಪಚ್ಚೆ, ನೀಲಮಣಿ ಅಥವಾ ತಾಮ್ರ ಅಥವಾ ಹಿತ್ತಾಳೆ ಪಾತ್ರೆಗಳು, ಬಾರ್ಲಿ, ಹಳದಿ ಸಾಸಿವೆ, ದಕ್ಷಿಣವರ್ತಿ ಶಂಖ, ಶ್ರೀಯಂತ್ರ ಅಥವಾ ಕೊತ್ತಂಬರಿ ಬೀಜಗಳಂತಹ ಇತರ ಶುಭ ವಸ್ತುಗಳನ್ನು ಖರೀದಿಸಬಹುದು.

ಬೆಳ್ಳಿ, ಪ್ಲಾಟಿನಂ:

ಬೆಳ್ಳಿಯನ್ನು ಚಿನ್ನದಂತೆಯೇ ಶುಭವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಅಕ್ಷಯ ತೃತೀಯದಂದು ಬೆಳ್ಳಿ ಆಭರಣಗಳು ಅಥವಾ ಪಾತ್ರೆಗಳನ್ನು ಖರೀದಿಸುವುದು ಶುಭವಾಗಬಹುದು. ಇದಲ್ಲದೇ ಪ್ಲಾಟಿನಂ ಒಂದು ಅಮೂಲ್ಯ ಲೋಹವಾಗಿದ್ದು, ಇದನ್ನು ಅಕ್ಷಯ ತೃತೀಯದಂದು ಖರೀದಿಸಬಹುದು. ಇದರಿಂದ ನಮಗೆ ಸಂಪೂರ್ಣ ಪ್ರಯೋಜನವೂ ಸಿಗುತ್ತದೆ.

ಹವಳ, ಪಚ್ಚೆ, ನೀಲಮಣಿ:

ಜ್ಯೋತಿಷ್ಯದ ಪ್ರಕಾರ, ಈ ರತ್ನಗಳನ್ನು ಅಕ್ಷಯ ತೃತೀಯ ದಿನದಂದು ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ನೀವು ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದರೆ, ನೀವು ತಾಮ್ರ ಅಥವಾ ಹಿತ್ತಾಳೆಯ ಪಾತ್ರೆಗಳನ್ನು ಖರೀದಿಸಬಹುದು.

ಇದನ್ನೂ ಓದಿ: ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ಚಿನ್ನದ ಲಾಕೆಟ್ ವಿತರಣೆ; ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?

ಬಾರ್ಲಿ, ಹಳದಿ ಸಾಸಿವೆ:

ಅಕ್ಷಯ ತೃತೀಯದಂದು ಬಾರ್ಲಿಯನ್ನು ಖರೀದಿಸುವುದು ಸಹ ಶುಭವೆಂದು ಪರಿಗಣಿಸಲಾಗಿದೆ. ಇದಲ್ಲದೇ ಅಕ್ಷಯ ತೃತೀಯದಂದು ಹಳದಿ ಸಾಸಿವೆ ಖರೀದಿಸುವುದು ಸಹ ಶುಭವೆಂದು ಪರಿಗಣಿಸಲಾಗಿದೆ. ಜೊತೆಗೆ ಈ ದಿನ ಮನೆಗೆ ಕೊತ್ತಂಬರಿ ಬೀಜಗಳನ್ನು ತರುವುದರಿಂದ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ.

ದಕ್ಷಿಣಾವರ್ತಿ ಶಂಖ,ಮಣ್ಣಿನ ಮಡಕೆ:

ಈ ದಿನ ದಕ್ಷಿಣಾವರ್ತಿ ಶಂಖ ಮತ್ತು ಶ್ರೀಯಂತ್ರವನ್ನು ಮನೆಗೆ ತಂದರೆ ಶುಭ. ಇದಲ್ಲದೇ ಅಕ್ಷಯ ತೃತೀಯ ದಿನದಂದು ನೀವು ಮಣ್ಣಿನ ಮಡಕೆಯನ್ನು ಖರೀದಿಸಬಹುದು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ