AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshaya Tritiya 2025: ಅಕ್ಷಯ ತೃತೀಯದಂದು ಏನು ಖರೀದಿಸಬೇಕು ಮತ್ತು ಏನು ಖರೀದಿಸಬಾರದು?

ಅಕ್ಷಯ ತೃತೀಯ ಚಿನ್ನ ಖರೀದಿಸಲು ಅತ್ಯಂತ ಶುಭದಿನ. ಆದರೆ ಚಿನ್ನದ ಬದಲಾಗಿ, ಮಣ್ಣಿನ ಪಾತ್ರೆಗಳು, ಹಿತ್ತಾಳೆ ಪಾತ್ರೆ, ಹಳದಿ ಸಾಸಿವೆ, ಇತ್ಯಾದಿಗಳನ್ನು ಖರೀದಿಸುವುದು ಶುಭ. ಆದರೆ ಅಲ್ಯೂಮಿನಿಯಂ, ಪ್ಲಾಸ್ಟಿಕ್ ವಸ್ತುಗಳು, ಕಪ್ಪು ಬಟ್ಟೆಗಳು, ಮುಳ್ಳಿನ ಗಿಡಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಈ ಲೇಖನದಲ್ಲಿ ಅಕ್ಷಯ ತೃತೀಯದಂದು ಏನು ಖರೀದಿಸಬೇಕು ಮತ್ತು ಏನು ಖರೀದಿಸಬಾರದು ಎಂಬುದರ ಸಂಪೂರ್ಣ ನೀಡಲಾಗಿದೆ.

Akshaya Tritiya 2025: ಅಕ್ಷಯ ತೃತೀಯದಂದು ಏನು ಖರೀದಿಸಬೇಕು ಮತ್ತು ಏನು ಖರೀದಿಸಬಾರದು?
Akshaya Tritiya 2025
Follow us
ಅಕ್ಷತಾ ವರ್ಕಾಡಿ
|

Updated on:Apr 19, 2025 | 8:46 AM

ಅಕ್ಷಯ ತೃತೀಯ ಹಬ್ಬವನ್ನು ವೈಶಾಖ ಮಾಸದ ಮೂರನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿ ಮತ್ತು ಕುಬೇರ ದೇವರನ್ನು ಸರಿಯಾದ ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಈ ದಿನವನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಚಿನ್ನದ ಹೊರತಾಗಿ ಅಕ್ಷಯ ತೃತೀಯದಂದು ಏನು ಖರೀದಿಸಬೇಕು ಮತ್ತು ಏನು ಖರೀದಿಸಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಅಕ್ಷಯ ತೃತೀಯ ಯಾವಾಗ?

ವೈದಿಕ ಕ್ಯಾಲೆಂಡರ್ ಪ್ರಕಾರ, ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿ ಏಪ್ರಿಲ್ 29 ರಂದು ಸಂಜೆ 05:31 ಕ್ಕೆ ಪ್ರಾರಂಭವಾಗಿ ಮರುದಿನ ಅಂದರೆ ಏಪ್ರಿಲ್ 30 ರಂದು ಮಧ್ಯಾಹ್ನ 02:12 ಕ್ಕೆ ಕೊನೆಗೊಳ್ಳುತ್ತದೆ. ಉದಯ ದಿನಾಂಕದ ಪ್ರಕಾರ, ಅಕ್ಷಯ ತೃತೀಯ ಹಬ್ಬವನ್ನು ಏಪ್ರಿಲ್ 30 ರಂದು ಆಚರಿಸಲಾಗುತ್ತದೆ.

ಅಕ್ಷಯ ತೃತೀಯದಂದು ಏನು ಖರೀದಿಸಬೇಕು?

  • ಅಕ್ಷಯ ತೃತೀಯ ದಿನದಂದು ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವುದು ಶುಭ. ಹೀಗೆ ಮಾಡುವುದರಿಂದ ವರ್ಷವಿಡೀ ಆರ್ಥಿಕ ಲಾಭ ಪಡೆಯುವ ಸಾಧ್ಯತೆಯಿದೆ.
  • ಅಕ್ಷಯ ತೃತೀಯ ದಿನದಂದು ನೀವು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಆ ದಿನ ನೀವು ಮಣ್ಣಿನ ಪಾತ್ರೆಯನ್ನು ಖರೀದಿಸಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಗೆ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ ಎಂದು ನಂಬಲಾಗಿದೆ.
  • ಅಕ್ಷಯ ತೃತೀಯದಂದು ನೀವು ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳನ್ನು ಖರೀದಿಸಬಹುದು. ನೀವು ಬಯಸಿದರೆ, ನೀವು ಲಕ್ಷ್ಮಿ ದೇವಿಯ ಹಿತ್ತಾಳೆಯ ವಿಗ್ರಹವನ್ನು ಖರೀದಿಸಿ ಮನೆಗೆ ತರಬಹುದು.
  • ಇದಲ್ಲದೆ, ನೀವು ಅಕ್ಷಯ ತೃತೀಯ ದಿನದಂದು ಹಳದಿ ಸಾಸಿವೆ, ಪರದ ಶಿವಲಿಂಗ ಮತ್ತು ಬಾರ್ಲಿಯನ್ನು ಸಹ ಖರೀದಿಸಬಹುದು. ಹೀಗೆ ಮಾಡುವುದರಿಂದ ವಿಷ್ಣು ಮತ್ತು ತಾಯಿ ಲಕ್ಷ್ಮಿ ಬೇಗನೆ ಸಂತೋಷಪಡುತ್ತಾರೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಅಕ್ಷಯ ತೃತೀಯದಂದು ಅಪರೂಪದ ಯೋಗಗಳು; ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆ

ಇದನ್ನೂ ಓದಿ
Image
ಭಾನುವಾರ ಈ ವಸ್ತು ಖರೀದಿಸುವ ವ್ಯಕ್ತಿ ಶ್ರೀಮಂತನಾಗುತ್ತಾನೆ
Image
ಪತ್ನಿಯನ್ನು ಹಿಂಸಿಸುವ ಪತಿಗೆ ಏನು ಶಿಕ್ಷೆ? ಗರುಡ ಪುರಾಣದ ಹೇಳುವುದೇನು?
Image
ಮದುವೆಗೂ ಮುನ್ನ ಗ್ರಹ ಶಾಂತಿ ಪೂಜೆ ಮಾಡಿಸುವುದೇಕೆ? ಏನಿದರ ಮಹತ್ವ?
Image
ಊಟ ಮಾಡಿದ ನಂತರ ಬಾಳೆ ಎಲೆಯನ್ನು ಒಳಮುಖವಾಗಿ ಮಡಚುವುದೇಕೆ?

ಅಕ್ಷಯ ತೃತೀಯದಂದು ಏನನ್ನು ಖರೀದಿಸಬಾರದು?

ಅಕ್ಷಯ ತೀರ್ಥದ ದಿನದಂದು ಅಲ್ಯೂಮಿನಿಯಂ, ಸ್ಟೀಲ್ ಅಥವಾ ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಅಲ್ಲದೆ, ಹಣದ ವಹಿವಾಟುಗಳನ್ನು ಮಾಡಬಾರದು. ಇದಲ್ಲದೆ, ಅಕ್ಷಯ ತೃತೀಯದಂದು ಮುಳ್ಳಿನ ಗಿಡಗಳು ಮತ್ತು ಕಪ್ಪು ಬಣ್ಣದ ಬಟ್ಟೆಗಳನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:46 am, Sat, 19 April 25

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್