Ram Mandir Pujari Salary: ಅಯೋಧ್ಯೆ ರಾಮಮಂದಿರದ ಮುಖ್ಯ ಅರ್ಚಕರಿಗೆ ಸಿಗುವ ಸಂಬಳ, ಸೌಲಭ್ಯ ಏನೇನು?
ಅಯೋಧ್ಯೆಯ ರಾಮ ಮಂದಿರದ ಮುಖ್ಯ ಅರ್ಚಕ ಪಂಡಿತ್ ಮೋಹಿತ್ ಪಾಂಡೆ ಅವರ ಮಾಸಿಕ ವೇತನ 32,900 ರೂಪಾಯಿಗಳು. ಅವರ ಸಹಾಯಕ ಅರ್ಚಕರು 31 ಸಾವಿರ ರೂ. ವೇತನ ಪಡೆಯುತ್ತಾರೆ. ವಸತಿ, ಪ್ರಯಾಣ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗೆ ಅವರಿಗೆ ಹೆಚ್ಚುವರಿ ಸೌಲಭ್ಯಗಳಿವೆ. ಪಂಡಿತ್ ಪಾಂಡೆ ಸಾಮವೇದದಲ್ಲಿ ಪರಿಣತಿ ಹೊಂದಿದ್ದು, ವೆಂಕಟೇಶ್ವರ ವೇದ ವಿಶ್ವವಿದ್ಯಾಲಯದಿಂದ ಆಚಾರ್ಯ ಪದವಿಯನ್ನು ಪಡೆದಿದ್ದಾರೆ.

ಅಯೋಧ್ಯೆಯ ರಾಮ ಮಂದಿರಕ್ಕೆ ನಿತ್ಯ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಭಕ್ತ ನೆಲೆಬೀಡು ಮಾತ್ರವಲ್ಲದೇ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವೂ ಹೌದು. ಆಭರಣ ಹಾಗೂ ಹೂವುಗಳಿಂದ ಅಲಂಕೃತವಾಗಿರುವ ಬಾಲರಾಮನ ಪೂಜೆಯನ್ನು ಕಣ್ತುಂಬಿಸಿಕೊಳ್ಳುವುದೇ ಕಣ್ಣಿಗೊಂದು ಹಬ್ಬ. ಇತ್ತೀಚೆಗೆ, ದೇವಾಲಯದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರ ನಿಧನದ ನಂತರ, ಪಂಡಿತ್ ಮೋಹಿತ್ ಪಾಂಡೆ ಅವರನ್ನು ದೇವಾಲಯದ ಹೊಸ ಪ್ರಧಾನ ಅರ್ಚಕರಾಗಿ ನೇಮಿಸಲಾಯಿತು. ಈಗ ಅವರು ಬಾಲರಾಮನ ದೈನಂದಿನ ಪೂಜೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಧಾನ ಅರ್ಚಕರಿಗೆಎಷ್ಟು ಸಂಬಳ ಸಿಗುತ್ತದೆ ಎಂದು ನಿಮಗೆ ತಿಳಿದಿದೆಯೇ?
ಪ್ರತಿ ತಿಂಗಳು ಪ್ರಧಾನ ಅರ್ಚಕರಿಗೆ ಸಿಗುವ ಸಂಬಳ ಎಷ್ಟು?
ಮಾಧ್ಯಮ ವರದಿಗಳ ಪ್ರಕಾರ, ರಾಮ ದೇವಾಲಯದ ಪ್ರಧಾನ ಅರ್ಚಕ ಪಂಡಿತ್ ಮೋಹಿತ್ ಪಾಂಡೆ ಅವರಿಗೆ 32,900 ರೂ. ಸಂಬಳ ನೀಡಲಾಗುತ್ತಿದೆ. ಜೊತೆಗೆ ಅವರ ಸಹಾಯಕ ಅರ್ಚಕರು 31 ಸಾವಿರ ರೂ. ವೇತನ ಪಡೆಯುತ್ತಾರೆ. ಮೊದಲು ಈ ಸಂಬಳ 25 ಸಾವಿರ ರೂ.ಗಳಿತ್ತು. ಆದರೆ ಈಗ ಹೆಚ್ಚು ಮಾಡಲಾಗಿದೆ.
ಬೇರೆ ಯಾವ ಸೌಲಭ್ಯಗಳಿವೆ?
ವರದಿಗಳ ಪ್ರಕಾರ, ಸಂಬಳದ ಜೊತೆಗೆ, ಪಂಡಿತ್ ಮೋಹಿತ್ ಪಾಂಡೆ ಅವರಿಗೆ ಇತರ ಧಾರ್ಮಿಕ ಚಟುವಟಿಕೆಗಳು, ವಸತಿ, ಪ್ರಯಾಣ ಸೌಲಭ್ಯಗಳು ಮತ್ತು ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವ್ಯವಸ್ಥೆಗಳಿಗೆ ಸಂಬಂಧಿಸಿದ ಅಗತ್ಯ ಸೌಲಭ್ಯಗಳನ್ನು ಟ್ರಸ್ಟ್ ಒದಗಿಸುತ್ತಿದೆ.
ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನದಲ್ಲಿ ಪ್ರತಿದಿನ ಧ್ವಜ ಬದಲಾಯಿಸುವುದೇಕೆ?
ವೈದಿಕ ತರಬೇತಿ:
ಅಯೋಧ್ಯೆ ರಾಮ ದೇವಾಲಯದ ಪ್ರಧಾನ ಅರ್ಚಕ ಮೋಹಿತ್ ಪಾಂಡೆ, ಅರ್ಚಕ ಹುದ್ದೆಗೆ ಅಗತ್ಯವಾದ ವೈದಿಕ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಸಾಮವೇದದಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು ವೆಂಕಟೇಶ್ವರ ವೇದ ವಿಶ್ವವಿದ್ಯಾಲಯದಿಂದ ಆಚಾರ್ಯ ಪದವಿಯನ್ನು ಪಡೆದಿದ್ದಾರೆ. ಮೋಹಿತ್ ಪಾಂಡೆ ಹಲವು ವರ್ಷಗಳಿಂದ ದೂಧೇಶ್ವರ ವೇದ ವಿದ್ಯಾಪೀಠದಲ್ಲಿ ಧರ್ಮ ಮತ್ತು ಆಚರಣೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ