Vastu Tips : ಭಾನುವಾರ ಈ ವಸ್ತುವನ್ನು ಖರೀದಿಸಿ ನೋಡಿ, ನೀವು ಶ್ರೀಮಂತರಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ
ವಾಸ್ತು ಶಾಸ್ತ್ರದ ಪ್ರಕಾರ, ವಾರದ ಕೆಲವು ದಿನಗಳಿಗೆ ವಿಶೇಷ ಮಹತ್ವ ನೀಡಲಾಗಿದೆ. ಅದರಲ್ಲಿ ಭಾನುವಾರವೂ ಒಂದು. ಈ ದಿನ, ವಿಶೇಷವಾಗಿ ಕೆಲವು ವಸ್ತುಗಳನ್ನು ಖರೀದಿಸಿ ಮನೆಗೆ ತರುವುದರಿಂದ ಮನೆಯ ಸಂಪತ್ತು ವೃದ್ಧಿಯಾಗುತ್ತದೆ. ಹಣಕ್ಕೆ ಕೊರತೆಯಾಗುವುದಿಲ್ಲ ಎಂಬ ನಂಬಿಕೆ ಇದೆ. ವಾಸ್ತು ತಜ್ಞರ ಪ್ರಕಾರ ಭಾನುವಾರದ ದಿನ ಇಲ್ಲಿ ಹೇಳಿರುವ ವಸ್ತುಗಳನ್ನು ಮನೆಗೆ ತನ್ನಿ ನಿಮ್ಮ ವ್ಯಾಪಾರ, ವ್ಯವಹಾರದಲ್ಲಿ ಜೊತೆಗೆ ನೀವು ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿ ಹೆಚ್ಚಾಗಿ ಹಣದ ಸುರಿಮಳೆಯಾಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ಮನೆಗೆ ತರಬೇಕು ತಿಳಿದುಕೊಳ್ಳಿ.

ವಾಸ್ತು (Vastu) ಪ್ರಕಾರ ಕೆಲವು ದಿನಗಳಿಗೆ ವಿಶೇಷ ಮಹತ್ವವಿರುತ್ತದೆ. ಅಂತಹ ದಿನಗಳಲ್ಲಿ ಕೆಲವು ವಸ್ತುಗಳನ್ನು ಮನೆಗೆ ತರುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಅದರಲ್ಲಿಯೂ ವಾರದ ಒಂದೊಂದು ದಿನಕ್ಕೂ ಅದರದ್ದೇ ಆದಂತಹ ವಿಶೇಷತೆ ಇದೆ. ಇನ್ನು ಭಾನುವಾರ (Sunday) ಸೂರ್ಯ ದೇವರ ದಿನವಾದ್ದರಿಂದ, ವಿಶೇಷವಾಗಿ ಕೆಲವು ವಸ್ತುಗಳನ್ನು ಮನೆಗೆ ತರುವುದರಿಂದ ಸಂಪತ್ತು (Wealth) ಮತ್ತು ಸಂತೋಷ (Happiness) ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಈ ಶುಭ ದಿನದಂದು ಒಳ್ಳೆಯ ಫಲಿತಾಂಶಗಳನ್ನು ಪಡೆಯಲು ಜನರು ಕೆಲವು ವಸ್ತುಗಳನ್ನು ಮನೆಗೆ ತರುತ್ತಾರೆ. ಇದರಿಂದ ಹಣದ ಕೊರತೆ ನಿವಾರಣೆಯಾಗಿ ಧನಲಕ್ಷ್ಮೀ ಮನೆಯಲ್ಲಿ ನೆಲೆಸುತ್ತಾಳೆ ಎನ್ನಲಾಗುತ್ತದೆ. ಹಾಗಾದರೆ ಭಾನುವಾರ ಯಾವ ವಸ್ತುಗಳನ್ನು ಮನೆಗೆ ತರಬೇಕು ಎಂಬುದನ್ನು ತಿಳಿದುಕೊಳ್ಳಿ.
ತಾಮ್ರದ ನಾಣ್ಯ
ತಾಮ್ರ ಸೂರ್ಯನ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಹಾಗಾಗಿ ಭಾನುವಾರದ ದಿನ ತಾಮ್ರದ ನಾಣ್ಯ ಅಥವಾ ದೇವರ ಕಿರೀಟವನ್ನು ಪೂಜಾ ಕೋಣೆಯಲ್ಲಿ ತಂದಿಡುವ ಮೂಲಕ ಧನಲಕ್ಷ್ಮೀಯನ್ನು ಒಲಸಿಕೊಳ್ಳಬಹುದು.
ಕೆಂಪು ಬಣ್ಣದ ಬಟ್ಟೆ
ಕೆಂಪು ಬಣ್ಣವು ಸೂರ್ಯ ದೇವರ ಶಕ್ತಿಯ ಸಂಕೇತವಾಗಿದೆ. ಈ ಬಣ್ಣ ಒಂದು ರೀತಿಯ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಬಯಸುವವರು ಭಾನುವಾರದ ದಿನ ಕೆಂಪು ಬಟ್ಟೆಗಳನ್ನು ಖರೀದಿಸುವುದು ಒಳ್ಳೆಯದು. ಇದರಿಂದ ಧನಲಕ್ಷ್ಮೀ ಮನೆಯಲ್ಲಿ ಸ್ಥಿರವಾಗಿರುತ್ತಾಳೆ.
ಬೆಲ್ಲ
ಧರ್ಮಗ್ರಂಥಗಳ ಪ್ರಕಾರ, ಬೆಲ್ಲವು ಸೂರ್ಯ ಮತ್ತು ಬುಧ ನೊಂದಿಗೆ ವಿಶೇಷ ಸಂಬಂಧ ಹೊಂದಿದ್ದು. ಭಾನುವಾರದ ದಿನ ಮನೆಗೆ ಬೆಲ್ಲವನ್ನು ಖರೀದಿಸಿ ತರುವುದರಿಂದ ಅಥವಾ ಮನೆಯಲ್ಲಿರುವ ಬೆಲ್ಲವನ್ನು ದಾನ ಮಾಡುವುದರಿಂದ, ಪಿತೃದೋಷ ಮತ್ತು ಗ್ರಹದೋಷ ನಿವಾರಣೆಯಾಗಿ ಹಣಕಾಸಿನ ತೊಂದರೆಗಳು ದೂರವಾಗಲು ಪ್ರಾರಂಭಿಸುತ್ತವೆ.
ಇದನ್ನೂ ಓದಿ: Graha Shanti Puja: ಮದುವೆಗೂ ಮುನ್ನ ಗ್ರಹ ಶಾಂತಿ ಪೂಜೆ ಮಾಡಿಸುವುದೇಕೆ? ಏನಿದರ ಮಹತ್ವ?
ಶ್ರೀಗಂಧ
ಇದನ್ನು ಸೂರ್ಯ ಮತ್ತು ಚಂದ್ರ ಗ್ರಹಗಳ ಸಂಕೇತವೆಂದು ಹೇಳಲಾಗುತ್ತದೆ. ಇದು ಮನೆಯ ಶಾಂತಿ ಮತ್ತು ಸಮೃದ್ಧಿಯನ್ನು ಕೂಡ ಹೆಚ್ಚಿಸಲು ನೆರವಾಗುತ್ತದೆ. ಶ್ರೀಗಂಧವನ್ನು ತೈದು ದೇಹಕ್ಕೆ ಹಚ್ಚುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ. ಹಾಗಾಗಿ ಭಾನುವಾರ ದಿನ ಶ್ರೀಗಂಧವನ್ನು ಖರೀದಿಸಿ ತಂದು ಪೂಜೆಯಲ್ಲಿ ಬಳಸಿ ಅದನ್ನು ಬಳಿಕ ದೇಹಕ್ಕೆ ಹಚ್ಚಿಕೊಳ್ಳುವುದರಿಂದ, ಮನೆ ಮತ್ತು ವ್ಯವಹಾರದಲ್ಲಿ ಧನಾಗಮನ ಹೆಚ್ಚಾಗುತ್ತದೆ
ಕುಂಕುಮ ಮತ್ತು ಗುಲಾಬಿ
ಗುಲಾಬಿ ಮತ್ತು ಕುಂಕುಮ ಸೂರ್ಯ ದೇವರಿಗೆ ತುಂಬಾ ಪ್ರಿಯವಾದಂತಹ ವಸ್ತುಗಳಾಗಿವೆ. ಇವುಗಳನ್ನು ಭಾನುವಾರದ ದಿನ ಬಳಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಭಾನುವಾರದಂದು ಕೆಂಪು ಗುಲಾಬಿ ಮತ್ತು ಕುಂಕುಮಗಳನ್ನು ಖರೀದಿಸಿ ತಂದು ಅವುಗಳನ್ನು ಪೂಜೆಯಲ್ಲಿ ಬಳಸುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತದೆ.
ತುಪ್ಪ ಮತ್ತು ಧಾನ್ಯ
ಭಾನುವಾರ ಸೂರ್ಯ ದೇವರ ದಿನ. ಈ ದಿನ ಸೂರ್ಯ ದೇವನನ್ನು ನೆನೆಯುತ್ತಾ, ಮಂತ್ರಗಳನ್ನು ಪಠಿಸುತ್ತಾ ನೀರನ್ನು ಅರ್ಪಿಸಿದರೆ ಸೂರ್ಯ ದೇವ ಸಂತೋಷಪಡುತ್ತಾನೆ. ಅಲ್ಲದೆ ತುಪ್ಪ ಮತ್ತು ಧಾನ್ಯಗಳ ಮಹತ್ವದ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಇವೆರಡು ಧಾರ್ಮಿಕವಾಗಿ ಮಂಗಳಕರವೆಂದು ಪರಿಗಣಿಸಲಾಗಿದೆ. ಇಂತಹ ಆಹಾರಗಳನ್ನು ದಾನ ಮಾಡುವುದರಿಂದ ಬಡತನ ನಿವಾರಣೆಯಾಗುತ್ತದೆ ಮತ್ತು ಧನಲಕ್ಷ್ಮೀಯ ಆಶೀರ್ವಾದ ಸಿಗುತ್ತದೆ. ಜೊತೆಗೆ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ