AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Premature Ageing: ಇಂತಹ ಮಹಿಳೆಯರು ವಯಸ್ಸಿಗೂ ಮುಂಚೆಯೇ ವಯಸ್ಸಾದವರಂತೆ ಕಾಣಿಸುತ್ತಾರಂತೆ

ಕೆಲವರು ಎಷ್ಟೇ ವಯಸ್ಸಾದ್ರೂ ಯಂಗ್‌ ಆಗಿ ಕಾಣ್ತಾರೆ. ಇನ್ನೂ ಕೆಲವರು 25 ವರ್ಷದವರಾದರೂ 40, 50 ವರ್ಷದವರಂತೆ ಕಾಣಿಸುತ್ತಾರೆ. ಪುರುಷರಿಗೆ ಹೋಲಿಸಿದರೆ ಹೆಚ್ಚಾಗಿ ಮಹಿಳೆಯರೇ ವಯಸ್ಸಿಗೂ ಮುಂಚೆಯೇ ವಯಸ್ಸಾದವರಂತೆ ಕಾಣಿಸುತ್ತಾರೆ. ಇದಕ್ಕೆಲ್ಲಾ ಕಾರಣ ಮಹಿಳೆಯರ ಈ ಕೆಲವು ಅಭ್ಯಾಸಗಳಂತೆ. ಎಂತಹ ಅಭ್ಯಾಸಗಳನ್ನು ಹೊಂದಿರುವ ಮಹಿಳೆಯರು ವಯಸ್ಸಿಗೂ ಮುಂಚೆಯೇ ವಯಸ್ಸಾದವರಂತೆ ಕಾಣಿಸುತ್ತಾರೆ, ಯಂಗ್‌ ಆಗಿ ಕಾಣ್ಬೇಕು ಅಂದ್ರೆ ಏನು ಮಾಡ್ಬೇಕು? ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

Premature Ageing: ಇಂತಹ ಮಹಿಳೆಯರು ವಯಸ್ಸಿಗೂ ಮುಂಚೆಯೇ ವಯಸ್ಸಾದವರಂತೆ ಕಾಣಿಸುತ್ತಾರಂತೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 10, 2025 | 3:34 PM

Share

ಪ್ರತಿಯೊಬ್ಬರೂ ಕೂಡಾ ಎಷ್ಟೇ ವಯಸ್ಸಾದರೂ (age) ನಾನು ಸದಾ ಕಾಲ ಯಂಗ್‌ (Young) ಆಗಿ ಕಾಣಬೇಕು ಎಂದು ಬಯಸುತ್ತಾರೆ. ಅದರಲ್ಲೂ ಮಹಿಳೆಯರಂತೂ (women) 20 ರ ತರುಣಿಯಂತೆ ಕಾಣ್ಬೇಕು ಅಂತ ಹಲವಾರು ಬ್ಯೂಟಿ ಪ್ರಾಡಕ್ಟ್‌ಗಳನ್ನು ಬಳಸಿ ನಾನಾ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಇಷ್ಟೆಲ್ಲಾ ಕಸರತ್ತು ಮಾಡಿದ್ರೂ ಕೂಡಾ ಕೆಲ ಮಹಿಳೆಯರು ಮಾತ್ರ ವಯಸ್ಸಿಗಿಂತ ಮುಂಚೆಯೇ ವಯಸ್ಸಾದವರಂತೆ ಕಾಣಿಸುತ್ತಾರೆ. ಹೌದು ಕೆಲ ಮಹಿಳೆಯರು 25 ವರ್ಷಕ್ಕೆಯೇ 40 ರ ವಯಸ್ಸಿನ ಮಹಿಳೆಯರಂತೆ ಕಾಣಿಸುತ್ತಾರೆ. ಅಷ್ಟಕ್ಕೂ ನಾನ್ಯಾಕೆ ಇಷ್ಟು ಸಣ್ಣ ವಯಸ್ಸಿಗೆ ವಯಸ್ಸಾಗಿರುವ ಮಹಿಳೆ, ಆಂಟಿಯಂತೆ ಕಾಣಿಸುತ್ತೇನೆ ಎಂದು ಹಲವರು ತಲೆಕೆಡಿಸಿಕೊಳ್ಳುತ್ತಾರೆ. ಹೀಗೆ ಅಕಾಲಿಕ ವಯಸ್ಸಾಗುವಿಕೆಗೆ (premature ageing)  ಮಹಿಳೆಯರ ಈ ಕೆಲವು ಅಭ್ಯಾಸಗಳೇ ಕಾರಣವಂತೆ. ಅದೇನು ಎಂಬುದನ್ನು ನೋಡೋಣ ಬನ್ನಿ.

ಈ ಮಹಿಳೆಯರು ವಯಸ್ಸಿಗೂ ಮುಂಚೆಯೇ ವಯಸ್ಸಾದವರಂತೆ ಕಾಣುತ್ತಾರೆ:

ಎಂತಹ ಮಹಿಳೆಯರು ವಯಸ್ಸಿಗಿಂತ ಮುಂಚೆಯೇ ವಯಸ್ಸಾದವರಂತೆ ಕಾಣಿಸುತ್ತಾರೆ ಎಂಬ ಕುತೂಹಲಕಾರಿ ಮಾಹಿತಿಯನ್ನು ssharanu424 ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಶೇರ್‌ ಮಾಡಲಾಗಿದೆ.

ಇದನ್ನೂ ಓದಿ
Image
ಭಾನುವಾರ ಈ ವಸ್ತು ಖರೀದಿಸುವ ವ್ಯಕ್ತಿ ಶ್ರೀಮಂತನಾಗುತ್ತಾನೆ
Image
ಮಹಾವೀರ ಜಯಂತಿ ಆಚರಣೆಯ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿಯಿರಿ
Image
ಕಣ್ಣಿಗೆ ಮನೆಯಲ್ಲಿ ತಯಾರಿಸಿದ ಈ ಈ ಕೆಮಿಕಲ್‌ ಫ್ರೀ ಕಾಡಿಗೆ ಹಚ್ಚಿ
Image
ಹಾಸಿಗೆಯ ಮೇಲೆ ಕುಳಿತು ಊಟ ಮಾಡಬೇಡಿ

ಇಲ್ಲಿದೆ ವಿಡಿಯೋ:

ಯಾರು ಎಂದಿಗೂ ವ್ಯಾಯಾಮ ಮಾಡುವುದಿಲ್ಲ:

ವ್ಯಾಯಾಮ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಅದಕ್ಕಾಗಿಯೇ ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ ಎಂದು ತಜ್ಞರು ಸಲಹೆ ನೀಡೋದು.  ಆದರೆ ಕೆಲ ಮಹಿಳೆಯರು ಉದಾಸಿನತೆಯಿಂದ ವ್ಯಾಯಾಮಗಳನ್ನು ಮಾಡುವುದಿಲ್ಲ. ಇಂತಹ ಮಹಿಳೆಯರು ವಯಸ್ಸಿಗೂ ಮುಂಚೆಯೇ ವಯಸ್ಸಾದವರಂತೆ ಕಾಣಿಸುತ್ತಾರೆ.

ಯಾರು ಯಾವಾಗಲೂ ಚಿಂತೆ ಮಾಡುತ್ತಾರೆ:

ಅತಿಯಾಗಿ ಚಿಂತೆ ಮಾಡೋದು ಒಳ್ಳೆಯದಲ್ಲ, ಇದು ಆರೋಗ್ಯದ ಮೇಲೂ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ವಿಷಯ ಗೊತ್ತಿದ್ದರೂ ಕೂಡಾ ಕೆಲ ಮಹಿಳೆಯರು ಸಣ್ಣಪುಟ್ಟ ವಿಷಯಗಳನ್ನು ಮನಸ್ಸಿಗೆ ಹಂಚಿಕೊಂಡು ದಿನವಿಡೀ ಚಿಂತಿಸುತ್ತಾ ಕುಳಿತುಬಿಡುತ್ತಾರೆ. ಹೀಗೆ ಅತಿಯಾಗಿ ಚಿಂತಿಸುವ ಮಹಿಳೆಯರು ವಯಸ್ಸಿಗೂ ಮುಂಚೆಯೇ ವಯಸ್ಸಾದವರಂತೆ ಕಾಣಿಸುತ್ತಾರೆ.

ಯಾರು ಯಾವಾಗಲೂ ಕೋಪಗೊಳ್ಳುತ್ತಾರೆ:

ಅತಿಯಾದ ಕೋಪ ಒಳ್ಳೆಯದಲ್ಲ ಎಂದು ಹೇಳ್ತಾರೆ. ಆದರೆ ಕೆಲ ಮಹಿಳೆಯರು ಸಣ್ಣಪುಟ್ಟ ವಿಷಯಗಳಿಗೂ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾರೆ. ಈ ಕೋಪ ಮಾನಸಿಕ ಸಮಸ್ಯೆಗಳನ್ನು, ಒತ್ತಡ ಖಿನ್ನತೆಯನ್ನು ಉಂಟು ಮಾಡುತ್ತದೆ. ಮತ್ತು ಇದು ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತದೆ.

ಇದನ್ನೂ ಓದಿ: ಕಣ್ಣಿಗೆ ಯಾವುದ್ಯಾವುದೋ ಕಾಜಲ್‌ ಹಚ್ಚುವ ಬದಲು ಮನೆಯಲ್ಲಿ ತಯಾರಿಸಿದ ಈ ಕೆಮಿಕಲ್‌ ಫ್ರೀ ಕಾಡಿಗೆ ಹಚ್ಚಿ

ಯಾರು ಕಡಿಮೆ ನೀರು ಕುಡಿಯುತ್ತಾರೆ:

ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಆದರೆ ಕೆಲವರಿಗೆ ನೀರು ಕುಡಿಯುವುದೆಂದರೆಯೇ ಅಲರ್ಜಿ. ಬೆಳಗ್ಗೆಯಿಂದ ಸಂಜೆಯವರೆಗೂ ಬೇಕಾದ್ರೂ ನೀರು ಕುಡಿಯದೆ ಇರುತ್ತಾರೆ. ಈ ನೀರು ಕುಡಿಯದಿರುವ ಅಭ್ಯಾಸ ಮಹಿಳೆಯರ ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತದೆ.

ಯಾರು ಕಡಿಮೆ ಮತ್ತು ತಡವಾಗಿ ನಿದ್ರಿಸುತ್ತಾರೆ:

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ನಿದ್ರೆ ಮಾಡುವುದು ತುಂಬಾನೇ ಮುಖ್ಯ. ಕನಿಷ್ಟ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು. ಆದರೆ ಕೆಲ ಮಹಿಳೆಯರು ತಡವಾಗಿ ಮಲಗಿ ಬೆಳಗ್ಗೆ ಬೇಗನೆ ಎದ್ದೇಳುತ್ತಾರೆ. ಮತ್ತು ಸಾಕಷ್ಟು ಪ್ರಮಾಣ ನಿದ್ರೆ ಪಡೆಯುವುದಿಲ್ಲ. ಈ ನಿದ್ರೆಯ ಕೊರತೆ ಒತ್ತಡಕ್ಕೆ ಕಾಣವಾಗುತ್ತದೆ ಮತ್ತು ಇದು ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ಕೂಡಾ ಹೆಚ್ಚು ಮಾಡುತ್ತಾರೆ.

ಹೀಗಿರುವಾಗ ಪ್ರತಿನಿತ್ಯ ವ್ಯಾಮಾಯ, ಧ್ಯಾನ ಮಾಡುವ ಮೂಲಕ, ಉತ್ತಮ ನಿದ್ರೆ, ಸಾಕಷ್ಟು ಪ್ರಮಾಣದ ನೀರಿನ ಸೇವನೆ, ಆರೋಗ್ಯಕರ ಆಹಾರದ ಸೇವನೆ ಮಾಡುವ, ಸಕಾರಾತ್ಮಕ ಮನಸ್ಥಿತಿಯನ್ನು ಅಳವಡಿಸಿಕೊಳ್ಳುವ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮೂಲಕ ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸಿ ಸದಾ ಕಾಲ ಆಗಿ ಕಾಣಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ