AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Homemade Kajal: ಕಣ್ಣಿಗೆ ಯಾವುದ್ಯಾವುದೋ ಕಾಜಲ್‌ ಹಚ್ಚುವ ಬದಲು ಮನೆಯಲ್ಲಿ ತಯಾರಿಸಿದ ಈ ಕೆಮಿಕಲ್‌ ಫ್ರೀ ಕಾಡಿಗೆ ಹಚ್ಚಿ

ಕಣ್ಣಿನ ಅಂದವನ್ನು ಹೆಚ್ಚಿಸುವಲ್ಲಿ ಕಾಡಿಗೆ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಅದಕ್ಕಾಗಿ ಹೆಚ್ಚಿನ ಮಹಿಳೆಯರು ಕಣ್ಣಿಗೆ ಕಾಡಿಗೆ ಕಚ್ಚಲು ಇಷ್ಟಪಡ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಬ್ರ್ಯಾಂಡ್‌ಗಳ ಕಾಜಲ್‌ ಖರೀದಿಸುತ್ತಿರುತ್ತಾರೆ. ಆದ್ರೆ ಮಾರುಕಟ್ಟೆಯಲ್ಲಿ ಸಿಗುವ ಈ ಕೆಮಿಕಲ್‌ ಯುಕ್ತ ಕಾಜಲ್‌ಗಳು ಎಷ್ಟು ಸೇಫ್‌, ಕಣ್ಣಿಗೆ ಅದರಿಂದ ಯಾವುದೇ ಹಾನಿ ಆಗಲ್ವಾ ಎಂದು ಯಾರಿಗೂ ಗೊತ್ತಿಲ್ಲ. ಹೀಗಿರುವಾಗ ಯಾವುದ್ಯಾವುದೋ ಕಾಜಲ್‌ ಹಚ್ಚುವ ಬದಲು ಮನೆಯಲ್ಲಿಯೇ ಈ ರೀತಿ ನೈಸರ್ಗಿಕರವಾಗಿ ಕಾಜಲ್‌ ತಯಾರಿಸಿ.

Homemade Kajal: ಕಣ್ಣಿಗೆ ಯಾವುದ್ಯಾವುದೋ ಕಾಜಲ್‌ ಹಚ್ಚುವ ಬದಲು ಮನೆಯಲ್ಲಿ ತಯಾರಿಸಿದ ಈ ಕೆಮಿಕಲ್‌ ಫ್ರೀ ಕಾಡಿಗೆ ಹಚ್ಚಿ
ಹೋಮ್‌ ಮೇಡ್‌ ಕಾಜಲ್
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 09, 2025 | 4:56 PM

ಕಾಜಲ್‌ (kajal) ಕಣ್ಣಿನ (Eye)  ಸೌಂದರ್ಯವನ್ನು ದುಪ್ಪಟ್ಟುಗೊಳಿಸುವುದು ಮಾತ್ರವಲ್ಲದೆ, ಕಣ್ಣುಗಳ ಆರೈಕೆಯಲ್ಲೂ (eye care)  ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಅದಕ್ಕಾಗಿ ಶತಮಾನಗಳಿಂದಲೂ ಹೆಂಗಳೆಯರು (women) ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದಾರೆ. ಅಲ್ಲದೆ ಕಾಡಿಗೆ ಕಾಜಲ್ (kajal) ಹಚ್ಚಿಕೊಳ್ಳದೆ ಮಹಿಳೆಯರ ಮೇಕಪ್ (makeup) ಕೂಡ ಪೂರ್ಣಗೊಳ್ಳುವುದಿಲ್ಲ. ಹಿಂದೆಲ್ಲಾ ಮಹಿಳೆಯರು ಮನೆಯಲ್ಲಿಯೇ ತಯಾರಿಸಿದ ಕಾಡಿಗೆಯನ್ನು ಕಣ್ಣಿಗೆ ಹಚ್ಚಿಕೊಳ್ಳುತ್ತಿದ್ದರು. ಆದ್ರೆ ಈಗಿನ ಕಾಲದ ಮಹಿಳೆಯರು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಬ್ರ್ಯಾಂಡ್‌ಗಳ ಕೆಮಿಕಲ್‌ ಯುಕ್ತ ಕಾಜಲ್‌ಗಳನ್ನೇ ಬಳಸುತ್ತಾರೆ. ಹೀಗಿರುವಾಗ ಸುಮ್ಮನೆ ದುಡ್ಡು ಖರ್ಚು ಮಾಡಿ ಇಂತಹ ಪ್ರೋಡಕ್ಟ್‌ಗಳನ್ನು ಖರೀದಿಸುವ ಬದಲು ಮನೆಯಲ್ಲಿಯೇ ಈ ರೀತಿ ನೀವು ನೈಸರ್ಗಿಕವಾಗಿ, ರಾಸಾಯನಿಕ ಮುಕ್ತ ಕಾಜಲ್‌ ತಯಾರಿಸಿ, ಜೊತೆಗೆ ಕಾಜಲ್‌ಗೆ ಖರ್ಚು ಮಾಡುವ ದುಡ್ಡನ್ನೂ ಉಳಿಸಿ.

ಮನೆಯಲ್ಲಿ ಕಾಜಲ್ ತಯಾರಿಸುವುದು ಹೇಗೆ: 

ನೀವು ಮನೆಯಲ್ಲಿಯೇ ಕೆಮಿಕಲ್‌ ಫ್ರೀ ಕಾಜಲ್‌ ತಯಾರಿಸಬಹುದು. ಅದಕ್ಕಾಗಿ ಒಂದು ದೀಪ ತೆಗೆದುಕೊಂಡು ಅದಕ್ಕೆ ತುಪ್ಪದಲ್ಲಿ ಅದ್ದಿದ ಬತ್ತಿಯನ್ನು ಹಾಕಿ ಅದರ ಮೇಲೆ ಒಂದೆರಡು ಬಾದಾಮಿ ಇಟ್ಟು ದೀಪ ಬೆಳಗಿಸಿ, ನಂತರ ಜ್ವಾಲೆಗೆ ಒಂದು ಪ್ಲೇಟ್‌ ಮುಚ್ಚಿ. ದೀಪ ಆರಿದ ಮೇಲೆ ಆ ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಸಂಗ್ರಹವಾದ ಕಪ್ಪು ಬಣ್ಣದ ಪುಡಿಯನ್ನು ಸಂಗ್ರಹಿಸಿ ಅದಕ್ಕೆ ತುಪ್ಪ ಅಥವಾ ಸ್ವಲ್ಪ ತೆಂಗಿನ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ ಡಬ್ಬದಲ್ಲಿ ಸಂಗ್ರಹಿಸಿದರೆ, ಸುಲಭವಾಗಿ ತಯಾರಾಗುತ್ತೆ ಕೆಮಿಕಲ್‌ ಫ್ರೀ ಕಾಜಲ್.‌ ಈ ಕುರಿತ ವಿಡಿಯೋವನ್ನು _shailashree ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ಇದನ್ನೂ ಓದಿ
Image
ಹೊಸ ವರ್ಷ ಆಚರಿಸಿ ಫೂಲ್ ಆದ ದೇಶ ಯಾವುದು?
Image
ದೇಹ ಆಕಾರವೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ
Image
ಬೇಸಿಗೆಯ ದಾಹ ನೀಗಿಸಲು ಎಳನೀರು ಕುಲುಕ್ಕಿ ಶರ್ಬತ್‌ ಒಮ್ಮೆ ಟ್ರೈ ಮಾಡಿ…
Image
ಭಾರತದ ಹೊರತುಪಡಿಸಿ ವಿದೇಶದಲ್ಲಿರುವ ಪ್ರಮುಖ ಶಿವ ದೇವಾಲಯಗಳಿವು

ಇದನ್ನೂ ಓದಿ: ಹುಡುಗರು ಹೆಚ್ಚಾಗಿ ವಿವಾಹಿತ ಮಹಿಳೆಯರನ್ನೇ ಇಷ್ಟಪಡೋದು ಏಕೆ ಗೊತ್ತಾ?

ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by shailashree (@_shree940)

ಮನೆಯಲ್ಲಿಯೇ ತಯಾರಿಸಿದ ಕಾಜಲ್‌ ಕಣ್ಣಿಗೆ ಹಚ್ಚುವುದರ ಪ್ರಯೋಜನಗಳು:

  • ಮನೆಯಲ್ಲಿಯಲ್ಲಿಯೇ ತಯಾರಿಸಿದ ಕಾಜಲ್‌ಗೆ ಯಾವುದೇ ಕೆಮಿಕಲ್‌ ಉತ್ಪನ್ನಗಳನ್ನು ಮಿಶ್ರಣ ಮಾಡದಿರುವ ಕಾರಣ ಇದು ಸಂಪೂರ್ಣವಾಗಿ ಶುದ್ಧವಾಗಿರುತ್ತದೆ. ಇದರಿಂದಾಗಿ ನಿಮ್ಮ ಕಣ್ಣುಗಳಿಗೆ ಯಾವುದೇ ಹಾನಿಯಾಗುವ ಅಪಾಯವಿಲ್ಲ.
  • ಮನೆಯಲ್ಲಿ ತಯಾರಿಸಿದ ಕಾಜಲ್ ಕಣ್ಣುಗಳಲ್ಲಿನ ತುರಿಕೆ ಮತ್ತು ಕಪ್ಪು ವರ್ತುಲಗಳಂತಹ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಸಹ ಬಹಳ ಪರಿಣಾಮಕಾರಿಯಾಗಿದೆ.
  • ಈ ಕಾಜಲ್‌ನಲ್ಲಿ ನಾವು ತೆಂಗಿನ ಎಣ್ಣೆ ಅಥವಾ ತುಪ್ಪ ಮತ್ತು ಅಲೋವೆರಾ ಜೆಲ್ ಅನ್ನು ಬಳಸುತ್ತೇವೆ, ಇದು ಕಣ್ಣುಗಳನ್ನು ತಂಪಾಗಿಸುತ್ತದೆ.
  •  ಕಾಜಲ್‌ ತಯಾರಿಸುವಾಗ ಬಾದಾಮಿಯನ್ನು ಸೇರಿಸಲಾಗುತ್ತದೆ. ಬಾದಾಮಿಯಿಂದ ತಯಾರಿಸಿದ ಈ ಕಾಜಲ್ ವಿಟಮಿನ್ ಇ ಯಿಂದ ಸಮೃದ್ಧವಾಗಿದೆ. ಇದು ನಿಮ್ಮ ಕಣ್ಣುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೆ ಇದು ಕಣ್ಣಿನ ರೆಪ್ಪೆಗೂದಲುಗಳನ್ನು ದಪ್ಪ ಮತ್ತು ಕಪ್ಪಾಗಿಸುತ್ತದೆ ಹಾಗೂ ಕಣ್ಣಿನ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.
  • ಇದಕ್ಕೆ ತುಪ್ಪವನ್ನು ಬಳಕೆ ಮಾಡುವುದರಿಂದ ಇಂತಹ ಕಾಜಲ್‌ ಕಣ್ಣುಗಳನ್ನು ಸ್ವಚ್ಛಗೊಳಿಸಲು, ಕಣ್ಣುಗಳಲ್ಲಿನ ಕಿರಿಕಿರಿ ಸಮಸ್ಯೆಯನ್ನು ನಿವಾರಿಸುತ್ತದೆ. ಜೊತೆಗೆ ಇದನ್ನು ಹಚ್ಚುವುದರಿಂದ ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳ ಸಮಸ್ಯೆಯೂ ಪರಿಹಾರವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:55 pm, Wed, 9 April 25