AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸಿಗೆಯ ಮೇಲೆ ಕುಳಿತು ಊಟ ಮಾಡಬೇಡಿ, ಇದಕ್ಕಿಂತ ದೊಡ್ಡ ದರಿದ್ರ ಬೇರಿಲ್ಲ

ನಮ್ಮ ಭಾರತದ ಶಾಸ್ತ್ರಗಳಲ್ಲಿ ಅನೇಕ ಆರೋಗ್ಯಕರ ಆಹಾರ ಕ್ರಮಗಳನ್ನು ಹೇಳಿದ್ದಾರೆ. ಅದನ್ನು ಪಾಲಿಸುವುದು ನಮ್ಮ ಧರ್ಮ, ಆದರೆ ನಮ್ಮ ಯುವಕ ಜನತೆ ಈ ನಿಯಮಗಳನ್ನು ಮುರಿದು ವಿದೇಶಿ ಆಹಾರ ಪದ್ದತಿಗಳಿಗೆ ಒಳಲಾಗಿದ್ದಾರೆ. ಹೌದು ನಮ್ಮಲ್ಲಿ ಹಾಸಿಗೆ ಮೇಲೆ ಕುಳಿತು ಊಟ ಮಾಡುವ ಕ್ರಮವಿಲ್ಲ, ಅದರೂ ನಾವು ಅದನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಹಾಸಿಗೆ ಮೇಲೆ ಊಟ ಮಾಡುವುದು ಕೆಟ್ಟದು ಎಂದು ನಮ್ಮ ಶಾಸ್ತ್ರ ಹೇಳಿದೆ. ಇದರಿಂದ ನಮ್ಮ ಆರೋಗ್ಯದ ಮೇಲೆ ಹಾಗೂ ನಮ್ಮ ಜೀವನಶೈಲಿಯ ಮೇಲೆ ಉಂಟಾಗುವ ಸಾಧ್ಯತೆ ಇದೆ.

ಹಾಸಿಗೆಯ ಮೇಲೆ ಕುಳಿತು ಊಟ ಮಾಡಬೇಡಿ, ಇದಕ್ಕಿಂತ ದೊಡ್ಡ ದರಿದ್ರ ಬೇರಿಲ್ಲ
ಸಾಂದರ್ಭಿಕ ಚಿತ್ರ Image Credit source: Getty Images
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 09, 2025 | 3:41 PM

ನಮ್ಮ ಜೀವನಶೈಲಿಯಲ್ಲಿ (Lifestyle) ಮಾಡುವ ಕೆಲವೊಂದು ತಪ್ಪುಗಳನ್ನು ಈ ಹಿಂದೆಯೇ ನಮ್ಮ ಹಿರಿಯರು ಹೇಳಿರುತ್ತಾರೆ. ಇಂತಹ ವಿಚಾರಗಳನ್ನು ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬಾರದು ಎಂಬ ಸೂಚನೆ ಹಾಗೂ ಕ್ರಮವನ್ನು ನಮ್ಮ ಹಿರಿಯರು ಈ ಹಿಂದೆಯೇ ಹಾಕಿರುತ್ತಾರೆ. ಅದರೂ ನಾವು ಅಂತಹ ತಪ್ಪುಗಳು ಇಂದಿಗೂ ಮಾಡಿತ್ತಿದ್ದೇವೆ. ಈಗಿನ ಯುವಕ-ಯುವತಿಯರಿಗೆ ಕಾಲ ಮೇಲೆ ಕಾಲು ಹಾಕಿಕೊಂಡು ಕೂತು ಊಟ ಮಾಡುವ ಅಭ್ಯಾಸ ಇದೆ. ಇದು ಕೂಡ ತಪ್ಪು ಎನ್ನುವುದು ನಮ್ಮ ಹಿರಿಯರ ಮಾತು. ಇನ್ನು ಕೆಲವರಿಗೆ ಹಾಸಿಗೆ ಮೇಲೆ ಕೂತು ರೂಮ್ ಲಾಕ್ ಮಾಡುವ ಊಟ ಮಾಡುವ ಅಭ್ಯಾಸಗಳು ಕೂಡ ಇದೆ. ಇದು ತಪ್ಪು ಎನ್ನುವುದು ಹಿರಿಯರ ವಾದವಾಗಿರುತ್ತದೆ. ಅಷ್ಟಕ್ಕೂ ಯಾಕೆ ಹಾಸಿಗೆ ಮೇಲೆ ಕೂತು ಊಟ ಮಾಡಬಾರದು ಎಂಬುದಕ್ಕೆ ಇಲ್ಲಿದೆ ಕಾರಣ.

ಶಾಸ್ತ್ರಗಳಲ್ಲಿ ಪ್ರತಿಯೊಂದಕ್ಕೂ ಸಂಬಂಧಿಸಿದ ನಿಯಮಗಳಿವೆ, ಅವುಗಳನ್ನು ಅನುಸರಿಸುವ ಮೂಲಕ ನಾವು ಜೀವನದಲ್ಲಿ ನಕಾರಾತ್ಮಕತೆ ವಿಚಾರಗಳನ್ನು ಪರಿಣಾಮ ಬೀರುತ್ತದೆ. ಅದೇ ಕಾರಣಕ್ಕಾಗಿ ನಮ್ಮ ಹಿರಿಯರು ಅನೇಕ ಕೆಟ್ಟ ಅಭ್ಯಾಸಗಳನ್ನು ಅಳವಡಿಸಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಇಂತಹ ಅಭ್ಯಾಸಗಳು ನಮ್ಮ ದೈಹಿಕ ಹಾಗೂ ಮಾನಸಿಕದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ನೀವು ಹಾಸಿಗೆಯ ಮೇಲೆ ಕುಳಿತು ಊಟ ಮಾಡುವ ಅಭ್ಯಾಸ ನಿಮಗೆ ಚಿಕ್ಕ ವಯಸ್ಸಿನಿಂದ ಇರಬಹುದು, ಅನೇಕ ಬಾರಿ ನಿಮ್ಮ ಮನೆಯ ಹಿರಿಯರು ಈ ಕಾರಣಕ್ಕೆ ನಿಮ್ಮನ್ನು ಗದರಿಸಿರಬಹುದು. ಹಾಸಿಗೆಯ ಮೇಲೆಯೇ ಊಟ ಮಾಡಿದರೆ ಏನಾಗುತ್ತದೆ?

ನಮ್ಮ ಹಿರಿಯರು ಹಾಗೂ ಶಾಸ್ತ್ರಗಳ ಪ್ರಕಾರ ಹಾಸಿಕೆ ಮೇಲೆ ಕುಳಿತು ಊಟ ಮಾಡುವುದು ಅಶುಭ, ನಮ್ಮಲ್ಲಿ ಅನ್ನಕ್ಕೆ ವಿಶೇಷ ಸ್ಥಾನವಿದೆ, ಅದಕ್ಕೆ ಅಗೌರವ ತೋರಬಾರದು ಎಂಬುದು ನಮ್ಮ ಹಿರಿಯರ ಭಾವನೆ. ಹೌದು ಹಾಸಿಗೆ ಮೇಲೆ ಕುಳಿತು ಊಟ ಮಾಡಿದ್ರೆ ಅನ್ನಕ್ಕೆ ಅಗೌರ ತೋರಿಸಿದಂತೆ, ಆ ಕಾರಣಕ್ಕೆ ಈ ಅಭ್ಯಾಸವನ್ನು ನಮ್ಮ ಹಿರಿಯರು ವಿರೋಧಿಸುತ್ತಾರೆ. ಹಾಸಿಗೆ ಅಶುದ್ಧವಾದ ಸ್ಥಾ, ಅಲ್ಲಿ ನಾವು ಹೇಗೆ ಬೇಕು ಹಾಗೆ ಉಪಯೋಗಿಸುತ್ತೇವೆ ಆ ಕಾರಣಕ್ಕೆ ಅದು ಗೌರವಯುತವಾದ ಸ್ಥಾನವಲ್ಲ.

ಇದನ್ನೂ ಓದಿ
Image
ಹೊಸ ವರ್ಷ ಆಚರಿಸಿ ಫೂಲ್ ಆದ ದೇಶ ಯಾವುದು?
Image
ದೇಹ ಆಕಾರವೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ
Image
ಬೇಸಿಗೆಯ ದಾಹ ನೀಗಿಸಲು ಎಳನೀರು ಕುಲುಕ್ಕಿ ಶರ್ಬತ್‌ ಒಮ್ಮೆ ಟ್ರೈ ಮಾಡಿ…
Image
ಭಾರತದ ಹೊರತುಪಡಿಸಿ ವಿದೇಶದಲ್ಲಿರುವ ಪ್ರಮುಖ ಶಿವ ದೇವಾಲಯಗಳಿವು

ಇದು ವೇಳೆ ನೀವು ಹಾಸಿಗೆ ಮೇಲೆ ಊಟ ಅಥವಾ ಆಹಾರ ಸೇವನೆ ಮಾಡಿದ್ರೆ, ಲಕ್ಷ್ಮೀ ದೇವಿ ಕೋಪ ಮಾಡಿಕೊಳ್ಳುತ್ತಾಳೆ. ಇದರ ಜತೆಗೆ ಗ್ರಹಗಳಾದ ರಾಹು ಮತ್ತು ಗುರು ಸಹ ಕೋಪಗೊಳ್ಳುತ್ತವೆ ಎಂಬುದನ್ನು ಶಾಸ್ತ್ರ ಹೇಳುತ್ತದೆ. ಜ್ಯೋತಿಷ್ಯವು ಸಂತೋಷ ಮತ್ತು ಸಮೃದ್ಧಿಯಲ್ಲಿ ಲಕ್ಷ್ಮಿ ದೇವತೆ, ರಾಹು ಮತ್ತು ಗುರುವಿನ ಪ್ರಮುಖ ಪಾತ್ರವನ್ನು ವಿವರಿಸುತ್ತದೆ. ಈ ಮೂರು ನಿಮ್ಮ ಕೆಟ್ಟ ಅಭ್ಯಾಸಗಳಿಂದ ಕಿರಿಕಿರಿಗೊಂಡರೆ, ನಿಮ್ಮ ಜೀವನವು ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಅದಕ್ಕಾಗಿ ನೀವು ಯಾವ ಸ್ಥಳದಲ್ಲಿ ಊಟ ಮಾಡಬೇಕು ಎಂಬುದನ್ನು ಕೂಡ ಶಾಸ್ತ್ರ ಹೇಳುತ್ತದೆ. ಊಟ ಮಾಡಲು ಸರಿಯಾದ ಸ್ಥಳ ಅಡುಗೆ ಮನೆ, ಹಿಂದಿನ ಕಾಲದಲ್ಲಿ, ಜನರು ಅಡುಗೆಮನೆಯಲ್ಲಿ ಕುಳಿತು ಊಟ ಮಾಡುತ್ತಿದ್ದರು. ಅಡುಗೆಮನೆಯಲ್ಲಿ ಊಟ ಮಾಡಲು ಒಂದು ಕಾರಣವೆಂದರೆ ಅಡುಗೆಮನೆಯಲ್ಲಿಯೇ ಆಹಾರವನ್ನು ತಯಾರಿಸಲಾಗುತ್ತಿತ್ತು ಮತ್ತು ಅಲ್ಲಿ ಬಡಿಸಲು ಸುಲಭವಾಗಿತ್ತು ಮತ್ತು ಕುಟುಂಬ ಸದಸ್ಯರು ಬಿಸಿ ಆಹಾರವನ್ನು ಆನಂದಿಸುತ್ತಿದ್ದರು. ಅದಕ್ಕೆ ನೋಡಿ ಇಂದಿಗೂ ಕಿಚನ್ ಪಕ್ಕವೇ ಡೈನಿಂಗ್​​ ಟೇಬಲ್ ಇರುತ್ತದೆ.

ಇದನ್ನೂ ಓದಿ: ಊಟ ಮಾಡಿದ ನಂತರ ಬಾಳೆ ಎಲೆಯನ್ನು ಒಳಮುಖವಾಗಿ ಮಡಚುವುದೇಕೆ?

ಇನ್ನು ಉತ್ತಮ ಅಭ್ಯಾಸವೆಂದರೆ, ನೆಲದ ಮೇಲೆ ಅಥವಾ ಡೈನಿಂಗ್​​ ಮೇಲೆ ಕುಳಿತು ಊಟ ಮಾಡುವುದು. ಇದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಹೊಟ್ಟೆ ನೇರವಾಗಿರುತ್ತದೆ ಮತ್ತು ಆಹಾರವು ನೇರವಾಗಿ ನಿಮ್ಮ ಹೊಟ್ಟೆಗೆ ಹೋಗುತ್ತದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭಗೊಳಿಸುತ್ತದೆ. ಹಾಸಿಗೆಯ ಮೇಲೆ ಕುಳಿತು ಊಟ ಮಾಡುವಾಗ ದೇಹವು ಬಾಗಿರುತ್ತದೆ ಮತ್ತು ಇದರಿಂದಾಗಿ ಆಹಾರವು ಶ್ವಾಸನಾಳದಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ