ಮಹಿಳೆಯರಲ್ಲಿ ಲೈಂಗಿಕ ಸಂಭೋಗದ ನಂತರ ಕಂಡುಬರುತ್ತದೆ ಹನಿಮೂನ್ ಸಿಸ್ಟೈಟಿಸ್ ಸೋಂಕು
ಮದುವೆಯ ನಂತರ ಮಹಿಳೆಯರು ತುಂಬಾ ಎಚ್ಚರವಾಗಿರಬೇಕು. ಅದರಲ್ಲೂ ಲೈಂಗಿಕ ಸಂಭೋಗ ನಡೆಸುವಾಗ, ಮಹಿಳೆಯರ ಖಾಸಗಿ ಭಾಗ ಸೇರಿದಂತೆ ಎಲ್ಲವನ್ನು ಸ್ವಚ್ಛವಾಗಿಡಿಬೇಕು ಯಾಕೆಂದರೆ, ನಿಮ್ಮ ದೇಹಕ್ಕೆ ಹನಿಮೂನ್ ಸಿಸ್ಟೈಟಿಸ್ ಸೋಂಕು ಉಂಟಾಗುವ ಸಾಧ್ಯತೆ ಇದೆ. ಅದಕ್ಕಾಗಿ ಯಾವೆಲ್ಲ ಕ್ರಮವನ್ನು ತೆಗೆದುಕೊಳ್ಳಬೇಕು. ಈ ಸೋಂಕು ಹೇಗೆ ಹರಡುತ್ತದೆ. ಯಾವೆಲ್ಲ ಕ್ರಮಗಳನ್ನು ಅನುಸರಿಬೇಕು ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ ನೋಡಿ.

ಮಹಿಳೆಯರು ಜೀವನಶೈಲಿಯ ಆರೋಗ್ಯದ ಮೇಲೆ ತುಂಬ ಒತ್ತು ನೀಡುವುದಿಲ್ಲ. ಹಾಗೂ ಅದರ ಬಗ್ಗೆ ಅವರಿಗೆ ಅರಿವು ಕೂಡ ಇರುವುದಿಲ್ಲ. ಇದು ಅವರ ಆರೋಗ್ಯದ ಮೇಲೆ ಬಹುದೊಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಅದರಲ್ಲೂ ಮದುವೆಯಾದ ಮಹಿಳೆಯರ ಆರೋಗ್ಯ ತುಂಬಾ ಉತ್ತಮವಾಗಿರಬೇಕು ಏಕೆಂದರೆ ಅವರ ಮುಂದಿನ ದಾಂಪತ್ಯದ ಜೀವನದ ಆರೋಗ್ಯ ಮತ್ತಷ್ಟು ಕೆಟ್ಟದಾಗಿರುತ್ತದೆ. ಅದಕ್ಕಾಗಿ ಮಹಿಳೆಯರ ದೇಹದಲ್ಲಾವ ಎಲ್ಲ ಬದಲಾವಣೆಯನ್ನು ತಿಳಿದುಕೊಳ್ಳಬೇಕು. ಮದುವೆ ಮುಂಚೆ ಹಾಗೂ ನಂತರದಲ್ಲಿ ಆಗುವ ಆರೋಗ್ಯದ ಬದಲಾವಣೆಯ ಬಗ್ಗೆ ಅರಿವು ಇರಬೇಕು. ಅದೆಷ್ಟೋ ಮಹಿಳೆಯರಿಗೆ ಹನಿಮೂನ್ ಸಿಸ್ಟೈಟಿಸ್ (Honeymoon cystitis) ಬಗ್ಗೆ ತಿಳಿದಿರಲ್ಲ, ಇದು ಒಂದು ರೀತಿಯ ಸೋಂಕು. ಇದು ಸಾಮಾನ್ಯವಾಗಿ ಮಹಿಳೆಯರಲ್ಲಿ ಲೈಂಗಿಕ ಸಂಭೋಗದ ನಂತರ ಕಂಡುಬರುತ್ತದೆ. ಅನೇಕರು ಸಂಭೋಗದ ನಂತರ ತಮ್ಮ ಖಾಸಗಿ ಭಾಗ ಅಥವಾ ನಮ್ಮ ದೇಹವನ್ನು ಸ್ವಚ್ಛವಾಗಿ ಇಡುವುದಿಲ್ಲ. ಈ ಸೋಂಕಿಗೆ ಇದುವೇ ಪ್ರಮುಖ ಕಾರಣವಾಗಿರುತ್ತದೆ. ಪ್ರತಿಯೊಬ್ಬ ಮಹಿಳೆಯ ದೇಹದ ಪ್ರತಿಯೊಂದು ಭಾಗವು ತುಂಬಾ ಸೂಕ್ಷ್ಮವಾಗಿರುತ್ತದೆ. ಅದರ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ.
ಹನಿಮೂನ್ ಸಿಸ್ಟೈಟಿಸ್ದಲ್ಲಿ ಕಂಡು ಬರುವ ಲಕ್ಷಗಳೇನು? ಹಾಗೂ ಹೇಗೆ ಬರುತ್ತದೆ?
- ಈ ಸೋಂಕು ಉರಿಯೂತ ಮತ್ತು ಊತವನ್ನು ಸಹ ಉಂಟುಮಾಡುತ್ತದೆ.
- ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಉರಿಯೂತದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
- ಹೊಸದಾಗಿ ಮದುವೆಯಾದ ಮಹಿಳೆಯರಲ್ಲಿ ಹನಿಮೂನ್ ಸಿಸ್ಟೈಟಿಸ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
- ಇದು ಯಾವುದೇ ವಯಸ್ಸಿನ ಮಹಿಳೆಯರ ಮೇಲೆ ಪರಿಣಾಮ ಬೀರಬಹುದು.
- ಲೈಂಗಿಕ ಸಂಭೋಗದ ಸಮಯದಲ್ಲಿ, ಬ್ಯಾಕ್ಟೀರಿಯಾಗಳು ಮೂತ್ರನಾಳದ ಮೂಲಕ ದೇಹವನ್ನು ಪ್ರವೇಶಿಸಿ ಸೋಂಕನ್ನು ಉಂಟುಮಾಡುತ್ತವೆ.
- ಒಂದು ವೇಳೆ ಇದಕ್ಕೆ ಚಿಕಿತ್ಸೆ ಮಾಡದಿದ್ದರೆ ಮೂತ್ರಪಿಂಡಗಳಿಗೆ ಹರಡಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
- ಈ ಸೋಂಕಿನ ನಂತರ, ಹೊಟ್ಟೆಯ ಕೆಳಭಾಗದಲ್ಲಿ ನೋವು ಅನುಭವಿಸುತ್ತದೆ.
- ಲೈಂಗಿಕ ಸಂಭೋಗದ ಮೊದಲು ಅಥವಾ ನಂತರ ನೈರ್ಮಲ್ಯವನ್ನು ಕಾಪಾಡಿಕೊಳ್ಳದಿದ್ದರೆ, ಸೋಂಕಿನ ಅಪಾಯ ಹೆಚ್ಚಾಗುತ್ತದೆ.
- ದಿನವಿಡೀ ಹೆಚ್ಚು ನೀರು ಕುಡಿಯಿರಿ, ಇದು ಬ್ಯಾಕ್ಟೀರಿಯಾಗಳು ದೇಹದಿಂದ ಸುಲಭವಾಗಿ ಹೊರಬರಲು ಸಹಾಯ ಮಾಡುತ್ತದೆ.
- ಮೊಸರು ಮತ್ತು ಇತರ ಪ್ರೋಬಯಾಟಿಕ್‌ಗಳನ್ನು ತಿನ್ನುವುದರಿಂದ ಒಳ್ಳೆಯ ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ
- ಹನಿಮೂನ್ ಸಿಸ್ಟೈಟಿಸ್ ತಪ್ಪಿಸಲು, ನಿಮ್ಮ ಖಾಸಗಿ ಭಾಗಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಕಾಳಜಿ ವಹಿಸಿ.
ಇಲ್ಲಿ ಒದಗಿಸಲಾದ ಮಾಹಿತಿಯು ನಿಮ್ಮ ಮಾಹಿತಿಗಾಗಿ ಮಾತ್ರ. ಯಾವುದೇ ಚಿಕಿತ್ಸೆಯನ್ನು ಮಾಡುವ ಮೊದಲು ತಜ್ಞರ ಸಲಹೆಯನ್ನು ಪಡೆಯುವುದು ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Wed, 9 April 25