Banana Leaf Dining: ಊಟ ಮಾಡಿದ ನಂತರ ಬಾಳೆ ಎಲೆಯನ್ನು ಒಳಮುಖವಾಗಿ ಮಡಚುವುದೇಕೆ?
ಹಿಂದೂ ಸಂಪ್ರದಾಯದಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವುದು ಪವಿತ್ರವೆಂದು ಪರಿಗಣಿಸಲಾಗಿದೆ. ಊಟಕ್ಕೂ ಮೊದಲು ನೀರು ಚಿಮುಕಿಸುವುದು ಮತ್ತು ಊಟದ ನಂತರ ಎಲೆಯನ್ನು ಒಳಮುಖವಾಗಿ ಮಡಚುವುದು ಪ್ರಮುಖ ಪದ್ಧತಿಗಳಾಗಿವೆ. ಇದಕ್ಕೆ ಆರೋಗ್ಯಕರ ಕಾರಣಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳಿವೆ. ಈ ಲೇಖನದಲ್ಲಿ ಬಾಳೆ ಎಲೆ ಊಟದ ಹಿಂದಿನ ಪದ್ಧತಿಗಳು ಮತ್ತು ಅವುಗಳ ಮಹತ್ವವನ್ನು ಚರ್ಚಿಸಲಾಗಿದೆ.

ಹಿಂದೂ ಸಂಪ್ರದಾಯದಲ್ಲಿ ಬಾಳೆ ಎಲೆ ಊಟವನ್ನು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಬಾಳೆ ಎಲೆಗಳನ್ನು ಪ್ರಾಚೀನ ಕಾಲದಿಂದಲೂ ವಿವಿಧ ಆಚರಣೆಗಳು, ಸಮಾರಂಭಗಳು ಮತ್ತು ದೈನಂದಿನ ಆಹಾರ ಪದ್ಧತಿಗಳಲ್ಲಿ ಬಳಸಲಾಗುತ್ತಿದೆ. ನಮ್ಮ ಸಂಸ್ಕೃತಿ ಆರೋಗ್ಯಕರ ಜೀವನಶೈಲಿಯ ಸಂಕೇತವಾಗಿದೆ. ಬಾಳೆ ಎಲೆಯ ಊಟ ಅಮೃತಕ್ಕೆ ಸಮ ಎಂಬ ನಂಬಿಕೆ ಇದೆ. ಇದರಲ್ಲಿರುವ ಅನೇಕ ಪೋಷಕಾಂಶಗಳು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಅದರಂತೆ ಬಾಳೆ ಎಲೆಯಲ್ಲಿ ಊಟ ಮಾಡುವಾಗ ಕೆಲವೊಂದು ಪದ್ಧತಿಯನ್ನು ಅನುಸರಿಸಲಾಗುತ್ತದೆ. ಎಲೆಯನ್ನು ತೊಳೆಯುವುದರಿಂದ ಹಿಡಿದು ಕೊನೆಗೆ ಊಟ ಮಾಡಿ ಎಲೆ ಮಡಚುವುದರ ತನಕ ಕೆಲವು ಪದ್ಧತಿಗಳಿವೆ.
ಊಟಕ್ಕೂ ಮೊದಲು ಬಾಳೆ ಎಲೆಗೆ ನೀರು ಚಿಮುಕಿಸಲು ಕಾರಣ:
ಊಟ ಮಾಡುವ ಮೊದಲು ಬಾಳೆ ಎಲೆಯ ಮೇಲೆ ನೀರು ಚಿಮುಕಿಸುವುದು ಶತಮಾನಗಳಷ್ಟು ಹಳೆಯದಾದ ಪದ್ಧತಿ. ಇದಕ್ಕೆ ವಿವಿಧ ಕಾರಣಗಳನ್ನು ನೀಡಲಾಗಿದೆ. ಬಾಳೆ ಎಲೆಗಳು ನೈಸರ್ಗಿಕವಾಗಿ ಕೀಟಗಳು ಮತ್ತು ಸೂಕ್ಷ್ಮಜೀವಿಗಳನ್ನು ಆಶ್ರಯಿಸಿರುತ್ತವೆ. ನೀರು ಸಿಂಪಡಿಸುವುದು ಮತ್ತು ಸ್ವಚ್ಛಗೊಳಿಸುವುದರಿಂದ ಎಲೆಗಳ ಮೇಲಿನ ಕೀಟಗಳು ಮತ್ತು ಸೂಕ್ಷ್ಮಜೀವಿಗಳು ನಾಶ ವಾಗುತ್ತವೆ. ಎಲೆಯಿಂದ ಧೂಳು ಮತ್ತು ಕೊಳೆಯನ್ನು ತೆಗೆದುಹಾಕಿ ಸ್ವಚ್ಛವಾಗಿಡಲು ಸಹ ಇದನ್ನು ಮಾಡಲಾಗುತ್ತದೆ.
ಇದಲ್ಲದೇನೀರು ಸಿಂಪಡಿಸುವುದರಿಂದ ಎಲೆಗಳು ಗಟ್ಟಿಯಾಗುತ್ತವೆ. ಹೀಗೆ ಮಾಡುವುದರಿಂದ ತಿನ್ನುವಾಗ ಎಲೆಗಳು ಹರಿದು ಹೋಗುವಂತಹ ಸಮಸ್ಯೆಗಳು ಬರುವುದಿಲ್ಲ. ಬಾಳೆ ಎಲೆಯ ಮೇಲೆ ನೀರು ಸಿಂಪಡಿಸುವುದು ಬಹಳ ಪವಿತ್ರ ಕಾರ್ಯ ಎಂದು ನಂಬಲಾಗಿದೆ.
ಇದನ್ನೂ ಓದಿ: ಮನೆಯಲ್ಲಿ ಗಿಳಿ ಸಾಕಿದ್ದೀರಾ ಅಥವಾ ಸಾಕುವ ಪ್ಲ್ಯಾನ್ ಇದ್ಯಾ? ಹಾಗಿದ್ರೆ ಈ ವಿಷ್ಯ ತಿಳಿದಿರಲಿ
ತಿಂದ ನಂತರ ಎಲೆಯನ್ನು ಒಳಮುಖವಾಗಿ ಮಡಚಲು ಕಾರಣಗಳು:
ಬಾಳೆ ಎಲೆಯಲ್ಲಿ ಊಟ ಮಾಡಿದ ನಂತರ ಅದನ್ನು ಒಳಮುಖವಾಗಿ ಮಡಚಲಾಗುತ್ತದೆ. ಹೀಗೆ ಮಾಡುವುದರಿಂದ ಆಹಾರವನ್ನು ತಯಾರಿಸಿ ಬಡಿಸಿದವರಿಗೆ ಗೌರವ ತೋರಿಸುವ ಒಂದು ಮಾರ್ಗವೆಂದು ಪರಿಗಣಿಸಲಾಗಿದೆ. ಕೆಲವೊಮ್ಮೆ ಆಹಾರದ ಉಳಿಕೆಗಳು ಎಲೆಯ ಒಳಭಾಗದಲ್ಲಿ ಉಳಿಯುತ್ತವೆ. ಆದ್ದರಿಂದ, ಎಲೆಯನ್ನು ಹೊರಗಿನಿಂದ ಒಳಮುಖವಾಗಿ ಮಡಚುವುದು ಸುಲಭ. ಅಲ್ಲದೆ, ಎಲೆಯನ್ನು ಒಳಮುಖವಾಗಿ ಮಡಿಸುವುದರಿಂದ ಸೂರ್ಯನ ಬೆಳಕು ಅದರೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಇದು ಅದರಲ್ಲಿರುವ ಆಹಾರ ಕೆಡದಂತೆ ತಡೆಯುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ