ಹುಡುಗರು ಹೆಚ್ಚಾಗಿ ವಿವಾಹಿತ ಮಹಿಳೆಯರನ್ನೇ ಇಷ್ಟಪಡೋದು ಏಕೆ ಗೊತ್ತಾ?
ಹೆಚ್ಚಾಗಿ ಪುರುಷರು ತಮಗಿಂತ ವಯಸ್ಸಿನಲ್ಲಿ ಕಿರಿಯ ವಯಸ್ಸಿನ ಮಹಿಳೆಯರನ್ನು ಮದುವೆಯಾಗ್ತಾರೆ. ಆದ್ರೆ ಹುಡುಗರು, ಯುವಕರು ಮಾತ್ರ ಅವಿವಾಹಿತ ಮಹಿಳೆ ಅಥವಾ ಹುಡುಗಿಗಿಂತ ವಿವಾಹಿತ ಮಹಿಳೆಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಅಲ್ಲದೆ ಯುವಕರು ವಿವಾಹಿತ ಮಹಿಳೆಯರ ಪ್ರೀತಿಯಲ್ಲಿ ಬಿದ್ದ ಸಾಕಷ್ಟು ಪ್ರಕರಣಗಳು ಕೂಡಾ ನಡೆದಿದೆ. ಅಷ್ಟಕ್ಕೂ ಹುಡುಗರು, ಯುವಕರು ವಿವಾಹಿತ ಮಹಿಳೆಯರತ್ತ ಆಕರ್ಷಿತರಾಗೋದು ಏಕೆ ಗೊತ್ತಾ? ಇಲ್ಲಿದೆ ಈ ಕುರಿತ ಇಂಟರೆಸ್ಟಿಂಗ್ ಸಂಗತಿ.

ಯುವಕರು (young men) ತಮ್ಮದೇ ವಯಸ್ಸಿನ ಅಥವಾ ತಮಗಿಂತ ಕಿರಿಯ ವಯಸ್ಸಿನ ಹುಡುಗಿಯರಿಗಿಂತ ವಯಸ್ಸಿನಲ್ಲಿ ತಮಗಿಂತ ದೊಡ್ಡವರಿರುವ ಮಹಿಳೆಯರು, ವಿವಾಹಿತ ಮಹಿಳೆಯರು (Married women) ಹೆಚ್ಚು ಇಷ್ಟ (like) ಆಗ್ತಾರಪ್ಪ ಎಂದು ಹೇಳುವ ಮಾತನ್ನು ನೀವು ಕೂಡಾ ಕೇಳಿರುತ್ತೀರಿ ಅಲ್ವಾ. ಅದಲ್ಲದೆ ಈಗಂತೂ ಯುವಕರು ತಮ್ಮ ಫ್ರೆಂಡ್ಸ್‌ಗೆಲ್ಲಾ ಆಂಟಿ ಲವ್ವರ್ ಅಂತೆಲ್ಲಾ ಚುಡಾಯಿಸುವಂತಹದ್ದು ಕೂಡಾ ರೂಢಿಯಲ್ಲಿದೆ. ಈ ಕುರಿತ ಮೀಮ್ಸ್‌ಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಅದರಲ್ಲೂ ಕೆಲ ಹುಡುಗ್ರಂತೂ ತಮ್ಮದೇ ವಯಸ್ಸಿನ ಹುಡುಗಿಯರಿಗಿಂತ ವಿವಾಹಿತ ಮಹಿಳೆಯರ ಜೊತೆ ಪ್ರೀತಿಯಲ್ಲಿ ಬೀಳಲು, ಡೇಟಿಂಗ್ ಹೋಗಲು ಹಂಬಲಿಸುತ್ತಿರುತ್ತಾರೆ. ಅಷ್ಟಕ್ಕೂ ಹುಡುಗರು ವಿವಾಹಿತ ಮಹಿಳೆಯರತ್ತ ಹೆಚ್ಚು ಆಕರ್ಷಕರಾಗೋದು (attract) ಏಕೆ ಗೊತ್ತಾ? ಇಲ್ಲಿದೆ ಈ ಕುರಿತ ಕುತೂಹಲಕಾರಿ ಮಾಹಿತಿ.
ಹುಡುಗರು ಹೆಚ್ಚಾಗಿ ವಿವಾಹಿತ ಮಹಿಳೆಯರನ್ನುಇಷ್ಟಪಡೋದು ಏಕೆ?
ಕಾಳಜಿ ವಹಿಸುವ ಸ್ವಭಾವ:
ವಿವಾಹಿತ ಮಹಿಳೆಯರು ತುಂಬಾ ಕಾಳಜಿ ವಹಿಸುವ ಸ್ವಭಾವವನ್ನು ಹೊಂದಿರುತ್ತಾರೆ. ವಿವಾಹಿತ ಮಹಿಳೆಯರು ಹೆಚ್ಚಾಗಿ ತಮಗಿಂತ ತಮ್ಮ ಸುತ್ತಮುತ್ತಲಿನ ಜನರ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತಾರೆ ಮತ್ತು ತಮ್ಮವರನ್ನು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾರೆ. ಈ ಕಾಳಜಿ ವಹಿಸುವ ಗುಣ ಸ್ವಭಾವದ ಕಾರಣದಿಂದಾಗಿ ಯುವಕರು ತಮ್ಮ ವಯಸ್ಸಿನ ಹುಡುಗಿಯರಿಗಿಂತ ವಿವಾಹಿತ ಮಹಿಳೆಯರತ್ತ ಬೇಗನೆ ಆಕರ್ಷಿತರಾಗುತ್ತಾರೆ.
ಸಂಬಂಧಗಳ ಉತ್ತಮ ತಿಳುವಳಿಕೆ:
ಅವಿವಾಹಿತ ಮಹಿಳೆಯರಿಗಿಂತ ವಿವಾಹಿತ ಮಹಿಳೆಯರಿಗೆ ಸಂಬಂಧಗಳ ಬಗ್ಗೆ ಹೆಚ್ಚಿನ ಗೌರವವಿರುತ್ತದೆ ಮತ್ತು ಭಾವನೆಗಳಿಗೆ ಬೆಲೆ ಕೊಡುತ್ತಾರೆ, ಸಂಬಂಧವನ್ನು ಹೇಗೆ ತೂಗಿಸಿಕೊಂಡು ಹೋಗಬೇಕು ಎಂಬ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುತ್ತಾರೆ. ಪುರುಷರು ಸಾಮಾನ್ಯವಾಗಿ ಮಹಿಳೆಯರ ಈ ತಿಳುವಳಿಕೆಯನ್ನು ತುಂಬಾ ಇಷ್ಟಪಡುತ್ತಾರೆ. ಈ ಕಾರಣದಿಂದಲೂ ಕೂಡ ಹುಡುಗರು ಮಹಿಳೆಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ.
ದೈಹಿಕ ಆಕರ್ಷಣೆ:
ಮದುವೆಯಾಗದ ಹುಡುಗಿಯರಿಗೆ ಹೋಲಿಸಿದರೆ ವಿವಾಹಿತ ಮಹಿಳೆಯರು ಹೆಚ್ಚು ಸುಂದರವಾಗಿ ಕಾಣುತ್ತಾರೆ. ಮದುವೆಯ ನಂತರ ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಯ ಕಾರಣದಿಂದಾಗಿ ಮುಖದ ಕಾಂತಿಯ ಜೊತೆಗೆ ದೇಹದಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ. ಈ ದೈಹಿಕ ಆಕರ್ಷಣೆಯೂ ಯುವಕರನ್ನು ವಿವಾಹಿತ ಮಹಿಳೆಯರ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ.
ಡ್ರೆಸ್ಸಿಂಗ್ ಸೆನ್ಸ್:
ಹುಡುಗಿಯರಿಗೆ ಹೋಲಿಸಿದರೆ ವಿವಾಹಿತ ಮಹಿಳೆಯರು ಉತ್ತಮ ಡ್ರೆಸ್ಸಿಂಗ್ ಸೆನ್ಸ್ ಹೊಂದಿರುತ್ತಾರೆ. ಇವರ ಉಡುಗೆ ತೊಡುಗೆಯಿಂದಲೇ ವಿವಾಹಿತ ಮಹಿಳೆಯತ್ತ ಹುಡುಗರು ಆರ್ಕಷಿತರಾಗುತ್ತಾರೆ.
ಇದನ್ನೂ ಓದಿ: ನಿಮ್ಮ ನಾಭಿಯ ಆಕಾರ ಹೇಳುತ್ತೆ ನಿಮ್ಮ ವ್ಯಕ್ತಿತ್ವದ ಸೀಕ್ರೆಟ್
ಆತ್ಮವಿಶ್ವಾಸ:
ವಿವಾಹಿತ ಮಹಿಳೆಯರು ಅವಿವಾಹಿತ ಹುಡುಗಿಯರಿಗಿಂತ ಹೆಚ್ಚು ಆತ್ಮವಿಶ್ವಾಸ ಹೊಂದಿರುತ್ತಾರೆ. ಮನೆ, ಮಕ್ಕಳು ಮತ್ತು ಕಚೇರಿಯ ಅಂತೆಲ್ಲಾ ಎಲ್ಲಾ ಜವಾಬ್ದಾರಿಗಳನ್ನು ಆಕೆ ಒಬ್ಬಂಟಿಯಾಗಿ ನಿರ್ವಹಿಸುತ್ತಾಳೆ. ಹೀಗೆ ಜೀವನ ಅನುಭವ ಮತ್ತು ಜವಾಬ್ದಾರಿಯೊಂದಿಗೆ ವಿವಾಹಿತ ಮಹಿಳೆಯ ಆತ್ಮವಿಶ್ವಾಸ ಕೂಡಾ ಬೆಳೆಯುತ್ತದೆ. ವಿವಾಹಿತ ಮಹಿಳೆಯರ ಈ ಆತ್ಮವಿಶ್ವಾಸದ ಗುಣ ಯುವಕರನ್ನು ಹೆಚ್ಚಾಗಿ ಆಕರ್ಷಿಸುತ್ತದೆ.
ಪ್ರಬುದ್ಧತೆ:
ಹುಡುಗಿಯರಿಗಿಂತ ವಿವಾಹಿತ ಮಹಿಳೆಯರು ಪ್ರಬುದ್ಧರಾಗಿರುತ್ತಾರೆ. ಹೌದು ಇವರು ಸಣ್ಣ ಸಣ್ಣ ವಿಷಯಗಳಿಗೆ ಕೋಪಗೊಳ್ಳುವುದಿಲ್ಲ, ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ವಿವಾಹಿತ ಮಹಿಳೆಯರು ಯಾವಾಗಲೂ ಜೀವನವನ್ನು ಪ್ರಾಯೋಗಿಕ ದೃಷ್ಟಿಯಿಂದ ನೊಡುತ್ತಾರೆ. ಜೊತೆಗೆ ನಡವಳಿಕೆಯಲ್ಲೂ ಕೂಡಾ ಒಂದು ತೂಕ ಇರುತ್ತದೆ. ಈ ಅಂಶ ಕೂಡಾ ಯುವಕರನ್ನು ಆಕರ್ಷಿಸುತ್ತದೆ.
ಅರ್ಥ ಮಾಡಿಕೊಳ್ಳುವ ಗುಣ:
ಹುಡುಗಿಯರಿಗೆ ಹೋಲಿಸಿದರೆ ವಿವಾಹಿತ ಮಹಿಳೆಯರು ಬಹುಬೇಗನೆ ವಿಚಾರಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ತುಂಬಾನೇ ಮೆಚೂರ್ಡ್ ಆಗಿ ವರ್ತಿಸುತ್ತಾರೆ. ಈ ಗುಣ ಕೂಡ ಹುಡುಗರು ತಮಗಿಂತ ವಯಸ್ಸಿನಲ್ಲಿ ದೊಡ್ಡ ಹಾಗೂ ವಿವಾಹಿತ ಮಹಿಳೆಯನ್ನು ಇಷ್ಟಪಡಲು ಕಾರಣ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ