Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ನಾಭಿಯ ಆಕಾರ ಹೇಳುತ್ತೆ ನಿಮ್ಮ ವ್ಯಕ್ತಿತ್ವದ ಸೀಕ್ರೆಟ್‌

ವ್ಯಕ್ತಿತ್ವವೇ ಆಗಿರಲಿ ಅಥವಾ ಕಣ್ಣು, ಮೂಗು, ಬಾಯಿ ಸೇರಿದಂತೆ ದೇಹಾಕಾರವೇ ಆಗಿರಲಿ ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅದೇ ರೀತಿ ನಾಭಿ ಅಂದರೆ ಹೊಕ್ಕುಳ ಆಕಾರವು ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರುತ್ತದೆ. ಈ ಭಿನ್ನ ವಿಭಿನ್ನವಾಗಿರುವ ನಾಭಿಯ ಆಕಾರವೇನಿದೆ ಅದರ ಮೂಲಕವು ಸಹ ನಮ್ಮ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾದ್ರೆ ನಿಮ್ಮ ನಾಭಿಯ ಆಕಾರಕ್ಕೆ ತಕ್ಕಂತೆ ನಿಮ್ಮ ರಹಸ್ಯ ವ್ಯಕ್ತಿತ್ವ, ಸ್ವಭಾವ ಹೇಗಿದೆ ಕಂಡುಕೊಳ್ಳಿ.

Personality Test: ನಿಮ್ಮ ನಾಭಿಯ ಆಕಾರ ಹೇಳುತ್ತೆ ನಿಮ್ಮ ವ್ಯಕ್ತಿತ್ವದ ಸೀಕ್ರೆಟ್‌
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 08, 2025 | 2:48 PM

ಕಣ್ಣು (Eye), ಮೂಗು (Nose), ಬಾಯಿ ಸೇರಿದಂತೆ ಮನುಷ್ಯನ ದೇಹದಲ್ಲಿರುವ ಒಂದೊಂದು ಅಂಗ ಕೂಡಾ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುವಂತೆ ಹೊಕ್ಕುಳ (Navel) ಕೂಡಾ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ನಿಮ್ಗೆ ಗೊತ್ತೇ ಇರುತ್ತೆ ಅಲ್ವಾ. ಇಷ್ಟು ಮಾತ್ರವಲ್ಲ ಕಣ್ರೀ ಪಾದದ ಆಕಾರ, ಕಣ್ಣಿನ ಬಣ್ಣ, ಮೂಗಿನ ಆಕಾರ, ಕೂದಲ ಆಕಾರಗಳು ನಮ್ಮ ವ್ಯಕ್ತಿತ್ವವನ್ನು (personality) ಹೇಳುವಂತೆ ನಾಭಿ ಅಂದ್ರೆ ಹೊಕ್ಕಳ ಆಕಾರ ಕೂಡಾ ನಮ್ಮ ರಹಸ್ಯ ವ್ಯಕ್ತಿತ್ವ ಏನೆಂಬುದನ್ನು ತಿಳಿಸುತ್ತದೆಯಂತೆ. ಕೆಲವರ ನಾಭಿ ವೃತ್ತಾಕಾರದಲ್ಲಿದ್ದರೆ, ಇನ್ನೂ ಕೆಲವರು ದೊಡ್ಡ ಹೊಕ್ಕಳನ್ನು ಹೊಂದಿರುತ್ತಾರೆ. ಹೀಗೆ ನಾಭಿ ಆಕಾರವು ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರುತ್ತದೆ. ಕಣ್ಣಿನ ಬಣ್ಣ, ಮೂಗಿನ ಆಕಾರ ಸೇರಿದಂತೆ ದೇಹಾಕಾರದ ಮೂಖಾಂತರ ನಿಮ್ಮ ವ್ಯಕ್ತಿತ್ವ  ಹೇಗಿದೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅದೇ ರೀತಿ ನಿನ್ನ ಹೊಕ್ಕುಳ ಆಕಾರದ ಮೂಲಕ ನಿಮ್ಮ ರಹಸ್ಯ ವ್ಯಕ್ತಿತ್ವವನ್ನು ಪರೀಕ್ಷಿಸಿ.

ಆಳವಾದ ಹೊಕ್ಕುಳ:

ನಿಮ್ಮ ಹೊಕ್ಕುಳ ಆಳವಾಗಿದ್ದರೆ, ನೀವು ಸ್ವಾಭಾವಿಕವಾಗಿ ತಾಳ್ಮೆ ಮತ್ತು ಸಹಾನುಭೂತಿಯುಳ್ಳವರಾಗಿರುತ್ತೀರಿ. ಜೊತೆಗೆ ಆಳವಾದ ಹೊಕ್ಕುಳನ್ನು ಹೊಂದಿರುವ ಜನರು ತುಂಬಾ ದಿಟ್ಟ ಸ್ವಭಾವವನ್ನು ಹೊಂದಿರುತ್ತಾರೆ. ಅವರು ಸಾಕಷ್ಟು ಮಹತ್ವಾಕಾಂಕ್ಷೆಯುಳ್ಳವರೂ ಆಗಿರುತ್ತಾರೆ. ತುಂಬಾನೇ ಮುಕ್ತವಾಗಿ ಬದುಕಲು ಇಷ್ಟಪಡುವ ಇವರು, ತಮ್ಮನ್ನು ಯಾರಾದರೂ ನಿಲ್ಲಿಸಿದರೆ ಅಥವಾ ತಮ್ಮ ಕೆಲಸಕ್ಕೆ ಅಡ್ಡಿ ಪಡಿಸಿದೆ ಉದ್ರೇಕಗೊಳ್ಳುತ್ತಾರೆ.  ಅಷ್ಟೇ ಅಲ್ಲದೆ ಈ ಆಕಾರದ ಹೊಕ್ಕುಳನ್ನು ಹೊಂದಿರುವ ಜನರು ತಾವು ಯಾವುದೇ ಕೆಲಸಕ್ಕೂ ಕೈ ಹಾಕುವ ಮೊದಲು ತನ್ನ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುತ್ತಾರೆ. ಆಧ್ಯಾತ್ಮಿಕತೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿರುವ ಇವರು ಶಾಂತ ಸ್ವಭಾವದವರೂ, ಉತ್ತಮ ಕೇಳುಗರು ಮತ್ತು ವಿಶ್ವಾಸಾರ್ಹ ಸ್ನೇಹಿತರು ಹೌದು.

ಲಂಬವಾದ  ಹೊಕ್ಕುಳ:

ಉದ್ದವಾದ ಹೊಕ್ಕುಳನ್ನು ಹೊಂದಿರುವ ಜನರು ಕಲಾ ಕ್ಷೇತ್ರದಲ್ಲಿ ಹಾಗೂ ಅಧ್ಯಯನದಲ್ಲಿ  ವಿಶೇಷ ಆಸಕ್ತಿಯನ್ನು ಹೊಂದಿರುವವಾಗಿರುತ್ತಾರೆ. ಇವರು ತಮ್ಮ ಮಾತುಗಳಿಂದಲೇ ಇತರರನ್ನು ಬೇಗನೇ ಮೆಚ್ಚಿಸುತ್ತಾರೆ. ಇಂತಹ ಜನರು ತಮ್ಮ ಸುತ್ತಮುತ್ತಲಿನ ಜನರನ್ನು ನಗಿಸುವ ಶಕ್ತಿಯನ್ನು ಹೊಂದಿರುವುದರಿಂದ ಹೆಚ್ಚಿನವರು ಇವರೊಂದಿಗೆ  ಸ್ನೇಹ ಬಯಸುತ್ತಾರೆ. ಅಷ್ಟೇ ಅಲ್ಲದೆ ಲಂಬವಾದ ಹೊಕ್ಕುಳನ್ನು ಹೊಂದಿರುವವರು  ಯಾವುದೇ ರೀತಿಯ ಪರಿಸರಕ್ಕೂ ಸುಲಭವಾಗಿ ಹೊಂದಿಕೊಳ್ಳುತ್ತಾರೆ.

ಇದನ್ನೂ ಓದಿ
Image
ಸನ್‌ಸ್ಕ್ರೀನ್‌ ಹಚ್ಚಿದ್ರೆ ಚರ್ಮದ ಕ್ಯಾನ್ಸರ್ ಬರುತ್ತೆ? ಸತ್ಯವೇ ಮಿಥ್ಯವೇ?
Image
ವಿವಾಹಿತ ಮಹಿಳೆಯರು ತಮ್ಮ ಗಂಡನಿಗೆ ಮೋಸ ಮಾಡೋದು ಇದೇ ಕಾರಣಕ್ಕಂತೆ, ಏನದು?
Image
ಬೇಕಾಬಿಟ್ಟಿ ಆರಿಸೋದಲ್ಲ; ಸಿಹಿಯಾದ ಮಾಗಿದ ಕರ್ಬೂಜ ಹಣ್ಣು ಖರೀದಿಸಲು ಇಲ್ಲಿದೆ
Image
ನಿಮ್ಮ ಕೇಶರಾಶಿಯ ಪ್ರಕಾರವೇ ಹೇಳುತ್ತೇ ನಿಮ್ಮ ವ್ಯಕ್ತಿತ್ವದ ರಹಸ್ಯ

ದುಂಡಗಿನ ಹೊಕ್ಕುಳ:

ದುಂಡಗಿನ ಹೊಕ್ಕುಳವನ್ನು ಹೊಂದಿರುವ ಜನರು ಸಂತೋಷದ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ.  ತಿನ್ನುವುದು ಕುಡಿಯುವುದೆಂದರೆ ಇವರಿಗೆ ಸಿಕ್ಕಾಪಟ್ಟೆ ಇಷ್ಟ. ಸಾಕಷ್ಟು ಬುದ್ಧಿವಂತರಾದ ಇವರು ಆರೋಗ್ಯದ ವಿಷಯದಲ್ಲೂ ತುಂಬಾನೇ ಅದೃಷ್ಟವಂತರು. ಇವರು ಕುಟುಂಬ ಸಂಬಂಧಕ್ಕೆ ಹೆಚ್ಚಿನ ಮಹತ್ವವನ್ನು ನೀಡುವವರಾಗಿದ್ದು, ಕುಟುಂಬ ಸದಸ್ಯರು ಪ್ರತಿ ವಿಷಯಗಳಲ್ಲೂ ಇವರ ಸಲಹೆಯನ್ನು ತೆಗೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಇವರು ತಮ್ಮ ಸಂತೋಷಕ್ಕಿಂತ ಹೆಚ್ಚಾಗಿ ತಮ್ಮ ಪ್ರೀತಿಪಾತ್ರರ ಸಂತೋಷಕ್ಕೆ ಆದ್ಯತೆ ನೀಡುತ್ತಾರೆ.

ಇದನ್ನೂ ಓದಿ: ನಿಮ್ದು ಗುಂಗುರು ಕೂದಲ; ಹಾಗಿದ್ರೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಿರಿ

ದೊಡ್ಡ ಹೊಕ್ಕುಳ:

ದೊಡ್ಡ ಹೊಕ್ಕಳಿನ ಜನರು ವಿಶಾಲಹೃದಯಿಯಾಗಿರುತ್ತಾರೆ. ಹೆಚ್ಚಾಗಿ ವಿವೇಕಯುತವಾಗಿ ಯೋಚಿಸುವ ಇವರು ತಮ್ಮ ದೃಷ್ಟಿಕೋನಗಳಿಂದಲೇ ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಜೊತೆಗೆ ಇವರು ಸೃಜನಶೀಲ ಮನೋಭಾವವನ್ನು ಕೂಡಾ ಹೊಂದಿರುವವರಾಗಿರುತ್ತಾರೆ.

ಸಣ್ಣ ಮತ್ತು ಚಪ್ಪಟೆಯಾದ ಹೊಕ್ಕುಳ:

ನಿಮ್ಮ ಹೊಕ್ಕುಳ ಚಿಕ್ಕದಾಗಿ ಚಪ್ಪಟೆಯಾಗಿದ್ದರೆ ನೀವು ಶಾಂತಿಯುತ ನಡವಳಿಕೆ ಮತ್ತು ಬಲವಾದ ಸ್ವಯಂ ಪ್ರಜ್ಞೆಯನ್ನು ಹೊಂದಿರುವವರಾಗಿರುತ್ತೀರಿ. ಏಕಾಂತವನ್ನು ಬಯಸುವ ಇವರು ಸಂಬಂಧಗಳಿಗೆ ಗೌರವವನ್ನು ಕೊಡುತ್ತಾರೆ ಮತ್ತು ಸ್ನೇಹ ಮತ್ತು ಪ್ರೀತಿ ಸೇರಿದಂತೆ ಯಾವುದೇ ಸಂಬಂಧಕ್ಕೆ ನಿಷ್ಠರಾಗಿರುತ್ತಾರೆ.

ಸುರುಳಿಯಾಕಾರದ ಹೊಕ್ಕುಳ:

ಸುರುಳಿಯಾಕಾರದ ಹೊಕ್ಕುಳ ಹೊಂದಿರುವವರು ಆಳವಾದ ಚಿಂತಕರಾಗಿರುತ್ತಾರೆ. ಇಂತಹ ಜನರು ಆಗಾಗ್ಗೆ ಒಂದೇ ವಿಚಾರದ ಬಗ್ಗೆ ಅತಿಯಾಗಿ ವಿಶ್ಲೇಷಿಸುತ್ತಾರೆ ಮತ್ತು ಆ ವಿಷಯದ ಬಗ್ಗೆ ಚಿಂತನೆ ಮಾಡುತ್ತಾ, ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಇವರು ಆಶಾವಾದಿಗಳಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ