AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion : ಈ ಚಿತ್ರದಲ್ಲಿ ನೀವು ಮೊದಲು ಕಂಡದ್ದೇನು? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ

ಆಫ್ಟಿಕಲ್ ಇಲ್ಯೂಷನ್ ಹಾಗೂ ಪರ್ಸನಾಲಿಟಿ ಟೆಸ್ಟ್ ಗೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಈ ಫೋಟೋಗಳು ಸಹವಾಗಿ ನಮ್ಮ ಮೆದುಳು ಹಾಗೂ ಬುದ್ಧಿಗೆ ಕೆಲಸ ಕೊಡುತ್ತದೆ. ಕೆಲವೊಮ್ಮೆ ನಾವು ನೋಡುವುದಕ್ಕಿಂತ ವಿಭಿನ್ನವಾದ ಚಿತ್ರಗಳು ಕಾಣಿಸಿಕೊಳ್ಳುವ ಮೂಲಕ ಭ್ರಮೆಯಲ್ಲಿ ತೇಲುವಂತೆ ಮಾಡುತ್ತದೆ. ಆದರೆ ಈ ಚಿತ್ರದಲ್ಲಿ ಮೊದಲು ಏನು ಕಾಣಿಸಿತು ಎನ್ನುವ ಆಧಾರದ ಮೇಲೆ ನಮ್ಮ ವ್ಯಕ್ತಿತ್ವವನ್ನು ನಿರ್ಣಯಿಸಬಹುದು. ಈ ಫೋಟೋದಲ್ಲಿ ನೀವು ಮಹಿಳೆ ಮುಖ ಅಥವಾ ಕೈಯಲ್ಲಿ ಬುಟ್ಟಿ ಹಿಡಿದು ಸೇಬುಗಳನ್ನು ಆರಿಸಿಕೊಳ್ಳುವ ಮಹಿಳೆ, ಇದರಲ್ಲಿ ಯಾವುದನ್ನೂ ಮೊದಲು ನೋಡಿದ್ದೀರಾ ಎನ್ನುವುದು ನೀವು ಹೇಗೆ ಎಂದು ಬಹಿರಂಗ ಪಡಿಸುತ್ತದೆ, ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Optical Illusion : ಈ ಚಿತ್ರದಲ್ಲಿ ನೀವು ಮೊದಲು ಕಂಡದ್ದೇನು? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಆಪ್ಟಿಕಲ್ ಐಕ್ಯೂ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 07, 2025 | 5:31 PM

Share

ಈ ಭೂಮಿಯ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಗಳು ಒಂದೇ ರೀತಿ ಇರಲು ಸಾಧ್ಯವಿಲ್ಲ. ಎಲ್ಲರಿಗೂ ಕೂಡ ಅವರವರ ವ್ಯಕ್ತಿತ್ವ (personality) ತಿಳಿದುಕೊಳ್ಳಬೇಕೆಂದು ಇರುತ್ತದೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕಣ್ಣು, ಕಿವಿ, ಮೂಗು, ಕೂದಲು, ತುಟಿ ಇವುಗಳ ಆಧಾರದ ಮೇಲೆ ವ್ಯಕ್ತಿತ್ವ ನಿರ್ಣಯಿಸಬಹುದು. ಹಾಗೆಯೇ ಒಂದು ಚಿತ್ರ (photo) ದಲ್ಲಿ ಮೊದಲು ಏನು ಕಾಣಿಸಿತು ಎನ್ನುವುದು ಕೂಡ ನಿಗೂಢ ವ್ಯಕ್ತಿತ್ವ ಬಹಿರಂಗಪಡಿಸುತ್ತದೆ. ಆದರೆ ಕೆಲವು ಸೆಕೆಂಡುಗಳ ಕಾಲ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಈ ಚಿತ್ರದಲ್ಲಿ ಮಹಿಳೆಯ ಮುಖ (women face) ಹಾಗೂ ಸೇಬು (apple) ಎತ್ತಕೊಳ್ಳುವ ಮಹಿಳೆಯನ್ನು ನೋಡಬಹುದು. ಆದರೆ ಈ ಚಿತ್ರ ಒಂದು ಕ್ಷಣ ಭ್ರಮೆಯನ್ನು ಉಂಟು ಮಾಡಿದರೂ ನೀವು ಮೊದಲು ಏನನ್ನೂ ಗುರುತಿಸುತ್ತೀರಿ ಎನ್ನುವುದೇ ವ್ಯಕ್ತಿತ್ವ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

  • ಮೊದಲು ಮಹಿಳೆ ಮುಖ ಗುರುತಿಸಿದರೆ ಈ ಜನರು ಶ್ರಮಜೀವಿಗಳಾಗಿದ್ದು, ಕೆಲಸ ಕಾರ್ಯಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಸಂದರ್ಭ ಸನ್ನಿವೇಶಗಳು ಹೇಗೆ ಇದ್ದರೂ ಸಾಧಿಸಬೇಕೆನ್ನುವ ಛಲ ಇವರಲ್ಲಿ ಹೆಚ್ಚಿರುತ್ತದೆ. ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಮುಂದಾಗುವ ವ್ಯಕ್ತಿತ್ವ ಇವರದ್ದು. ದೃಢ ನಿಶ್ಚಯ ಹೊಂದಿದ್ದು, ಗುರಿ ಸಾಧಿಸಲು ಕಷ್ಟ ಪಡುತ್ತಾರೆ. ಅದಲ್ಲದೆ, ತನ್ನ ಸುತ್ತಮುತ್ತಲು ಸದಾ ಪ್ರೋತ್ಸಾಹದಾಯಕ ವಾತಾವರಣವನ್ನು ಸೃಷ್ಟಿಸಿಕೊಳ್ಳಲು ಇಷ್ಟ ಪಡುತ್ತಾರೆ.
  • ಕೈಯಲ್ಲಿ ಬುಟ್ಟಿ ಹಿಡಿದು ಸೇಬುಗಳನ್ನು ಆರಿಸಿಕೊಳ್ಳುವ ಮಹಿಳೆಯನ್ನು ಮೊದಲು ಗುರುತಿಸಿದರೆ ಈ ವ್ಯಕ್ತಿಗಳು ಮೃದು ಸ್ವಭಾವವನ್ನು ಹೊಂದಿದ್ದು, ಎಲ್ಲರ ಮಾತಿಗೆ ಬೇಗನೇ ಕರಗುತ್ತಾರೆ. ತಮಗೆ ಏನು ಅನಿಸುತ್ತದೆಯೊ ಅದನ್ನು ಮೊದಲು ಮಾಡಿ ಮುಗಿಸುತ್ತಾರೆ. ವಿಶ್ವಾಸರ್ಹ ವ್ಯಕ್ತಿಯಾಗಿದ್ದು ಕಷ್ಟ ಎನ್ನುವವರಿಗೆ ಬೇಗನೇ ಸಹಾಯ ಮಾಡುತ್ತಾರೆ. ತಾವು ನೀಡಿದ ಭರವಸೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಹೋರಾಡುತ್ತಾರೆ. ಈ ಗುಣದಿಂದಲೇ ಅತೀ ಹೆಚ್ಚು ಸ್ನೇಹಿತರನ್ನು ಸಂಪಾದಿಸುತ್ತಾರೆ. ಈ ಜನರು ಬುದ್ಧಿವಂತರಾಗಿದ್ದು, ತನ್ನ ಸುತ್ತಮುತ್ತಲಿನವರಿಗೆ ಸಲಹೆ ನೀಡುವ ವ್ಯಕ್ತಿಗಳಾಗಿರುತ್ತಾರೆ. ಹೀಗಾಗಿ ಹೆಚ್ಚಿನವರು ಸಲಹೆ ಸೂಚನೆಗಳಿಗಾಗಿ ಈ ವ್ಯಕ್ತಿಗಳನ್ನೆ ಅವಲಂಬಿಸಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ