AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Advice: ಇದೇ ಕಾರಣಕ್ಕಂತೆ ಹೆಂಡ್ತಿ ಕಟ್ಟಿಕೊಂಡ ಗಂಡನಿಗೆ ಮೋಸ ಮಾಡೋದು; ಗಂಡಸರೇ ಏನದು ತಿಳಿಯಿರಿ

ಕೆಲ ದಿನಗಳ ಹಿಂದೆಯಷ್ಟೆ ಮೀರತ್‌ನಲ್ಲಿ ಮರ್ಚೆಂಟ್‌ ನೇವಿ ಅಧಿಕಾರಿ ಸೌರಭ್‌ ಎಂಬವರನ್ನು ಅವರ ಪತ್ನಿ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸೇರಿ‌ ಕೊಲೆ ಮಾಡಿ ಮೃತದೇಹವನ್ನು ಡ್ರಮ್‌ ಒಂದರಲ್ಲಿ ಸಿಮೆಂಟ್‌ ಹಾಕಿ ಮುಚ್ಚಿದಂತಹ ಆಘಾತಕಾರಿ ಸುದ್ದಿ ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು. ಇತ್ತೀಚಿನ ದಿನಗಳಲ್ಲಿ ವೈವಾಹಿಕ ಜೀವನದಲ್ಲಿ ಇಂತಹ ದಾಂಪತ್ಯ ದ್ರೋಹದ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಲೇ ಇವೆ. ಅಷ್ಟಕ್ಕೂ ಹೆಂಡತಿ ತನ್ನ ಗಂಡನಿಗೆ ಮೋಸ ಮಾಡೋದು ಏಕೆ ಗೊತ್ತಾ? ಇಲ್ಲಿದೆ ಈ ಕುರಿತ ಇಂಟರೆಸ್ಟಿಂಗ್‌ ಮಾಹಿತಿ.

Relationship Advice: ಇದೇ ಕಾರಣಕ್ಕಂತೆ ಹೆಂಡ್ತಿ ಕಟ್ಟಿಕೊಂಡ ಗಂಡನಿಗೆ ಮೋಸ ಮಾಡೋದು; ಗಂಡಸರೇ ಏನದು ತಿಳಿಯಿರಿ
ಸಾಂದರ್ಭಿಕ ಚಿತ್ರ Image Credit source: Getty images
ಮಾಲಾಶ್ರೀ ಅಂಚನ್​
| Edited By: |

Updated on: Apr 07, 2025 | 5:06 PM

Share

ಗಂಡ ಹೆಂಡತಿ (husband-wife) ಸಂಬಂಧ (relationship) ಏಳೇಳು ಜನ್ಮದ ಅನುಬಂಧ ಅನ್ನೋ ಮಾತಿದೆ. ನಂಬಿಕೆ, ವಿಶ್ವಾಸ, ಗೌರವ (respect), ಪ್ರೀತಿ (love) ಇವೆಲ್ಲಾ ಇದ್ದಾಗ ಈ ಬಂಧ ಬಲು ಸುಂದರವಾಗಿರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿರುವ ಡಿವೋರ್ಸ್‌ (divorce) ಪ್ರಕರಣಗಳು, ಗಂಡ ಹೆಂಡತಿಗೆ ಮೋಸ ಮಾಡುವ, ಹೆಂಡತಿ ಗಂಡನಿಗೆ ಮೋಸ ಮಾಡುವ ಪ್ರಕರಣಗಳು, ಹೆಂಡತಿಯ ಕಿರುಕುಳ ಇಂತಹ ಸುದ್ದಿಗಳನ್ನು ಕೇಳಿ ಅವಿವಾಹಿತರು ಮದುವೆಯಾಗೋಕೆ ಹಿಂದೇಟು ಹಾಕ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಬಾಯ್‌ಫ್ರೆಂಡ್‌ ಸಲುವಾಗಿ ವಿವಾಹಿತ ಮಹಿಳೆಯೊಬ್ಬಳು ತನ್ನ ಗಂಡನನ್ನೇ ಕೊಂದು ಡ್ರಮ್‌ ಒಂದರಲ್ಲಿ ಸಿಮೆಂಟ್‌ ಹಾಕಿ ಮುಚ್ಚಿದಂತಹ ಆಘಾತಕಾರಿ ಘಟನೆಯೊಂದು ನಡಡೆದಿತ್ತು. ವಿವಾಹೇತರ ಸಂಬಂಧಗಳ (extra marital affairs) ಕಾರಣದಿಂದಾಗಿ ಹೆಂಡ್ತಿಯಾದವಳು (wife) ಕಟ್ಟಿಕೊಂಡ ಗಂಡನಿಗೆ ಮೋಸ (cheat) ಮಾಡಿದಂತಹ, ಸುಳ್ಳು ಕೇಸ್‌ ಹಾಕಿ ಡಿವೋರ್ಸ್‌ ಪಡೆದಂತಹ ಅದೆಷ್ಟೋ ಘಟನೆಗಳು ನಡೆದಿದೆ. ಅಷ್ಟಕ್ಕೂ ಮದುವೆಯಾದ ಬಳಿಕ ಹೆಂಡತಿ ಕಟ್ಟಿಕೊಂಡ ಗಂಡನಿಗೆ ಮೋಸ ಮಾಡೋದು ಏಕೆ ಗೊತ್ತಾ? ಈ ಕುರಿತ ಕುತೂಹಲಕಾರಿ ಮಾಹಿತಿಯನ್ನು ತಿಳಿಯಿರಿ.

ಇದು ಸಂಶೋಧನೆಯಲ್ಲೂ ಬಹಿರಂಗವಾಗಿದೆ:

ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದ ರಾಷ್ಟ್ರೀಯ ಅಭಿಪ್ರಾಯ ಸಂಶೋಧನಾ ಕೇಂದ್ರದ 2022 ರ ಜಾಗತಿಕ ಸಾಮಾಜಿಕ ಸಮೀಕ್ಷೆಯಲ್ಲಿ, ಶೇಕಡಾ 20 ರಷ್ಟು ಪುರುಷರು ಮತ್ತು ಶೇಕಡಾ 13 ರಷ್ಟು ಮಹಿಳೆಯರು ತಮ್ಮ ಸಂಗಾತಿಗಳಿಗೆ ಮೋಸ ಮಾಡುತ್ತಾರೆ ಎಂಬ ವಿಚಾರ ತಿಳಿದು ಬಂದಿದೆ.

ಅಷ್ಟಕ್ಕೂ ವಿವಾಹಿತ ಮಹಿಳೆಯರು ತಮ್ಮ ಗಂಡನಿಗೆ ಮೋಸ ಮಾಡೋದ್ಯಾಕೆ?

ಒಂಟಿತನವನ್ನು ಹೋಗಲಾಡಿಸಲು:

ತಜ್ಞರು ಹೇಳುವಂತೆ ಮಹಿಳೆಯರು ಪುರುಷರಿಗಿಂತ ಹೆಚ್ಚು ಭಾವನಾತ್ಮಕ ಜೀವಿಗಳು. ಈ ಕಾರಣದಿಂದಾಗಿ ಅವರು ತಮ್ಮ ಸಂಗಾತಿ ತಮ್ಮತ್ತ ಗಮನ ಹರಿಸದಿದ್ದಾಗ ಅಥವಾ ದೂರದಲ್ಲಿದ್ದಾಗ, ತೀವ್ರ ಒಂಟಿತನ ಅಥವಾ ಭಾವನಾತ್ಮಕ ಬೇರ್ಪಡುವಿಕೆಯಿಂದಾಗಿ ಅವರು ಇನ್ನೊಬ್ಬ ವ್ಯಕ್ತಿಯೊಂದಿಗೆ ಪ್ರೇಮ ಸಂಬಂಧವನ್ನು ಹೊಂದಲು ಮನಸ್ಸು ಮಾಡುತ್ತಾರೆ. ಇದರಿಂದಾಗಿ ಅವರು ತಮ್ಮ ಸಂಗಾತಿಗೆ ಮೋಸ ಮಾಡಿ ಬೇರೊಬ್ಬರ ಜೊತೆ ವಾಸಿಸಲು ಪ್ರಾರಂಭಿಸುತ್ತಾರೆ.

ಭಾವನಾತ್ಮಕ ಅಗತ್ಯಗಳನ್ನು ಪೂರೈಸಲು:

ಅನೇಕ ಅಧ್ಯಯನಗಳು ತಮ್ಮ ಸಂಗಾತಿಗಳಿಗೆ ಮೋಸ ಮಾಡುವ ಮಹಿಳೆಯರು ತಮ್ಮ ಭಾವನಾತ್ಮಕ ಅಗತ್ಯಗಳನ್ನು ಪೂರೈಸಲು ಗಂಡನಿಗೆ ಮೋಸ ಮಾಡುತ್ತಾರೆ ಎಂದು ಕಂಡುಕೊಂಡಿವೆ. ಇದು ದೈಹಿಕ ಮತ್ತು ಭಾವನಾತ್ಮಕ ಎರಡೂ ಅಂಶಗಳನ್ನು ಒಳಗೊಂಡಿದೆ. ಗಂಡನಿಗಿಂತ ಬೇರೊಬ್ಬ ಪುರುಷ ಸಹಾನೂಭೂತಿಯಿಂದ, ಗೌರವದಿಂದ ಮಾತನಾಡುತ್ತಾ ಪ್ರತಿಯೊಂದು ವಿಷಯಕ್ಕೂ ಮೆಚ್ಚುಗೆಯನ್ನು ಸೂಚಿಸುತ್ತಿದ್ದರೆ, ಅಥವಾ ಗಂಡನಿಂದ ತಮಗೆ ಬೇಕಾದ ಭಾವನಾತ್ಮಕ ಬೆಂಬಲ ಸಿಗದಿದ್ದಾಗ ಹೆಂಡತಿಯ ಮನಸ್ಸು ಬೇರೊಬ್ಬ ವ್ಯಕ್ತಿಯ ಕಡೆ ವಾಲುವ ಸಾಧ್ಯತೆ ಇರುತ್ತದೆ.

ಕೋಪದ ಕಾರಣಗಳಿಗೆ:

ಅನೇಕ ಮಹಿಳೆಯರು ಗಂಡನ ಮೇಲಿನ ಕೋಪ ಅಥವಾ ಸೇಡಿನಿಂದಾಗಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸುತ್ತಾರೆ. ಹೌದು ಸಂಗಾತಿ ತಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ವಿಫಲವಾದರೆ ಅಥವಾ ಬೇರೆ ಯಾವುದಾದರೂ ಕಾರಣದಿಂದಾಗಿ ಸಂಬಂಧದಲ್ಲಿ ಬಿರುಕು ಉಂಟಾದರೆ ಅಥವಾ ತಮ್ಮ ಗಂಡನಿಗೆ ಅನೈತಿಕ ಸಂಬಂಧ ಇದೆ ಎಂಬ ವಿಚಾರ ತಿಳಿದಾಗ ಕೆಲವು ಮಹಿಳೆಯರು ಇದೇ ಕೋಪಕ್ಕೆ ತಾವು ಕೂಡಾ ತಮ್ಮ ಗಂಡನಿಗೆ ಮೋಸ ಮಾಡಿ ತಪ್ಪು ಹೆಜ್ಜೆಗಳನ್ನು ಇಡುತ್ತಾರೆ.

ಇದನ್ನೂ ಓದಿ: ನೀವು ಖರೀದಿಸುವ ಕರ್ಬೂಜ ಹಣ್ಣು ಸಿಹಿ ಮತ್ತು ಮಾಗಿದೆಯೇ ಎಂದು ಈ ರೀತಿ ಕಂಡುಕೊಳ್ಳಿ‌

ಇದಲ್ಲದೆ ಕೌಟುಂಬಿಕ ಹಿಂಸೆ, ಗಂಡ ಹೆಂಡತಿಯ ನಡುವಿನ ಸಂವಹನ ಕೊರತೆ, ಗಂಡ ಹೆಂಡತಿಯ ಮೇಲೆ ಗಮನ ಹರಿಸದಿದ್ದಾಗ, ಪ್ರೀತಿಯ ಕೊರತೆ, ಒಂಟಿತನ, ಮಕ್ಕಳ ಜವಾಬ್ದಾರಿ, ದೈಹಿಕ ಸಂಬಂಧಲ್ಲಿ ಅತೃಪ್ತಿ, ಭಾವನಾತ್ಮಕ ಬಾಂಧವ್ಯದ ಕೊರತೆ ಇತ್ಯಾದಿ ಕಾರಣಗಳಿಂದ ಕೂಡಾ ಹೆಂಡತಿ ತನ್ನ ಕಟ್ಟಿಕೊಂಡ ಗಂಡನಿಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ