Solar Eclipse 2025: ವರ್ಷದ ಎರಡನೇ ಸೂರ್ಯಗ್ರಹಣ ಯಾವಾಗ? ಭಾರತದಲ್ಲಿ ಗೋಚರಿಸುತ್ತದೆಯೇ?
2025ರ ಒಟ್ಟು ನಾಲ್ಕು ಗ್ರಹಣಗಳಲ್ಲಿ ಈಗಾಗಲೇ ಎರಡು ಸಂಭವಿಸಿವೆ. ಆದರೆ ಅವು ಭಾರತದಲ್ಲಿ ಗೋಚರಿಸಲಿಲ್ಲ. ಮುಂದಿನ ಗ್ರಹಣಗಳು ಯಾವಾಗ ಮತ್ತು ಅದು ಭಾರತದಲ್ಲಿ ಗೋಚರಿಸುತ್ತವೆಯೇ ಎಂಬ ಗೊಂದಲ ಸಾಕಷ್ಟು ಜನರಲ್ಲಿದೆ. ಅದಕ್ಕೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ. ಜೊತೆಗೆ ಹಿಂದೂ ಧರ್ಮದಲ್ಲಿ ಗ್ರಹಣದ ಸಮಯದಲ್ಲಿ ಪೂಜೆ ಮಾಡದಿರುವುದರ ಕಾರಣವನ್ನು ಲೇಖನದಲ್ಲಿ ವಿವರಿಸಲಾಗಿದೆ.

2025ರ ಒಟ್ಟು ನಾಲ್ಕು ಗ್ರಹಣಗಳಲ್ಲಿ ಈಗಾಗಲೇ ಎರಡು ಸಂಭವಿಸಿವೆ. ಮೊದಲ ಚಂದ್ರಗ್ರಹಣ ಮಾರ್ಚ್ 14 ರಂದು ಸಂಭವಿಸಿದರೆ, ಸೂರ್ಯಗ್ರಹಣ ಮಾರ್ಚ್ 29 ರಂದು ಸಂಭವಿಸಿತು. ಆದಾಗ್ಯೂ, ಈ ಎರಡು ಗ್ರಹಣಗಳು ಭಾರತದಲ್ಲಿ ಗೋಚರಿಸಲಿಲ್ಲ. ಮುಂದಿನ ಗ್ರಹಣಗಳು ಯಾವಾಗ ಮತ್ತು ಅದು ಭಾರತದಲ್ಲಿ ಗೋಚರಿಸುತ್ತವೆಯೇ ಎಂಬ ಗೊಂದಲ ಸಾಕಷ್ಟು ಜನರಲ್ಲಿದೆ. ಅದಕ್ಕೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.
ಎರಡನೇ ಸೂರ್ಯಗ್ರಹಣ ಯಾವಾಗ?
ಈ ವರ್ಷದ ಎರಡನೇ ಸೂರ್ಯಗ್ರಹಣ ಸೆಪ್ಟೆಂಬರ್ 21 ರ ಅಮಾವಾಸ್ಯೆಯಂದು ಸಂಭವಿಸಲಿದೆ. ಈ ಸೂರ್ಯಗ್ರಹಣವು ಸೆಪ್ಟೆಂಬರ್ 21 ರಂದು ರಾತ್ರಿ 11 ಗಂಟೆಯಿಂದ ಸೆಪ್ಟೆಂಬರ್ 22 ರಂದು ಬೆಳಗಿನ ಜಾವ 3:24 ರವರೆಗೆ ಇರುತ್ತದೆ, ಅಂದರೆ ಈ ಸೂರ್ಯಗ್ರಹಣವು ಒಟ್ಟು 4 ಗಂಟೆ 24 ನಿಮಿಷಗಳ ಕಾಲ ಇರುತ್ತದೆ.
ಎರಡನೇ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುತ್ತದೆಯೇ?
ಮೊದಲ ಸೂರ್ಯಗ್ರಹಣದಂತೆ, ಈ ವರ್ಷದ ಎರಡನೇ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಈ ಗ್ರಹಣವು ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಅಟ್ಲಾಂಟಿಕ್ ಸಾಗರದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ.
ಇದನ್ನೂ ಓದಿ: ಮನೆಯಲ್ಲಿ ಗಿಳಿ ಸಾಕಿದ್ದೀರಾ ಅಥವಾ ಸಾಕುವ ಪ್ಲ್ಯಾನ್ ಇದ್ಯಾ? ಹಾಗಿದ್ರೆ ಈ ವಿಷ್ಯ ತಿಳಿದಿರಲಿ
ಸೂರ್ಯಗ್ರಹಣದ ಸಮಯದಲ್ಲಿ ಪೂಜೆ ಏಕೆ ಮಾಡಬಾರದು?
ಹಿಂದೂ ನಂಬಿಕೆಗಳ ಪ್ರಕಾರ, ಸೂರ್ಯ ಅಥವಾ ಚಂದ್ರ ಗ್ರಹಣದ ಪ್ರಭಾವದಲ್ಲಿದ್ದಾಗ, ಅವುಗಳ ಶಕ್ತಿ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ಈ ಅವಧಿಯಲ್ಲಿ ಮಾಡುವ ಯಾವುದೇ ಪೂಜೆ ಅಥವಾ ಶುಭ ಕಾರ್ಯಗಳು ಫಲಪ್ರದವಾಗದಿರಬಹುದು. ಆದ್ದರಿಂದ, ಹಿಂದೂ ಧರ್ಮದಲ್ಲಿ ಗ್ರಹಣಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:42 am, Wed, 9 April 25