Shiva Puja: ಶಿವನಿಗೆ ಕುಂಕುಮವನ್ನು ಯಾಕೆ ಅರ್ಪಿಸಬಾರದು?
ಶಿವ ಪೂಜೆಯಲ್ಲಿ ಯಾವ ವಸ್ತುಗಳನ್ನು ಅರ್ಪಿಸಬೇಕು ಮತ್ತು ಯಾವುವನ್ನು ತಪ್ಪಿಸಬೇಕು ಎಂಬುದರ ಕುರಿತು ಈ ಲೇಖನ ತಿಳಿಸುತ್ತದೆ. ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿಯವರು ಹೇಳುವಂತೆ, ಶಿವಲಿಂಗಕ್ಕೆ ಕುಂಕುಮ ಅರ್ಪಿಸಬಾರದು. ಬದಲಾಗಿ, ಗಂಧ, ಅಕ್ಷತೆ ಮತ್ತು ಬಿಲ್ವಪತ್ರೆಗಳನ್ನು ಅರ್ಪಿಸುವುದು ಶ್ರೇಷ್ಠ. ಶಿವನ ಧ್ಯಾನವನ್ನು ಕಾಪಾಡಲು ಇದು ಸಹಾಯ ಮಾಡುತ್ತದೆ.

ಹಿಂದೂ ಧರ್ಮದಲ್ಲಿ ಶಿವಪೂಜೆ ಎಂದರೆ ಮಂತ್ರ , ತಂತ್ರ , ಯಂತ್ರ , ಕ್ರಿಯಾ , ಮುದ್ರೆ , ಮತ್ತು ಅಭಿಷೇಕಗಳ ಮೂಲಕ ಸಾಂಪ್ರದಾಯಿಕ ಮತ್ತು ಪ್ರಾಚೀನ ವಿಧಿಗಳ ಮೂಲಕ ಶಿವನನ್ನು ಪೂಜಿಸುವ ವಿಧಾನವಾಗಿದೆ . ಶಿವನನ್ನು ಲಿಂಗರೂಪಿಯಾಗಿ ಪೂಜಿಸುವುದು ವಾಡಿಕೆ. ಈ ಸಮಯದಲ್ಲಿ ಶಿವಲಿಂಗಕ್ಕೆ ನೀರು, ಹಾಲು ಅಥವಾ ಜೇನುತುಪ್ಪದ ಜೊತೆಗೆ ಬಿಲ್ವಪತ್ರೆ, ಧಾತುರ ಮತ್ತು ಹೂವುಗಳನ್ನು ಅರ್ಪಿಸಲಾಗುತ್ತದೆ. ಆದರೆ ಶಿವ ಪೂಜೆಯ ವೇಳೆ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳವುದು ಅಗತ್ಯ. ಪೂಜೆಯ ಸಂದರ್ಭದಲ್ಲಿ, ಯಾವ ವಸ್ತುಗಳನ್ನು ಅರ್ಪಿಸಬೇಕು ಮತ್ತು ಯಾವುದನ್ನು ಅರ್ಪಿಸಬಾರದು ಎಂಬುದು ಮಹತ್ವದ್ದಾಗಿದೆ. ಈ ಕುರಿತು ಖ್ಯಾರ ಜ್ಯೋತಿಷಿಗಳಾದ ಬಸವರಾಜ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ.
ಶಿವನನ್ನು ಲಿಂಗರೂಪಿಯಾಗಿ ಪೂಜಿಸುವಾಗ ಯಾವುದೇ ಕಾರಣಕ್ಕೂ ಶಿವಲಿಂಗದ ಮೇಲೆ ಕುಂಕುಮವನ್ನು ಅರ್ಪಿಸಬಾರದು ಎಂದು ಗುರೂಜಿ ಎಚ್ಚರಿಸುತ್ತಾರೆ. ಶಿವನ ಪೂಜೆಯು ಸಾತ್ವಿಕ ಮತ್ತು ಶಾಂತ ಮನಸ್ಸಿನಿಂದ ಮಾಡಬೇಕು. ಆದ್ದರಿಂದ, ಪೂಜಾ ವಸ್ತುಗಳ ಆಯ್ಕೆಯಲ್ಲಿ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದ್ದಾರೆ. ಕುಂಕುಮವನ್ನು ಏಕೆ ಬಳಸಬಾರದು ಎಂಬುದನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಮನೆಗೆ ಪದೇ ಪದೇ ಕಪ್ಪು ಇರುವೆ ಬರುತ್ತಿದ್ದರೆ ಏನರ್ಥ? ಶುಭವೋ, ಅಶುಭವೋ?
ಧರ್ಮ ಗ್ರಂಥಗಳ ಪ್ರಕಾರ ಶಿವಲಿಂಗ ಎಂಬುದು ಪುರುಷನನ್ನು ಪ್ರತಿನಿಧಿಸುವುದು. ವಿಶೇಷವಾಗಿ ಶಿವನು ಧ್ಯಾನಸ್ಥನಾಗಿರುತ್ತಾನೆ. ಕುಂಕುಮವು ಉಷ್ಣತೆಯನ್ನು ಹೊಂದಿರುತ್ತದೆ ಇದನ್ನು ಎಂದಿಗೂ ಬಳಸಬಾರದು . ಹೀಗಾಗಿ, ಕುಂಕುಮದ ಬದಲು ಗಂಧ, ಅಕ್ಷತೆ ಮತ್ತು ಬಿಲ್ವಪತ್ರೆಗಳನ್ನು ಅರ್ಪಿಸುವುದು ಉತ್ತಮ. ಇವು ಶಿವನಿಗೆ ತಂಪನ್ನು ನೀಡುತ್ತವೆ ಮತ್ತು ಅವನ ಧ್ಯಾನವನ್ನು ಕದಡುವುದಿಲ್ಲ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:51 am, Tue, 8 April 25