Swapna Shastra: ಕನಸಿನಲ್ಲಿ ನವಿಲು ಕಂಡರೆ ಏನರ್ಥ? ಶುಭವೋ, ಅಶುಭವೋ?
ಸ್ವಪ್ನಶಾಸ್ತ್ರದ ಪ್ರಕಾರ, ಕನಸಿನಲ್ಲಿ ನವಿಲು ಕಾಣುವುದು ಅತ್ಯಂತ ಶುಭ ಸೂಚನೆ. ಇದು ಸಂತೋಷ, ಸಂಪತ್ತು ಮತ್ತು ಹಣದ ಲಾಭವನ್ನು ಸೂಚಿಸುತ್ತದೆ. ನವಿಲುಗಳ ಜೋಡಿ ಕಂಡರೆ ಮದುವೆ ಅಥವಾ ವೈವಾಹಿಕ ಜೀವನದಲ್ಲಿ ಸುಧಾರಣೆ ಆಗಲಿದೆ. ಬಿಳಿ ನವಿಲು ಲಕ್ಷ್ಮೀ ದೇವಿಯ ಆಶೀರ್ವಾದ ಮತ್ತು ಆರ್ಥಿಕ ಏಳಿಗೆಯ ಸಂಕೇತ. ಈ ಲೇಖನದಲ್ಲಿ ನವಿಲು ಕನಸಿನ ವಿವಿಧ ಅರ್ಥಗಳನ್ನು ವಿವರಿಸಲಾಗಿದೆ.

ನಿದ್ದೆ ಮಾಡುವಾಗ ಕನಸು ಬೀಳುವುದು ಸಹಜ. ಜನರು ಗಾಢ ನಿದ್ರೆಯಲ್ಲಿ ವಿಭಿನ್ನ ಕನಸುಗಳನ್ನು ಕಾಣುತ್ತಾರೆ. ಕೆಲವು ಕನಸುಗಳು ಸಂತೋಷವನ್ನು ನೀಡಿದರೆ ಇನ್ನೂ ಕೆಲವು ಕನಸುಗಳು ಭಯ ಹುಟ್ಟಿಸುತ್ತವೆ. ಸ್ವಪ್ನ ಶಾಸ್ತ್ರದ ಪ್ರಕಾರ ಪ್ರತಿಯೊಂದು ಕನಸಿಗೂ ಒಂದು ಅರ್ಥವಿದೆ. ಅದರಂತೆ ನೀವು ನಿಮ್ಮ ಕನಸಿನಲ್ಲಿ ನವಿಲು ನೋಡಿದರೆ, ಅದರ ಅರ್ಥವೇನು ಮತ್ತು ಅದು ಭವಿಷ್ಯದ ಬಗ್ಗೆ ಏನನ್ನು ಸೂಚಿಸುತ್ತದೆ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಸ್ವಪ್ನ ಶಾಸ್ತ್ರದ ಪ್ರಕಾರ, ನವಿಲನ್ನು ನೋಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇದರರ್ಥ ಜೀವನದಲ್ಲಿ ಸಂತೋಷವು ಬರಲಿದೆ. ಈ ಕನಸು ಹಣ ಗಳಿಸುವ ಮಾರ್ಗಗಳಿವೆ ಎಂದು ಸೂಚಿಸುತ್ತದೆ. ಇದಲ್ಲದೇ ಕನಸಿನಲ್ಲಿ ನವಿಲುಗಳ ಜೋಡಿ ಒಟ್ಟಿಗೆ ಕಂಡರೆ ಶುಭ. ಗಂಡು ಮತ್ತು ಹೆಣ್ಣು ನವಿಲುಗಳು ಕಂಡರೆ, ನೀವು ಶೀಘ್ರದಲ್ಲೇ ಮದುವೆಯಾಗಲಿದ್ದೀರಿ ಎಂದರ್ಥ. ನೀವು ಈಗಾಗಲೇ ಮದುವೆಯಾಗಿದ್ದರೆ, ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಬರುತ್ತಿದೆ ಎಂದರ್ಥ. ಗಂಡ ಹೆಂಡತಿಯ ನಡುವಿನ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ ಎಂಬ ಅರ್ಥವನ್ನು ನೀಡುತ್ತದೆ.
ಇದನ್ನೂ ಓದಿ: ಮನೆಗೆ ಪದೇ ಪದೇ ಕಪ್ಪು ಇರುವೆ ಬರುತ್ತಿದ್ದರೆ ಏನರ್ಥ? ಶುಭವೋ, ಅಶುಭವೋ?
ನಿಮ್ಮ ಕನಸಿನಲ್ಲಿ ಬಿಳಿ ನವಿಲು ಕಾಣಿಸಿಕೊಂಡರೆ, ಲಕ್ಷ್ಮಿ ದೇವಿಯು ನಿಮ್ಮನ್ನು ನೋಡುತ್ತಿದ್ದಾಳೆ ಮತ್ತು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಹರಿಯಲಿದೆ ಎಂದರ್ಥ. ಕನಸಿನ ವಿಜ್ಞಾನದಲ್ಲಿ, ಬಿಳಿ ನವಿಲುಗಳನ್ನು ಆರ್ಥಿಕ ಸ್ಥಿತಿಯ ಸೂಚಕವೆಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಬಿಳಿ ನವಿಲನ್ನು ನೋಡಿದರೆ ಬಡತನ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ