Gold Rate Today Bangalore: ಯದ್ವಾತದ್ವಾ ಇಳಿದ ಚಿನ್ನ, ಬೆಳ್ಳಿ ಬೆಲೆ; ಇಲ್ಲಿದೆ ದರಪಟ್ಟಿ
Bullion Market 2025 April 4th: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಶುಕ್ರವಾರ ಭಾರೀ ಮೊತ್ತದಷ್ಟು ಕಡಿಮೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,560 ರೂ ಇದ್ದದ್ದು 8,400 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 9,200 ರೂ ಗಡಿಯೊಳಗೆ ಬಂದಿದೆ. ಬೆಳ್ಳಿ ಬೆಲೆಯಂತೂ ಬೆಂಗಳೂರಿನಲ್ಲಿ 99 ರೂಗೆ ಕುಸಿದಿದೆ. ಚೆನ್ನೈನಲ್ಲಿ 108 ರೂ ಆಗಿದೆ.

ಬೆಂಗಳೂರು, ಏಪ್ರಿಲ್ 4: ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಶುಕ್ರವಾರ ಭರ್ಜರಿಯಾಗಿ ಇಳಿದಿವೆ. ಸತತ ಏರಿಕೆ ಆಗುತ್ತಾ ಹೋಗಿದ್ದ ಚಿನ್ನದ ಬೆಲೆ (Gold rates today) ಗಣನೀಯವಾಗಿ ಇಳಿದಿದೆ. ಗ್ರಾಮ್ಗೆ ಬರೋಬ್ಬರಿ 160 ರೂಗಳಷ್ಟು ಇಳಿಕೆ ಕಂಡಿದೆ. ಅಂದರೆ ನೂರು ಗ್ರಾಮ್ ಚಿನ್ನದ ಬೆಲೆ 16,000 ರೂಗಳಷ್ಟು ತಗ್ಗಿದೆ. 8,560 ರೂ ಇದ್ದ ಆಭರಣ ಚಿನ್ನದ ಬೆಲೆ 8,400 ರೂಗೆ ಇಳಿಕೆ ಆಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆಯೂ ಚಿನ್ನದ ಬೆಲೆ ತಗ್ಗಿದೆ. ಬೆಳ್ಳಿ ಬೆಲೆಯಂತೂ ಇನ್ನೂ ವೇಗವಾಗಿ ಕುಸಿತ ಕಂಡಿದೆ. ಒಮ್ಮೆಗೇ ಗ್ರಾಮ್ಗೆ 4 ರೂನಷ್ಟು ಇಳಿಕೆ ಆಗಿದೆ. ನಿನ್ನೆ ಸಂಜೆಯೂ 2 ರೂ ಇಳಿಕೆಯಾಗಿತ್ತು ಬೆಳ್ಳಿ ಬೆಲೆ. ಒಂದೇ ದಿನದ ಅಂತರದಲ್ಲಿ 6 ರೂಗಳಷ್ಟು ಇಳಿಕೆಯಾಗಿದೆ. ಮಾರ್ಚ್ 31ರ ಬಳಿಕ ಅತ್ಯಂತ ಕಡಿಮೆ ಬೆಲೆಯಲ್ಲಿ ಬೆಳ್ಳಿ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 84,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 91,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 84,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,900 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 4ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 84,000 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 91,640 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 68,730 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 84,000 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 91,640 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 84,000 ರೂ
- ಚೆನ್ನೈ: 84,000 ರೂ
- ಮುಂಬೈ: 84,000 ರೂ
- ದೆಹಲಿ: 84,150 ರೂ
- ಕೋಲ್ಕತಾ: 84,000 ರೂ
- ಕೇರಳ: 84,000 ರೂ
- ಅಹ್ಮದಾಬಾದ್: 84,050 ರೂ
- ಜೈಪುರ್: 84,150 ರೂ
- ಲಕ್ನೋ: 84,150 ರೂ
- ಭುವನೇಶ್ವರ್: 84,000 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 4,380 ರಿಂಗಿಟ್ (84,290 ರುಪಾಯಿ)
- ದುಬೈ: 3,482.50 ಡಿರಾಮ್ (80,610 ರುಪಾಯಿ)
- ಅಮೆರಿಕ: 945 ಡಾಲರ್ (80,350 ರುಪಾಯಿ)
- ಸಿಂಗಾಪುರ: 1,301 ಸಿಂಗಾಪುರ್ ಡಾಲರ್ (83,100 ರುಪಾಯಿ)
- ಕತಾರ್: 3,530 ಕತಾರಿ ರಿಯಾಲ್ (82,350 ರೂ)
- ಸೌದಿ ಅರೇಬಿಯಾ: 3,540 ಸೌದಿ ರಿಯಾಲ್ (80,230 ರುಪಾಯಿ)
- ಓಮನ್: 371.50 ಒಮಾನಿ ರಿಯಾಲ್ (82,050 ರುಪಾಯಿ)
- ಕುವೇತ್: 285.20 ಕುವೇತಿ ದಿನಾರ್ (78,830 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 9,900 ರೂ
- ಚೆನ್ನೈ: 10,800 ರೂ
- ಮುಂಬೈ: 9,900 ರೂ
- ದೆಹಲಿ: 9,900 ರೂ
- ಕೋಲ್ಕತಾ: 9,900 ರೂ
- ಕೇರಳ: 10,800 ರೂ
- ಅಹ್ಮದಾಬಾದ್: 9,900 ರೂ
- ಜೈಪುರ್: 9,900 ರೂ
- ಲಕ್ನೋ: 9,900 ರೂ
- ಭುವನೇಶ್ವರ್: 10,800 ರೂ
- ಪುಣೆ: 9,900
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:17 am, Fri, 4 April 25