Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆಕ್ ಲೀಫ್ ಅಪ್​ಲೋಡ್ ಬೇಕಿಲ್ಲ; ಇಪಿಎಫ್​​ನಲ್ಲಿ ಈ ಎರಡು ಕ್ರಮಗಳ ಎಫೆಕ್ಟ್; ಸೆಟಲ್ಮೆಂಟ್ ಪ್ರಕ್ರಿಯೆ ಈಗ ಇನ್ನೂ ವೇಗ

EPFO further simplifies steps: ಕಾಲಕಾಲಕ್ಕೆ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಾ ಬಂದಿರುವ ಇಪಿಎಫ್​​ಒ ಸಂಸ್ಥೆ ಇತ್ತೀಚೆಗೆ ಎರಡು ಪ್ರಕ್ರಿಯೆಯನ್ನು ಕೈಬಿಟ್ಟಿದೆ. ಇದರಿಂದ ಇಪಿಎಫ್​ನ ಒಟ್ಟಾರೆ ವ್ಯವಸ್ಥೆ ಸರಳಗೊಂಡಿದೆ. ಚೆಕ್ ಲೀಫ್ ಫೋಟೋ ಅಪ್​​ಲೋಡ್ ಮಾಡುವುದು, ಯುಎಎನ್​​ಗೆ ಬ್ಯಾಂಕ್ ವಿವರ ಸೀಡಿಂಗ್ ಮಾಡಲು ಉದ್ಯೋಗದಾತರ ಅನುಮೋದನೆ ಪಡೆಯುವ ಅವಶ್ಯಕತೆ ಇಲ್ಲ.

ಚೆಕ್ ಲೀಫ್ ಅಪ್​ಲೋಡ್ ಬೇಕಿಲ್ಲ; ಇಪಿಎಫ್​​ನಲ್ಲಿ ಈ ಎರಡು ಕ್ರಮಗಳ ಎಫೆಕ್ಟ್; ಸೆಟಲ್ಮೆಂಟ್ ಪ್ರಕ್ರಿಯೆ ಈಗ ಇನ್ನೂ ವೇಗ
ಇಪಿಎಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 03, 2025 | 6:07 PM

ನವದೆಹಲಿ, ಏಪ್ರಿಲ್ 3: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಕಳೆದ ಒಂದು ದಶಕದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಇಪಿಎಫ್ ಸದಸ್ಯರನ್ನು ಸೇರಿಸುವುದರಿಂದ ಹಿಡಿದು, ಇಪಿಎಫ್ ಹಣ ವಿತ್​​ಡ್ರಾ (EPF money withdrawal) ಮಾಡುವವರೆಗೂ ಹಲವು ಪ್ರಕ್ರಿಯೆಗಳು ಹಿಂದಿನದಕ್ಕಿಂತಲೂ ಸರಳಗೊಳ್ಳುತ್ತಾ ಹೋಗುತ್ತಿವೆ. ಅವಶ್ಯಕತೆಗೆ ತಕ್ಕಂತೆ ಬದಲಾವಣೆಗಳನ್ನು ಮಾಡುತ್ತಾ ಬರಲಾಗಿದೆ. ಈಗ ಇಪಿಎಫ್ ಖಾತೆ ಹೊಂದಿರುವವರು ಆನ್​​ಲೈನ್​​ನಲ್ಲೇ ಸುಲಭವಾಗಿ ಹಣ ವಿತ್​ಡ್ರಾ ಮಾಡಬಹುದಾದಷ್ಟು ಸಲೀಸಾಗಿದೆ. ಇತ್ತೀಚೆಗೆ ಇಪಿಎಫ್​​ಒ ಸಂಸ್ಥೆ ಇಪಿಎಫ್ ವಿತ್​​ಡ್ರಾಯಲ್ ಪ್ರಕ್ರಿಯೆಯಲ್ಲಿ ಎರಡು ಕ್ರಮಗಳನ್ನು ಕೈಗೊಂಡಿತ್ತು. ಅದು ಒಟ್ಟಾರೆ ಪ್ರಕ್ರಿಯೆ ಸರಳಗೊಳ್ಳಲು ಮತ್ತು ಸುಲಭಗೊಳ್ಳಲು ಸಾಧ್ಯವಾಗಿದೆ.

ಚೆಕ್ ಲೀಫ್​ನ ಫೋಟೋ ಅಪ್​ಲೋಡ್ ಮಾಡುವ ಪ್ರಕ್ರಿಯೆ

ನೀವು ಇಪಿಎಫ್ ಹಣ ವಿತ್​ಡ್ರಾ ಮಾಡಲು ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಖಾತೆ ನಮೂದಿಸುವುದರ ಜೊತೆಗೆ ಚೆಕ್ ಲೀಫ್​​ನ ಫೋಟೋ ತೆಗೆದು ಅಪ್​​ಲೋಡ್ ಮಾಡಬೇಕಿತ್ತು. ಅಥವಾ ಬ್ಯಾಂಕ್ ಪಾಸ್​​ಬುಕ್​ ಅನ್ನು ಅಟೆಸ್ಟ್ ಮಾಡಿಸಬೇಕಿತ್ತು.

ಇದನ್ನೂ ಓದಿ: ಎಸ್​​ಜಿಬಿ ಹೂಡಿಕೆದಾರರಿಗೆ ಸರ್ಕಾರ ಕೊಡಬೇಕಾದ ಬಾಕಿ: 12,06,92,00,00,000 ರೂ

ಇದನ್ನೂ ಓದಿ
Image
ಈ ವರ್ಷದ ಪಿಎಫ್ ಹಣಕ್ಕೆ ಶೇ. 8.25 ಬಡ್ಡಿ
Image
ಹಳೆಯ ಇಪಿಎಫ್ ಹಣವನ್ನು ಹೊಸ ಖಾತೆಗೆ ರವಾನಿಸುವುದು ಹೇಗೆ?
Image
ಇಪಿಎಫ್ ಹಣ ವಿತ್​ಡ್ರಾ ಮಾಡುವುದು ಇನ್ನೂ ಸುಲಭ
Image
ಎನ್​ಪಿಎಸ್ ಮಾದರಿಯಲ್ಲಿ ಅಧಿಕ ರಿಟರ್ನ್ ಕೊಡಲಿದೆ ಇಪಿಎಫ್

ಆದರೆ, ಯುಎಎನ್ ನಂಬರ್ ಸೀಡಿಂಗ್ ವೇಳೆ ಇಪಿಎಫ್ ಸದಸ್ಯರ ಹೆಸರು ಮತ್ತು ಬ್ಯಾಂಕ್ ಖಾತೆಯ ಪರಿಶೀಲನೆ ನಡೆಸಲಾಗಿರುವುದರಿಂದ ಹೊಸದಾಗಿ ಚೆಕ್ ಲೀಫ್ ಅಪ್​​​ಲೋಡ್ ಮಾಡುವ ಕ್ರಮ ಅವಶ್ಯಕ ಇರುವುದಿಲ್ಲ.

ಚೆಕ್ ಲೀಫ್ ಫೋಟೋ ಅಪ್​ಲೋಡ್ ಮಾಡುವಾಗ ಸಾಕಷ್ಟು ಬಾರಿ ಫೋಟೋ ಗುಣಮಟ್ಟ ಸರಿಯಾಗಿ ಇರುವುದಿಲ್ಲ. ಇದರಿಂದ ಕ್ಲೇಮ್ ತಿರಸ್ಕೃತಗೊಳ್ಳುತ್ತಿದ್ದುದೇ ಹೆಚ್ಚು. ಹೀಗಾಗಿ, ಈ ಅನವಶ್ಯಕ ಪ್ರಕ್ರಿಯೆಯನ್ನು ನಿಲ್ಲಿಸಲು ಇಪಿಎಫ್​​ಒ ನಿರ್ಧರಿಸಿ, ಕಳೆದ ವರ್ಷ ಪ್ರಾಯೋಗಿಕವಾಗಿ ಇದನ್ನು ಜಾರಿಗೆ ತಂದಿತು. ಈಗ ಅದನ್ನು ಎಲ್ಲಾ ಇಪಿಎಫ್ ಖಾತೆದಾರರಿಗೂ ಜಾರಿ ಮಾಡಲಾಗುತ್ತಿದೆ.

ಇದನ್ನೂ ಓದಿ: 2024-25ಕ್ಕೆ ಇಪಿಎಫ್ ಹಣಕ್ಕೆ ಶೇ. 8.25 ಬಡ್ಡಿ: ಸಿಬಿಟಿ ನಿರ್ಧಾರ; 1952ರಿಂದೀಚೆಗಿನ ಇಪಿಎಫ್ ಬಡ್ಡಿದರಗಳ ಪಟ್ಟಿ

ಬ್ಯಾಂಕ್ ಖಾತೆ ಜೋಡಣೆಗೆ ಉದ್ಯೋಗದಾತರ ಅನುಮೋದನೆ ಅವಶ್ಯಕತೆ ಇಲ್ಲ…

ಯುಎಎನ್​​ಗೆ ಬ್ಯಾಂಕ್ ಅಕೌಂಟ್ ವಿವರವನ್ನು ಜೋಡಿಸುವುದು ಅವಶ್ಯಕತೆ ಇರುತ್ತದೆ. ಇಪಿಎಫ್ ಸದಸ್ಯರು ಬ್ಯಾಂಕ್ ಖಾತೆ ಸೀಡಿಂಗ್​​ಗೆ ಅರ್ಜಿ ಸಲ್ಲಿಸಿದ ಬಳಿಕ ಉದ್ಯೋಗದಾತರ (ಕಂಪನಿ) ಅನುಮೋದನೆ ಬೇಕಾಗುತ್ತದೆ. ಬ್ಯಾಂಕ್​​ನಿಂದ ವೆರಿಫಿಕೇಶನ್ ಆಗಲು 3 ದಿನ ಆಗುತ್ತದೆ. ಉದ್ಯೋಗದಾತರಿಂದ ವೆರಿಫೈ ಆಗಲು ಸರಾಸರಿ 13 ದಿನವಾಗುತ್ತಿದೆ. ಉದ್ಯೋಗದಾತರ ಅನುಮೋದನೆ ಅವಶ್ಯಕತೆ ಇಲ್ಲದಿರುವುದರಿಂದ ಆ ಪ್ರಕ್ರಿಯೆ ತೆಗೆದುಹಾಕಲು ನಿರ್ಧರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ