AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2024-25ಕ್ಕೆ ಇಪಿಎಫ್ ಹಣಕ್ಕೆ ಶೇ. 8.25 ಬಡ್ಡಿ: ಸಿಬಿಟಿ ನಿರ್ಧಾರ; 1952ರಿಂದೀಚೆಗಿನ ಇಪಿಎಫ್ ಬಡ್ಡಿದರಗಳ ಪಟ್ಟಿ

EPFO interest rates of 8.25% for 2024-25: ಇಪಿಎಫ್​ಒ ಸಂಸ್ಥೆ 2024-25ರ ವರ್ಷದಲ್ಲಿ ಪಿಎಫ್ ಹಣಕ್ಕೆ ಶೇ. 8.25 ಬಡ್ಡಿ ನೀಡಲು ನಿರ್ಧರಿಸಿದೆ. ಇಪಿಎಫ್​ಒನ ಸಿಬಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಹಣಕಾಸು ಸಚಿವಾಲಯದಿಂದ ಅನುಮೋದನೆ ಸಿಕ್ಕ ಬಳಿಕ ಪಿಎಫ್ ಖಾತೆಗಳಿಗೆ ಬಡ್ಡಿಹಣ ಜಮೆ ಮಾಡಲಾಗುತ್ತದೆ.

2024-25ಕ್ಕೆ ಇಪಿಎಫ್ ಹಣಕ್ಕೆ ಶೇ. 8.25 ಬಡ್ಡಿ: ಸಿಬಿಟಿ ನಿರ್ಧಾರ; 1952ರಿಂದೀಚೆಗಿನ ಇಪಿಎಫ್ ಬಡ್ಡಿದರಗಳ ಪಟ್ಟಿ
ಇಪಿಎಫ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 28, 2025 | 3:24 PM

Share

ನವದೆಹಲಿ, ಫೆಬ್ರುವರಿ 28: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್​ಒ 2024-25ರ ಸಾಲಿನ ವರ್ಷದ ಇಪಿಎಫ್ ಠೇವಣಿಗಳಿಗೆ ಬಡ್ಡಿದರ ಘೋಷಣೆ ಮಾಡಿದೆ. ಕಳೆದ ವರ್ಷದ ಇದ್ದ ಶೇ. 8.25ರ ಬಡ್ಡಿದರವನ್ನೇ ಮುಂದುವರಿಸಲು ಇಪಿಎಫ್​ಒ ನಿರ್ಧರಿಸಿದೆ. ಇಂದು ಶುಕ್ರವಾರ ಇಪಿಎಫ್​ಒನ ಕೇಂದ್ರ ಟ್ರಿಸ್ಟಿಗಳ ಮಂಡಳಿ (ಸಿಬಿಟಿ- Central board of trustees) ಇಂದು ಸಭೆ ಸೇರಿ ಬಡ್ಡಿದರ ನಿಗದಿ ಮಾಡಿದೆ. ಸಿಬಿಟಿ ಈ ವರ್ಷದ ಬಡ್ಡಿದರದ ನಿರ್ಧಾರಕ್ಕೆ ಹಣಕಾಸು ಸಚಿವಾಲಯದ ಅನುಮೋದನೆ ಸಿಗಬೇಕಾಗುತ್ತದೆ. ಅದಾದ ಬಳಿಕ ಇಪಿಎಫ್ ಖಾತೆಗಳಿಗೆ ಒಂದು ವರ್ಷದ ಠೇವಣಿಗಳಿಗೆ ಬಡ್ಡಿದರ ಜಮೆ ಆಗುತ್ತದೆ.

ಇಪಿಎಫ್​ಒದಲ್ಲಿ 7.37 ಕೋಟಿಗೂ ಅಧಿಕ ಇಪಿಎಫ್ ಖಾತೆಗಳಿವೆ. 25 ಲಕ್ಷ ಕೋಟಿ ರೂನಷ್ಟು ಹಣವು ಈ ಖಾತೆಗಳಲ್ಲಿವೆ. ಈ ಹಣಕ್ಕೆ ಇಪಿಎಫ್​ಒ 2024-25ರ ವರ್ಷಕ್ಕೆ ಶೇ. 8.25ರಷ್ಟು ಬಡ್ಡಿ ಜಮೆ ಮಾಡಲಿದೆ. ಸಾಮಾನ್ಯವಾಗಿ ಜುಲೈ ನಂತರ ಬಡ್ಡಿ ಹಣವನ್ನು ಇಪಿಎಫ್ ಅಕೌಂಟ್​ಗಳಿಗೆ ಕ್ರೆಡಿಟ್ ಮಾಡಲಾಗುತ್ತದೆ.

2022-23ರಲ್ಲಿ ಇಪಿಎಫ್​ಗೆ ಶೇ. 8.15ರಷ್ಟು ಬಡ್ಡಿದರ ನೀಡಲಾಗಿತ್ತು. 2023-24ಕ್ಕೆ ಅದನ್ನು ಶೇ. 8.25ಕ್ಕೆ ಹೆಚ್ಚಿಸಲಾಯಿತು. ಈಗ ಅದೇ ದರವನ್ನು ಮುಂದುವರಿಸಲಾಗಿದೆ. 1952-53ರಿಂದ 1955-56ರವರೆಗೆ ಇಪಿಎಫ್ ಬಡ್ಡಿದರ ಶೇ. 3ರಷ್ಟು ಇತ್ತು. ಇದು ಕನಿಷ್ಠ ಬಡ್ಡಿದರ ಎನಿಸಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಈದ್, ಹೋಳಿ ಹಬ್ಬಕ್ಕೆ ರಜೆಯಾ? ಇಲ್ಲಿದೆ ಮಾರ್ಚ್​ನಲ್ಲಿ 14 ಬ್ಯಾಂಕ್ ರಜಾದಿನಗಳ ಪಟ್ಟಿ

1989-90ರಿಂದ 2000-01ರವರೆಗೆ ಶೇ. 12ರಷ್ಟು ಬಡ್ಡಿ ನಿಗದಿ ಮಾಡಲಾಗಿತ್ತು. ಅದು ಇದೂವರೆಗಿನ ಗರಿಷ್ಠ ಬಡ್ಡಿ ದರ ಎನಿಸಿದೆ.

ವಿವಿಧ ವರ್ಷಗಳಲ್ಲಿ ಇಪಿಎಫ್ ಹಣಕ್ಕೆ ಬಡ್ಡಿದರ

  • 1952-53: ಶೇ 3.00 ಬಡ್ಡಿ
  • 1953-54: ಶೇ 3.00 ಬಡ್ಡಿ
  • 1954-55: ಶೇ 3.00 ಬಡ್ಡಿ
  • 1955-56: ಶೇ 3.50 ಬಡ್ಡಿ
  • 1956-57: ಶೇ 3.50 ಬಡ್ಡಿ
  • 1957-58: ಶೇ 3.75 ಬಡ್ಡಿ
  • 1958-59: ಶೇ 3.75 ಬಡ್ಡಿ
  • 1959-60: ಶೇ 3.75 ಬಡ್ಡಿ
  • 1960-61: ಶೇ 3.75 ಬಡ್ಡಿ
  • 1961-62: ಶೇ 3.75 ಬಡ್ಡಿ
  • 1962-63: ಶೇ 3.75 ಬಡ್ಡಿ
  • 1963-64: ಶೇ 4.00 ಬಡ್ಡಿ
  • 1964-65: ಶೇ 4.25 ಬಡ್ಡಿ
  • 1965-66: ಶೇ 4.50 ಬಡ್ಡಿ
  • 1966-67: ಶೇ 4.75 ಬಡ್ಡಿ
  • 1967-68: ಶೇ 5.00 ಬಡ್ಡಿ
  • 1968-69: ಶೇ 5.25 ಬಡ್ಡಿ
  • 1969-70: ಶೇ 5.50 ಬಡ್ಡಿ
  • 1970-71: ಶೇ 5.70 ಬಡ್ಡಿ
  • 1971-72: ಶೇ 5.80 ಬಡ್ಡಿ
  • 1972-73: ಶೇ 6.00 ಬಡ್ಡಿ
  • 1973-74: ಶೇ 6.00 ಬಡ್ಡಿ
  • 1974-75: ಶೇ 6.50 ಬಡ್ಡಿ
  • 1975-76: ಶೇ 7.00 ಬಡ್ಡಿ
  • 1976-77: ಶೇ 7.50 ಬಡ್ಡಿ
  • 1977-78: ಶೇ 8.00 ಬಡ್ಡಿ
  • 1978-79: ಶೇ 8.25 ಬಡ್ಡಿ
  • 1979-80: ಶೇ 8.25 ಬಡ್ಡಿ
  • 1980-81: ಶೇ 8.25 ಬಡ್ಡಿ
  • 1981-82: ಶೇ 8.50 ಬಡ್ಡಿ
  • 1982-83: ಶೇ 8.75 ಬಡ್ಡಿ
  • 1983-84: ಶೇ 9.15 ಬಡ್ಡಿ
  • 1984-85: ಶೇ 9.90 ಬಡ್ಡಿ
  • 1985-86: ಶೇ 10.15 ಬಡ್ಡಿ
  • 1986-87: ಶೇ 11.00 ಬಡ್ಡಿ
  • 1987-88: ಶೇ 11.50 ಬಡ್ಡಿ
  • 1988-89: ಶೇ 11.80 ಬಡ್ಡಿ
  • 1989-90: ಶೇ 12.00 ಬಡ್ಡಿ
  • 1990-91: ಶೇ 12.00 ಬಡ್ಡಿ
  • 1991-92: ಶೇ 12.00 ಬಡ್ಡಿ
  • 1992-93: ಶೇ 12.00 ಬಡ್ಡಿ
  • 1993-94: ಶೇ 12.00 ಬಡ್ಡಿ
  • 1994-95: ಶೇ 12.00 ಬಡ್ಡಿ
  • 1995-96: ಶೇ 12.00 ಬಡ್ಡಿ
  • 1996-97: ಶೇ 12.00 ಬಡ್ಡಿ
  • 1997-98: ಶೇ 12.00 ಬಡ್ಡಿ
  • 1998-99: ಶೇ 12.00 ಬಡ್ಡಿ
  • 1999-00: ಶೇ 12.00 ಬಡ್ಡಿ
  • 2000-01: ಶೇ 12.00 ಬಡ್ಡಿ
  • 2001-02: ಶೇ 9.50 ಬಡ್ಡಿ
  • 2002-03: ಶೇ 9.50 ಬಡ್ಡಿ
  • 2003-04: ಶೇ 9.50 ಬಡ್ಡಿ
  • 2004-05: ಶೇ 9.50 ಬಡ್ಡಿ
  • 2005-06: ಶೇ 8.50 ಬಡ್ಡಿ
  • 2006-07: ಶೇ 8.50 ಬಡ್ಡಿ
  • 2007-08: ಶೇ 8.50 ಬಡ್ಡಿ
  • 2008-09: ಶೇ 8.50 ಬಡ್ಡಿ
  • 2009-10: ಶೇ 8.50 ಬಡ್ಡಿ
  • 2010-11: ಶೇ 9.50 ಬಡ್ಡಿ
  • 2011-12: ಶೇ 8.25 ಬಡ್ಡಿ
  • 2012-13: ಶೇ 8.50 ಬಡ್ಡಿ
  • 2013-14: ಶೇ 8.75 ಬಡ್ಡಿ
  • 2014-15: ಶೇ 8.75 ಬಡ್ಡಿ
  • 2015-16: ಶೇ 8.80 ಬಡ್ಡಿ
  • 2016-17: ಶೇ 8.65 ಬಡ್ಡಿ
  • 2017-18: ಶೇ 8.55 ಬಡ್ಡಿ
  • 2018-19: ಶೇ 8.65 ಬಡ್ಡಿ
  • 2019-20: ಶೇ 8.50 ಬಡ್ಡಿ
  • 2020-21: ಶೇ 8.50 ಬಡ್ಡಿ
  • 2021-22: ಶೇ 8.10 ಬಡ್ಡಿ
  • 2022-23: ಶೇ 8.15 ಬಡ್ಡಿ
  • 2023-24: ಶೇ 8.25 ಬಡ್ಡಿ
  • 2024-25: ಶೇ 8.25 ಬಡ್ಡಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು