ಕರ್ನಾಟಕದಲ್ಲಿ ಈದ್, ಹೋಳಿ ಹಬ್ಬಕ್ಕೆ ರಜೆಯಾ? ಇಲ್ಲಿದೆ ಮಾರ್ಚ್ನಲ್ಲಿ 14 ಬ್ಯಾಂಕ್ ರಜಾದಿನಗಳ ಪಟ್ಟಿ
Bank holidays in 2025 March: 2025ರ ಮಾರ್ಚ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 14 ದಿನ ರಜೆ ಇದೆ. ಇದರಲ್ಲಿ ಪ್ರಾದೇಶಿಕ ರಜೆಗಳೂ ಇವೆ. ಪ್ರದೇಶವಾರು ರಜೆಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಇವೆ. ಕರ್ನಾಟಕದಲ್ಲಿ ಎಂಟು ದಿನ ಮಾತ್ರವೇ ರಜೆ ಇರುವುದು. ಇದರಲ್ಲಿ ಐದು ಭಾನುವಾರ ಮತ್ತು ಎರಡು ಶನಿವಾರದ ರಜೆಗಳು ಒಳಗೊಂಡಿವೆ.

ಬೆಂಗಳೂರು, ಫೆಬ್ರುವರಿ 28: ನಾಳೆಯಿಂದ ಆರಂಭವಾಗುವ ಮಾರ್ಚ್ ತಿಂಗಳಲ್ಲಿ ಹೋಳಿ ಮತ್ತು ಈದ್, ಎರಡು ಪ್ರಮುಖ ಹಬ್ಬಗಳು ಬಂದಿವೆ. ಇವೆರಡೂ ಸೇರಿ ಆ ತಿಂಗಳಲ್ಲಿ ಒಟ್ಟು 14 ದಿನ ಬ್ಯಾಂಕ್ಗೆ ರಜೆ (Bank Holidays) ಇದೆ. ಮಾರ್ಚ್ನಲ್ಲಿ ಐದು ಶನಿವಾರ ಮತ್ತು ಐದು ಭಾನುವಾರಗಳಿವೆ. ಇದರಲ್ಲಿ ಎರಡು ಶನಿವಾರ ಹಾಗೂ ಐದು ಭಾನುವಾರದಂದು ಬ್ಯಾಂಕುಗಳಿಗೆ ರಜೆ ಇದೆ. ಕರ್ನಾಟಕದಲ್ಲಿ ಶನಿವಾರ, ಭಾನುವಾರ ಸೇರಿ ಒಟ್ಟು 8 ದಿನ ರಜೆ ಇದೆ.
ಹೋಳಿ ಹಬ್ಬಕ್ಕೆ ಆಂಧ್ರ ಮತ್ತು ತೆಲಂಗಾಣ ಬಿಟ್ಟರೆ ದಕ್ಷಿಣ ಭಾರತೀಯ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇರುವುದಿಲ್ಲ. ಮಾರ್ಚ್ 31, ಸೋಮವಾರದಂದು ಹೆಚ್ಚಿನ ರಾಜ್ಯಗಳಿಗೆ ರಜೆ ಇದೆ.
2025ರ ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ
- ಮಾರ್ಚ್ 2: ಭಾನುವಾರದ ರಜೆ
- ಮಾರ್ಚ್ 7, ಶುಕ್ರವಾರ: ಛಾಪಚಾರ್ ಕುತ್ ಹಬ್ಬ (ಉತ್ತರಪ್ರದೇಶ, ಉತ್ತರಾಖಂಡ್, ಜಾರ್ಖಂಡ್, ಸಿಕ್ಕಿಂ ರಾಜ್ಯಗಳಲ್ಲಿ ರಜೆ)
- ಮಾರ್ಚ್ 8: ಎರಡನೇ ಶನಿವಾರ
- ಮಾರ್ಚ್ 9: ಭಾನುವಾರದ ರಜೆ
- ಮಾರ್ಚ್ 13, ಗುರುವಾರ: ಹೋಳಿಕಾ ದಹನ, ಆಟ್ಟುಕುಲ್ ಪೊಂಗಲ್ (ಉತ್ತರಾಖಂಡ್, ಉತ್ತರಪ್ರದೇಶ, ಜಾರ್ಖಂಡ್, ಕೇರಳ ರಾಜ್ಯಗಳಲ್ಲಿ ರಜೆ)
- ಮಾರ್ಚ್ 14, ಶುಕ್ರವಾರ: ಹೋಳಿ ಹಬ್ಬ (ಆಂಧ್ರ, ತೆಲಂಗಾಣ ಹಾಗೂ ಹೆಚ್ಚಿನ ಉತ್ತರ ಭಾರತೀಯ ರಾಜ್ಯಗಳಲ್ಲಿ ರಜೆ)
- ಮಾರ್ಚ್ 15, ಶನಿವಾರ: ಹೋಳಿ, ಯಾವೋಸ್ಯಾಂಗ್ (ತ್ರಿಪುರ, ಮಣಿಪುರ್ ಮತ್ತು ಒಡಿಶಾ ರಾಜ್ಯಗಳಲ್ಲಿ ರಜೆ)
- ಮಾರ್ಚ್ 16: ಭಾನುವಾರದ ರಜೆ
- ಮಾರ್ಚ್ 22: ನಾಲ್ಕನೇ ಶನಿವಾರ
- ಮಾರ್ಚ್ 23: ಭಾನುವಾರದ ರಜೆ
- ಮಾರ್ಚ್ 27, ಗುರುವಾರ: ಶಬೀ ಖಾದರ್ (ಜಮ್ಮು ಕಾಶ್ಮೀರದಲ್ಲಿ ರಜೆ)
- ಮಾರ್ಚ್ 28, ಶುಕ್ರವಾರ: ಜುಮತ್ ಉಲ್ ವಿದಾ (ಜಮ್ಮು ಕಾಶ್ಮೀರದಲ್ಲಿ ರಜೆ)
- ಮಾರ್ಚ್ 30: ಭಾನುವಾರದ ರಜೆ
- ಮಾರ್ಚ್ 31, ಸೋಮವಾರ: ರಂಜಾನ್ ಈದ್ (ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ರಜೆ)
ಇದನ್ನೂ ಓದಿ: ಷೇರುಪೇಟೆ ಗಡಗಡ; ಹಿಂದಿನ ದೊಡ್ಡ ಕುಸಿತಗಳಿಗೆ ಹೋಲಿಸಿದರೆ ಈ ಬಾರಿ ನಿಫ್ಟಿಯ ನಷ್ಟ ಸಾಧಾರಣ
ಕರ್ನಾಟಕದಲ್ಲಿ 2025ರ ಮಾರ್ಚ್ನಲ್ಲಿ ಬ್ಯಾಂಕ್ ರಜಾದಿನಗಳಿವು…
- ಮಾರ್ಚ್ 2: ಭಾನುವಾರದ ರಜೆ
- ಮಾರ್ಚ್ 8: ಎರಡನೇ ಶನಿವಾರ
- ಮಾರ್ಚ್ 9: ಭಾನುವಾರದ ರಜೆ
- ಮಾರ್ಚ್ 16: ಭಾನುವಾರದ ರಜೆ
- ಮಾರ್ಚ್ 22: ನಾಲ್ಕನೇ ಶನಿವಾರ
- ಮಾರ್ಚ್ 23: ಭಾನುವಾರದ ರಜೆ
- ಮಾರ್ಚ್ 30: ಭಾನುವಾರದ ರಜೆ
- ಮಾರ್ಚ್ 31, ಸೋಮವಾರ: ರಂಜಾನ್ ಈದ್
ಈ ಮೇಲಿನ ದಿನಗಳಲ್ಲಿ ಬ್ಯಾಂಕುಗಳ ಕಚೇರಿಗಳು ಬಂದ್ ಆಗಿರುತ್ತವೆ. ಆದರೆ, ಕ್ಯಾಷ್ ಪಡೆಯಲು, ಹಣ ವರ್ಗಾವಣೆ ಮಾಡಲು ಎಟಿಎಂ, ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್, ಯುಪಿಐ ಇತ್ಯಾದಿ ಪ್ಲಾಟ್ಫಾರ್ಮ್ಗಳಿವೆ. ಇವೆಲ್ಲವೂ ವರ್ಷದ ಎಲ್ಲಾ ದಿನ, ದಿನದ ಎಲ್ಲಾ ಹೊತ್ತೂ ತೆರೆದಿರುತ್ತವೆ. ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳನ್ನು ಕಚೇರಿಗೆ ಹೋಗದೆಯೇ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




