ಶ್ರೀಮಂತರ ನಗರಿ ಬೆಂಗಳೂರು; ನಾರಾಯಣಮೂರ್ತಿ, ಅಜಿಮ್ ಪ್ರೇಮ್ಜಿ, ಇರ್ಫಾನ್ ರಜಾಕ್… ಟಾಪ್ 8 ಬೆಂಗಳೂರಿಗರ ಪಟ್ಟಿ
Bengalureans in Hurun India Rich List 2024: ಬೆಂಗಳೂರು ನಗರದಲ್ಲಿ ಸಾಕಷ್ಟು ಶ್ರೀಮಂತರಿದ್ದಾರೆ. ದೇಶದ ನೂರು ಅಗ್ರಮಾನ್ಯ ಬಿಲಿಯನೇರ್ಗಳಲ್ಲಿ ಬೆಂಗಳೂರಿನ ಎಂಟು ಮಂದಿ ಇದ್ದಾರೆ. ಕಿರಣ್ ಮಜುಮ್ದಾರ್ ಷಾ ಅವರಿಂದ ಹಿಡಿದು ಅಜೀಮ್ ಪ್ರೇಮ್ಜಿವರೆಗೆ ಟಾಪ್ 8 ಬೆಂಗಳೂರಿಗರು ಹಾಗೂ ಅವರ ಆಸ್ತಿಮೌಲ್ಯದ ವಿವರ ಇಲ್ಲಿದೆ. ಹುರೂನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿರುವ ಕೆಲ ಬೆಂಗಳೂರಿಗರ ವಿವರ....

ಬೆಂಗಳೂರು, ಫೆಬ್ರುವರಿ 28: ಕರ್ನಾಟಕ ರಾಜಧಾನಿ ಸಾಕಷ್ಟು ಸಂಗತಿಗಳಿಗೆ ಖ್ಯಾತವಾಗಿದೆ. ಉದ್ಯಾನನಗರಿ, ಪಾರ್ಕ್ ನಗರಿ, ಸಿಲಿಕಾನ್ ನಗರಿ, ಐಟಿ ಬಿಟಿ ನಗರಿ, ಸ್ಟಾರ್ಟಪ್ ನಗರಿ ಹೀಗೆ ಪಟ್ಟಿ ದೊಡ್ಡದಿದೆ. ದೇಶದ ಪ್ರಮುಖ ಉದ್ದಿಮೆಗಳು ಬೆಂಗಳೂರಿನಲ್ಲಿ ನೆಲೆ ನಿಂತಿವೆ. ತಾಳ್ಮೆ ಪರೀಕ್ಷೆ ಮಾಡುವಷ್ಟು ಟ್ರಾಫಿಕ್ ಕಿರಿಕಿರಿಯಲ್ಲೂ, ದೇಶದ ಆರ್ಥಿಕತೆಯನ್ನು ಬಲಪಡಿಸಬಲ್ಲಂತಹ ಉದ್ಯಮಪತಿಗಳು ಬೆಂಗಳೂರಿನಲ್ಲಿದ್ದಾರೆ. ದೇಶದಲ್ಲಿ ಅತಿಹೆಚ್ಚು ಶ್ರೀಮಂತರಿರುವ (rich people) ಟಾಪ್ ನಗರಗಳಲ್ಲಿ ಬೆಂಗಳೂರು ಇದೆ.
2024ರ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ (Hurun India Rich List) ದೇಶದ 334 ಬಿಲಿಯನೇರ್ಗಳ ಹೆಸರಿವೆ. ಈ ಪೈಕಿ ಟಾಪ್ 100 ಬಿಲಿಯನೇರ್ಗಳಲ್ಲಿ ಬೆಂಗಳೂರಿಗರ ಸಂಖ್ಯೆ ಎಂಟು ಇದೆ. ಬೆಂಗಳೂರಿಗರದ್ದೇ ಎಂಟು ಮಂದಿಯ ಪಟ್ಟಿ ಮಾಡಿದರೆ ವಿಪ್ರೋ ಸಂಸ್ಥೆಯ ಅಜೀಮ್ ಪ್ರೇಮ್ಜಿ ಮೊದಲು ಬರುತ್ತಾರೆ. ರಿಯಲ್ ಎಸ್ಟೇಟ್ ಉದ್ಯಮಿ ಇರ್ಫಾನ್ ರಜಾಕ್ ಎರಡನೇ ಸ್ಥಾನಕ್ಕೆ ಬರುತ್ತಾರೆ. ಜಿಎಂಆರ್ ಗ್ರೂಪ್ನ ಜಿ.ವಿ. ರಾವ್ ಕೂಡ ಈ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ: ಷೇರುಪೇಟೆ ಗಡಗಡ; ಹಿಂದಿನ ದೊಡ್ಡ ಕುಸಿತಗಳಿಗೆ ಹೋಲಿಸಿದರೆ ಈ ಬಾರಿ ನಿಫ್ಟಿಯ ನಷ್ಟ ಸಾಧಾರಣ
2024ರಲ್ಲಿ ಬೆಂಗಳೂರಿನ ಎಂಟು ಅತಿ ಶ್ರೀಮಂತರಿವರು…
- ಅಜೀಮ್ ಪ್ರೇಮ್ಜಿ: ಮಾಜಿ ವಿಪ್ರೋ ಛೇರ್ಮನ್ ಆದ ಅಜೀಮ್ ಪ್ರೀಮ್ಗೆ ಅವರು ಹುರೂನ್ ಇಂಡಿಯಾ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಇವರ ನಿವ್ವಳ ಆಸ್ತಿ 1.91 ಲಕ್ಷ ಕೋಟಿ ರೂ. ಬೆಂಗಳೂರಿನ ಅತಿ ಶ್ರೀಮಂತರಲ್ಲಿ ಇವರದ್ದು ಅಗ್ರಸ್ಥಾನ.
- ಇರ್ಫಾನ್ ರಜಾಕ್: ಬ್ಯುಲ್ಡರ್ಸ್ ಆದ ಪ್ರೆಸ್ಟೀಜ್ ಗ್ರೂಪ್ನ ಛೇರ್ಮನ್ ಮತ್ತು ಎಂಡಿಯಾಗಿರುವ ಇರ್ಫಾನ್ ರಜಾಕ್ ಅವರು ಹುರೂನ್ ಪಟ್ಟಿಯಲ್ಲಿ 51ನೇ ಸ್ಥಾನದಲ್ಲಿದ್ದಾರೆ. ಇವರ ಒಟ್ಟು ಆಸ್ತಿ 43,600 ಕೋಟಿ ರೂ ಇದೆ.
- ನಿತಿನ್ ಕಾಮತ್: ಝೀರೋಧ ಸಹ-ಸಂಸ್ಥಾಪಕರಾದ ಇವರ ಆಸ್ತಿ 41,000 ಕೋಟಿ ರೂ ಇದೆ. ಹುರೂನ್ ಇಂಡಿಯಾ ಪಟ್ಟಿಯಲ್ಲಿ 57ನೇ ಸ್ಥಾನದಲ್ಲಿದ್ದಾರೆ.
- ಎಸ್ ಗೋಪಾಲಕೃಷ್ಣನ್: ಇನ್ಫೋಸಿಸ್ನ ಸಹ-ಸಂಸ್ಥಾಪಕರಲ್ಲಿ ಒಬ್ಬರಾದ ಎಸ್ ಗೋಪಾಲಕೃಷ್ಣನ್ ಅವರ ಆಸ್ತಿ 38,500 ಕೋಟಿ ರೂ ಇದೆ. ಇನ್ಫೋಸಿಸ್ನಲ್ಲಿ ಇವರು ಈ ಹಿಂದೆ ಸಿಇಒ, ಎಂಡಿ, ವೈಸ್ ಪ್ರೆಸಿಡೆಂಟ್ ಸ್ಥಾನಗಳಲ್ಲಿದ್ದು ಸೇವೆ ಸಲ್ಲಿಸಿದ್ದರು.
- ಎನ್ ಆರ್ ನಾರಾಯಣಮೂರ್ತಿ: ಇನ್ಫೋಸಿಸ್ನ ಸಂಸ್ಥಾಪಕರಾದ ಎನ್ ಆರ್ ನಾರಾಯಣಮೂರ್ತಿ ಅವರ ಒಟ್ಟು ಆಸ್ತಿ 36,600 ಕೋಟಿ ರೂ ಇದೆ. ಸುದೀರ್ಘ ಕಾಲ ಇವರು ಇನ್ಫೋಸಿಸ್ನ ಸಿಇಒ ಆಗಿ ಕೆಲಸ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. ತಮ್ಮ ಪಾಲಿನ ಷೇರುಗಳನ್ನು ಮಕ್ಕಳು, ಮೊಮ್ಮಕ್ಕಳಿಗೆ ಹಂಚಿರುವುದರಿಂದ ಇವರ ಆಸ್ತಿ ಮೊತ್ತ ಕಡಿಮೆ ಆಗಿದೆ.
- ಜಿಎಂ ರಾವ್: ಆಂದ್ರ ಮೂಲದ ಜಿಎಂಆರ್ ಗ್ರೂಪ್ನ ಸಂಸ್ಥಾಪಕರಾದ ಜಿಎಂ ರಾವ್ ಅವರ ಬಳಿ 36,300 ಕೋಟಿ ರೂ ಆಸ್ತಿ ಇದೆ. ಇವರ ಸಂಸ್ಥೆಯದ್ದು ಕನ್ಸ್ಟ್ರಕ್ಷನ್ ಬ್ಯುಸಿನೆಸ್.
- ರಂಜನ್ ಪೈ: ಮಣಿಪಾಲ್ ಎಜುಕೇಶನ್ ಮತ್ತು ಮೆಡಿಕಲ್ ಗ್ರೂಪ್ನ ಛೇರ್ಮನ್ ಆದ ರಂಜನ್ ಪೈ ಅವರ ಆಸ್ತಿ 34,700 ಕೋಟಿ ರೂ ಇದೆ. ಹುರೂನ್ ಇಂಡಿಯಾ ಪಟ್ಟಿಯಲ್ಲಿ ಇವರು 74ನೇ ಸ್ಥಾನದಲ್ಲಿದ್ದಾರೆ.
- ಕಿರಣ್ ಮಜುಮ್ದಾರ್ ಷಾ: ಬೆಂಗಳೂರಿನ ವಿಚಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಧ್ವನಿ ಎತ್ತುತ್ತಲೇ ಇರುವ ಕಿರಣ್ ಮಜುಮ್ದಾರ್ ಅವರ ಆಸ್ತಿ 29,000 ಕೋಟಿ ರೂನಷ್ಟಿದೆ. ಬಯೋಕಾನ್ ಸಂಸ್ಥಾಪಕಿ ಹಾಗೂ ಎಕ್ಸಿಕ್ಯೂಟಿವ್ ಛೇರ್ಮನ್ ಆಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




