AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇ-ವ್ಯಾಲಟ್, ಎಟಿಎಂ: ಇಪಿಎಫ್ ಹಣ ಹಿಂಪಡೆಯಲು ಇನ್ನಷ್ಟು ಸುಲಭ ಮಾರ್ಗಗಳು

EPF withdrawal rules: ಇಪಿಎಫ್ ಹಣ ವಿತ್​ಡ್ರಾ ಮಾಡುವ ಪ್ರಕ್ರಿಯೆ ನಿರಂತರವಾಗಿ ಸರಳಗೊಳ್ಳುತ್ತಲೇ ಹೋಗುತ್ತಿದೆ. ಈಗ ಕ್ಲೇಮ್​ಗೆ ಅರ್ಜಿ ಸಲ್ಲಿಸುವ ಪ್ರಮೇಯವಿಲ್ಲದೇ ಹಣ ಪಡೆಯಬಹುದು. ಇಪಿಎಫ್ ಖಾತೆಯಲ್ಲಿನ ಶೇ. 50ರಷ್ಟು ಹಣವನ್ನು ಎಟಿಎಂ ಮೂಲಕ ವಿತ್​ಡ್ರಾ ಮಾಡುವ ಸೌಲಭ್ಯ ನೀಡಲು ಯೋಜಿಸಲಾಗಿದೆ. ಹಾಗೆಯೇ, ಕ್ಲೇಮ್ ಆದ ಇಪಿಎಫ್ ಹಣವನ್ನು ಇ-ವ್ಯಾಲಟ್​ಗಳಿಗೆ ರವಾನಿಸುವ ಮಾರ್ಗೋಪಾಯವನ್ನೂ ಅವಲೋಕಿಸಲಾಗುತ್ತಿದೆ.

ಇ-ವ್ಯಾಲಟ್, ಎಟಿಎಂ: ಇಪಿಎಫ್ ಹಣ ಹಿಂಪಡೆಯಲು ಇನ್ನಷ್ಟು ಸುಲಭ ಮಾರ್ಗಗಳು
ಇಪಿಎಫ್​ಒ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 31, 2024 | 1:47 PM

ನವದೆಹಲಿ, ಡಿಸೆಂಬರ್ 31: ಇಪಿಎಫ್​ನಲ್ಲಿನ ಹಣ ಹಿಂಪಡೆಯುವ ವಿಚಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಇಪಿಎಫ್ ನಿಯಮಗಳು ಹಾಗೂ ಕ್ಲೇಮ್ ಪ್ರಕ್ರಿಯೆಗಳು ಹೆಚ್ಚು ಸರಳಗೊಂಡಿವೆ. ಆದರೂ ಕೂಡ ತುರ್ತು ಸಂದರ್ಭದಲ್ಲಿ ಇಪಿಎಫ್ ಹಣ ಅಷ್ಟು ಸುಲಭದಲ್ಲಿ ಸಿಗುವುದಿಲ್ಲ. ಈ ಕೊರತೆಯನ್ನು ನೀಗಿಸಿ, ಇಪಿಎಫ್ ಸದಸ್ಯರಿಗೆ ತುರ್ತುಕಾಲದಲ್ಲಿ ಹಣ ಬಳಸಿಕೊಳ್ಳಲು ಅನುವಾಗುವಂತೆ ಮಾರ್ಗೋಪಾಯ ಹುಡುಕಲಾಗುತ್ತಿದೆ. ಇ ವ್ಯಾಲಟ್ ಮತ್ತು ಎಟಿಎಂ ವಿತ್​ಡ್ರಾಯಲ್ ಸೌಲಭ್ಯವನ್ನು ನೀಡುವ ಕುರಿತು ಯೋಚಿಸಲಾಗುತ್ತಿದೆ. 2025ರಲ್ಲಿ ಇಪಿಎಫ್​ಒದಿಂದ ಈ ಹೊಸ ಫೀಚರ್​ಗಳು ಬರಬಹುದು.

ಎಟಿಎಂನಲ್ಲಿ ಇಪಿಎಫ್ ಹಣ ಹಿಂಪಡೆಯಲು ಅವಕಾಶ…

ಇಪಿಎಫ್​ನಿಂದ ಹಣ ಹಿಂಪಡೆಯಬೇಕಾದರೆ ಮೊದಲು ಹಣಕ್ಕೆ ಕ್ಲೇಮ್ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಸಮ್ಮತವಾಗಿ 7ರಿಂದ 15 ದಿನದಲ್ಲಿ ಆ ಹಣ ಬ್ಯಾಂಕ್ ಖಾತೆಗೆ ರವಾನೆಯಾಗುತ್ತದೆ. ಆಗ ಆ ಹಣವನ್ನು ಹಿಂಪಡೆಯಬಹುದು. ಆದರೆ, ಸರ್ಕಾರವು ಮಹತ್ವದ ಆಲೋಚನೆ ಮಾಡಿದೆ. ಇಪಿಎಫ್ ಅಕೌಂಟ್​ನಲ್ಲಿರುವ ಹಣವನ್ನು ನೇರವಾಗಿ ಎಟಿಎಂಗಳಲ್ಲಿ ವಿತ್​ಡ್ರಾ ಮಾಡುವ ಅವಕಾಶ ಕಲ್ಪಿಸಲು ಮುಂದಾಗಿದೆ. ಅಂದರೆ, ನೀವು ಕ್ಲೇಮ್​ಗೆ ಅರ್ಜಿ ಹಾಕುವ ಅವಶ್ಯಕತೆ ಇರುವುದಿಲ್ಲ.

ಇದನ್ನೂ ಓದಿ: ಬರುತ್ತಿದೆ ಇಪಿಎಫ್​ಒ 3.0: ನಿಮ್ಮ ಪಿಎಫ್ ಖಾತೆಗೆ ಇಷ್ಟಬಂದಷ್ಟು ಹಣ ಸೇರಿಸಿ; ಎಟಿಎಂನಲ್ಲೇ ವಿತ್​ಡ್ರಾ ಮಾಡಿ

ಇಪಿಎಫ್​ಒದಿಂದ ನಿಮಗೆ ಎಟಿಎಂ ರೀತಿಯ ಒಂದು ಕಾರ್ಡ್ ಅನ್ನು ನೀಡಲಾಗುತ್ತದೆ. ಅದನ್ನು ಎಟಿಎಂಗಳಲ್ಲಿ ಬಳಸಿ ಹಣ ಪಡೆಯಬಹುದು. ಇಪಿಎಫ್ ಅಕೌಂಟ್​ನಲ್ಲಿ ಶೇ. 50ರಷ್ಟು ಮೊತ್ತದವರೆಗೆ ವಿತ್​ಡ್ರಾ ಮಾಡಲು ಮಿತಿ ಹಾಕಲಾಗಿರುತ್ತದೆ. ಆದರೂ ಕೂಡ ತುರ್ತು ಸಂದರ್ಭದಲ್ಲಿ ಇದು ಬಹಳ ಉಪಯೋಗಕ್ಕೆ ಬರುವ ಸೌಲಭ್ಯ.

ಇ-ವ್ಯಾಲಟ್​ಗೆ ಹೋಗುವ ಹಣ

ಇಪಿಎಫ್​ನ ಮತ್ತೊಂದು ಹೊಸ ಫೀಚರ್ ಎಂದರೆ ಇ-ವ್ಯಾಲಟ್​ನದ್ದು. ನೀವು ನಿಮ್ಮ ಇಪಿಎಫ್ ಹಣಕ್ಕೆ ಕ್ಲೇಮ್ ಸಲ್ಲಿಸಿದಾಗ ಅದು ನೇರವಾಗಿ ಇ-ವ್ಯಾಲಟ್​ಗೆ (e Wallet) ರವಾನೆಯಾಗುವಂತಹ ಒಂದು ಸಾಧನವನ್ನು ರೂಪಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕ್​ಗಳ ಜೊತೆ ಮಾತನಾಡುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ವಿವರ ಲಭ್ಯವಾಗಬೇಕಿದೆ.

ಇದನ್ನೂ ಓದಿ: ಇಎಲ್​ಐ ಸ್ಕೀಮ್: ಯುಎಎನ್ ಸಕ್ರಿಯಗೊಳಿಸಲು, ಬ್ಯಾಂಕ್ ಖಾತೆ ಆಧಾರ್​ಗೆ ಲಿಂಕ್ ಮಾಡಲು ಡೆಡ್​ಲೈನ್ ವಿಸ್ತರಣೆ

ಪೆನ್ಷನ್ ಅರ್ಜಿ ಅಪ್​ಲೋಡ್ ಮಾಡಲು ಡೆಡ್​ಲೈನ್ ವಿಸ್ತರಣೆ

ಅಧಿಕ ವೇತನಕ್ಕೆ ಸಂಬಂಧಿಸಿದ ಬಾಕಿ ಪಿಂಚಣಿ ಅರ್ಜಿಗಳನ್ನು ಅಪ್​ಲೋಡ್ ಮಾಡಲು ಇದ್ದ ಡೆಡ್​ಲೈನ್ ಅನ್ನು 2025ರ ಜನವರಿ 31ರವರೆಗೂ ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಸಲ್ಲಿಸಲಾಗಿರುವ ಅರ್ಜಿಗಳಲ್ಲಿ ಅಪೂರ್ಣ ಮಾಹಿತಿ ಇದ್ದು ಅದನ್ನು ಅಪ್​ಡೇಟ್ ಮಾಡಲು ಹಾಗೂ ಹೆಚ್ಚುವರಿ ಮಾಹಿತಿ ಸೇರಿಸುವ ಅವಶ್ಯಕತೆ ಇದ್ದರೆ ಅದನ್ನು ಮಾಡಲು ಜನವರಿ 15ರವರೆಗೆ ಕಾಲಾವಕಾಶ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ