New Year 2025: ಬ್ಯಾಂಕ್ ಹಾಗೂ ಷೇರು ಮಾರುಕಟ್ಟೆ ಜನವರಿ 1 ಕ್ಕೆ ತೆರೆದಿರುತ್ತವೆಯೇ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಹೊಸ ವರ್ಷದ ಮೊದಲ ದಿನವೇ ಷೇರು ಮಾರುಕಟ್ಟೆ ವ್ಯವಹಾರ ಹಾಗೂ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಆರಂಭಿಸಬೇಕು ಎಂದುಕೊಂಡವರು ಈ ಸುದ್ದಿಯನ್ನು ತಿಳಿದುಕೊಳ್ಳುವುದು ಸೂಕ್ತ. ಈಗಾಗಲೇ ಅನೇಕ ಜನರು ಜನವರಿ 1 ರಂದು ಬ್ಯಾಂಕ್‌ಗಳು ಮತ್ತು ಷೇರು ಮಾರುಕಟ್ಟೆಗಳು ತೆರೆದಿರುತ್ತವೆಯೇ ಅಥವಾ ಇಲ್ಲವೇ ಎಂಬ ಗೊಂದಲದಲ್ಲಿದ್ದಾರೆ. ವರ್ಷದ ಮೊದಲ ದಿನವೇ ಬ್ಯಾಂಕ್‌ಗಳು ಮತ್ತು ಷೇರುಮಾರುಕಟ್ಟೆಗೆ ರಜೆಯಿದೆಯೇ, ಇಲ್ಲವೇ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
2024ಕ್ಕೆ ವಿದಾಯ ಹೇಳಿ, 2025ರ ಹೊಸ ವರ್ಷಕ್ಕೆ ಬರ ಮಾಡಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ ಈಗಾಗಲೇ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಇಡೀ ದೇಶವೇ ಕಾಯುತ್ತಿದೆ. ಈ ನಡುವೆ ವರ್ಷದ ಮೊದಲ ದಿನವೇ ಕೆಲವರು ಷೇರು ಮಾರುಕಟ್ಟೆ ವ್ಯವಹಾರ ಹಾಗೂ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಮಾಡಬೇಕೆಂದುಕೊಂಡಿದ್ದಾರೆ. ಹೀಗಾಗಿ ಜನವರಿ 1 ಕ್ಕೆ ಷೇರು ಮಾರುಕಟ್ಟೆ ಹಾಗೂ ಬ್ಯಾಂಕ್ ಗಳಿಗೆ ರಜೆಯಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳುವುದು ಸೂಕ್ತ.
ಜನವರಿ 1 ರಂದು ಷೇರು ಮಾರುಕಟ್ಟೆ ತೆರೆದಿರುತ್ತವೆಯೇ?
ನಿಫ್ಟಿ 50 ಮತ್ತು ಸೆನ್ಸೆಕ್ಸ್‌ಗೆ ಸಂಬಂಧಿಸಿದ ಭಾರತೀಯ ಷೇರು ಮಾರುಕಟ್ಟೆಗಳು ಜನವರಿ 1, 2025 ರಂದು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಎನ್ ಎಸ್ ಇ ಮತ್ತು ಬಿ ಎಸ್ ಇ ಬಿಡುಗಡೆ ಮಾಡಿದ ರಜಾದಿನಗಳ ಪಟ್ಟಿಯಲ್ಲಿ ಜನವರಿ 1 ನ್ನು ಸೇರಿಸಿಲ್ಲ. ಜನವರಿ 1 ರಂದು ಷೇರು ಮಾರುಕಟ್ಟೆ ತೆರೆದಿರುತ್ತದೆ. ಈಕ್ವಿಟಿ, ಈಕ್ವಿಟಿ ಡೆರಿವೇಟಿವ್ಸ್ ವಿಭಾಗ ಮತ್ತು ಸೆಕ್ಯುರಿಟೀಸ್ ಲೆಂಡಿಂಗ್ ಹಾಗೂ ಎರವಲು ವಿಭಾಗಗಳಲ್ಲಿ ವಹಿವಾಟು ಎಂದಿನಂತೆ ಇರಲಿದೆ. ಷೇರು ಮಾರುಕಟ್ಟೆಯು ಬೆಳಿಗ್ಗೆ 9:15 ಕ್ಕೆ ತೆರೆಯುತ್ತದೆ ಮತ್ತು ಮಧ್ಯಾಹ್ನ 3:30 ಕ್ಕೆ ಮುಚ್ಚುತ್ತದೆ. ಜನವರಿ 1, 2025 ರಂದು ಷೇರು ಮಾರುಕಟ್ಟೆ ಮುಚ್ಚಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಇ-ವ್ಯಾಲಟ್, ಎಟಿಎಂ: ಇಪಿಎಫ್ ಹಣ ಹಿಂಪಡೆಯಲು ಇನ್ನಷ್ಟು ಸುಲಭ ಮಾರ್ಗಗಳು
ಜನವರಿ 1 ಕ್ಕೆ ಬ್ಯಾಂಕುಗಳಿಗೆ ರಜೆಯಿದೆಯೇ?
ಭಾರತದಲ್ಲಿನ ಬ್ಯಾಂಕುಗಳು ಜನವರಿ 1 ರಂದು ಮುಚ್ಚಿರುತ್ತದೆಯೇ ಇಲ್ಲವೇ ಎನ್ನುವ ಗೊಂದಲ ಅನೇಕರಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 2025 ರ ಅಧಿಕೃತ ಬ್ಯಾಂಕ್ ರಜೆ ವೇಳಾಪಟ್ಟಿ ಪ್ರಕಾರ ಬ್ಯಾಂಕ್ ಗಳಿಗೆ 4 ಭಾನುವಾರ ಮತ್ತು 2 ಶನಿವಾರಗಳನ್ನು ಒಳಗೊಂಡಂತೆ ತಿಂಗಳಾದ್ಯಂತ 15 ರಜಾ ದಿನ ಇರಲಿದೆ. ಆರ್ಬಿಐ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಮೊದಲ ದಿನ ಜನವರಿ 1 ಬ್ಯಾಂಕ್ ರಜೆ ಇರುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ರಜೆಯಿದ್ದು, ಸ್ಥಳೀಯ ಬ್ಯಾಂಕ್‌ಗಳು ಅವುಗಳ ಕೆಲಸ ಕಾರ್ಯಗಳಿಗೆ ತಕ್ಕಂತೆ ರಜೆ ನೀಡಲಿದೆ. ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯಿಂದ ಮುಂಚಿತವಾಗಿಯೇ ರಜಾದಿನಗಳ ಬಗ್ಗೆ ಮಾಹಿತಿಯನ್ನು ಪಡೆದು, ಜನವರಿ 1 ಕ್ಕೆ ರಜೆಯಿದ್ದರೆ ಬ್ಯಾಂಕ್ ಸಂಬಂಧಿತ ಕೆಲಸವನ್ನು ಮುಂದೂಡುವುದು ಸೂಕ್ತ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ