ಇಎಲ್ಐ ಸ್ಕೀಮ್: ಯುಎಎನ್ ಸಕ್ರಿಯಗೊಳಿಸಲು, ಬ್ಯಾಂಕ್ ಖಾತೆ ಆಧಾರ್ಗೆ ಲಿಂಕ್ ಮಾಡಲು ಡೆಡ್ಲೈನ್ ವಿಸ್ತರಣೆ
Employment linked incentive scheme: ಎಂಪ್ಲಾಯ್ಮೆಂಟ್ ಲಿಂಕ್ಡ್ ಇನ್ಸೆಂಟಿವ್ ಅಡಿ ವಿವಿಧ ಯೋಜನೆಗಳ ಲಾಭ ಪಡೆಯಬೇಕಾದರೆ ಉದ್ಯೋಗಿಗಳ ಯುಎಎನ್ ಆ್ಯಕ್ಟಿವೇಟ್ ಆಗಿರಬೇಕು. ಉದ್ಯೋಗಿಗಳ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಸೀಡ್ ಆಗಿರಬೇಕು. ಇದಕ್ಕೆ ಇದ್ದ ಡೆಡ್ಲೈನ್ ಅನ್ನು ವಿಸ್ತರಿಸಲಾಗಿದೆ. ಜನವರಿ 15ರವರೆಗೂ ಕಾಲಾವಕಾಶ ಕೊಡಲಾಗಿದೆ. 2024ರ ಜುಲೈ ಬಜೆಟ್ನಲ್ಲಿ ಸರ್ಕಾರವು ಇಎಲ್ಐ ಸ್ಕೀಮ್ ಅನ್ನು ಘೋಷಣೆ ಮಾಡಿತ್ತು.
ನವದೆಹಲಿ, ಡಿಸೆಂಬರ್ 24: ಉದ್ಯೋಗ ಆಧಾರಿತ ಭತ್ಯೆ (ಇಎಲ್ಐ) ಯೋಜನೆ ಅಡಿ ಸರ್ಕಾರದಿಂದ ನೀಡಲಾಗುವ ಲಾಭಗಳನ್ನು ಪಡೆಯಲು ಉದ್ಯೋಗಿಗಳ ಇಪಿಎಫ್ ಖಾತೆಗೆ ಯುಎಎನ್ ಸಕ್ರಿಯಗೊಳಿಸಬೇಕು. ಅವರ ಬ್ಯಾಂಕ್ ಖಾತೆಗಳು ಆಧಾರ್ಗೆ ಲಿಂಕ್ ಆಗಿರಬೇಕು. ಈ ಕಾರ್ಯಕ್ಕೆ ನಿಗದಿ ಮಾಡಲಾಗಿದ್ದ ಕಾಲಾವಕಾಶವನ್ನು ಇಪಿಎಫ್ಒ ವಿಸ್ತರಿಸಿದೆ. ಈ ಮೊದಲು ನವೆಂಬರ್ 30ಕ್ಕೆ ಡೆಡ್ಲೈನ್ ಇತ್ತು. ಅದನ್ನು ಡಿಸೆಂಬರ್ 15ಕ್ಕೆ ವಿಸ್ತರಿಸಲಾಗಿತ್ತು. ಈಗ ಜನವರಿ 15ರವರೆಗೂ ಕಾಲಾವಕಾಶ ಹೆಚ್ಚಿಸಲಾಗಿದೆ.
ಏನಿದು ಯುಎಎನ್?
ಯೂನಿವರ್ಸಲ್ ಅಕೌಂಟ್ ನಂಬರ್ ಅಥವಾ ಯುಎಎನ್ ಎಂಬುದು ಇಪಿಎಫ್ಒ ಸರ್ವಿಸ್ಗಳನ್ನು ಆನ್ಲೈನ್ನಲ್ಲಿ ಪಡೆಯಲು ಉದ್ಯೋಗಿಗೆ ನೀಡಲಾಗುವ 12 ಅಂಕಿಗಳ ಒಂದು ಅನನ್ಯ ಸಂಖ್ಯೆ. ಆಧಾರ್ ನಂಬರ್ನಂತೆ ಇದು ಒಬ್ಬ ಉದ್ಯೋಗಿಗೆ ಇರುವ ವಿಶೇಷ ಸಂಖ್ಯೆಯಾಗಿರುತ್ತದೆ. ಕೆಲಸ ಬದಲಿಸಿದಾಗ ಹೊಸ ಇಪಿಎಫ್ ಖಾತೆ ಸೃಷ್ಟಿಯಾಗುತ್ತದೆಯಾದರೂ ಅದೇ ಯುಎಎನ್ ನಂಬರ್ ಅನ್ನು ಮುಂದುವರಿಸಬಹುದು. ಒಂದೇ ಯುಎಎನ್ ನಂಬರ್ ಅಡಿ ಉದ್ಯೋಗಿಯ ಎಲ್ಲಾ ಇಪಿಎಫ್ ಅಕೌಂಟ್ಗಳು ಲಿಸ್ಟ್ ಆಗಿರುತ್ತವೆ.
ಇದನ್ನೂ ಓದಿ: ಕೃಷಿ ಕ್ಷೇತ್ರದಲ್ಲಿ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ; ರಾಷ್ಟ್ರೀಯ ರೈತ ಸಹಾಯವಾಣಿ ಸ್ಥಾಪನೆ ಸಾಧ್ಯತೆ
ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸಬೇಕು…
ಇಪಿಎಫ್ ಅಕೌಂಟ್ನಿಂದ ಹಣವನ್ನು ಹಿಂಪಡೆದಾಗ ಅದು ನೇರವಾಗಿ ಬ್ಯಾಂಕ್ ಖಾತೆಗೆ ರವಾನೆಯಾಗಬೇಕೆಂದರೆ ಆ ಖಾತೆಗೆ ಉದ್ಯೋಗಿಯ ಆಧಾರ್ ಜೋಡಣೆ ಆಗಿರಬೇಕು. ಎಲ್ಲಾ ಡಿಬಿಟಿ ಸ್ಕೀಮ್ಗಳಲ್ಲೂ ಇದು ಅವಶ್ಯಕ.
ಏನಿದು ಇಎಲ್ಐ ಸ್ಕೀಮ್?
ಕಳೆದ ಬಜೆಟ್ನಲ್ಲಿ (2024ರ ಜುಲೈ) ಎಂಪ್ಲಾಯ್ಮೆಂಟ್ ಲಿಂಕ್ಡ್ ಇನ್ಸೆಂಟಿವ್ ಯೋಜನೆಯನ್ನು ಪ್ರಕಟಿಸಲಾಗಿದೆ. ಇದರಡಿ ಮೂರು ಸ್ಕೀಮ್ಗಳನ್ನು ಘೋಷಿಸಲಾಗಿದೆ. ಹೊಸದಾಗಿ ಉದ್ಯೋಗಿಗಳಾಗಿರುವವರಿಗೆ ಒಂದು ತಿಂಗಳ ವೇತನವನ್ನು ಸರ್ಕಾರವೇ ನೀಡುತ್ತದೆ. ಇನ್ನೆರಡು ಸ್ಕೀಮ್ಗಳಲ್ಲಿ ಹೆಚ್ಚುವರಿ ಉದ್ಯೋಗಾವಕಾಶ ನೀಡುವ ಕಂಪನಿಗಳಿಗೆ ಸರ್ಕಾರ ಪ್ರೋತ್ಸಾಹಕ ಧನ ಒದಗಿಸುತ್ತದೆ.
ಇದನ್ನೂ ಓದಿ: ಕುಗ್ಗದ ಅದಾನಿ; ವಾಯುಯಾನ ಕ್ಷೇತ್ರಕ್ಕೆ ಇನ್ನೊಂದು ಹೆಜ್ಜೆ; ಬೃಹತ್ ಸೂಪರ್ ವಿದ್ಯುತ್ ಸ್ಥಾವರ ಸ್ಥಾಪನೆಗೂ ಯೋಜನೆ
ಈ ಸ್ಕೀಮ್ಗಳ ಲಾಭ ಸಿಗಬೇಕಾದರೆ ಉದ್ಯೋಗಿಗಳಿಗೆ ಯುಎಎನ್ ಸಕ್ರಿಯಗೊಳ್ಳಬೇಕು. ಬ್ಯಾಂಕ್ ಖಾತೆಗೆ ಆಧಾರ್ ಸೀಡ್ ಆಗಿರಬೇಕು. ಅದಕ್ಕೆ ಡೆಡ್ಲೈನ್ ಜನವರಿ 15ಕ್ಕೆ ನಿಗದಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ