Sign In

By signing in or creating an account, you agree with Associated Broadcasting Company's Terms & Conditions and Privacy Policy.

2025ರಲ್ಲಿ ಷೇರು ಮಾರುಕಟ್ಟೆಗೆ 14 ದಿನ ರಜೆ; ಅ. 21ರಂದು ಮುಹೂರ್ತ ಟ್ರೇಡಿಂಗ್; ಇಲ್ಲಿದೆ ರಜಾದಿನಗಳ ಪಟ್ಟಿ

Stock Market holidays 2025: ಎನ್​ಎಸ್​ಇ ಮತ್ತು ಬಿಎಸ್​ಇ ಸಂಸ್ಥೆಗಳು 2025ರ ವರ್ಷಕ್ಕೆ ರಜಾ ದಿನಗಳ ಕ್ಯಾಲಂಡರ್ ಪ್ರಕಟಿಸಿದ್ದು 14 ದಿನ ರಜೆ ಘೋಷಿಸಿವೆ. ಇದರಲ್ಲಿ ಶಿವರಾತ್ರಿ, ರಂಜಾನ್, ದಸರಾ, ದೀಪಾವಳಿ, ಗುಡ್ ಫ್ರೈಡೇ ಇತ್ಯಾದಿ ಹಬ್ಬಗಳೂ ಸೇರಿವೆ. ಡಿ. 21ರಂದು ಧನತೇರಸ್ ಇದ್ದು ಅಂದು ಒಂದು ಗಂಟೆ ಮುಹೂರತ್ ಟ್ರೇಡಿಂಗ್ ಇರುತ್ತದೆ. ಇನ್ನುಳಿದಂತೆ ಪ್ರತೀ ಶನಿವಾರ ಮತ್ತು ಭಾನುವಾರಗಳಂದು ಪೇಟೆ ಬಂದ್ ಆಗಿರುತ್ತದೆ.

2025ರಲ್ಲಿ ಷೇರು ಮಾರುಕಟ್ಟೆಗೆ 14 ದಿನ ರಜೆ; ಅ. 21ರಂದು ಮುಹೂರ್ತ ಟ್ರೇಡಿಂಗ್; ಇಲ್ಲಿದೆ ರಜಾದಿನಗಳ ಪಟ್ಟಿ
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 24, 2024 | 5:56 PM

ಭಾರತದ ಷೇರು ಮಾರುಕಟ್ಟೆಗಳೆನಿಸಿದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ಗಳು 2025ಕ್ಕೆ ರಜಾ ದಿನಗಳ ಪಟ್ಟಿ ಬಿಡುಗಡೆ ಮಾಡಿವೆ. ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಇತರೆ 14 ದಿನಗಳ ರಜೆಗಳು 2025ರ ವರ್ಷದಲ್ಲಿ ಇವೆ. ಬಿಎಸ್​ಇ ಮತ್ತು ಎನ್​ಎಸ್​ಇ ಎರಡೂ ಕೂಡ ಏಕರೀತಿಯ ರಜಾದಿನಗಳ ಕ್ಯಾಲಂಡರ್ ಹೊಂದಿವೆ. ಫೆಬ್ರುವರಿ 26ರಂದು ಮಹಾಶಿವರಾತ್ರಿಯಿಂದ ಆರಂಭಿಸಿ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬದವರೆಗೆ 14 ದಿನಗಳ ಕಾಲ ಟ್ರೇಡಿಂಗ್​ಗೆ ರಜೆ ಇರುತ್ತದೆ.

2025ರಲ್ಲಿ ಷೇರು ವಿನಿಮಯ ಕೇಂದ್ರಗಳಿಗೆ ಇರುವ ರಜಾ ದಿನಗಳು

  • ಫೆಬ್ರುವರಿ 26, ಬುಧವಾರ: ಮಹಾಶಿವರಾತ್ರಿ ಹಬ್ಬ
  • ಮಾರ್ಚ್ 14, ಶುಕ್ರವಾರ: ಹೋಳಿ ಹಬ್ಬ
  • ಮಾರ್ಚ್ 31, ಸೋಮವಾರ: ಈದ್ ಉಲ್ ಫಿತರ್ (ರಂಜಾನ್)
  • ಏಪ್ರಿಲ್ 10, ಗುರುವಾರ: ಮಹಾವೀರ ಜಯಂತಿ
  • ಏಪ್ರಿಲ್ 14, ಸೋಮವಾರ: ಅಂಬೇಡ್ಕರ್ ಜಯಂತಿ
  • ಏಪ್ರಿಲ್ 18, ಶುಕ್ರವಾರ: ಗುಡ್ ಫ್ರೈಡೇ
  • ಮೇ 1, ಗುರುವಾರ: ಮಹಾರಾಷ್ಟ್ರ ದಿನ
  • ಆಗಸ್ಟ್ 15, ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ
  • ಆಗಸ್ಟ್ 27, ಬುಧವಾರ: ಗಣೇಶ ಹಬ್ಬ
  • ಅಕ್ಟೋಬರ್ 2, ಗುರುವಾರ: ಗಾಂಧಿ ಜಯಂತಿ, ದಸರಾ ಹಬ್ಬ
  • ಅಕ್ಟೋಬರ್ 21, ಮಂಗಳವಾರ: ದೀಪಾವಳಿ ಧನಲಕ್ಷ್ಮೀ ಪೂಜೆ
  • ಅಕ್ಟೋಬರ್ 22, ಬುಧವಾರ: ದೀಪಾವಳಿ ಬಲಿಪಾಡ್ಯಮಿ
  • ನವೆಂಬರ್ 5, ಬುಧವಾರ: ಗುರುನಾನಕ್ ಪೂರ್ಣಿಮಾ
  • ಡಿಸೆಂಬರ್ 25, ಗುರುವಾರ: ಕ್ರಿಸ್ಮಸ್ ಹಬ್ಬ

ಇದನ್ನೂ ಓದಿ: ಬಂಡವಾಳ ಮಾರುಕಟ್ಟೆಯಿಂದ ಕಂಪನಿಗಳು ಪಡೆದ ಫಂಡಿಂಗ್ 10 ವರ್ಷದಲ್ಲಿ 10 ಪಟ್ಟು ಹೆಚ್ಚಳ: ವರದಿ

ಇಲ್ಲಿ ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳಲ್ಲಿ ತಲಾ ಮೂರು ದಿನಗಳು ಷೇರು ಮಾರುಕಟ್ಟೆ ಬಂದ್ ಆಗುತ್ತವೆ. 2025ರಲ್ಲಿ ಶನಿವಾರ ಮತ್ತು ಭಾನುವಾರದ ರಜೆಗಳನ್ನೂ ಸೇರಿಸಿದರೆ ಒಟ್ಟಾರೆ 118 ದಿನ ಟ್ರೇಡಿಂಗ್​ಗೆ ರಜೆ ಇದ್ದಂತಾಗುತ್ತದೆ. ಹಿಂದಿನ ವರ್ಷಗಳಲ್ಲಿ ಸಾಮಾನ್ಯವಾಗಿ ರಜೆ ಇರುತ್ತಿದ್ದ ಕೆಲ ಹಬ್ಬಗಳು 2025ರಲ್ಲಿ ಶನಿವಾರ ಮತ್ತು ಭಾನುವಾರ ಬಂದಿರುವುದರಿಂದ ಪ್ರತ್ಯೇಕ ರಜೆ ನೀಡಲಾಗಿಲ್ಲ. ಗಣರಾಜ್ಯೋತ್ಸವ, ಶ್ರೀರಾಮನವಮಿ, ಬಕ್ರೀದ್ ಮತ್ತು ಮೊಹರಂ ಹಬ್ಬಗಳು ಶನಿವಾರ ಮತ್ತು ಭಾನುವಾರ ದಿನಗಳಂದು ಇವೆ.

ಅ. 21ರಂದು ಮುಹೂರ್ತ ಟ್ರೇಡಿಂಗ್…

ಅಕ್ಟೋಬರ್ 21ರಂದು ಧನತ್ರಯೋದಶಿ ಅಥವಾ ಧನಲಕ್ಷ್ಮೀ ಪೂಜೆ ಇರುವುದರಿಂದ ಅಂದು ವ್ಯಾಪಾರವಾದರೆ ಇಡೀ ವರ್ಷ ಸಮೃದ್ಧಿ ನೆಲಸುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಪ್ರತೀ ವರ್ಷ ಆ ದಿವಸದಂದು ಷೇರು ಮಾರುಕಟ್ಟೆ ರಜೆ ಇದ್ದರೂ ಸುಮಾರು ಒಂದು ಗಂಟೆ ಕಾಲ ಮುಹೂರ್ತ ಟ್ರೇಡಿಂಗ್ ನಡೆಯುತ್ತದೆ.

ಇದನ್ನೂ ಓದಿ: ಕೃಷಿ ಕ್ಷೇತ್ರದಲ್ಲಿ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ; ರಾಷ್ಟ್ರೀಯ ರೈತ ಸಹಾಯವಾಣಿ ಸ್ಥಾಪನೆ ಸಾಧ್ಯತೆ

ಏಪ್ರಿಲ್ 10ರಿಂದ 14ರವರೆಗಿನ ಐದು ದಿನಗಳಲ್ಲಿ ನಾಲ್ಕು ದಿನ ಮಾರುಕಟ್ಟೆ ಬಂದ್ ಇರುತ್ತದೆ. ಹಾಗೆಯೇ, ಅಕ್ಟೋಬರ್ ತಿಂಗಳಲ್ಲೂ 18ರಿಂದ 22ರವರೆಗೆ ಐದು ದಿನದಲ್ಲಿ ನಾಲ್ಕು ದಿನ ಪೇಟೆ ಬಂದ್ ಆಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ