50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಹಿರಿಯ ನಟಿ ಶೈಲಶ್ರೀ ಸುದರ್ಶನ್ ಅವರು ಈಗ ಆಶ್ರಮದಲ್ಲಿ ಇದ್ದಾರೆ. ಅವರಿಗೆ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಈ ಬಗ್ಗೆ ಶೈಲಶ್ರೀ ಅವರು ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಮಾತ್ರವಲ್ಲದೇ ಇನ್ನೂ ಅನೇಕರು ಕೂಡ ಶೈಲಶ್ರೀ ಅವರಿಗೆ ನೆರವಾಗಿದ್ದಾರೆ.
ಹಿರಿಯ ನಟಿ ಶೈಲಶ್ರೀ ಸುದರ್ಶನ್ (Shailashree Sudarshan) ಅವರಿಗೆ ನಟ ದರ್ಶನ್ ಅವರು ಆರ್ಥಿಕ ಸಹಾಯ ಮಾಡಿದ್ದಾರೆ. ಈ ಬಗ್ಗೆ ಶೈಲಶ್ರೀ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಒಂದು ದಿನ ಇದ್ದಕ್ಕಿದ್ದಂತೆ ದರ್ಶನ್ (Darshan) ಸಹೋದರ ಬಂದು 50 ಸಾವಿರ ರೂಪಾಯಿ ನೀಡಿದರು. ಇನ್ನೂ ಏನಾದರೂ ಬೇಕಾ ಅಂತ ಕೇಳಿದರು. ಬೇರೆ ಕಡೆ ಮನೆ ನೋಡಿದ್ದರೆ ಅದಕ್ಕೆ ಬಾಡಿಗೆ ಕೂಡ ನೀಡುವುದಾಗಿ ಹೇಳಿದರು. ಅವರು ತುಂಬ ಒಳ್ಳೆಯ ವ್ಯಕ್ತಿ’ ಎಂದಿದ್ದಾರೆ ಶೈಲಶ್ರೀ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
