‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
ಸೆಲೆಬ್ರಿಟಿಗಳಿಂದ ಸಾಂಗ್ ಬಿಡುಗಡೆ ಮಾಡಿಸುವುದು ಸಹಜ. ಆದರೆ ಈಗ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ತಂಡದವರು ಆನೆಯಿಂದ ಹಾಡು ಬಿಡುಗಡೆ ಮಾಡಿಸಿರುವುದು ವಿಶೇಷ. ಮನೋಮೂರ್ತಿ ಅವರು ಸಂಗೀತ ನೀಡಿರುವ ಈ ಹಾಡು ‘ಮನೋಮೂರ್ತಿ ಮ್ಯೂಸಿಕ್’ ಯೂಟ್ಯೂಬ್ ಚಾನಲ್ ಮೂಲಕ ಏಪ್ರಿಲ್ 6ರಿಂದ ವೀಕ್ಷಣೆಗೆ ಲಭ್ಯವಾಗಲಿದೆ.
ಕೆ. ರಾಮನಾರಾಯಣ್ ಅವರು ನಿರ್ದೇಶನ ಮಾಡಿರುವ ‘ಕುಲದಲ್ಲಿ ಕೀಳ್ಯಾವುದೋ’ (Kuladalli Keelyavudo) ಸಿನಿಮಾದ ಹಾಡು ಬಿಡುಗಡೆ ಆಗಿದೆ. ಯೋಗರಾಜ್ ಭಟ್ ಅವರು ಬರೆದ ‘ಮನಸು ಹಾಡ್ತಿದೆ, ವಯಸ್ಸು ಕಾಡ್ತದೆ’ ಎಂಬ ಹಾಡನ್ನು ಆನೆಯಿಂದ (Elephant) ಬಿಡುಗಡೆ ಮಾಡಿಸಲಾಗಿದೆ. ಈ ಸಿನಿಮಾದಲ್ಲಿ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರ್ ಮನು (Madenuru Manu) ಮತ್ತು ಮೌನ ಗುಡ್ಡೆಮನೆ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ಪರ್ಲ್ ಸಿನಿ ಕ್ರಿಯೇಷನ್ಸ್’ ಮೂಲಕ ಸಂತೋಷ್ ಕುಮಾರ್ ಎ.ಕೆ. ಮತ್ತು ವಿದ್ಯಾ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಈ ಹಾಡನ್ನು ಸೋನು ನಿಗಮ್ ಮತ್ತು ಇಂದೂ ನಾಗರಾಜ್ ಅವರು ಹಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.