ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ರಸ್ತೆಯಲ್ಲಿ ಯುವಕನೊಬ್ಬ ಕಾರನ್ನೇ ಮಂಚವಾಗಿ ಮಾಡಿಕೊಂಡು ರಸ್ತೆಯಲ್ಲಿ ಓಡಾಡಿದ್ದಾನೆ. 2 ಲಕ್ಷ ಮೌಲ್ಯದ ಆತನ ಮಾರ್ಪಡಿಸಿದ ಕಾರಿನ ವಿಡಿಯೋ ವೈರಲ್ ಆಗಿದೆ. ಆತ ತಮ್ಮ ಒಂದು ಕೈಯನ್ನು ದಿಂಬಿನ ಮೇಲೆ ಮತ್ತು ಇನ್ನೊಂದು ಕೈಯನ್ನು ಸ್ಟೀರಿಂಗ್ ಮೇಲೆ ಇರಿಸಿ, ಕಾರನ್ನು ನಿಯಂತ್ರಿಸುತ್ತಾ ಮತ್ತು ಅದೇ ಸಮಯದಲ್ಲಿ ತಮ್ಮ ಮೆತ್ತನೆಯ ಹಾಸಿಗೆಯ ಸೌಕರ್ಯವನ್ನು ಆನಂದಿಸುತ್ತಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
ಕೊಲ್ಕತ್ತಾ, ಏಪ್ರಿಲ್ 4: ಪಶ್ಚಿಮ ಬಂಗಾಳದ (West Bengal) ಯುವಕನೊಬ್ಬ ರಸ್ತೆಯಲ್ಲಿ ತನ್ನ ಕಾರ್ ಮಂಚದ ಮೇಲೆ ಮಲಗಿ ಸವಾರಿ ಮಾಡಿದ್ದಾನೆ. 2 ಲಕ್ಷ ಕೊಟ್ಟು ಕಾರನ್ನೇ ಮಂಚವನ್ನಾಗಿ ಪರಿವರ್ತನೆ ಮಾಡಿಸಿಕೊಂಡಿರುವ ಯುವಕ ಮಂಚದ ಮೇಲೆ ಮೆತ್ತನೆಯ ಹಾಸಿಗೆ ಹಾಕಿಕೊಂಡು ಮಲಗಿಕೊಂಡು ಪೋಸ್ ಕೊಟ್ಟಿದ್ದಾನೆ. ಈ ದೃಶ್ಯ ನೋಡಿದವರು ಮನೆಯಲ್ಲೇ ಮಲಗೋದು ಬಿಟ್ಟು ಇದ್ಯಾವ ಶೋಕಿ? ಎಂದು ಮೂಗು ಮುರಿದಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ ನವಾಬ್ ಶೇಖ್ (27) ಎಂದು ಗುರುತಿಸಲಾದ ವ್ಯಕ್ತಿ ರಸ್ತೆಗಳಲ್ಲಿ ತಮ್ಮ ‘ಬೆಡ್ ಕಾರ್’ನಲ್ಲಿ ಸವಾರಿ ಮಾಡುವುದನ್ನು ತೋರಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

