ಸ್ಟಾರ್ಟಪ್ ಅಂದ್ರೆ ಐಸ್ಕ್ರೀಮ್ ರೀಪ್ಯಾಕೇಜ್ ಮಾಡೋದಲ್ಲ ಎಂದ ಸಚಿವ ಗೋಯಲ್; ಉದ್ಯಮಿಗಳ ಅಸಮಾಧಾನ
Piyush Goyal slams Indian startups: ಭಾರತೀಯ ಸ್ಟಾರ್ಟಪ್ಗಳು ಫುಡ್ ಡೆಲಿವರಿ, ಗ್ರಾಸರಿ ಡೆಲಿವರಿ, ರೀಪ್ಯಾಕೇಜಿಂಗ್ಗೆ ಸೀಮಿತವಾಗಿವೆ ಎಂದು ಪಿಯೂಶ್ ಗೋಯಲ್ ಟೀಕಿಸಿದ್ದಾರೆ. ಚೀನಾದ ಸ್ಟಾರ್ಟಪ್ಗಳಂತೆ ಭಾರತದ ಕಂಪನಿಗಳು ಡೀಪ್ ಟೆಕ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಆದರೆ, ಸಚಿವರ ಕೆಲ ಹೇಳಿಕೆಗಳನ್ನು ಕೆಲ ಭಾರತೀಯ ಉದ್ಯಮಿಗಳು ವಿರೋಧಿಸಿದ್ದಾರೆ.

ನವದೆಹಲಿ, ಏಪ್ರಿಲ್ 4: ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರು ಭಾರತೀಯ ಸ್ಟಾರ್ಟಪ್ಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ದೇಶದ ಭವಿಷ್ಯಕ್ಕೆ ಒಳಿತಾಗುವ ಡೀಪ್ ಟೆಕ್ (deep tech) ಹಾದಿ ಹಿಡಿಯುವಂತೆ ಕರೆ ನೀಡಿದ್ದಾರೆ. ಸ್ಟಾರ್ಟಪ್ಗಳು ಫುಡ್ ಡೆಲಿವರಿ, ರೀಪ್ಯಾಕೇಜಿಂಗ್ಗೆ ಸೀಮಿತವಾಗಿ ಹೋಗಿವೆ. ನಾವೀನ್ಯತೆ ಕಾಣಿಸುತ್ತಿಲ್ಲ. ಇದು ಸ್ಟಾರ್ಟಪ್ ಅಲ್ಲ, ಆಂಟ್ರಪ್ರನ್ಯೂರ್ ಲಕ್ಷಣ ಎಂದು ಟೀಕಿಸಿದ್ದಾರೆ. ಪೀಯೂಶ್ ಗೋಯಲ್ (Piyush Goyal) ಅವರ ಈ ಕಟು ಮಾತಿಗೆ ಉದ್ಯಮ ವಲಯದ ಕೆಲ ಮುಖಂಡರು ಬೇಸರಗೊಂಡಿದ್ದು, ಸಚಿವರ ಮಾತುಗಳನ್ನು ಅಲ್ಲಗಳೆದಿದ್ದಾರೆ.
ಝೆಪ್ಟೋ ಎನ್ನುವ ಕ್ವಿಕ್ ಕಾಮರ್ಸ್ ಕಂಪನಿಯ ಸಹ-ಸಂಸ್ಥಾಪಕ ಆದಿತ್ ಪಲಿಚ ಪ್ರತಿಕ್ರಿಯಿಸಿದ್ದು, ಜಾಗತಿಕವಾಗಿ ತಂತ್ರಜ್ಞಾನ ಬಲ ಪಡಿಸಿದ್ದು ಇನ್ಸೂಮರ್ ಇಂಟರ್ನೆಟ್ ಕಂಪನಿಗಳೇ ಎಂದು ವಾದಿಸಿದ್ದಾರೆ.
‘ಭಾರತದಲ್ಲೇ ಸ್ವಂತವಾಗಿ ಯಾವ ದೊಡ್ಡ ಮಟ್ಟದ ಫೌಂಡೇಶನಲ್ ಎಐ ಮಾಡಲ್ ನಿರ್ಮಿಸಲು ಯಾಕೆ ಆಗಿಲ್ಲ? ಯಾಕೆಂದರೆ, ನಾವು ಇನ್ನೂ ಕೂಡ ದೊಡ್ಡ ಇಂಟರ್ನೆಟ್ ಕಂಪನಿಗಳನ್ನು ಹುಟ್ಟುಹಾಕಿಲ್ಲ. ಕಳೆದ ಎರಡು ದಶಕದಲ್ಲಿ ತಂತ್ರಜ್ಞಾನ ಆಧಾರಿತ ನಾವೀನ್ಯತೆ ಹುಟ್ಟಿದ್ದು ಕನ್ಸೂಮರ್ ಇಂಟರ್ನೆಟ್ ಕಂಪನಿಗಳಿಂದಲೇ. ಕ್ಲೌಡ್ ಕಂಪ್ಯೂಟಿಂಗ್ ವ್ಯಾಪಿಸಿದ್ದು ಯಾರು? ಅಮೇಜಾನ್ ಸಂಸ್ಥೆ. ಇದು ಮೂಲತಃ ಕನ್ಸೂಮರ್ ಇಂಟರ್ನೆಟ್ ಕಂಪನಿ. ಇವತ್ತು ಎಐನಲ್ಲಿ ಪ್ರಬಲವಾಗಿರುವ ಕಂಪನಿಗಳ್ಯಾವುವು? ಫೇಸ್ಬುಕ್, ಗೂಗಲ್, ಅಲಿಬಾಬಾ, ಟೆನ್ಸೆಂಟ್ ಇತ್ಯಾದಿ’ ಎಂದು ಆದಿತ್ ಪಲಿಚ ಹೇಳುತ್ತಾರೆ.
ಇದನ್ನೂ ಓದಿ: ಅಮೆರಿಕ ಷೇರುಮಾರುಕಟ್ಟೆ ಭಯಾನಕ ಕುಸಿತ; ಒಂದೇ ದಿನದಲ್ಲಿ 200 ಲಕ್ಷ ಕೋಟಿ ರೂ ನಷ್ಟ
‘ಕನ್ಸೂಮರ್ ಇಂಟರ್ನೆಟ್ ಕಂಪನಿಗಳ ಬಳಿ ಅತ್ಯುತ್ತಮ ಡಾಟಾ, ಪ್ರತಿಭೆ ಮತ್ತು ಬಂಡವಾಳ ಇರುವುದರಿಂದ ನಾವೀನ್ಯತೆ ಸಾಧ್ಯವಾಗುತ್ತದೆ. ಕೋಟ್ಯಂತರ ಆದಾಯ ಸೃಷ್ಟಿಸಬಲ್ಲಂತಹ ಸ್ಥಳೀಯ ಇಂಟರ್ನೆಟ್ ಕಂಪನಿಗಳನ್ನು ನಿರ್ಮಿಸುವ ಅವಶ್ಯಕತೆ ಇದೆ. ಆಗ ಮಾತ್ರ ದೊಡ್ಡ ಟೆಕ್ನಾಲಜಿ ಪರಿವರ್ತನೆಗಳನ್ನು ನಿರೀಕ್ಷಿಸಲು ಸಾಧ್ಯ’ ಎಂದು ಝೆಪ್ಟೋ ಸಹ-ಸಂಸ್ಥಾಪಕರು ಪರಿಹಾರವನ್ನೂ ನೀಡಿದ್ದಾರೆ.
ಪಿಯೂಶ್ ಗೋಯಲ್ ಹೇಳಿದ್ದೇನು?
ಇತ್ತೀಚೆಗೆ ನಡೆದ ಸ್ಟಾರ್ಟಪ್ ಮಹಾಕುಂಭ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಾಣಿಜ್ಯ ಸಚಿವ ಪೀಯುಶ್ ಗೋಯಲ್ ಅವರು, ಭಾರತೀಯ ಸ್ಟಾರ್ಟಪ್ಗಳ ಧ್ಯೇಯಗಳನ್ನು ಪ್ರಶ್ನೆ ಮಾಡಿದರು. ಚೀನಾದಲ್ಲಿ ಸ್ಟಾರ್ಟಪ್ಗಳು ಡೀಪ್ ಟೆಕ್ ಇನ್ನೋವೇಶನ್ನಲ್ಲಿ ತೊಡಗುತ್ತಿದ್ದರೆ, ಭಾರತದಲ್ಲಿ ಸ್ಟಾರ್ಟಪ್ಗಳು ಕಡಿಮೆ ಸಂಬಳದ ಗಿಗ್ ಜಾಬ್ಗಳನ್ನು ಸೃಷ್ಟಿಸಲು ಸೀಮಿತವಾಗಿವೆ ಎಂದು ಲೇವಡಿ ಮಾಡಿದರು.
Mic Drop Union Minister Piyush Goyal flays Indian startups at the Startup Mahakumbh. He used the India vs China startups slide to launch a sharp critique “Are we happy about being delivery girls and boys?” “Food delivery apps are turning unemployed youth into cheap labour so… https://t.co/4saPxvS6UK pic.twitter.com/Tk7dxHQo4z
— Chandra R. Srikanth (@chandrarsrikant) April 3, 2025
‘ಹೆಲ್ತಿ ಐಸ್ಕ್ರೀಮ್ ಎಂದು ಹೇಳಿ ಐಸ್ ಕ್ರೀಮ್ಗಳನ್ನು ರೀಪ್ಯಾಕೇಜ್ ಮಾಡಿ ಮಾರಾಟ ಮಾಡುವುದನ್ನು ಸ್ಟಾರ್ಪಟ್ ಎಂದು ಭಾವಿಸಲಾಗದು. ಅದು ಆಂಟ್ರಪ್ರನ್ಯೂರ್ಶಿಪ್ ಅಷ್ಟೇ. ಸ್ಟಾರ್ಟಪ್ಗಳು ದೇಶಕ್ಕೆ ತಂತ್ರಜ್ಞಾನದ ಬಲ ನೀಡಲು ಗಮನ ಕೊಡಬೇಕು,’ ಎಂದು ಪೀಯುಶ್ ಗೋಯಲ್ ಸ್ಟಾರ್ಟಪ್ ಮಹಾಕುಂಭ್ ಕಾರ್ಯಕ್ರಮದಲ್ಲಿ ಹೇಳಿದರು.
Piyush Goyal’s blackpill on the economy is telling that the BJP seems to be waking up to reality, which already sets it apart from the rest pic.twitter.com/r6GmAasLlv
— Lord Immy Kant (Eastern Exile) (@KantInEast) April 4, 2025
ಇದನ್ನೂ ಓದಿ: ಎರಡು ಶತ್ರು ದೇಶಗಳನ್ನು ಒಂದು ಮಾಡುತ್ತಾ ಟ್ರಂಪ್ ಟ್ಯಾರಿಫ್?
ಗೋಯಲ್ ಹೇಳಿಕೆ ಖಂಡಿಸಿದ ಮೋಹನ್ ದಾಸ್ ಪೈ
ಇನ್ಫೋಸಿಸ್ ಸಂಸ್ಥೆಯ ಮಾಜಿ ಸಿಎಫ್ಒ ಮೋಹನ್ ದಾಸ್ ಪೈ ಅವರು ಪಿಯೂಶ್ ಗೋಯಲ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನಮ್ಮ ಸ್ಟಾರ್ಟಪ್ಗಳನ್ನು ತುಚ್ಛವಾಗಿ ಕಾಣುವುದನ್ನು ನಿಲ್ಲಿಸಿ. ನೀವು ಭಾರತದಲ್ಲಿ ಡೀಪ್ ಟೆಕ್ ಸ್ಟಾರ್ಟಪ್ ಬೆಳವಣಿಗೆ ಸಾಧ್ಯವಾಗಲು ಏನು ಮಾಡಿದ್ದೀರಿ ಮೊದಲು ಹೇಳಿ’ ಎಂದು ಒತ್ತಾಯಿಸಿದ್ದಾರೆ. ಹಾಗೆಯೇ, ಭಾರತದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್ಬಿಐನಿಂದ ಸ್ಟಾರ್ಟಪ್ಗಳಿಗೆ ಉತ್ತೇಜನ ಸಿಗುತ್ತಿಲ್ಲ ಎಂದೂ ಮೋಹನ್ ದಾಸ್ ಪೈ ದೂರಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Fri, 4 April 25