Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಎಂಡಿ: ಇದು ಹವಾಮಾನ ಭವಿಷ್ಯವೂ ಹೇಳುತ್ತೆ, ಸರ್ಕಾರಕ್ಕೆ ಭರ್ಜರಿ ಆದಾಯವೂ ತರುತ್ತೆ

IMD becomes big revenue generator for govt: ಇಂಡಿಯನ್ ಮಿಟಿಯೋರಲಾಜಿಕಲ್ ಡಿಪಾರ್ಟ್ಮೆಂಟ್ ಅಥವಾ ಹವಾಮಾನ ಇಲಾಖೆಯು ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಕಷ್ಟು ಲಭ ಗಳಿಕೆ ಮಾಡಲು ಶುರುವಿಟ್ಟಿದೆ. ಕೇಂದ್ರ ಭೂ ವಿಜ್ಞಾನಗಳ ಸಚಿವಾಲಯಕ್ಕೆ ಐಎಂಡಿ ಪ್ರಮುಖ ಲಾಭದ ಕುದುರೆಯಾಗಿದೆ. ವೈಮಾನಿಕ ಹವಾಮಾನ ಮುನ್ಸೂಚನೆಗಳನ್ನು ನೀಡುತ್ತದೆ. ಈ ಸೇವೆಯೇ ಐಎಂಡಿಗೆ ಪ್ರಮುಖ ಆದಾಯ ತಂದುಕೊಡುತ್ತದೆ.

ಐಎಂಡಿ: ಇದು ಹವಾಮಾನ ಭವಿಷ್ಯವೂ ಹೇಳುತ್ತೆ, ಸರ್ಕಾರಕ್ಕೆ ಭರ್ಜರಿ ಆದಾಯವೂ ತರುತ್ತೆ
ಐಎಂಡಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 30, 2025 | 6:36 PM

ನವದೆಹಲಿ, ಮಾರ್ಚ್ 30: ಭಾರತದ ಹವಾಮಾನ ಇಲಾಖೆಯಾದ ಐಎಂಡಿ (IMD- Indian Meteorological Department) ಹೆಸರು ಕೇಳಿದರೆ, ಯಾವತ್ತು ಮಳೆಯಾಗುವ ಮುನ್ಸೂಚನೆ ಇದೆ, ಮೋಡ ಕವಿದ ವಾತಾವರಣ ಇದೆಯಾ, ಇತ್ಯಾದಿ ಹವಾಮಾನ ಸಂಬಂಧಿತ ಭವಿಷ್ಯಗಳು, ಮುನ್ನೆಚ್ಚರಿಕೆಗಳನ್ನು ನೀಡುವ ಸಂಸ್ಥೆ ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೆ. ಸರ್ಕಾರದ ಈ ಸಂಸ್ಥೆ ಈಗ ಲಾಭದ ಕುದುರೆಯಾಗಿ ಹೋಗಿದೆ. ತನ್ನ ವಿವಿಧ ಸೇವೆಗಳ ಮೂಲಕ ಬಹು ಆದಾಯಗಳನ್ನು ಇದು ಕಾಣುತ್ತಿದೆ. ಕೇಂದ್ರ ಸರ್ಕಾರದ ಭೂ ವಿಜ್ಞಾನಗಳ ಸಚಿವಾಲಯದ (Ministry of Earth Sciences) ಅಡಿಯಲ್ಲಿರುವ ಇಲಾಖೆಗಳ ಪೈಕಿ ಐಎಂಡಿ ಅತಿಹೆಚ್ಚು ಆದಾಯ ತರುತ್ತಿದೆಯಂತೆ. ಒಂದು ವರದಿ ಪ್ರಕಾರ 2022-23ರಿಂದ ಈಚೆ ಹವಾಮಾನ ಇಲಾಖೆ 226 ಕೋಟಿ ರೂಗೂ ಹೆಚ್ಚು ಆದಾಯ ಗಳಿಸಿದೆ.

ಎಎಐ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಐಎಂಡಿ ಸೇವೆ

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವಾದ ಎಎಐ ಸಂಸ್ಥೆಗೆ ಹವಾಮಾನ ಇಲಾಖೆಯು ವೈಮಾನಿಕ ಹವಾಮಾನ ಮುನ್ನೆಚ್ಚರಿಕೆಯ ಸೇವೆ ನೀಡುತ್ತಿದೆ. ಇದರಿಂದ ಹೆಚ್ಚಿನ ಆದಾಯ ಅದಕ್ಕೆ ಹರಿದುಬರುತ್ತಿದೆ. ಇದು ಮಾತ್ರವಲ್ಲ, ಹವಾಮಾನ ದತ್ತಾಂಶ, ಹವಾಮಾನ ವರದಿಗಳ ಮಾರಾಟದಿಂದ ಐಎಂಡಿಗೆ ಆದಾಯ ಸಿಗುತ್ತಿದೆ. ಹಾಗೆಯೇ, ಉಪಕರಣಗಳ ಪರೀಕ್ಷೆ ಇತ್ಯಾದಿ ಕಾರ್ಯಗಳಿಂದಲೂ ಹವಾಮಾನ ಇಲಾಖೆಗೆ ಹಣ ಸಿಗುತ್ತಿದೆ.

ಇದನ್ನೂ ಓದಿ: ಏಪ್ರಿಲ್ ತಿಂಗಳಲ್ಲಿ ಹಲವು ಜಯಂತಿಗಳು, ಭರ್ಜರಿ ರಜೆಗಳು; 15 ದಿನ ಬ್ಯಾಂಕುಗಳು ಬಂದ್; ಇಲ್ಲಿದೆ ಪಟ್ಟಿ

ಇದನ್ನೂ ಓದಿ
Image
ಒಂದು ಕೆಟಲ್ ಮತ್ತು ಕೋಟಿ ಉಪಯೋಗ
Image
ಅತಿ ಹೆಚ್ಚು ಬೇಡಿಕೆಯಿರುವ ಖನಿಜ ಸಂಪತ್ತು ದೇಶದಲ್ಲಿದೆ
Image
ತುಟ್ಟಿಭತ್ಯೆ ಶೇ. 55ಕ್ಕೆ ಹೆಚ್ಚಿಸಲು ಸಂಪುಟ ಅನುಮೋದನೆ
Image
ವಿಶ್ವದ ನಂ. 1 ಇವಿ ಕಂಪನಿ ಬಿವೈಡಿಯಿಂದ ಭಾರತದಲ್ಲಿ ಮೊದಲ ಫ್ಯಾಕ್ಟರಿ?

ಕೇಂದ್ರದ ವಿಜ್ಞಾನ ತಂತ್ರಜ್ಞಾನ, ಪರಿಸರ, ಅರಣ್ಯ, ಹವಾಮಾನ ಬದಲಾವಣೆಯ ಮೇಲಿನ ಸಂಸದೀಯ ಸಮಿತಿಯೊಂದಕ್ಕೆ ಕೇಂದ್ರ ಭೂ ವಿಜ್ಞಾನಗಳ ಸಚಿವಾಲಯ ಈ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದೆ. ಭೂ ವಿಜ್ಞಾನಗಳ ಸಚಿವಾಲಯದ ಅಡಿಗೆ ಬರುವ ಮತ್ತೊಂದು ಸಂಸ್ಥೆಯಾದ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (ಎನ್​​ಐಒಟಿ) ಸುಮಾರು 42 ವಿವಿಧ ತಂತ್ರಜ್ಞಾನಗಳನ್ನು ಆವಿಷ್ಕರಿಸಿ ಲೋಕಾರ್ಪಣೆ ಮಾಡಿದೆ. ಇದರಿಂದ ಮೂರು ವರ್ಷದಲ್ಲಿ 24 ಕೋಟಿ ರೂ ಆದಾಯ ಗಳಿಸಿದೆ.

ಸಚಿವಾಲಯದ ಲಾಭದ ಕುದುರೆಯಾದ ಹವಾಮಾನ ಇಲಾಖೆಯು 2024-25ರ ಹಣಕಾಸು ವರ್ಷದಲ್ಲಿ ಮೊದಲ ಆರು ತಿಂಗಳಲ್ಲಿ ವೈಮಾನಿಕ ಹವಾಮಾನ ಸೇವೆಗಳ ಮೂಲಕ 66 ಕೋಟಿ ರೂ ಸಂಪಾದಿಸಿದೆ. ವೈಜ್ಞಾನಿಕ ಸಂಸ್ಥೆಗಳ ಈ ಕಾರ್ಯವು ಸಮಾಜಕ್ಕೆ ಉಪಯೋಗವಾಗುವುದರ ಜೊತೆಗೆ ಸಚಿವಾಲಯಕ್ಕೂ ಒಂದಷ್ಟು ಆದಾಯ ಸಿಕ್ಕು, ಪ್ರಮುಖ ಯೋಜನೆಗಳ ಜಾರಿಗೆ ಉತ್ತೇಜನ ನೀಡುತ್ತದೆ ಎಂದು ಭೂ ವಿಜ್ಞಾನಗಳ ಸಚಿವಾಲಯವು ಈ ಸಂಸದೀಯ ಸಮಿತಿಗೆ ತಿಳಿಸಿದೆ.

ಇದನ್ನೂ ಓದಿ: ಎಟಿಎಂನಲ್ಲಿ ಬ್ಯಾಲನ್ಸ್ ಪರಿಶೀಲಿಸಿದರೂ ಶುಲ್ಕವೇ; ಮೇ 1ರಿಂದ ಇಂಟರ್​​ಚೇಂಜ್ ಫೀಸ್ ಹೆಚ್ಚಳ

ವಿವಿಧ ವಲಯಗಳ ಬೇಡಿಕೆಗೆ ಅನುಗುಣವಾದ ಮತ್ತು ಸೂಕ್ತವಾದ ದತ್ತಾಂಶವನ್ನು ನೀಡುವ ಛಾತಿಯನ್ನು ಹವಾಮಾನ ಇಲಾಖೆ ಪಡೆದುಕೊಂಡಿದೆ. ಅದರಂತೆ ನವೀಕರಣ ಇಂಧನ ವಲಯಕ್ಕೂ ಪ್ರತ್ಯೇಕವಾದ ದತ್ತಾಂಶವನ್ನು ಐಎಂಡಿ ಒದಗಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ