AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಪ್ರಿಲ್ ತಿಂಗಳಲ್ಲಿ ಹಲವು ಜಯಂತಿಗಳು, ಭರ್ಜರಿ ರಜೆಗಳು; 15 ದಿನ ಬ್ಯಾಂಕುಗಳು ಬಂದ್; ಇಲ್ಲಿದೆ ಪಟ್ಟಿ

Bank holidays list for 2025 April: 2025ರ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ವಿವಿಧೆಡೆ ಒಟ್ಟು 15 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಕೆಲ ರಾಜ್ಯಗಳಲ್ಲಿ 12 ದಿನಗಳವರೆಗೂ ರಜೆ ಇದೆ. ಕರ್ನಾಟಕದಲ್ಲಿ 10 ದಿನ ಬ್ಯಾಂಕ್​ಗಳಿಗೆ ರಜೆ ಇರುತ್ತದೆ. ಮಹಾವೀರ ಜಯಂತಿ, ಬಸವಜಯಂತಿ, ಗುಡ್ ಫ್ರೈಡೆ ಇತ್ಯಾದಿ ದಿನಗಳು ಏಪ್ರಿಲ್​​ನಲ್ಲಿ ಇದ್ದು, ಹೆಚ್ಚಿನ ರಾಜ್ಯಗಳಲ್ಲಿ ರಜೆ ಇರುತ್ತದೆ. ಕೆಲ ರಜೆಗಳು ಕೆಲ ಪ್ರದೇಶದ ಬ್ಯಾಂಕುಗಳಿಗೆ ಮಾತ್ರ ಸೀಮಿತವಾಗಿರುತ್ತವೆ.

ಏಪ್ರಿಲ್ ತಿಂಗಳಲ್ಲಿ ಹಲವು ಜಯಂತಿಗಳು, ಭರ್ಜರಿ ರಜೆಗಳು; 15 ದಿನ ಬ್ಯಾಂಕುಗಳು ಬಂದ್; ಇಲ್ಲಿದೆ ಪಟ್ಟಿ
ಬ್ಯಾಂಕ್ ರಜಾ ದಿನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 30, 2025 | 4:44 PM

ಬೆಂಗಳೂರು, ಮಾರ್ಚ್ 30: ಮುಂಬರುವ ಏಪ್ರಿಲ್ ತಿಂಗಳಲ್ಲಿ ಇರುವ 30 ದಿನದಲ್ಲಿ ಅರ್ಧದಷ್ಟು ರಜಾ ದಿನಗಳೇ ಇವೆ. ಆರ್​​ಬಿಐ ಹಾಲಿಡೇ ಕ್ಯಾಲಂಡರ್ ಪ್ರಕಾರ, ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿ 15 ದಿನಗಳವರೆಗೆ ಬ್ಯಾಂಕುಗಳಿಗೆ (Bank holidays) ರಜೆ ಇದೆ. ಕೆಲ ರಾಜ್ಯಗಳ ಸಂಸ್ಥಾಪನಾ ದಿನಗಳಿವೆ. ಕೆಲ ಮಹನೀಯರ ಜಯಂತಿಗಳಿವೆ. ಇದರಲ್ಲಿ ಮಹಾವೀರ, ಬಸವ, ಅಂಬೇಡ್ಕರ್, ಜಗಜೀವನ್ ರಾಮ್ ಅವರ ಜಯಂತಿಯೂ ಸೇರಿವೆ. ನಾಲ್ಕು ಭಾನುವಾರ, ಎರಡು ಶನಿವಾರದ ರಜೆಗಳೂ ಒಳಗೊಂಡಿವೆ. ಕೆಲ ರಾಜ್ಯಗಳಲ್ಲಿ ಸತತ ಮೂರ್ನಾಲ್ಕು ದಿನ ಬ್ಯಾಂಕುಗಳಿಗೆ ರಜೆ ಇದೆ. ಗುಡ್ ಫ್ರೈಡೆ ಕೂಡ ಇದೇ ಏಪ್ರಿಲ್​​ನಲ್ಲಿ ಇದೆ.

2025ರ ಏಪ್ರಿಲ್​​ನಲ್ಲಿ ದೇಶದ ವಿವಿಧೆಡೆ ಬ್ಯಾಂಕುಗಳಿಗೆ ಇರುವ ರಜಾ ದಿನಗಳು

  • ಏಪ್ರಿಲ್ 1, ಮಂಗಳವಾರ: ಸರಹುಲ್ ಹಬ್ಬ (ಜಾರ್ಖಂಡ್​​ನಲ್ಲಿ ರಜೆ)
  • ಏಪ್ರಿಲ್ 5, ಶನಿವಾರ: ಬಾಬು ಜಗಜೀವನ್ ರಾಮ್ ಜಯಂತಿ (ತೆಲಂಗಾಣದಲ್ಲಿ ರಜೆ)
  • ಏಪ್ರಿಲ್ 6: ಭಾನುವಾರದ ರಜೆ
  • ಏಪ್ರಿಲ್ 10, ಗುರುವಾರ: ಮಹಾವೀರ್ ಜಯಂತಿ (ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರಜೆ)
  • ಏಪ್ರಿಲ್ 12: ಎರಡನೇ ಶನಿವಾರದ ರಜೆ
  • ಏಪ್ರಿಲ್ 13: ಭಾನುವಾರದ ರಜೆ
  • ಏಪ್ರಿಲ್ 14, ಸೋಮವಾರ: ಅಂಬೇಡ್ಕರ್ ಜಯಂತಿ, ವಿಷು, ಬಿಹು, ತಮಿಳು ಹೊಸ ವರ್ಷ (ಕರ್ನಾಟಕ, ತಮಿಳುನಾಡು ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ರಜೆ)
  • ಏಪ್ರಿಲ್ 15, ಮಂಗಳವಾರ: ಬಂಗಾಳ ಹೊಸ ವರ್ಷ, ಹಿಮಾಚಲ ದಿನ, ಬೋಹಾಗ್ ಬಿಹು (ಅಸ್ಸಾಂ, ಪಶ್ಚಿಮ ಬಂಗಾಳ, ಅರುಣಾಚಲಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ರಜೆ)
  • ಏಪ್ರಿಲ್ 18, ಶುಕ್ರವಾರ: ಗೂಡ್ ಫ್ರೈಡೆ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
  • ಏಪ್ರಿಲ್ 20: ಭಾನುವಾರದ ರಜೆ
  • ಏಪ್ರಿಲ್ 21, ಸೋಮವಾರ: ಗರಿಯಾ ಪೂಜೆ (ತ್ರಿಪುರಾದಲ್ಲಿ ರಜೆ)
  • ಏಪ್ರಿಲ್ 26: ನಾಲ್ಕನೇ ಶನಿವಾರದ ರಜೆ
  • ಏಪ್ರಿಲ್ 27: ಭಾನುವಾರದ ರಜೆ
  • ಏಪ್ರಿಲ್ 29, ಮಂಗಳವಾರ: ಭಗವಾನ್ ಶ್ರೀ ಪರಷುರಾಮ್ ಜಯಂತಿ (ಹಿಮಾಚಲ ಪ್ರದೇಶದಲ್ಲಿ ರಜೆ)
  • ಏಪ್ರಿಲ್ 30, ಬುಧವಾರ: ಬಸವಜಯಂತಿ (ಕರ್ನಾಟಕ ರಾಜ್ಯದಲ್ಲಿ ರಜೆ)

ಇದನ್ನೂ ಓದಿ: ಏಪ್ರಿಲ್-ಜೂನ್ ಕ್ವಾರ್ಟರ್​​ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪ್ರಕಟ

2025ರ ಏಪ್ರಿಲ್ ತಿಂಗಳಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು

ಕರ್ನಾಟಕದಲ್ಲಿ ಶನಿವಾರ ಮತ್ತು ಭಾನುವಾರದ್ದೂ ಸೇರಿ ಏಪ್ರಿಲ್​​ನಲ್ಲಿ ಒಟ್ಟು 10 ರಜಾ ದಿನಗಳಿವೆ. ಅವುಗಳ ಪಟ್ಟಿ ಇಲ್ಲಿದೆ:

ಇದನ್ನೂ ಓದಿ
Image
ಸ್ಮಾಲ್ ಸೇವಿಂಗ್ಸ್ ಸ್ಕೀಮ್​​ಗಳಿಗೆ ಬಡ್ಡಿದರ ಬದಲಾವಣೆ ಇಲ್ಲ
Image
ತುಟ್ಟಿಭತ್ಯೆ ಶೇ. 55ಕ್ಕೆ ಹೆಚ್ಚಿಸಲು ಸಂಪುಟ ಅನುಮೋದನೆ
Image
ಎಟಿಎಂ ಟ್ರಾನ್ಸಾಕ್ಷನ್, ಮೇ 1ರಿಂದ ಶುಲ್ಕ ಹೆಚ್ಚಳ
Image
ಏಪ್ರಿಲ್ 1ರಿಂದ ಹೊಸ ಮೊಬೈಲ್ ವೆರಿಫಿಕೇಶನ್ ನಿಯಮ
  • ಏಪ್ರಿಲ್ 6: ಭಾನುವಾರದ ರಜೆ
  • ಏಪ್ರಿಲ್ 10, ಗುರುವಾರ: ಮಹಾವೀರ್ ಜಯಂತಿ
  • ಏಪ್ರಿಲ್ 12: ಎರಡನೇ ಶನಿವಾರದ ರಜೆ
  • ಏಪ್ರಿಲ್ 13: ಭಾನುವಾರದ ರಜೆ
  • ಏಪ್ರಿಲ್ 14, ಸೋಮವಾರ: ಅಂಬೇಡ್ಕರ್ ಜಯಂತಿ
  • ಏಪ್ರಿಲ್ 18, ಶುಕ್ರವಾರ: ಗೂಡ್ ಫ್ರೈಡೆ
  • ಏಪ್ರಿಲ್ 20: ಭಾನುವಾರದ ರಜೆ
  • ಏಪ್ರಿಲ್ 26: ನಾಲ್ಕನೇ ಶನಿವಾರದ ರಜೆ
  • ಏಪ್ರಿಲ್ 27: ಭಾನುವಾರದ ರಜೆ
  • ಏಪ್ರಿಲ್ 30, ಬುಧವಾರ: ಬಸವಜಯಂತಿ

ಬ್ಯಾಂಕುಗಳು ಬಾಗಿಲು ಮುಚ್ಚಿದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಎಲ್ಲಾ 365 ದಿನಗಳಲ್ಲೂ ಲಭ್ಯ ಇರುತ್ತವೆ. ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಸದಾ ಚಾಲನೆಯಲ್ಲಿರುತ್ತವೆ. ಕ್ಯಾಷ್ ಪಡೆಯಲು ಎಟಿಎಂ ಸೆಂಟರ್​​​ಗಳಿರುತ್ತವೆ. ಹಣ ಪಾವತಿಗೆ ಯುಪಿಐ ಆ್ಯಪ್​್ಗಳು ಇರುತ್ತವೆ. ಹೀಗಾಗಿ, ಕೆಲವೇ ಕೋರ್ ಬ್ಯಾಂಕಿಂಗ್ ಕಾರ್ಯಗಳಿಗೆ ಬ್ಯಾಂಕ್ ಕಚೇರಿಗೆ ಹೋಗಬೇಕಾಗಬಹುದು. ಅಂಥವರು ಮೊದಲೇ ರಜಾ ದಿನಗಳ ಪಟ್ಟಿ ನೋಡಿ ಪ್ಲಾನ್ ಮಾಡಿಕೊಳ್ಳುವುದು ಉತ್ತಮ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:38 pm, Sun, 30 March 25