Sign In

By signing in or creating an account, you agree with Associated Broadcasting Company's Terms & Conditions and Privacy Policy.

Small Savings: ಏಪ್ರಿಲ್-ಜೂನ್ ಕ್ವಾರ್ಟರ್​​ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪ್ರಕಟ

Interest rates for small savings schemes: 2025ರ ಏಪ್ರಿಲ್​​ನಿಂದ ಜೂನ್​​ವರೆಗಿನ ಕ್ವಾರ್ಟರ್​​ಗೆ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪ್ರಕಟಿಸಿದೆ. ಹಿಂದಿನ ಕ್ವಾರ್ಟರ್​​ನಲ್ಲಿ (ಜನವರಿಯಿಂದ ಮಾರ್ಚ್) ಇರುವ ಬಡ್ಡಿದರಗಳನ್ನೇ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಸುಕನ್ಯಾ ಸಮೃದ್ಧಿ ಅಕೌಂಟ್, ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್, ಪಿಪಿಎಫ್, ಕಿಸಾನ್ ವಿಕಾಸ್ ಪತ್ರ ಮೊದಲಾದ ಯೋಜನೆಗಳು ಸ್ಮಾಲ್ ಸೇವಿಂಗ್ಸ್ ಸ್ಕೀಮ್​​ಗಳಾಗಿವೆ.

Small Savings: ಏಪ್ರಿಲ್-ಜೂನ್ ಕ್ವಾರ್ಟರ್​​ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪ್ರಕಟ
ಸಣ್ಣ ಉಳಿತಾಯ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 28, 2025 | 7:12 PM

ನವದೆಹಲಿ, ಮಾರ್ಚ್ 28: ಕೇಂದ್ರ ಸರ್ಕಾರ ಮುಂಬರುವ ಕ್ವಾರ್ಟರ್​​ಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ (Small Savings Schemes) ಬಡ್ಡಿದರ ಪ್ರಕಟಿಸಿದೆ. 2025ರ ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಗೆ ಪಿಪಿಎಫ್, ಪೋಸ್ಟ್ ಆಫೀಸ್ ಎಫ್​​ಡಿ ಸೇರಿದಂತೆ ವಿವಿಧ ಸ್ಮಾಲ್ ಸೇವಿಂಗ್ಸ್ ಸ್ಕೀಮ್​​ಗಳಿಗೆ ಹಿಂದಿನ ಬಡ್ಡಿದರವನ್ನೇ ಮುಂದುವರಿಸಲು ನಿರ್ಧರಿಸಿದೆ. ಸತತ ಐದು ಕ್ವಾರ್ಟರ್​ಗಳಲ್ಲಿ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿಲ್ಲ.

‘2024ರ ಏಪ್ರಿಲ್ 1ರಂದು ಆರಂಭವಾಗಿ 2025ರ ಜೂನ್ 30ರವರೆಗೂ ಇರುವ ವರ್ಷದ ಮೊದಲ ಕ್ವಾರ್ಟರ್​​ಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿಲ್ಲ. 2024-25ರ ಹಣಕಾಸು ವರ್ಷದ ನಾಲ್ಕನೇ ಕ್ವಾರ್ಟರ್​​ನಲ್ಲಿ ಇರುವ ದರಗಳೇ ಮುಂದುವರಿಯಲಿವೆ’ ಎಂದು ಹಣಕಾಸು ಸಚಿವಾಲ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳು ಅಂಚೆ ಕಚೇರಿ ಸ್ಕೀಮ್​ಗಳಾಗಿವೆ. ಕೆಲ ಸ್ಕೀಮ್​​ಗಳು ಕಮರ್ಷಿಯಲ್ ಬ್ಯಾಂಕುಗಳಲ್ಲೂ ಲಭ್ಯ ಇರುತ್ತವೆ. ಪಿಪಿಎಫ್, ಸುಕನ್ಯ ಸಮೃದ್ಧಿ ಯೋಜನೆ, ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್, ಪೋಸ್ಟ್ ಆಫೀಸ್ ಆರ್​​ಡಿ, ಕಿಸಾನ್ ವಿಕಾಸ್ ಪತ್ರ ಇತ್ಯಾದಿ ಯೋಜನೆಗಳು ಒಳಗೊಂಡಿವೆ.

ಇದನ್ನೂ ಓದಿ: ಗಮನಿಸಿ, ಈ ಬ್ಯಾಂಕುಗಳ ವಿಶೇಷ ಠೇವಣಿ ಸ್ಕೀಮ್​ಗಳು, ಮಾರ್ಚ್ 31ರವರೆಗೆ ಲಭ್ಯ

ಸುಕನ್ಯ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಗರಿಷ್ಠ ಬಡ್ಡಿದರ ಇದೆ. ವಿವಿಧ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳು ಹಾಗೂ ಅವುಗಳ ಇತ್ತೀಚಿನ ಬಡ್ಡಿದರಗಳ ವಿವರ ಈ ಕೆಳಕಂಡಂತಿದೆ:

  • ಸೇವಿಂಗ್ಸ್ ಡೆಪಾಸಿಟ್: ಶೇ. 4 ಬಡ್ಡಿ
  • ಒಂದು ವರ್ಷದ ಟೈಮ್ ಡೆಪಾಸಿಟ್: ಶೇ. 6.9 ಬಡ್ಡಿ
  • ಎರಡು ವರ್ಷದ ಟೈಮ್ ಡೆಪಾಸಿಟ್: ಶೇ. 7 ಬಡ್ಡಿ
  • ಮೂರು ವರ್ಷದ ಟೈಮ್ ಡೆಪಾಸಿಟ್: ಶೇ. 7.1 ಬಡ್ಡಿ
  • ಐದು ವರ್ಷದ ಟೈಮ್ ಡೆಪಾಸಿಟ್: ಶೇ. 7.5 ಬಡ್ಡಿ
  • ಐದು ವರ್ಷದ ಆರ್​​ಡಿ: ಶೇ. 6.7 ಬಡ್ಡಿ
  • ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್: ಶೇ. 8.2 ಬಡ್ಡಿ
  • ಮಾಸಿಕ ಆದಾಯ ಯೋಜನೆ: ಶೇ. 7.4 ಬಡ್ಡಿ
  • ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್: ಶೇ. 7.7 ಬಡ್ಡಿ
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಸ್ಕೀಮ್: ಶೇ. 7.1 ಬಡ್ಡಿ
  • ಕಿಸಾನ್ ವಿಕಾಸ್ ಪತ್ರ: ಶೇ. 7.5 ಬಡ್ಡಿ
  • ಸುಕನ್ಯ ಸಮೃದ್ಧಿ ಖಾತೆ: ಶೇ. 8.2 ಬಡ್ಡಿ

ಇದರಲ್ಲಿ ಸೇವಿಂಗ್ಸ್ ಡೆಪಾಸಿಟ್ ದರವು ಅಂಚೆ ಕಚೇರಿಯಲ್ಲಿ ತೆರೆಯಲಾಗುವ ಉಳಿತಾಯ ಖಾತೆಯಲ್ಲಿ ಹಾಗೇ ಇರುವ ಹಣಕ್ಕೆ ಸಿಗುವ ಬಡ್ಡಿಯಾಗಿರುತ್ತದೆ.

ಇದನ್ನೂ ಓದಿ: ಠೇವಣಿ, ಡಿವಿಡೆಂಡ್, ಬಾಡಿಗೆ ಇತ್ಯಾದಿ ಆದಾಯಗಳಿಗೆ ಹೊಸ ಟಿಡಿಎಸ್ ದರ; ಏಪ್ರಿಲ್ 1ರಿಂದ ಜಾರಿ

ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಲಂಪ್ಸಮ್ ಇನ್ವೆಸ್ಟ್​​ಮೆಂಟ್ ಸ್ಕೀಮ್ ಆಗಿದ್ದು ಐದು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಹೂಡಿಕೆದಾರರು ಬೇಕೆಂದರೆ ಮೂರು ವರ್ಷ ವಿಸ್ತರಣೆ ಮಾಡಲು ಅವಕಾಶ ಇದೆ.

ಕಿಸಾನ್ ವಿಕಾಸ್ ಪತ್ರ ಕೂಡ ಲಂಪ್ಸಮ್ ಹೂಡಿಕೆಯಾಗಿದ್ದು, ಇದರ ಮೆಚ್ಯೂರಿಟಿ ಅವಧಿ 124 ತಿಂಗಳಿದೆ.

ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಗಳು ದೀರ್ಘಾವಧಿ ಹೂಡಿಕೆಯನ್ನು ಉತ್ತೇಜಿಸುತ್ತದೆ. ವರ್ಷಕ್ಕೆ ಗರಿಷ್ಠ ಒಂದೂವರೆ ಲಕ್ಷ ರೂವರೆಗೂ ಹೂಡಿಕೆ ಮಾಡಲು ಅವಕಾಶ ಇದೆ. ಸುಕನ್ಯಾ ಸಮೃದ್ಧಿ ಖಾತೆಯನ್ನು ಬಾಲಕಿಯ ಹೆಸರಿನಲ್ಲಿ ತೆರೆಯಬಹುದು. ಪಿಪಿಎಫ್ ಖಾತೆಯನ್ನು ಯಾರು ಬೇಕಾದರೂ ತೆರೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Fri, 28 March 25

ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ