ಗಮನಿಸಿ, ಈ ಬ್ಯಾಂಕುಗಳ ವಿಶೇಷ ಠೇವಣಿ ಸ್ಕೀಮ್ಗಳು, ಮಾರ್ಚ್ 31ರವರೆಗೆ ಲಭ್ಯ
Special FD plans: ಶೇ. 8.05ರವರೆಗೆ ಬಡ್ಡಿ ನೀಡುವಂತಹ ಕೆಲ ಬ್ಯಾಂಕುಗಳ ಸ್ಪೆಷನ್ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ಗಳು ಮಾರ್ಚ್ 31ರವರೆಗೂ ಲಭ್ಯ ಇವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ್ ಕಲಶ್ ಮತ್ತು ಅಮೃತ್ ವೃಷ್ಟಿ ಪ್ಲಾನ್ಗಳಿವೆ. ಇಂಡಿಯನ್ ಬ್ಯಾಂಕ್ನ ಸುಪ್ರೀಂ ಎಫ್ಡಿ ಪ್ಲಾನ್ ಇದೆ. ಹಾಗೆಯೇ, ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ನ ಎಫ್ಡಿ ಪ್ಲಾನ್ಗಳಿವೆ.

ನವದೆಹಲಿ, ಮಾರ್ಚ್ 24: ಕಳೆದ ಐದು ತಿಂಗಳಲ್ಲಿ ಷೇರು ಮಾರುಕಟ್ಟೆ ಕುಸಿದ ಪರಿಣಾಮ ಬಹಳ ಜನರ ಚಿತ್ತ ಫಿಕ್ಸೆಡ್ ಡೆಪಾಸಿಟ್ನಂತಹ ಸಾಂಪ್ರದಾಯಿಕ ಹೂಡಿಕೆ ಕಂ ಉಳಿತಾಯ ಯೋಜನೆಗಳತ್ತ ಹೊರಟಿದೆ. ಅಂತೆಯೇ ಎಲ್ಲಾ ಬ್ಯಾಂಕುಗಳು ವಿಶೇಷ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ಗಳನ್ನು (Special Fixed Deposits) ನಡೆಸುತ್ತಿವೆ. ಸಾಮಾನ್ಯ ಎಫ್ಡಿಗಳು ನಿರಂತರವಾಗಿ ಲಭ್ಯ ಇರುತ್ತವೆ. ವಿಶೇಷ ಎಫ್ಡಿಗಳ ಆಫರ್ ಸೀಮಿತ ಅವಧಿಯವರೆಗೆ ಮಾತ್ರ ಇವೆ. ಶೇ. 8ರ ಆಸುಪಾಸಿನಲ್ಲಿ ವಾರ್ಷಿಕವಾಗಿ ರಿಟರ್ನ್ ನೀಡುವ, ಹಾಗೂ ಮಾರ್ಚ್ 31ರವರೆಗೆ ಆಫರ್ ಇರುವ ಕೆಲ ಸ್ಪೆಷಲ್ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ಗಳ ವಿವರ ಈ ಕೆಳಕಂಡಂತಿವೆ.
ಎಸ್ಬಿಐ ಅಮೃತ್ ಕಲಶ್ ಪ್ಲಾನ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ್ ಕಲಶ್ ಸ್ಕೀಮ್ ಒಂದು ಫಿಕ್ಸೆಡ್ ಡೆಪಾಸಿಟ್ ಪ್ಲಾನ್ ಆಗಿದೆ. ಎರಡು ವರ್ಷದ ಹಿಂದೆಯೇ ಇದು ಆರಂಭವಾಗಿತ್ತು. ಬೇಡಿಕೆ ಕಾರಣಕ್ಕೆ ಗುಡುವು ವಿಸ್ತರಣೆ ಆಗುತ್ತಲೇ ಬಂದಿದೆ. ಈಗ ಮಾರ್ಚ್ 31ರವರೆಗೂ ಈ ಸ್ಕೀಮ್ ತೆರೆದಿರುತ್ತದೆ.
400 ದಿನಗಳ ಅವಧಿಯ ಠೇವಣಿ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಶೇ. 7.60ರಷ್ಟು ಬಡ್ಡಿ ನೀಡಲಾಗುತ್ತದೆ. ಇತರರಿಗೆ ಸಿಗುವ ಬಡ್ಡಿ ಶೇ 7.10.
ಇದನ್ನೂ ಓದಿ: ಆರ್ಬಿಐನಿಂದ ಕ್ರೆಡಿಟ್ ಸ್ಕೋರ್ ನಿಯಮದಲ್ಲಿ ಬದಲಾವಣೆ; ಹೊಸ ಸಾಲಗಳ ಮೇಲೆ ಪರಿಣಾಮ; ಇದರ ಸಾಧಕ ಬಾಧಕಗಳಿವು…
ಎಸ್ಬಿಐ ಅಮೃತ್ ವೃಷ್ಟಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ್ ವೃಷ್ಟಿ ಎಫ್ಡಿ ಪ್ಲಾನ್ 444 ದಿನಗಳಿಗೆ ಮೆಚ್ಯೂರ್ ಆಗುತ್ತದೆ. ಸಾಮಾನ್ಯ ಗ್ರಾಹಕರಿಗೆ ಸೇ. 7.25ರಷ್ಟು ಬಡ್ಡಿ ಸಿಕ್ಕರೆ, ಹಿರಿಯ ನಾಗರಿಕರಿಗೆ ಶೇ. 7.75 ಬಡ್ಡಿ ಇದೆ. ಇದೂ ಕೂಡ ಮಾರ್ಚ್ 31ರವರೆಗೂ ಲಭ್ಯ.
ಇಂಡಿಯನ್ ಬ್ಯಾಂಕ್ ಸುಪ್ರೀಂ 300 ಮತ್ತು 400
ಇಂಡಿಯನ್ ಬ್ಯಾಂಕ್ ಎರಡು ಸ್ಪೆಷಲ್ ಎಫ್ಡಿ ಪ್ಲಾನ್ಗಳನ್ನು ಆಫರ್ ಮಾಡಿದೆ. ಐಎನ್ಡಿ ಸುಪ್ರೀಮ್ ಮತ್ತು ಐಎನ್ಡಿ ಸೂಪರ್. ಇದರಲ್ಲಿ ಸುಪ್ರೀಂ ಪ್ಲಾನ್ 300 ದಿನಗಳದ್ದಾದರೆ, ಸೂಪರ್ ಪ್ಲಾನ್ 400 ದಿನಗಳದ್ದು. ಈ ಪೈಕಿ ಐಎನ್ಡಿ ಸೂಪರ್ 400 ಪ್ಲಾನ್ನಲ್ಲಿ 80 ವರ್ಷ ಮೇಲ್ಪಟ್ಟ ಸೂಪರ್ ಸೀನಿಯರ್ಸ್ಗೆ ಶೇ. 8.05ರಷ್ಟು ಬಡ್ಡಿ ನೀಡುತ್ತವೆ. 60 ವರ್ಷ ಮೇಲ್ಪಟ್ಟ ಸಾಮಾನ್ಯ ಹಿರಿಯ ನಾಗರಿಕರಿಗೆ ಶೇ. 7.80, ಇತರರಿಗೆ ಶೇ. 7.30ರಷ್ಟು ಬಡ್ಡಿ ಸಿಗುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್ ಎಫ್ಡಿ
ಎಚ್ಡಿಎಫ್ಸಿ ಬ್ಯಾಂಕ್ 35 ತಿಂಗಳ ಅವಧಿಯ ವಿಶೇಷ ನಿಶ್ಚಿತ ಠೇವಣಿ ಪ್ಲಾನ್ ಆಫರ್ ಮಾಡಿದೆ. ಹಿರಿಯ ನಾಗರಿಕರಿಗೆ ಶೇ. 7.85ರಷ್ಟು ಬಡ್ಡಿ ನೀಡಲಾಗುತ್ತದೆ. ಇತರರಿಗೆ ಸಿಗುವ ಬಡ್ಡಿ ಶೇ. 7.35ರಷ್ಟು. ಈ ಪ್ಲಾನ್ ಮಾರ್ಚ್ 31ಕ್ಕೆ ಕೊನೆಯಾಗುತ್ತದೆ.
ಇದನ್ನೂ ಓದಿ: New TDS rules: ಠೇವಣಿ, ಡಿವಿಡೆಂಡ್, ಬಾಡಿಗೆ ಇತ್ಯಾದಿ ಆದಾಯಗಳಿಗೆ ಹೊಸ ಟಿಡಿಎಸ್ ದರ; ಏಪ್ರಿಲ್ 1ರಿಂದ ಜಾರಿ
ಹಾಗೆಯೇ, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ನ 333 ದಿನಗಳು, 444 ದಿನಗಳು, 555 ದಿನಗಳು, 777 ದಿನಗಳ ಎಫ್ಡಿ ಪ್ಲಾನ್ಗಳಿವೆ. ಇದರಲ್ಲಿ 555 ದಿನಗಳ ಪ್ಲಾನ್ಗೆ ಗರಿಷ್ಠ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.95ರಷ್ಟು ಬಡ್ಡಿ ಸಿಗುತ್ತದೆ. ಐಡಿಬಿಐ ಬ್ಯಾಂಕು ಉತ್ಸವ್ ಹೆಸರಿನಲ್ಲಿ ಎಫ್ಡಿ ಪ್ಲಾನ್ಗಳನ್ನು ಆಫರ್ ಮಾಡಿದೆ.
ಈ ಎಲ್ಲವೂ ಕೂಡ 2025ರ ಮಾರ್ಚ್ 31ರವರೆಗೂ ಆಫರ್ನಲ್ಲಿ ಇರಲಿವೆ. ಇನ್ನೊಂದು ವಾರ ಮಾತ್ರವೇ ಬಾಕಿ ಇದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:38 pm, Mon, 24 March 25