AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New TDS rules: ಠೇವಣಿ, ಡಿವಿಡೆಂಡ್, ಬಾಡಿಗೆ ಇತ್ಯಾದಿ ಆದಾಯಗಳಿಗೆ ಹೊಸ ಟಿಡಿಎಸ್ ದರ; ಏಪ್ರಿಲ್ 1ರಿಂದ ಜಾರಿ

New TDS rules for interest, dividend, rental, insurance commission incomes: ಈ ಬಾರಿಯ ಬಜೆಟ್​​ನಲ್ಲಿ ಘೋಷಿಸಲಾದಂತೆ ಏಪ್ರಿಲ್ 1ರಿಂದ ಕೆಲ ಆದಾಯಗಳಿಗೆ ಹೊಸ ಟಿಡಿಎಸ್ ನಿಯಮಗಳು ಜಾರಿಗೆ ಬರಲಿವೆ. ಸೇವಿಂಗ್ಸ್ ಸ್ಕೀಮ್​​ಗಳಿಂದ ಬರುವ ಬಡ್ಡಿ ಆದಾಯ, ಷೇರು ಡಿವಿಡೆಂಡ್​​ಗಳಿಂದ ಸಿಗುವ ಆದಾಯ, ಬಾಡಿಗೆಗಳಿಂದ ಬರುವ ಆದಾಯ ಇವುಗಳಿಗೆ ಇರುವ ಟಿಡಿಎಸ್ ವಿನಾಯಿತಿ ಮಿತಿಯನ್ನು ಏರಿಸಲಾಗಿದೆ. ಸೆಕ್ಯೂರಿಟೈಸೇಶನ್ ಟ್ರಸ್ಟ್​​ಗಳಲ್ಲಿ ಮಾಡುವ ಹೂಡಿಕೆಯಿಂದ ಬರುವ ಆದಾಯಕ್ಕೆ ಟಿಡಿಎಸ್ ದರವನ್ನು ಕಡಿಮೆ ಮಾಡಲಾಗಿದೆ.

New TDS rules: ಠೇವಣಿ, ಡಿವಿಡೆಂಡ್, ಬಾಡಿಗೆ ಇತ್ಯಾದಿ ಆದಾಯಗಳಿಗೆ ಹೊಸ ಟಿಡಿಎಸ್ ದರ; ಏಪ್ರಿಲ್ 1ರಿಂದ ಜಾರಿ
ಟಿಡಿಎಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 17, 2025 | 12:12 PM

Share

ನವದೆಹಲಿ, ಮಾರ್ಚ್ 17: ಮುಂಬರುವ ಹಣಕಾಸು ವರ್ಷದಿಂದ 2025ರ ಬಜೆಟ್​​ನ್ಲಲಿ ಮಾಡಲಾದ ಕೆಲ ಪ್ರಮುಖ ಘೋಷಣೆಗಳು ಜಾರಿಗೆ ಬರಲಿವೆ. ಏಪ್ರಿಲ್ 1ರಿಂದ ಜಾರಿಯಾಗಲಿರುವ ಕೆಲ ಪ್ರಮುಖ ನಿಯಮಗಳಲ್ಲಿ ಟಿಡಿಎಸ್​ದ್ದೂ ಇದೆ. ಬಡ್ಡಿಯಿಂದ ಬರುವ ಆದಾಯ, ಡಿವಿಡೆಂಡ್​​ಗಳಿಂದ ಬರುವ ಆದಾಯ, ಬಾಡಿಗೆಗಳಿಂದ ಬರುವ ಆದಾಯ, ಇನ್ಷೂರೆನ್ಸ್ ಕಮಿಷನ್​​ಗಳಿಂದ ಬರುವ ಆದಾಯ ಇವುಗಳಿಗೆ ಟಿಡಿಎಸ್ ವಿನಾಯಿತಿ ಪಡೆಯಲು ಇದ್ದ ಮಿತಿಯನ್ನು ಏರಿಸಲಾಗಿದೆ. 2025ರ ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಏನೇನು ಬದಲಾವಣೆಗಳಾಗುತ್ತವೆ ಎನ್ನುವುದರ ವಿವರ ಈ ಕೆಳಕಂಡಂತಿದೆ:

ಬಡ್ಡಿ ಆದಾಯಕ್ಕೆ ಟಿಡಿಎಸ್ ವಿನಾಯಿತಿ ಮಿತಿ ಹೆಚ್ಚಳ

ಫಿಕ್ಸೆಡ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್ ಮತ್ತಿತರ ಸೇವಿಂಗ್ಸ್ ಸ್ಕೀಮ್​​ಗಳಿಂದ ಸಿಗುವ ಬಡ್ಡಿ ಒಂದು ವರ್ಷದಲ್ಲಿ 50,000 ರೂಗಿಂತ ಒಳಗಿದ್ದರೆ ಅದಕ್ಕೆ ಟಿಡಿಎಸ್ ಮುರಿದುಕೊಳ್ಳಲಾಗುವುದಿಲ್ಲ. ಅಂದರೆ ಟಿಡಿಎಸ್​​ನಿಂದ ವಿನಾಯತಿ ಮಿತಿ 50,000 ರೂ ಇದೆ. ಇದು ಹಿರಿಯ ನಾಗರಿಕರಿಗೆ ಇರುವ ಸೌಲಭ್ಯ. ಏಪ್ರಿಲ್ 1ರಿಂದ ಈ ಮಿತಿಯನ್ನು 1,00,000 ರೂಗೆ ಏರಿಸಲಾಗುತ್ತಿದೆ.

ಅಂದರೆ, ಹಿರಿಯ ನಾಗರಿಕರು ಒಂದು ಹಣಕಾಸು ವರ್ಷದಲ್ಲಿ ಎಫ್​ಡಿ ಇತ್ಯಾದಿಯಿಂದ ಪಡೆಯುವ ಬಡ್ಡಿ ಆದಾಯ ಒಂದು ಲಕ್ಷ ರೂ ಒಳಗಿದ್ದರೆ ಯಾವ ಟಿಡಿಎಸ್ ಇರುವುದಿಲ್ಲ. ಒಂದು ಲಕ್ಷ ರೂಗಿಂತ ಹೆಚ್ಚಿದ್ದರೆ ಹೆಚ್ಚುವರಿ ಮೊತ್ತಕ್ಕೆ ಶೇ. 10ರಷ್ಟು ಟಿಡಿಎಸ್ ಅನ್ವಯ ಆಗುತ್ತದೆ. ಉದಾಹರಣೆಗೆ, ನಿಮ್ಮ ವಾರ್ಷಿಕ ಬಡ್ಡಿ ಆದಾಯ 1,50,000 ರೂ ಇದ್ದರೆ ಒಂದೂವರೆ ಲಕ್ಷ ರೂ ಬದಲು 50,000 ರೂಗೆ 500 ರೂ ಟಿಡಿಎಸ್ ಅನ್ವಯ ಆಗುತ್ತದೆ.

ಇದನ್ನೂ ಓದಿ
Image
ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್​​ಗಳ ಸಾಧಕ-ಬಾಧಕಗಳು
Image
ಮೊಬೈಲ್ ಬಿಲ್​ಗೂ ಕ್ರೆಡಿಟ್ ಸ್ಕೋರ್​ಗೂ ಇದ್ಯಾ ಸಂಬಂಧ?
Image
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?
Image
ಗೋಲ್ಡ್ ಲೋನ್ ಮೇಲೆ ಆರ್​ಬಿಐ ಕಣ್ಣು?

ಸಾಮಾನ್ಯ ವ್ಯಕ್ತಿಗಳಿಗೆ ಇದೇ ಬಡ್ಡಿ ಆದಾಯಕ್ಕೆ ಟಿಡಿಎಸ್ ವಿನಾಯಿತಿ ಮಿತಿಯನ್ನು 40,000 ರೂನಿಂದ 50,000 ರೂಗೆ ಏರಿಸಲಾಗಿದೆ.

ಇದನ್ನೂ ಓದಿ: ಐದು ವರ್ಷಗಳಿಂದ ಶೇ. 20ಕ್ಕೂ ಹೆಚ್ಚು ಲಾಭ ತರುತ್ತಿರುವ ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್​​ಗಳು

ಡಿವಿಡೆಂಡ್ ಆದಾಯಕ್ಕೆ ಟಿಡಿಎಸ್ ವಿನಾಯಿತಿ ಮಿತಿ ಏರಿಕೆ

ಷೇರುಗಳಿಂದ ಸಿಗುವ ಡಿವಿಡೆಂಡ್​​ಗಳ ಆದಾಯಕ್ಕೆ ಇರುವ ಟಿಡಿಎಸ್ ವಿನಾಯಿತಿ ಮಿತಿಯನ್ನು 5,000 ರೂನಿಂದ 10,000 ರೂಗೆ ಏರಿಸಲಾಗಿದೆ. ಅಂದರೆ ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಡಿವಿಡೆಂಡ್ ಇನ್ಕಮ್ 10,000 ರೂ ಮೀರಿದರೆ ಮಾತ್ರವೇ ಟಿಡಿಎಸ್ ಅನ್ವಯ ಆಗುತ್ತದೆ.

ಬಾಡಿಗೆ ಆದಾಯಕ್ಕೆ ಟಿಡಿಎಸ್ ವಿನಾಯಿತಿ ಮಿತಿ ಹೆಚ್ಚಳ

ಮನೆ ಬಾಡಿಗೆ, ಕಮರ್ಷಿಯಲ್ ಬ್ಯುಲ್ಡಿಂಗ್ ಬಾಡಿಗೆಗಳಿಂದ ಬರುವ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ವರ್ಷಕ್ಕೆ 2,40,000 ರೂವರೆಗಿನ ಅಂಥ ಆದಾಯಕ್ಕೆ ಟಿಡಿಎಸ್ ವಿನಾಯಿತಿ ಸಿಗುತ್ತಿದೆ. ಈ ಮಿತಿಯನ್ನು 6,00,000 ರೂಗೆ ಏರಿಸಲಾಗಿದೆ. ಅಂದರೆ, ನಿಮಗೆ ತಿಂಗಳಿಗೆ 50,000 ರೂವರೆಗೆ ಬಾಡಿಗೆ ಆದಾಯ ಬರುತ್ತಿದ್ದರೆ ಟಿಡಿಎಸ್ ಕಡಿತದ ಭಯ ಬೇಡ. ಅದನ್ನು ಮೀರಿದ ಆದಾಯಕ್ಕೆ ಮಾತ್ರವೇ ಟಿಡಿಎಸ್ ಅನ್ವಯ ಆಗುತ್ತದೆ.

ಇನ್ಷೂರೆನ್ಸ್ ಕಮಿಷನ್​​ಗೆ ಟಿಡಿಎಸ್ ವಿನಾಯಿತಿ ಮಿತಿ ಏರಿಕೆ

ವಿಮಾ ಏಜೆಂಟ್​​ಗಳು ಇನ್ಷೂರೆನ್ಸ್ ಪಾಲಿಸಿ ಮಾಡಿಸಿದಾಗ ಸಿಗುವ ಕಮಿಷನ್​​ನಿಂದ ಒಂದು ವರ್ಷದಲ್ಲಿ ಸಿಗುವ 15,000 ರೂ ಆದಾಯಕ್ಕೆ ಟಿಡಿಎಸ್ ಕಡಿತ ಇರುವುದಿಲ್ಲ. ಈ ವಿನಾಯಿತಿ ಮಿತಿಯನ್ನು 20,000 ರೂಗೆ ಏರಿಸಲಾಗಿದೆ.

ಇದನ್ನೂ ಓದಿ: ದುಬೈಗೆ ಹೋಗಿ ಅಧಿಕೃತವಾಗಿ ಎಷ್ಟು ಚಿನ್ನ ತರಲು ಸಾಧ್ಯ? ಅಲ್ಲಿಗೂ ಇಲ್ಲಿಗೂ ಬೆಲೆ ವ್ಯತ್ಯಾಸ ಎಷ್ಟು?

ಸೆಕ್ಯೂರಿಟೈಸೇಶನ್ ಟ್ರಸ್ಟ್​ನಿಂದ ಸಿಗುವ ಆದಾಯಕ್ಕೆ ಟಿಡಿಎಸ್ ಇಳಿಕೆ

ಸೆಕ್ಯೂರಿಟೈಸೇಶನ್ ಟ್ರಸ್ಟ್​​ಗಳಲ್ಲಿ ಮಾಡಿದ ಹೂಡಿಕೆಯಿಂದ ಸಿಗುವ ಆದಾಯಕ್ಕೆ ಶೇ. 10ರಷ್ಟು ಮಾತ್ರವೇ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಸದ್ಯ ಈ ಆದಾಯಕ್ಕೆ ಶೇ. 25-30ರಷ್ಟು ಟಿಡಿಎಸ್ ಇದೆ. ವ್ಯಕ್ತಿಗಳಿಗೆ ಶೇ. 25, ಕಂಪನಿಗಳಿಗೆ ಶೇ. 30ರಷ್ಟು ಟಿಡಿಎಸ್ ಅನ್ವಯ ಆಗುತ್ತದೆ. ಈಗ ಎಲ್ಲರಿಗೂ ಸಮಾನವಾಗಿ ಶೇ. 10ರಷ್ಟು ಮಾತ್ರವೇ ಟಿಡಿಎಸ್ ಕಡಿತ ಆಗುತ್ತದೆ. ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರುತ್ತದೆ.

ಏನಿದು ಸೆಕ್ಯೂರಿಟೈಸೇಶನ್ ಟ್ರಸ್ಟ್?

ಸೆಕ್ಯೂರಿಟೈಸೇಶನ್ ಟ್ರಸ್ಟ್ ಎನ್ನುವುದು ಒಂದು ಹಣಕಾಸು ಸಂಸ್ಥೆಯಾಗಿದ್ದು, ಅದು ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಿಂದ ವಿವಿಧ ರೀತಿಯ ಸಾಲಗಳನ್ನು ಖರೀದಿಸಿ, ಅದನ್ನು ಸೆಕ್ಯೂರಿಟೀಸ್ (ಬಾಂಡ್) ಅಗಿ ಪರಿವರ್ತಿಸಿ ಹೂಡಿಕೆದಾರರಿಗೆ ಮಾರುತ್ತದೆ. ಆ ಸಾಲ ವಸೂಲಾತಿಯಿಂದ ಸಿಗುವ ಆದಾಯವನ್ನು ಈ ಸೆಕ್ಯೂರಿಟೀಸ್ ಹೂಡಿಕೆದಾರರಿಗೆ ಹಂಚಿಕೆ ಮಾಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ