Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​​ಬಿಐನಿಂದ ಕ್ರೆಡಿಟ್ ಸ್ಕೋರ್ ನಿಯಮದಲ್ಲಿ ಬದಲಾವಣೆ; ಹೊಸ ಸಾಲಗಳ ಮೇಲೆ ಪರಿಣಾಮ; ಇದರ ಸಾಧಕ ಬಾಧಕಗಳಿವು…

Credit score new rules: ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ತಿಂಗಳಿಗೊಮ್ಮೆ ಕ್ರೆಡಿಟ್ ಬ್ಯೂರೋಗಳಿಗೆ ಅಪ್​ಡೇಟ್ ಮಾಡುತ್ತಿದ್ದುವು. ಈಗ ಆರ್​​ಬಿಐ ಹೊಸ ನಿಯಮ ಮಾಡಿದ್ದು, ಅದರ ಪ್ರಕಾರ ಪ್ರತೀ 15 ದಿನಗಳಿಗೊಮ್ಮೆ ಕ್ರೆಡಿಟ್ ಮಾಹಿತಿಯನ್ನು ಅಪ್​ಡೇಟ್ ಮಾಡಬೇಕು. ಜನವರಿ 1ರಿಂದ ಜಾರಿಗೆ ಬಂದಿರುವ ಈ ಹೊಸ ನಿಯಮದಿಂದಾಗಿ, ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಬಹಳ ಬೇಗ ಅಪ್​ಡೇಟ್ ಆಗಬಹುದು.

ಆರ್​​ಬಿಐನಿಂದ ಕ್ರೆಡಿಟ್ ಸ್ಕೋರ್ ನಿಯಮದಲ್ಲಿ ಬದಲಾವಣೆ; ಹೊಸ ಸಾಲಗಳ ಮೇಲೆ ಪರಿಣಾಮ; ಇದರ ಸಾಧಕ ಬಾಧಕಗಳಿವು...
ಕ್ರೆಡಿಟ್ ಸ್ಕೋರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 20, 2025 | 3:21 PM

Credit Score new rules: ಸಾಲ ಸುಲಭವಾಗಿ ಪಡೆಯಲು ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು. ಈ ಸ್ಕೋರ್ ಅನ್ನು ನಿಮ್ಮ ಕ್ರೆಡಿಟ್ ಇತಿಹಾಸದ (Credit History) ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ನೀವು ಎಷ್ಟು ಸಾಲ ಪಡೆಯಲು ಅರ್ಹರಿದ್ದೀರಿ ಎಂಬುದನ್ನು ಈ ಕ್ರೆಡಿಟ್ ಸ್ಕೋರ್​​ನಿಂದ ಕಂಡುಕೊಳ್ಳುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ರೆಡಿಟ್ ಸ್ಕೋರ್ ನಿಯಮಗಳಲ್ಲಿ ಇತ್ತೀಚೆಗೆ ಬದಲಾವಣೆ ಮಾಡಿದೆ. ಅದರಂತೆ, ಸಾಲ ನೀಡುಗರು (ಬ್ಯಾಂಕ್) ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಬ್ಯೂರೋ ರೆಕಾರ್ಡ್​​ಗಳಲ್ಲಿ ಪ್ರತೀ 15 ದಿನಗಳಿಗೊಮ್ಮೆ ಅಪ್​ಡೇಟ್ ಮಾಡಬೇಕಾಗುತ್ತದೆ. ಈ ಕ್ರಮದಿಂದಾಗಿ ಜನರು ಈಗ ಸಾಲ ತೆಗೆದುಕೊಳ್ಳುವುದು ಹೆಚ್ಚು ಸುಲಭವಾಗುತ್ತದೆ. ಗ್ರಾಹಕರಿಗೆ ಮಾತ್ರವಲ್ಲ, ಬ್ಯಾಂಕುಗಳಿಗೂ ಈ ಹೊಸ ನಿಯಮ ವರದಾನವಾಗಿದೆ. ವಂಚನೆ ಹಾಗೂ ಸಾಲ ಡೀಫಾಲ್ಟ್ ಆಗುವುದನ್ನು ತಪ್ಪಿಸಲು ಇದು ಸಹಾಯವಾಗಿದೆ. ಇಷ್ಟು ಮಾತ್ರವಲ್ಲದೆ, ವಂಚನೆ ಮತ್ತು ಸುಸ್ತಿದಾರಿಕೆಯನ್ನು ತಡೆಯುವಲ್ಲಿಯೂ ಇದು ಸಹಾಯ ಮಾಡುತ್ತದೆ. ಹಾಗಾದರೆ 2025ರ ಜನವರಿ 1ರಿಂದ ಜಾರಿಗೆ ಬಂದಿರುವ ಆರ್‌ಬಿಐನ ಈ ಹೊಸ ನಿಯಮ ಏನು ಮತ್ತು ಅದರಿಂದ ಆಗುವ ಪ್ರಯೋಜನಗಳೇನು, ಈ ಮಾಹಿತಿ ಇಲ್ಲಿದೆ…

ಕ್ರೆಡಿಟ್ ಸ್ಕೋರ್ ಅಪ್​​​ಡೇಟ್ ಆಗುವ ವೇಗದಲ್ಲಿ ಬದಲಾವಣೆ

ಕ್ರೆಡಿಟ್ ಸ್ಕೋರ್ ಲೆಕ್ಕಾಚಾರ ಈಗ ಹೆಚ್ಚು ವೇಗ ಮತ್ತು ನಿಖರತೆ ಹೊಂದಿರುತ್ತದೆ. ಈ ಹಿಂದೆ, ಸಾಲದ ಇಎಂಐ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದ್ದರೂ, ಅದು CIBIL ಅಥವಾ ಬೇರೆ ಕ್ರೆಡಿಟ್ ಏಜೆನ್ಸಿಯ ಸ್ಕೋರ್​​ನಲ್ಲಿ ಅಪ್​ಡೇಟ್ ಆಗಲು ವಿಳಂಬವಾಗುತ್ತಿತ್ತು. ಇದರಿಂದ, ತುರ್ತಾಗಿ ಸಾಲ ಪಡೆಯಬೇಕೆನ್ನುವವರಿಗೆ ಸಮಸ್ಯೆಯಾಗುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಆರ್​​ಬಿಐ ಈ ಕ್ರೆಡಿಟ್ ಸ್ಕೋರ್ ನಿಯಮದಲ್ಲಿ ಒಂದು ಮಾರ್ಪಾಡು ಮಾಡಿದೆ. ಈಗ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಒಂದು ತಿಂಗಳವರೆಗೆ ಕಾಯದೆ, ಪ್ರತಿ 15 ದಿನಗಳಿಗೊಮ್ಮೆ ಕ್ರೆಡಿಟ್ ಬ್ಯೂರೋಗೆ ಡೇಟಾವನ್ನು ನವೀಕರಿಸಬೇಕಾಗುತ್ತದೆ. ಈ ನಿಯಮವು ಜನವರಿ 1, 2025 ರಿಂದ ಜಾರಿಗೆ ಬಂದಿದೆ.

ನೀವು ಸಮಯಕ್ಕೆ ಸರಿಯಾಗಿ EMI ಪಾವತಿಯನ್ನು ಮಾಡಿದರೆ ಅದು 15 ದಿನದಲ್ಲಿ ನಿಮ್ಮ ಸ್ಕೋರ್ ಮೇಲೆ ಪ್ರತಿಫಲಿಸುತ್ತದೆ. ನಿಮ್ಮ ಸ್ಕೋರ್ ಹೆಚ್ಚಬಹುದು. ಬ್ಯಾಂಕುಗಳಿಗೆ ನಿಮ್ಮ ಹಳೆಯ ಸ್ಕೋರ್ ಬದಲು ಹೊಸ ಸ್ಕೋರ್ ಸಿಗುತ್ತದೆ. ಇದರಿಂದ ಕಡಿಮೆ ಬಡ್ಡಿದರ ಹಾಗು ಹೆಚ್ಚು ಮೊತ್ತದ ಸಾಲ ಸಿಗಲು ಸಾಧ್ಯವಾಗುತ್ತದೆ.

ಇದನ್ನೂ ಓದಿ
Image
ಮೊಬೈಲ್ ಬಿಲ್​ಗೂ ಕ್ರೆಡಿಟ್ ಸ್ಕೋರ್​ಗೂ ಇದ್ಯಾ ಸಂಬಂಧ?
Image
ಸಾಲದ ಕಂತು ಕಟ್ಟಲು ಶೇ. 33 ಆದಾಯ ವೆಚ್ಚ; ಭಾರತೀಯರ ಪರಿಪಾಟಲು
Image
ಕ್ರೆಡಿಟ್ ಸ್ಕೋರ್ ಮೇಲೆ ಸಾಲಕ್ಕೆ ಬಡ್ಡಿದರ ನಿಗದಿ?
Image
ಬ್ಯಾಂಕ್ ಖಾತೆ ಇಲ್ಲದೇ ಎಸ್​ಐಬಿಯಲ್ಲಿ ಫಿಕ್ಸೆಡ್ ಡೆಪಾಸಿಟ್

ಇದನ್ನೂ ಓದಿ: ಪೋಸ್ಟ್ ಪೇಯ್ಡ್ ಬಿಲ್ ಮಿಸ್ ಆದ್ರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ಡೀಟೇಲ್ಸ್

ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳಿಗೂ ಅನುಕೂಲ

ಕ್ರೆಡಿಟ್ ಬ್ಯೂರೋದಲ್ಲಿ ದಾಖಲೆಗಳನ್ನು ಅಪ್​ಡೇಟ್ ಮಾಡಲು ಈ ಮೊದಲು 30ರಿಂದ 40 ದಿನಗಳಾಗುತ್ತಿತ್ತು. ಒಬ್ಬ ವ್ಯಕ್ತಿ ಡೀಫಾಲ್ಟ್ ಆಗಿದ್ದರೆ, ಅದು ಕ್ರೆಡಿಟ್ ರೆಕಾರ್ಡ್​​ನಲ್ಲಿ ದಾಖಲಾಗಲು ಕನಿಷ್ಠ ಒಂದು ತಿಂಗಳಾದರೂ ಆಗುತ್ತಿತ್ತು. ಡೀಫಾಲ್ಟ್ ಮಾಡಿದ ವ್ಯಕ್ತಿ ಕೂಡಲೇ ಬೇರೆ ಬ್ಯಾಂಕ್​ಗೆ ಹೋಗಿ ಸಾಲ ಪಡೆದುಕೊಳ್ಳಲು ಅವಕಾಶ ಇತ್ತು. ಇದರಿಂದ ಬ್ಯಾಂಕ್​​ಗೆ ಈ ಸಾಲವು ಎನ್​​ಪಿಎ ಆಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿರುತ್ತದೆ. ಈಗ 15 ದಿನಕ್ಕೆ ಕ್ರೆಡಿಟ್ ರೆಕಾರ್ಡ್ ಅಪ್​​ಡೇಟ್ ಆಗುವುದರಿಂದ ಬ್ಯಾಂಕುಗಳು ಇಂಥ ಸುಸ್ತಿದಾರರನ್ನು ಬೇಗನೇ ಪತ್ತೆ ಹಚ್ಚಿ, ಎಚ್ಚರ ವಹಿಸಲು ಸಾಧ್ಯವಾಗುತ್ತದೆ.

ಕ್ರೆಡಿಟ್ ಸ್ಕೋರ್ ಅನ್ನು ಯಾರು ನೀಡುತ್ತಾರೆ?

ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳು ಅಥವಾ CIC ಗಳು ಎಂದೂ ಕರೆಯಲ್ಪಡುವ ಕ್ರೆಡಿಟ್ ಬ್ಯೂರೋಗಳು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತವೆ. ಬ್ಯಾಂಕುಗಳು, ಕ್ರೆಡಿಟ್ ಕಾರ್ಡ್ ಕಂಪನಿಗಳು ಮುಂತಾದ ವಿವಿಧ ಹಣಕಾಸು ಸಂಸ್ಥೆಗಳು ತಮ್ಮ ಎಲ್ಲಾ ಗ್ರಾಹಕರ ಮಾಹಿತಿಯನ್ನು ಕ್ರೆಡಿಟ್ ಬ್ಯೂರೋಗಳಿಗೆ ಅಪ್​ಡೇಟ್ ಮಾಡುತ್ತವೆ. ಒಬ್ಬ ವ್ಯಕ್ತಿ ಯಾವುದೇ ಬ್ಯಾಂಕ್​​ನಲ್ಲಿ ಪಡೆದ ಸಾಲ, ಮತ್ಯಾವುದೋ ಬ್ಯಾಂಕ್​ನಿಂದ ಪಡೆದ ಕ್ರೆಡಿಟ್ ಕಾರ್ಡ್, ಇವುಗಳ ನಿರ್ವಹಣೆ ಇತ್ಯಾದಿ ಎಲ್ಲ ಮಾಹಿತಿಯನ್ನು ಅಪ್​ಡೇಟ್ ಮಾಡಲಾಗುತ್ತದೆ. ಹೀಗಾಗಿ, ಒಬ್ಬ ವ್ಯಕ್ತಿಯ ಸಮಗ್ರ ಕ್ರೆಡಿಟ್ ಹಿಸ್ಟರಿಯು ಕ್ರೆಡಿಟ್ ಬ್ಯೂರೋ ಬಳಿ ಇರುತ್ತದೆ. ಯಾವುದೇ ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳು ಈ ಡಾಟಾವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: ನಿಮ್ಮ ಬ್ಯಾಂಕ್ ಸಾಲದ ಮೇಲೆ ಕ್ರೆಡಿಟ್ ಸ್ಕೋರ್ ಪರಿಣಾಮ ಏನು? ಎಷ್ಟು ಸ್ಕೋರ್ ಇದ್ದರೆ ಉತ್ತಮ?

ಕ್ರೆಡಿಟ್ ಸ್ಕೋರ್ ಹೇಗಿರುತ್ತದೆ?

ಕ್ರೆಡಿಟ್ ಸ್ಕೋರ್ 300 ರಿಂದ 900 ಅಂಕಗಳವರೆಗೆ ಇರುತ್ತದೆ. 700 ಕ್ಕಿಂತ ಹೆಚ್ಚಿನ ಅಂಕಗಳನ್ನು ತುಂಬಾ ಉತ್ತಮವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಇತರ ಅಂಕಗಳು ವಿಭಿನ್ನ ಅರ್ಥಗಳನ್ನು ಸೂಚಿಸಬಹುದು.

  • 300–579: ಈ ಸ್ಕೋರ್ ಅನ್ನು ತುಂಬಾ ಕಳಪೆ ಎಂದು ಪರಿಗಣಿಸಲಾಗುತ್ತದೆ. ಸಾಲ ಪಡೆಯುವುದು ತುಂಬಾ ಕಷ್ಟಕರವಾಗುತ್ತದೆ.
  • 580–669: ಈ ಕ್ರೆಡಿಟ್ ಸ್ಕೋರ್ ಅನ್ನು ಸರಾಸರಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ವ್ಯಕ್ತಿಯು ಹಣಕಾಸು ಸಂಸ್ಥೆಗಳ ನಿಯಮಗಳು ಮತ್ತು ಷರತ್ತುಗಳ ಆಧಾರದ ಮೇಲೆ ಸಾಲವನ್ನು ಪಡೆಯಬಹುದು.
  • 670–739: ಈ ಅಂಕವನ್ನು ಉತ್ತಮವೆಂದು ಪರಿಗಣಿಸಲಾಗಿದೆ. ಸಾಲ ಸಿಗುವುದು ಕಷ್ಟವಾಗುವುದಿಲ್ಲ.
  • 740-799: ಈ ಕ್ರೆಡಿಟ್ ಸ್ಕೋರ್ ಸಾಮಾನ್ಯಕ್ಕಿಂತ ಸ್ವಲ್ಪ ಉತ್ತಮವೆಂದು ಹೇಳಲಾಗುತ್ತದೆ. ಸಾಲ ಸುಲಭವಾಗಿ ಸಿಗಬಹುದು.
  • 800+: ಈ ಕ್ರೆಡಿಟ್ ಸ್ಕೋರ್ ಅತ್ಯುತ್ತಮವಾಗಿದೆ. ಇದರಲ್ಲಿ, ಬ್ಯಾಂಕ್ ನಿಮಗೆ ತತ್​​ಕ್ಷಣವೇ ಸಾಲವನ್ನು ನೀಡುತ್ತದೆ. ಕನಿಷ್ಠ ಬಡ್ಡಿಗೆ ಸಾಲ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Thu, 20 March 25

ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
ಬೆಂಗಳೂರಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ
ಬೆಂಗಳೂರಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ
ಪ್ರತಿಭಟನೆಗೆ ಬಂದ್ ಬಿಟ್ಟು ಪರ್ಯಾಯ ದಾರಿ ಹುಡುಕಬೇಕು: ಆಟೋರಿಕ್ಷಾ ಚಾಲಕರು
ಪ್ರತಿಭಟನೆಗೆ ಬಂದ್ ಬಿಟ್ಟು ಪರ್ಯಾಯ ದಾರಿ ಹುಡುಕಬೇಕು: ಆಟೋರಿಕ್ಷಾ ಚಾಲಕರು
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ