AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DA hike: ಯುಗಾದಿ ಗಿಫ್ಟ್; ಶೇ. 2 ಡಿಎ ಹೆಚ್ಚಿಸಲು ಸಂಪುಟ ಅನುಮೋದನೆ; ಒಟ್ಟು ತುಟ್ಟಿಭತ್ಯೆ ಶೇ. 55ಕ್ಕೆ ಏರಿಕೆ

Union cabinet approves 2pc DA and DA hike: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 53ರಿಂದ ಶೇ. 55ಕ್ಕೆ ಹೆಚ್ಚಿಸುವ ನಿರ್ಧಾರಕ್ಕೆ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರಿ ಪಿಂಚಣಿದಾರರ ಡಿಆರ್ ಕೂಡ ಎರಡು ಪ್ರತಿಶತದಷ್ಟು ಹೆಚ್ಚಳ ಆಗುತ್ತದೆ. ದೇಶಾದ್ಯಂತ ಇರುವ ಒಂದು ಕೋಟಿಗೂ ಅಧಿಕ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಖುಷಿ ಸುದ್ದಿ ಸಿಕ್ಕಿದೆ.

DA hike: ಯುಗಾದಿ ಗಿಫ್ಟ್; ಶೇ. 2 ಡಿಎ ಹೆಚ್ಚಿಸಲು ಸಂಪುಟ ಅನುಮೋದನೆ; ಒಟ್ಟು ತುಟ್ಟಿಭತ್ಯೆ ಶೇ. 55ಕ್ಕೆ ಏರಿಕೆ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 28, 2025 | 5:42 PM

Share

ನವದೆಹಲಿ, ಮಾರ್ಚ್ 28: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ (Central govt employees and Pensioners) ಡಿಎ ಮತ್ತು ಡಿಆರ್ (DA and DR) ಅನ್ನು ಎರಡು ಪ್ರತಿಶತದಷ್ಟು ಏರಿಕೆ ಮಾಡುವ ನಿರ್ಧಾರಕ್ಕೆ ಕೇಂದ್ರ ಸಂಪುಟ ಇಂದು ಶುಕ್ರವಾರ ಅನುಮೋದನೆ ನೀಡಿದೆ. ಇದರೊಂದಿಗೆ ಸರ್ಕಾರಿ ನೌಕರರ ಒಟ್ಟು ತುಟ್ಟಿಭತ್ಯೆ (DA- Dearness Allowance) ಶೇ. 53 ಇದ್ದದ್ದು ಶೇ. 55ಕ್ಕೆ ಏರುತ್ತದೆ. ಡಿಎ ಏರಿಕೆಯೊಂದಿಗೆ ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ ಸೇರಿದಂತೆ ಇತರ ಭತ್ಯೆಗಳೂ ಹೆಚ್ಚಲಿವೆ. ಈ ಹೊಸ ಡಿಎ ಮತ್ತು ಡಿಆರ್ ದರಗಳು ಜನವರಿ ತಿಂಗಳಿಂದ ಅನ್ವಯ ಆಗುತ್ತವೆ. ಏಪ್ರಿಲ್​​ನಲ್ಲಿ ಸಿಗಲಿರುವ ಮಾರ್ಚ್ ತಿಂಗಳ ಸಂಬಳದಲ್ಲಿ ಈ ಏರಿಕೆ ಕಾಣಬಹುದು. ಜನವರಿಯನ್ನೂ ಸೇರಿಸಿ ಒಟ್ಟು ಮೂರು ತಿಂಗಳ ಅರಿಯರ್ಸ್ ಸೇರಿ ಬರುತ್ತದೆ. ಪಿಂಚಣಿದಾರರಿಗೂ ಹೆಚ್ಚಿನ ಪಿಂಚಣಿ ಬರುತ್ತದೆ.

ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಆರ್ ಪರಿಷ್ಕರಣೆ

ಹಣದುಬ್ಬರ ಅಥವಾ ಬೆಲೆ ಏರಿಕೆ ಪರಿಣಾಮವು ಉದ್ಯೋಗಿಗಳು ಮತ್ತು ಪಿಂಚಣಿದಾರರ ಮೇಲೆ ಆಗುವುದನ್ನು ತಪ್ಪಿಸಲು ಸರ್ಕಾರವು ಡಿಯರ್ನೆಸ್ ಅಲೋಯನ್ಸ್ ಮತ್ತು ಡಿಯರ್ನೆಸ್ ರಿಲೀಫ್ ಅನ್ನು ಹೆಚ್ಚಿಸುತ್ತದೆ. ಹಣದುಬ್ಬರ ದರದ ಆಧಾರವಾಗಿ ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಆರ್ ಅನ್ನು ಏರಿಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಎಟಿಎಂನಲ್ಲಿ ಬ್ಯಾಲನ್ಸ್ ಪರಿಶೀಲಿಸಿದರೂ ಶುಲ್ಕವೇ; ಮೇ 1ರಿಂದ ಇಂಟರ್​​ಚೇಂಜ್ ಫೀಸ್ ಹೆಚ್ಚಳ

ಜನವರಿಯಿಂದ ಜೂನ್​​ವರೆಗೆ ಮತ್ತು ಜುಲೈನಿಂದ ಡಿಸೆಂಬರ್​​ವೆಗಿನ ಅವಧಿಗಳಿಗೆ ದರ ಪರಿಷ್ಕರಣೆ ಮಾಡಲಾಗುತ್ತದೆ. ದ್ವಿತೀಯಾರ್ಧದ ಡಿಎ ದರವನ್ನು ನವೆಂಬರ್​​​ನಲ್ಲಿ ನಿರ್ಧರಿಸುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದ ಅಡಿಯಲ್ಲಿ ಇರುವ ಉದ್ಯೋಗಿಗಳ ಸಂಖ್ಯೆ 48.66 ಲಕ್ಷ ಇದೆ. ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವವರ ಸಂಖ್ಯೆ 66.55 ಲಕ್ಷ ಇದೆ. 1.15 ಕೋಟಿಗೂ ಅಧಿಕ ಮಂದಿಗೆ ಈ ಡಿಎ ಡಿಆರ್ ಏರಿಕೆ ಲಾಭವಾಗುತ್ತದೆ.

ಮೂಲವೇತನದೊಂದಿಗೆ ವಿಲೀನವಾಗುತ್ತಾ ಡಿಎ?

ಉದ್ಯೋಗಿಯ ಮೂಲವೇತನದ ಆಧಾರದ ಮೇಲೆ ಡಿಎ ನೀಡಲಾಗುತ್ತಿದೆ. ಅಂದರೆ, 50,000 ರೂ ಮೂಲವೇತನ ಹೊಂದಿರುವವರಿಗೆ ಶೇ. 53 ಡಿಎ ಎಂದರೆ 26,500 ರೂ ಇರುತ್ತದೆ. ಈಗ ಅದು ಶೇ. 55ಕ್ಕೆ ಏರಿಕೆ ಆದಲ್ಲಿ ಡಿಎ 27,500 ರೂಗೆ ಏರುತ್ತದೆ.

ಇದನ್ನೂ ಓದಿ: ಕಾಲೇಜ್ ಕ್ಯಾಂಟೀನ್​ನಲ್ಲಿ ಮುಸುರೆ ತಿಕ್ಕುತ್ತಿದ್ದ ಬೆಂಗಳೂರು ಹುಡುಗ ಸಂಜಿತ್​​ ಈಗ ಆಸ್ಟ್ರೇಲಿಯಾದಲ್ಲಿ ಫೇಮಸ್ ಚಾಯ್​​ವಾಲಾ

7ನೇ ವೇತನ ಆಯೋಗ ಮಾಡಿದ ಶಿಫಾರಸು ಪ್ರಕಾರ, ಡಿಎ ಪ್ರಮಾಣ ಶೇ. 55 ಮುಟ್ಟಿದಾಗ ಅದು ಉದ್ಯೋಗಿಯ ಮೂಲವೇತನದೊಂದಿಗೆ ವಿಲೀನಗೊಳ್ಳಬೇಕು. ಆ ರೀತಿ ಆದಲ್ಲಿ 50,000 ರೂ ಮೂಲವೇತನವು 77,500 ರೂಗೆ ಏರಬಹುದು.

ಬರಲಿದೆ 8ನೇ ವೇತನ ಆಯೋಗ

ಏಳನೇ ವೇತನ ಆಯೋಗ ಮಾಡಿದ ಶಿಫಾರಸುಗಳು ಈ ವರ್ಷದವರೆಗೆ ಮಾತ್ರ ಸಿಂಧು ಇರುತ್ತದೆ. ಸರ್ಕಾರ ಈಗಾಗಲೇ 8ನೇ ವೇತನ ಆಯೋಗ ರಚನೆ ಮಾಡಿದ್ದು, ಅದು 2026ರಿಂದ ಶಿಫಾರಸು ಮಾಡಲು ಕಾರ್ಯಾರಂಭಿಸುತ್ತದೆ. 8ನೇ ವೇತನ ಆಯೋಗ ಕಾರ್ಯಾಚರಣೆಗೆ ಇಳಿಯುವ ಮುನ್ನವೇ ಮೂಲವೇತನದೊಂದಿಗೆ ಡಿಎ ವಿಲೀನಗೊಳ್ಳುತ್ತದಾ ಎಂಬುದು ಗೊತ್ತಿಲ್ಲ. ಹಾಗೇನಾದರೂ ವಿಲೀನವಾದಲ್ಲಿ ಸರ್ಕಾರಿ ನೌಕರರ ಸಂಬಳ ಗಣನೀಯವಾಗಿ ಹೆಚ್ಚಳವಾಗಲು ಸಹಾಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ