AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಮ್ಯಾಜಿಕ್​ ಥ್ರಿಲ್ಲಿಂಗ್​​ ರೈಡ್​ನಲ್ಲಿ ಯಡವಟ್ಟಾಯ್ತು! ಜನರ ಸಹಾಯದಿಂದ ಜೀವ ಉಳಿಯಿತು; ಶಾಂಕಿಂಗ್ ವಿಡಿಯೋ

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಪ್ರಾಣ ಉಳಿಸಿದ ಜನರಿಗೆ ಧನ್ಯವಾದ ಹೇಳಿದ್ದಾರೆ. ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೃಷ್ಟವಶಾತ್​ ಯಾರಿಗೂ ಏನೂ ಅಪಾಯವಾಗಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.

Video Viral: ಮ್ಯಾಜಿಕ್​ ಥ್ರಿಲ್ಲಿಂಗ್​​ ರೈಡ್​ನಲ್ಲಿ ಯಡವಟ್ಟಾಯ್ತು! ಜನರ ಸಹಾಯದಿಂದ ಜೀವ ಉಳಿಯಿತು; ಶಾಂಕಿಂಗ್ ವಿಡಿಯೋ
TV9 Web
| Updated By: shruti hegde|

Updated on: Jul 11, 2021 | 11:24 AM

Share

ಸಾಮಾನ್ಯವಾಗಿ ಜಾತ್ರೆ ಅಂದಾಕ್ಷಣ ಮೋಜು-ಮಸ್ತಿ ಜೋರು.. ಜಾರು ಬಂಡಿ, ಜೋಕಾಲಿ ಹೀಗೆ ಎಂದೇ ಎರಡೇ.. ವರ್ಷಕ್ಕೊಮ್ಮೆ ಬರುವ ಜಾತ್ರೆಗಾಗಿ ಕಾಯುತ್ತಾ ಕುಳಿತಿರುತ್ತೇವೆ. ದೊಡ್ಡ ಜೋಕಾಲಿ ಸಣ್ಣ ಜೋಕಾಲಿ, ತೊಟ್ಟಿಲು ಹೀಗೆ ನಾನಾ ವಿಧದ ಆಟ. ಖುಷಿಯಿಂದ ಕುಣಿದು ಕುಪ್ಪಳಿಸುವ ಜಾತ್ರಾ ಮಹೋತ್ಸವ. ಅಮೇರಿಕದ ಮಿಚಿಗನ್​ನಲ್ಲೂ ಸಹ ಹಾಗೆ! ಸ್ಥಳೀಯ ಉತ್ಸವದಲ್ಲಿ ಜನರು ಜೋಕಾಲಿ ಆಡುತ್ತಾ ಖುಷಿ ಪಡುತ್ತಿದ್ದರು. ಆದರೆ ಒಮ್ಮೆಲೆ ಭಯ ಬೀಳುಸುವ ಘಟನೆಯೊಂದು ನಡೆದಿದೆ. ಸುತ್ತ-ಮುತ್ತಲಿದ್ದ ಜನರ ಸಹಾಯದಿಂದ ಥ್ರಿಲ್ಲಿಂಗ್​ ರೈಡ್​ನಲ್ಲಿ ಕುಳಿತಿದ್ದ ಜನರ ಜೀವ ಉಳಿದಿದೆ.

ಮಿಚಿಗನ್​ನ ಸ್ಥಳೀಯ ಉತ್ಸವದಲ್ಲಿ ಬರೋಬ್ಬರಿ ಜನ. ಮ್ಯಾಜಿಕ್​ ಥ್ರಿಲ್​ ರೈಡ್​​ ಹತ್ತಿ ಜನರು ಎಂಜಾಯ್​ ಮಡ್ತಾ ಇದ್ರು! ತಲೆಕೆಳಗಾಗಿ ಪ್ರತಿ ಸುತ್ತು ಸತ್ತುವಾಗಲೂ ಜನರಿಗೆ ಖುಷಿಯೋ ಖುಷಿ. ಜೋರಾದ ಕೂಗು .. ಕೊಂಚ ಭಯ! ಆದರೆ ಆಟದ ಮೋಜು ಜನರನ್ನು ಬೆರಗುಗೊಳಿಸಿತ್ತು. ಆದರೆ ಇದ್ದಕ್ಕಿದ್ದಂತೆಯೇ ಮ್ಯಾಜಿಕ್​ ರೈಡ್​ನ ಅಡಿಪಾಯ ಅಲುಗಾಡಲು ಪ್ರಾರಂಭಿಸುತ್ತದೆ. ಇದನ್ನು ಗಮನಿಸಿದ ಒಬ್ಬರು ಓಡಿ ಬಂದು ಅಲುಗಾಡುತ್ತಿರುವ ಮ್ಯಾಜಿಕ್​ ರೈಡ್​ ಅಡಿಪಾಯವನ್ನು ಹಿಡಿದುಕೊಳ್ಳುತ್ತಾರೆ. ಸುತ್ತಲೂ ಇದ್ದ ಜನರೂ ಸಹ ಸಹಕರಿಸುತ್ತಾರೆ. ಇದರಿಂದ ಮೋಜಿನಿಂದ ಆಟವಾಡುತ್ತಿದ್ದ ಅದೆಷ್ಟೋ ಜನರ ಪ್ರಾಣ ಉಳಿದಿದೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಪ್ರಾಣ ಉಳಿಸಿದ ಜನರಿಗೆ ಧನ್ಯವಾದ ಹೇಳಿದ್ದಾರೆ. ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೃಷ್ಟವಶಾತ್​ ಯಾರಿಗೂ ಏನೂ ಅಪಾಯವಾಗಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.

ಕೆಲವು ಬಾರಿ ಭಯಭೀಳಿಸುವ ಅದೆಷ್ಟೋ ಅವಘಡಗಳು ಸಂಭವಿಸಿವೆ. ಈ ವಿಡಿಯೋ ಗಮನಿಸುವಾಗಲೂ ಸಹ ಒಮ್ಮೆಲೆ ಮೈ ಜುಂ.. ಎನ್ನುವುದಂತೂ ಸತ್ಯ. ಸದ್ಯ, ಅವರ ಅದೃಷ್ಟ ಚೆನ್ನಾಗಿತ್ತು. ಯಾರಿಗೂ ಏನೂ ಅಪಾಯವಾಗಿಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದೃಷ್ಟ ಕೆಟ್ಟಿದ್ದರೆ, ಯಾವ ಸಮಯದಲ್ಲಿ ಏನೂ ಬೇಕಾದರೂ ಸಂಭವಿಸಬಹುದು ಎಂದು ಇನ್ನು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ದಲಿತ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಗುಪ್ತಾಂಗಕ್ಕೆ ಥಳಿಸಿದ ವಿಡಿಯೋ ವೈರಲ್

Viral Video: ಎಷ್ಟೇ ಖರ್ಚಾಗಲಿ ಇದನ್ನ ತಗೋಳ್ಬೇಕು ಅಂತಿದಾರೆ ವಿದ್ಯಾರ್ಥಿಗಳು! ಏನದು ಅಂತ ವಿಡಿಯೋ ನೋಡಿ