ಭತ್ತದ ಹುಲ್ಲು ಕಡ್ಡಿಗಳಿಂದ ಪಾದರಕ್ಷೆ ತಯಾರಿಸುತ್ತಾರೆ ಇಲ್ಲೋರ್ವ 110 ವರ್ಷದ ವೃದ್ಧರು
ಅಬ್ದುಲ್ ಸಮದ್ ಗನಿ ಅವರಿಗೆ 110 ವರ್ಷ. ಇವರು ಕಾಶ್ಮೀರದ ಬಂಡೀಪೋರಾ ಜಿಲ್ಲೆಯವರು. ಸ್ವಾವಲಂಬಿಯಾಗಿ ಜೀವನ ನಡೆಸಲು ಇಷ್ಟಪಡುವ ಅವರು ಸಾಂಪ್ರದಾಯಿಕವಾಗಿ ಬಂದ ಭತ್ತದ ಹುಲ್ಲಿನ ಕಡ್ಡಿಗಳಿಂದ ಪಾದರಕ್ಷೆಗಳನ್ನು ತಯಾರಿಸುತ್ತಾರೆ. ಈ ಪಾದರಕ್ಷೆಗೆ ಕಾಶ್ಮೀರದಲ್ಲಿ ಪುಲ್ಹೂರ ಎಂದು ಹೆಸರಿದೆ.
ಕಾಶ್ಮೀರದ 110 ವರ್ಷದ ವೃದ್ಧರು ಭತ್ತದ ಹುಲ್ಲು ಕಡ್ಡಿಗಳಿಂದ ಪಾದರಕ್ಷೆಗಳನ್ನು ತಯಾರಿಸುತ್ತಾರೆ. ತಮ್ಮ ಪ್ರಾಚೀನ ಕಾಲ ಸಾಂಪ್ರದಾಯವನ್ನು ಇಂದಿಗೂ ಪಾಲಿಸುತ್ತಾ ಬಂದಿದ್ದಾರೆ. ಹುಲ್ಲು ಕಡ್ಡಿಗಳನ್ನು ಸಂಗ್ರಹಿಸಿ ತಾವೇ ಕೈಯಾರೆ ನೇಯುತ್ತಾ ಪಾದರಕ್ಷೆಗಳನ್ನು ತಯಾರಿಸುತ್ತಾರೆ. ವಯಸ್ಸು 110 ಆಗಿದ್ದರೂ ಸಹ ತಾವು ಧರಿಸುವ ಚಪ್ಪಲಿಯನ್ನು ತಾವೇ ತಯಾರಿಸಿಕೊಂಡು ಹಳೆಯ ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ.
ಹೌದು.. ಅಬ್ದುಲ್ ಸಮದ್ ಗನಿ ಅವರಿಗೆ 110 ವರ್ಷ. ಇವರು ಕಾಶ್ಮೀರದ ಬಂಡೀಪೋರಾ ಜಿಲ್ಲೆಯವರು. ಸ್ವಾವಲಂಬಿಯಾಗಿ ಜೀವನ ನಡೆಸಲು ಇಷ್ಟಪಡುವ ಅವರು ಸಾಂಪ್ರದಾಯಿಕವಾಗಿ ಬಂದ ಭತ್ತದ ಹುಲ್ಲಿನ ಕಡ್ಡಿಗಳಿಂದ ಪಾದರಕ್ಷೆಗಳನ್ನು ತಯಾರಿಸುತ್ತಾರೆ. ಈ ಪಾದರಕ್ಷೆಗೆ ಕಾಶ್ಮೀರದಲ್ಲಿ ಪುಲ್ಹೂರ ಎಂದು ಹೆಸರಿದೆ.
ಶತಮಾನಗಳಷ್ಟು ಹಳೆಯದಾದ ಹುಲ್ಲಿನ ಕಡ್ಡಿಗಳಿಂದ ತಯಾರಿಸುವ ಚಪ್ಪಲಿಯನ್ನು ಈಗಿನ ಯುಪೀಳಿಗೆಗೆ ತಿಳಿಸುವ ಉದ್ದೇಶ ಅವರದ್ದು. ಈ ಪಾದರಕ್ಷೆಯನ್ನು ಪ್ರಾಚೀನ ಕಾಲದಲ್ಲಿ ಜನರು ಧರಿಸುತ್ತಿದ್ದರು. ತಮ್ಮ ಸ್ವಂತ ಬಳಕೆಗಾಗಿ ಚಪ್ಪಲಿಗಳನ್ನು ತಯಾರಿಸುತ್ತಾರೆ ಹಾಗೂ ಪ್ರಾಚೀನ ಕಲೆಯನ್ನು ಜಿವಂತವಾಗಿಡಲು ಅವರು ಬಯಸುತ್ತಾರೆ.
ಇಂಡಿಯಾ ಟು ಡೇ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಬ್ದುಲ್ ಸಮದ್ ಗನಿ, ಸಾಂಪ್ರದಾಯಿಕ ಕಲೆಯನ್ನು ಜೀವಂತವಾಗಿರಿಸುವುದು ನನ್ನ ಉದ್ದೇಶ, ಯುವಪೀಳಿಗೆ ಈ ಕಲೆಯ ಬಗ್ಗೆ ತಿಳಿಯಬೇಕು. ಲೆದರ್ ಚಪ್ಪಲಿಗಳು ಅಥವಾ ಇನ್ನಿತರ ಚಪ್ಪಲಿಗಳನ್ನು ಖರೀಸಿದಲು ಆಗದಿದ್ದಾಗ ಇದನ್ನು ಬಳಸಬಹುದು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಕುರಿತಂತೆ ವರದಿ ತಿಳಿಸಿದೆ.
ಈ ಚಪ್ಪಲಿ ಧರಿಸಲು ತುಂಬಾ ಹಗುರವಾಗಿರುತ್ತದೆ ಜತೆಗೆ ಪರಿಸರ ಸ್ನೇಹಿ ಕೂಡಾ ಹೌದು. ಆರೋಗ್ಯಕ್ಕೂ ಸಹ ಯಾವುದೇ ಹಾನಿಯುಂಟಾಗುವುದಿಲ್ಲ. ಕಾಲಿನ ಚರ್ಮಕ್ಕೂ ಒಳ್ಳೆಯದು. ಇದನ್ನು ಕಾಶ್ಮೀರದಲ್ಲಿ ಮೊದಲು ತಯಾರಿಸುತ್ತಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ 4 ವರ್ಷದ ಬಾಲಕಿ ಹೆಸರು
ಉತ್ತರ ಕನ್ನಡದಲ್ಲಿ ಶ್ರೀಗಂಧ ಕಲಾಕೃತಿ ರಚನೆ ಭಾರೀ ಪ್ರಮಾಣದಲ್ಲಿ ಇಳಿಕೆ: ಕಾರಣವೇನಿರಬಹುದು?
Published On - 10:33 am, Sun, 11 July 21